quoteonquote ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
quoteonquote ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಜೂನ್ 13, 2025

Humpty Dumpty in Kannada | ಅಂಡಾಗುಂಡ | AndaaGunda

:Humpty Dumpty Bengalured:
| ಅಂಡಾಗುಂಡ |
(All the kings men...)


ಅಂಡಾ ಗುಂಡ ಕಲ್ಲು ಬಂಡೆ ಹಾಂಗಿದ್ದ
ಅಂಡಾ ಗುಂಡ ಅಡ್ಡ ಗೋಡೆ ಹತ್ತಿದ್ದ
ಕಪ್ಪವ ಪಡೆದ ರಾಯಲ ಕಿಂಗ
ಮರೆವಣಿಗೇಲಿ ಬಂದಾರೆಂದು ಹೀಂಗ
ಉಮ್ಮೇದಿಯಲಿ ಕುಣಿಯಲು ಹಂಗಾ
ಬಿದ್ದನೊ ಇವನು ಪುಡಿಪುಡಿ ಹ್ಯಾಂಗ
ಹದಿನೆಂಟು ಪೋಲೀಸರು ಹನ್ನೆರಡು ಡಾಕ್ಟರರು
ಜಪ್ಪಯ್ಯ ಅಂದರೂ ಪುನಃ ಕೂಡಿಸದಾದರು
ಅಂಡಾ ಗುಂಡ ಮುನ್ನಾ ಹ್ಯಾಂಗಿದ್ದನೋ ಹಾಂಗ

-----------------------------------------------------------------
:Humpty Dumpty ಮೂಲ ಆವೃತ್ತಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಬಹುದು:
 https://en.wikipedia.org/wiki/Humpty_Dumpty
-----------------------------------------------------------------

source: https://commons.wikimedia.org/wiki/File:Denslow%27s_Humpty_Dumpty_pg_4.jpg
ನಮ್ಮ ಜಂಬದ ಕೋಳಿ  ಕಾವಿಗೆ ಹೆಮ್ಮೆಯಿಂದ ಉಬ್ಬುತ್ತಿರುವ ನಮ್ಮ ಅಂಡಾಗುಂಡ
(ಚಿತ್ರಮೂಲ: wikimedia commons )
-----------------------------------------------------------------


-:ಸಂಕ್ಷಿಪ್ತ ಆವೃತ್ತಿ:-


ಅಂಡಾ ಗುಂಡ ತಡೆ ಗೋಡೆ ಹತ್ತಿ ಕೂಂತ
ಅಂಡಾ ಗುಂಡ ಹೋತ್ಗಂಡು ಬಿದ್ದ
ಹನ್ನೆರಡು ಪೋಲೀಸರು ಹದಿನೆಂಟು ಡಾಕ್ಟರರು  
ಪುನಾಃ ಇವನ ಒಟ್ಟ ಕೂಡ್ರಿಸದಾದರು
ಮುನ್ನಾ ಗುಂಡಗೆ ಹೆಂಗಿದ್ದನೋ ಹಾಂಗ

------------------------------------------------------------


source: https://commons.wikimedia.org/wiki/File:Humpty_Dumpty_cup_Chodzie%C5%BC.jpg
"अब की बार it's my cup of  royal tea!"
"ಎಲ್ಲೆಲ್ಲೂ ನನ್ನ ಚಾಯ್ ಕಪ್'ಪೇ ಚರ್ಚಾ!!"
"ಮುಗಿಲುಗಪ್ಪಾದರೂ ವ್ಯವಸ್ಥೆ ತಪ್ಪಾದರೂ 
ಆಡಳಿತ ಕೆಪ್ಪಾದರೂ ಜನತೆ ಬೆಪ್ಪಾದರೂ
ಕಪ್ಪು ಕಪ್ಪೇ!!!"
..ಎಂದು ಮಕಾಡೆ ಬಿದ್ದರೂ ಗಡ್ಡ ಮಣ್ಣಾಗಲಿಲ್ಲ
 ಎಂಬಂತೆ ಬೀಗುತ್ತಿರುವ ಅಂಡಾಗುಂಡ
(ಚಿತ್ರಮೂಲ: wikimedia commons )
======================================

