Monday, March 3, 2014

ओ माझी रे.. / ಅಂಬಿಗನೇ.. / O majhi re..

ಅಂಬಿಗನೇ,
ಎನ್ನಯ ತೀರ
ನದಿಯ ಈ ಧಾರೆಯು

ದಡದಗುಂಟ ಹರಿಯುವವರೇ
ಎಲ್ಲೋ ಕೇಳಿದ್ದುಂಟಲ್ಲವೋ?
ಕಾಗದದ ದೋಣಿಗಳಿಗೆ
ಎಲ್ಲೂ ತೀರವಿರೋದಿಲ್ಲವು...
ಅಂಬಿಗನೇ,
ಯಾವೊಂದು ತೀರ
ವದು ತೀರ
ಕ್ಕೆ ಸೇರಿಬರುವುದೋ
ಅದು, ಎನ್ನಯ ತೀರವು..

ನೀರಿನೊಳಗೆ ಹರಿಯುತಿಹವು ಹಲವು ದಂಡೆ
ಒಡೆದಂಥವು;
ಬೀದಿಗಳಲಿ ಸಿಗುತಲಿಹವು ಸಕಲ ಆಸರೆ
ತಪ್ಪಿದಂಥವು
ಅಂಬಿಗನೇ,
ಆಸರೆಯೊಂದು ನಡುನೀರಲ್ಲಿ
ಸಿಗುವುದಾದರೆ ಅದು,
ಎನ್ನಯ ಆಸರೆಯು




ಮೂಲ :
ಗುಲ್ಜಾರ್ ವಿರಚಿತ,
ಖೂಬ್'ಸೂರತ್ (೧೯೭೫) ಚಲನಚಿತ್ರದಲ್ಲಿನ
"ಓ ಮಾಝಿ ರೇ.."   ಗೀತೆ :

O Maanjhi Re
Apna Kinara
Nadiya Ki Dhara Hai

Saahilon Pe Behenewale
Kabhi Suna To Hoga Kahi
Kagazon Ki Kashtiyon Ka
Kahi Kinara Hota Nahi
O Maanjhi Re
Koi Kinara
Jo Kinare Se Mile Woh
Apna Kinara Hai

Paniyon Mein Bah Rahe hain
Kayee Kinare
Toote Huye
Raaston Mein Mil Gaye Hain
Sabhi Saharein
Choote Huye
O Maanjhi Re
Koi Sahara
Majdhare Mein Mile toh
Apna Sahara Hai...

------------------------------------------------------------------------------------------------------------

ಇನ್ನೊಂದು ಪ್ರಯತ್ನ:

ಓ ಅಂಬಿಗನೇ,
ಎನ್ನಯಾ ದಡವು 
ನದಿಯ ಈ ಹರಿವು

ಪಾತ್ರಗಳಲಿ  ಹರಿಯುವವರೇ
ಎಲ್ಲೋ ಕೇಳಿದ್ದುಂಟಲ್ಲವೋ?
ಪತ್ರಗಳಾ ದೋಣಿಗಳಿಗೆ
ಎಲ್ಲೂ ಪಾರವಿರೋದಿಲ್ಲವು...
ಓ ಅಂಬಿಗನೇ,
ಯಾವೊಂದು ಪಾರ
ವದು ಪಾರದೀ
ಸೇರಿಬರುವುದೋ
ಅದು, ಎನ್ನಯಾ ಪಾರವು..

ಜಲಗಳಲ್ಲಿ ಗಮಿಸುತಿಹವು ದಂಡೆ ಹಲವು
ಛಿದ್ರಗೊಂಡು  ;
ಬೀದಿಗಳಲಿ ಕಲೆತುಹೋಗಿವೆ ಆಸರೆ ಸಕಲವೂ 
ಕಳಚಿಕೊಂಡು ;
ಓ ಅಂಬಿಗನೇ,
ಯಾವುದೊ ಒಂದಾಸರೆ ಮಧ್ಯಧಾರೆ
ಯಲಿ  ಸಿಕ್ಕರೆ
ಅದು, ಎನ್ನಯಾ ಆಸರೆಯು


 ------------------------------------------------------------------------------------------------------------
ಬಹುಶಃ ಓದುಗನೊಬ್ಬನಿಗೆ ಇವೆರಡು ಪ್ರಯತ್ನಗಳ ಮಿಶ್ರಣದಲ್ಲಿ ಆಗಬಹುದಾದ ಇನ್ಯಾವುದೋ ಒಂದು ಅನುವಾದ ಹೆಚ್ಚು ಸಮರ್ಪಕವಾಗಿ ಕಾಣಬಹುದು...

1 comment:

  1. ಈ ಹಿಂದಿ ಹಾಡು ನನಗೆ ತುಂಬ ಮೆಚ್ಚುಗೆಯಾದ ಹಾಡು. ಆದರೆ ಅದರ ಸಾಲುಗಳು ಹಾಗು ಅರ್ಥ ಸರಿಯಾಗಿ ಗೊತ್ತಿರಲಿಲ್ಲ. ನಿಮ್ಮ ಸಮರ್ಪಕ ಅನುವಾದವನ್ನು ಓದಿದ ಬಳಿಕ ಮೂಲ ಪೂರ್ಣರೂಪದಲ್ಲಿ ತಿಳಿಯಿತು. ಧನ್ಯವಾದಗಳು.

    ReplyDelete