ಗುರುವಾರ, ಮಾರ್ಚ್ 13, 2025

ಆವಿರ್ಭೂತ -- The Emergent

ಗೋಪಾಲಕೃಷ್ಣ ಅಡಿಗರ 'ಭೂತ' ಕ್ಕೆ ಸಂವಾದಿ-ವಿವಾದಿಯಾಗಿ

"ಆವಿರ್ಭೂತ
(The Emergent)





ಹಾಡುವವು ಭವಿಷ್ಯತ್ತಿನೀಕಾಲದ ಕ್ವಾಂಟಂ ಲಿಪಿಗೂಢಗಳು:
ತೆರೆದ ನವಸುರಂಗದಂಚಿನ ಬೆಳಕಿಗೆನುವ ಬಳಸುದಾರಿ
ದಾಪುಗಾಲಿಟ್ಟು ಅಂಡೆತ್ತಿ ಓಡುವುದೇರಿ
ಲಲ್ಲೆಗರೆಯುವ ಕಡೆಗೋಲ ಬಡಿಯತ ಅವಡುಗಚ್ಚಿ
ಹಾಯುವುದೇ ಸಿಲಿಕಾನ್ ಕಣಿವೆಯ ಗಾಜ ಹೊದರೊಡೆದು.
*
ತೊಟ್ಟು ಕಳಚಿದ ಕಿವಿಯುಲಿಯ ಬಳ್ಳಿ ತೊಟ್ಟಿ ಬಳಿ
ಬಾಲವಿಲ್ಲದಿಲಿ ಮಿಣುಗುವುದು.
ಬಿರ್ಬೆಳಕಲ್ಲಿ ಕಣ್ಣು ತೆರೆದಿಡಲು ತಡಕಾಡುವ ನನ್ನ
ವಿಕರ್ಷಿಸುವವು ಮೆಲ್ಲನೆರಡು ಎಲ್ಲೀಡಿ ತೆರೆ:
ಹುಣ್ಣಿಮೆಗಲ್ಲಗುಳಿಗಳಿಂದೆದ್ದುನ್ಮತ್ತ ಪೊರೆಹರಿವ
ಕೃತಕಮತ್ತೆ ನೀರೆ?


ವರ್ತಮಾನವಾಹಿನಿಯ ತುಂಬ ಭವಿಷ್ಯತ್ತಿನ ಸುದ್ದಿ.
ನೀರ ಕೆಳಕ್ಕೊಂದೇಳು ಮಡಿ, ಮೇಲೆ ಹದಿನೇಳೆಂಟು ಮಹಡಿ ಜಹಜು ಲಕ್ಸುರಿ.
ಆಗ್ಗಾಗ್ಗೆ ಬೊಬ್ಬಿರಿದು ಖನಿಜಮಿಶ್ರಣವೆರಚುವ
ಜನಗಮನ ಮುಸುಕಿದ ಬಿಸಿನೀರಬುಗ್ಗೆ.
*
ಗ್ಯಾಜೆಟ್ಟು ಮುಚ್ಚಿದರು -
ಕಿವಿಗಡಚಿಕ್ಕುವ ಕಂಕಾಲಹಾಲುಗಳಲಿ
ಬ್ರೆಕ್ತಾಳ ಕೂಲುಸನ್ನೆ ಮುಲುಕುವ ಎತ್ತಿದ ತೋಳುಗಳ ಪರಿಷೆ.
ಮೇಲ್ಪದರಗಳಲ್ಲಿ ಕುಂತ ಧೂಳುಗಳಲ್ಲಿ ಸಂತತ
ಹೊಬ್ಬಿ ಹೊಮ್ಮುವ ಶಿಲೀಂಧ್ರ ಬೀಜಾಣು ಜಾಲ.
ಕಾಳಮಿಂಬಲೆಯ ಪರದೆಮುರಿಮರೆಯಲ್ಲಿ
ಮಾಲು ಹೆಕ್ಕುವ ಮಿಡುಕುಮೊನೆ ತೋರುಕ, - ಇವು
ಹೊಂದಿವೆ ಒಳಾಂಗಣದ ತಣ್ಣನೆಯ ವೆಲ್ವೆಟ್ಟು ನುಣಿ ಹೊದರ.


ನೀರುನೆಲೆ ಇಲ್ಲದವರಾಗುವರು ಪುತ್ರಪ್ರಪೌತ್ರಿಯರು.
ಧೂಳ್ಮರಳುಗಾಳಿ ಹೊಂಜಿ ದಕ್ಕಲಿಕ್ಕೆ ನೆಲವೂ ತೋರದಂತಾಗುವರು.
ಬಚಾಯಿಸುವ, ಸುಸ್ಥಿರಗೊಳಿಸುವ ದಿಕ್ಕ ಬಲ್ಲೆ, ಆದರೂ ದಾರಿ ಮರೆತೆ;
ಬರಿದೇ ತಿರುಗಿಸುತಿದ್ದೇನೆ ಹೀಗೆ ಚಾಲಕದಂಡ.
ಸ್ವಹಿತವ ನೆಚ್ಚಿ ಅಧೋಬುದ್ಧಿಯಾದೆವೋ;
ಇನ್ನಾದರೂ ತೈಲನಿಕ್ಷೇಪ, ಅದಿರುಗಳಿಗಗೆವುದ ನಿಯಂತ್ರಿಸಬೇಕು.


ತುಳಿವಾಗ್ಗೆ ಮೊದಲು ವಾಸನೆಯ ಹಸಿಮಣ್ಣು;
ಚುಮುಕಿಸಿದರೆ ಅಷ್ಟಿಷ್ಟು ಬೀಜದುಂಡೆಗಳ
ಬೆಳದೀತು ಸಹಜ ಹಸಿರು.
ಹದಗೆಡಿಸದೇ ಪಡೆದುದನರಗಿಸಿ ಮರಳಿಸುವ ಬದ್ದತೆಯ
ಇನ್ನಾದರೂ ಬಹುವೇ ಕೃತಿಯಲ್ಲಿಳಿಸಬೇಕು;
ಕಡಿವ ಸುಡುವ ಬಡಿವಾರವಿಲ್ಲದೇ ಪ್ರಕೃತಿದೇವತೆಯೊಪ್ಪುವ ನೆಲಮೂಲ ತಿಳಿವು.


ಬಾಯೊಳಗಣ ಪಸೆ ಕೊಳ್ಳಿ ನುಂಗಿ 
ನೆಲದಗಲ ಹವಾಗುಣ ನಾಟಕ ಬೀದಿ 
ಬಿರುಬಯಲ ಬಿಳುಚುಮೋಡಗಳಂಚಿಗೆ ಬೆಳ್ಳಿಯಯೋಡೈಡು ಪುಡಿ ಮಿಂಚಿ
ದಶನಿಮಿಷಗಳಲಾಗಿಬಿಡುವೀ-ಮಾರ್ಕೆಟ್ಟ ಡೆಲೆವರಿ
ಯಾಂಕರುಗಳ ಗುಡುಗಾಟ, ಇನ್`ಪ್ಲುಯೆನ್ಸರುಗಳ ಕಾಟ
ಆವಿರ್ಭೂತವು ಸತ್ಯೋತ್ತರ ವರ್ತಮಾನ.
ಆಗೆದುತ್ತೀ-ಭೂಮಿಕೆ, ಎಗ್ಗಿಲ್ಲದ ದತ್ತಾಂಶ ಸಂಚಯನ;
ಕ್ಲಿಕ್-ಬೇಯ್ಟು ಲೈಕುಗಳ ಕ್ರಿಪ್ಟೋ ನಂದನವನ;
ವರ್ಚುಯಲ್ವಾಸ್ತವ ಬುರುಜುಗಳ ಹೊಮ್ಮರಳ ತಳಪಾಯ.



...............................................................................................................................................
ಮೂಲ 'ಭೂತ'https://ruthumana.com/2018/03/22/2-translations-a-k-ramanujan
ಆಂಗ್ಲ 'ಆವಿರ್ಭೂತ': https://blurberan.blogspot.com/2025/03/emUrgent.html
...............................................................................................................................................



ಉಪಸಂಹಾರ ಮೊದ
ಮೊದಲಲ್ಲಾಗಿದ್ದು ಹೀಗೆ:

ಬಾಯೊಳಗಿಳಿವುದು ಬೀರು, ಮೇಲಕ್ಕೆ ಹೊಗೆಸುರುಳಿ;
ಭೂಮಿಯುದ್ದಗಲ ಇವುಗಳ ನಿಷ್ಕಾರುಣ ವ್ಯಾಧಿ;
ಬಿರುಬಯಲ ಬಿಳುಚುಮೋಡಪಿಂಡಗಳಂಚಿಗೆ ಬೆಳ್ಳಿಯಯೋಡೈಡ ಪುಡಿ ಮಿಂಚು;  
ದಶನಿಮಿಷಗಳಲಾಗುವೀ-ಮಾರ್ಕೆಟ್ಟ ಡೆಲೆವರಿ;
ಕರ್ಣಪಿಶಾಚಿ ಕಾಟ, ಇನ್ಪ್ಲೂಯೆನ್ಸರುಗಳ ಹುಡುಗಾಟ;
ಆವಿರ್ಭೂತವು ಸತ್ಯೋತ್ತರ ವರ್ತಮಾನ.
ಆಗೆದುತ್ತ ಭೂಮಿಕೆ ಎಗ್ಗಿಲ್ಲದ ದತ್ತಾಂಶ ಸಂಚಯನ;
ಕ್ಲಿಕ್-ಬೇಯ್ಟು ಲೈಕುಗಳ ಕ್ರಿಪ್ಟೋ ನಂದನವನ;
ವರ್ಚುಯಲ್ವಾಸ್ತವ ಬುರುಜುಗಳ ಹೊಮ್ಮರಳ ತಳಪಾಯ.

ಭಾನುವಾರ, ಜುಲೈ 16, 2023

ಆನೇ ಸೈಯ! (ಬೈಲಾನೆ ರೂಮರು - ೨)

ಆನೇ ಸೈಯ! 
(ಬೈಲಾನೆ ರೂಮರು / ನಿಶ್ಯಬ್ದ ಪ್ರಮಾಣ -  ೨)
***

an English version of the full poem is here:
el phantom di camera

*****

(ಆನೆ ಭಾಗ ಒಂದನ್ನು ಇಲ್ಲಿ ತಟ್ಟಿ ನೋಡತಕ್ಕದ್ದು!) 


***


ಚಿಕ್ಕಂದಿನಲ್ಲಿ ಆನೆ ಹತ್ತು
ಪೈಸೆ ಬೆಲ್ಲ ಬಾಳೆಗೆ ಬಾಗಿ
-ಲುಗಳ ತಟ್ಟುವುದು
ಇತ್ತಾದರೂ ಆ ಭಾರ
ಸೊಂಡಿಲಿನಾಶೀರ್ವಾದ ತಲೆ
ತಡೆಯದ ದಿಗಿಲು
ಹುಟ್ಟಿಸೋದು ಸಾಕಿ ಪಳಗಿ
-ಸಿದ್ದದಾದರೂ
ದೇವ್ರಾಣಿ! 

***

ಕಪ್ ಕುರುಡರಾನೆ ಕಾಲ
ಮುಟ್ಟಿ ನೋಡುವಲ್ಲಿ 
ಬಿಳಿಯಾನೆ ಹೆಡ್ಡರ್
ಮೈ ದಟ್ಟಿ ನೋಡುವಲ್ಲಿ 
ಪಾರ್ಶ್ವನಾಥರಾಲಯ ಮತ್ತೆಲ್ಲಿ 
ಖೋಟಾನೋಟಗಳ್ 
ಬಟಾ ಬಯಲಲ್ಲಿ 
ಹೇಗ್ಬಿಡಿಸಿದರ್ಹಾಗೆಲ್ಲಲ್ಲಲ್ಲಲ್ಲಿ
ಜಗಬಯಲಾನೇರೂಮರು

*****



........................................................................................

:trigger:
https://mobile.twitter.com/stpalli/status/1174913146273714177

ಶುಕ್ರವಾರ, ಸೆಪ್ಟೆಂಬರ್ 10, 2021

ಬೈಲಾನೆ ರೂಮರು / ನಿಶ್ಯಬ್ದ ಪ್ರಮಾಣ (೧)

ಬೈಲಾನೆ ರೂಮರಿಲ್ಲಿ

 

ಆದಿಯಂತ ಇಲ್ಲದಂತ

ಆಮೂಲಾಗ್ರಾಧ್ಯಂತ

ಇದೆಂತದೊ ದಂತಕತೆ

ಅವರಿವರಂದಂದಂತೆ


~~~~~~~~~~~~~~~~~~~~~~~~~

"It is high(tea) time (so) that we 

address the elephant in the room(ers)"

~~~~~~~~~~~~~~~~~~~~~~~~~



ಈ ಕಡೆಯಿಂದಾ 

ಕಡೆಯಾಗಕ್

ಕಡಕಡದೂ ದುಡಿತುಡಿದೂ

ಅಡಿಗಡಿಗೆ ಗಡಗಡಗುತ

ತಡೆತಡೀತ ಅಗಸೀ ಬಳಿ 

ಸಾರುವಷ್ಟರಲಿ



"ಧೊಪ್ ಧೊಪ್!!"


"ಯಾರದು?!"


"ಆನೇ ಸೈಯ!!!"



ನೀ...

ನಾ...ಆ...

ನಿ!

 

-ಶಬ್ದಪ್ರಮಾಣವಾ

ದಂಗಾಗಿ

ಅಂದ್ ಕಂಡಿ 

ಇದ್ ಆನೇ 

ಇರಕ್ಕೂ ಅಂತ.



***



ಆನೆ ಕಂಡ

ರೂಂ ಅಂದರ ಅವಕಾಶ

ಆಲಯದ ಬಟಾಬಯಲೊ

ಬಟಾಬಯಲಾ

ಲಯವೊ


ಒಳಗಣಾನೆ

ಯೋ ದೇವ ಹೊರ

ಗಣ

ನೊ



***



ರೂಮಲ್ಲಿಯಾನೆ ಸುಮ್ನೆನೆ

ಬಯಲಾಗಬಹುದ

ರೂಮರ್ರು


ಬಟಾಬಯಲ್ ಬತ್ತಲೆನೆ

ಮಸ್ತ ರೋಮಿಂಗ

ಠಸ್ಕರ್ರು



***



ಬಿಳಿಯಾನೆ ಕರಿಕೋಣೆ

ಕೂಡಿಟ್ಟದು ಹೆಪ್ಪಾಯಿತೆ

ಕಣ್ಣಿದ್ದರು ಕುರುಡಿದ್ದರು

ಘೀಳಿಟ್ಟದು ಕೆಪ್ಪಾಯಿತೆ



***



ರೂಮು ಇದ್ದೆಡೆ ಯಡಮುರಿ

ಸಾಕ್ಷಿಗೆ ಸಾಕು ನಾಯಿಮರಿ

ಹಿಂದೆ ಬೊಗಳ್ತಾ ಓಡುತಲಿದ್ದರೆ

ಲದ್ದಿಬಿದ್ದಿತೊ ಮರಿ ಬೆನ್ನಹುರಿ



***


ರೂಮಾಗಲಂತೊಮ್ಮೆ 

ಆಶೀರ್ವದಿಸಿದರಾನೆ ರೊಮ್ಮನೆ

ಅಥರ್ವಶೀರ್ಷದಂತನಾಹತ 

ಚಿತ್ತದುಂಬದೇನೆ ಝುಮ್ಮನೆ



**********************************************************************

 


ಕೆಸರಲ್ಲಾಡಕ್ಕಾರೆ ಕರೀಕರಿ ಯನ್ನ ಕರ್ದು ಕಿವಿಯಲ್ಲುಸುರ್ದ ಕೊಸರು:

ಸರಕಾರೀ ಬಿಳಿಕರಿಯ ಕರ್ಕರೆಯದು ಕರ್ಕಶವಲ್ಲದಿದ್ದರೂ ಕಿರಿಕಿರಿಯೆನಿಸಿದಂತೆ ಬರಿ ತಲೆ ಕೆರೆಕೆರೆಯುತದನ ಸಂತೆಯ ತರಕಾರೀ ಸರಕೆಂಬಂತೆ ಕರಿಕಾರಲೇರಿಸಿ ಕರೆಕರೆತಂದು ಕರಾಮತ್ತಲಿ ಕರಿಕೋಣೆಯಲದರ ಬಿಳಿಹಾಲ ನೊರೆನೊರೆವಂತೆ ಕರೆಕರೆದು ಸುರಿಸುರಿದದರ ಕೆನೆ ಕಡೆಕಕಡೆದಾ ನೀರ್ಮೊಸರ ಮಾರಾಮೋಸದಿ ಶೆರೆಯಂದದಿಳಿಸಿ ಕುಡಿಕುಡಿದಮಲಲ್ಲಿಯದರ ಮದಮಲವಂ ಸಹ ಕರಿದು ಕರಿದು ಕರ್ರಗೆ ಕರ್ರಿ ಮಾಡುಂಡಾ ಮದಮತ್ತರು ಮತ್ತೆ ಮಾಡ್ ಹಾರ್ವಂತೆ ಹಾರಾಡಿ ತಲೆಬಡಿದೊಡೆದು ಕೋಡಿ ನೆತ್ತರದು ಹರಿಹರಿದು ಹರಿಹರೀಯೆಂದು ಮಡಿದರೂ ನಾಡಬಿಳಿಕರಿ ಕಾಡಕರಿಕರಿಯಾಗದೆಂಬ ಕಡುಗುಟ್ಟದನಮದುಸುರೆಯ ಶೆರೆಶೆರೆದೂ ಮತ್ತೇರದೆನುವಬಕಾರೀ ಬಿಳಿಕಾರಿನ ಹುಳಿನರಿಗಳೆಲ್ಲುಸುರಬಲ್ಲರು...



≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠

ಆನೆಯ ಇನ್ನೊಂದು ಭಾಗಶಃ ದರ್ಶನಕ್ಕಾಗಿ ಇಲ್ಲಿ ಸ್ಪರ್ಶಿಸಿ:
ಆನೇ ಸೈಯ!  (ಬೈಲಾನೆ ರೂಮರು - ೨)

an English transcreation/transmutation/evolution is here:
el'phantom di camera
(with a pseudo_italo-spanisque title)


 ಸ್ಪೂರ್ತಿಸೆಲೆ:
https://mobile.twitter.com/stpalli/status/1174913146273714177







ಶುಕ್ರವಾರ, ಡಿಸೆಂಬರ್ 2, 2016

Dówn upon Rice - Bath khas hind hai!


rice-bhath-haters ke liye
rice me bathnEwale ek
yah bath
bante hai:


 rice early,
 its super-bhath!
 else,
 by the time it dawns upon you,
 it would be supper-bhath!!


*************


dawn or dusk,
southindies
all rice!


*************


ಹಿಂದೆಂದಿನ ವಿದ್ಯಮಾನವಾದ
ಹಿಂಬಾಗಿಲಲ್ಲಿ ಹಿಂದಿ
hairike ya airike
ya  ಹಕೀಕತ್ತೇನೂ ಅಂಥಾ
Kkhaaass bhathE!


ಹಿಂದಿ
ಅರ್ಥವಾಗುವವರೂ
ಆಗದವರೂ
ಏನೇ ಮೂಲಾಜು ನೋಡಿದರೂ
ಹಿಂದಿಂದಾದರೂ  hEluttiruvudaadaró
ಹಿಂದೆಂದೋ ಹಂಗೇ ನುಂಗಿಕೊಂಡಿದ್ದ  bathE ಅಲ್ವೇ!

ಶನಿವಾರ, ಸೆಪ್ಟೆಂಬರ್ 26, 2015

ನಿಗಮನ

ಒಂದು ಅತೀ ಸಣ್ಣ ಪ್ರಭಂಧ/ಕಥೆ/ಭಯಾಗ್ರಪಿ/ಏನೋಒಂದು




ತೋಳ್ಪಾಡಿಗೆ ಬಸ್ಸು ಹತ್ತಿಸುತ್ತ
"
"ಬ್ರಹ್ಮಸತ್ಯವು ಅನಿರ್ವಾಚ್ಯವಾಗಿ ಬೆಂಗಳೂರಿನ ರಸ್ತೆಗಳ ಈ ದುರವಸ್ಥೆಯಾಗಿದ್ದು"
ಅಂತನ್ನುವುದನ್ನ ಸಿನಿಕತನವೆಂದೇ ಹೇಳಬೇಕಾಗುತ್ತದೆ
"

ಅಂತ ನಕ್ಕುನುಡಿಹಾರಿಸಲೆಸೆವಾಗ್ಗಿನಂದಿನ ಮಬ್ಬಲ್ಲೂ
ಡಯಲೆಕ್ಟಿಕ ಸಂಶಯದೆಳೆಯದಿಲ್ಲದಿರಲಿಲ್ಲ.