Rap-फेंक-ಉ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
Rap-फेंक-ಉ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಸೆಪ್ಟೆಂಬರ್ 2, 2026

ಕಾಲಾಬಂದರ ---> ಬಿಳಿಜಿರಳೆ

-------------------------------------------------------------------------------
ಫ್ರಂಡ್ಸ್! 
ನಮ್ಮ ಈ ಹಿಂದಿನ 'ಕಾಲಾಬಂದರ' ಗೀತೋಪದೇಶದ 
ಅಡಿನುಡಿಯಲ್ಲಿ 
ಶ್ರೀಶ್ರೀಶ್ರೀ ಮೂರ್ಶ್ರೀ ನಾವುಗಳು 
ಒಂದು ಭಯಾನಕ ಆಶ್ವಾಸನೆಯನ್ನೂ ಕೊಟ್ ಬಿಟ್ಟಿದ್ದೆವು: 

    
    "..ಕರಿಮಂಗನನ್ನು ..ಬಿಳಿಜಿರಲೆಯಾಗಿ 
          ಕಾಫ್ಕಾನಂದದಿ ರೂಪಾಂತರಿಸುವ ಆಪರೇಷನ್ನನ್ನೂ 
          ಮೂರ್ಶ್ರೀ ನಾವುಗಳು ಶೀಘ್ರ ಕೈಗೊಳ್ಳಲಿದ್ದೇವೆ, ಕಾಯಿರಿ!!!" 

ವೆಲ್ ವೆಲ್ ವೆಲ್...  ಹೆಚ್ಚು ಕಾಯುವ ಅಗತ್ಯವಿಲ್ಲ! 
ಇಕೊಳ್ಳಿ!!   
ಬಿಳಿಜಿರಳೇಗಳ  e-ಕಾಲದ 
ಅನುರಣರಣರಣನ ಪ್ರತಿಸ್ಪಂದದ್ವಂದ್ವವಾದನವನು!!!

-------------------------------------------------------------------------------

ಬಿಳಿಜಿರಳೇ ಗೀತಮು


ಹಾ! 
ಜನ ಜನ ಜೆನ್ ಝೀ ಜಿರಳೇ
ಕಣ್ ಬಿಟ್ಟದು ತರಳೇ
ಹಾ! ಹಾ! 
ಜನಗಣ ಗಮನ ಬಿಳಿ ಜಿರಳೇ
ಹಾರಿ ಬಿದ್ದೀಯಬ್ಬೆ ಮರುಳೇ  ||ಪಲ್ಲವಿ||
*
ಅಯ್ಯಯ್ಯೋ ನಾವೇನಂದಿಲ್ಲಾ ರೀ
ಅಂದು ಬಂದ ಮಂದಿ ಬರೀ ಜೆನ್-ಝೀ ನಾ ರೀ
ಯಾರಿಗಂದಿರಿ ಜಿರಳೆ, ಯಾರಿಗಂದಿರಿ ಜಿರಳೆ,
ಎಂದುಬಂದ ಮಂದಿಯಂದು ಜೆನ್-ಝೀ ನಾ ರೀ
||ರ್‍ಯಾಪ್||
*
ಬರ್ರಾ ನಿಲುಗನ್ನಡಿ ಪಿಡಿವ
ಪೀತಗಣ್ಣಿನ ಪೊರೆಯಾ ತೊಡೆವ 
ವರ್ತಮಾನದ ಜೊಳ್‍ಕಾಳ್‍ಗಳ ತೂರುವ
ನಮ ಭವಿಷ್ಯವನಿನ್ನಾವೇ ಬರೆವ 
*
ಹದ್ದುಗಣ್ಣ ದಬ್ಬಾಳಿಕೆಯಲ್ಲಿ 
ರೆಪ್ಪಿ ಯಾರದು ಮಿಟುಕೀತಲೇ
ಕಪಿಮುಷ್ಟಿಯ ಗೋದಿ ಗಂಜಿಗಂಜಿ
ಕಿಸಬಾಯ್ ಲಾಲೀ ಹಾಡ್ತಿತ್ತಲೇ 
*
ಹಾರ್‍ರೋ ಹಾರ್‍ರೋ ಹಾರ್‍ಹಾರ್ ಬರ್‍ರೋ 
ಹಿಂದಿನ ಗಟಾರನೂ
ಫ ಟಾರ್ ಫ ಟಾರ್ ಫ ಟಾರ್ ಫ ಟಾರ್ 
ಮೀಟಿ ಗಿಟಾರನು ||ಅನು ಪಲ್ಲವಿ||

*** 

ಅಚ್ಚೆ ಪಿಚ್ಚೇ ಕಣ್ ಮುಚ್ಚಿಸಲಿಕ್ಕೆ
ಕಣ್ಣಪಟ್ಟಿ ಕುದುರೆ ಓಡ್ತಿರಲಿಕ್ಕೆ
ಬೆನ್ನು ಬೆನ್ನಿಗೆ ಚಾಟಿಯ ಏಟು
ಚಾಡಿ ಕಿಚಡೀ ಕಾ ಮಲ ಬುಡಕ್ಕೆ
*
ಒಂದೇ ಚಣ್ಣದ ಬಣ್ಣಬಣ್ಣದಂಗಿ
ಆಶ್ವಾಸನೆಗಳೊ ನವನವರಂಗೀ
ನಶೆಯೇರಿಸಲಂಧಬಕುತೀ ಭಂಗಿ
ಮುಕ್ಕರಿಸಲು ಬಯಲಾಗೀ ಢೋಂಗಿ
** 
ಹಾರ್‍ರೋ ಹಾರ್‍ರೋ ಹಾರ್‍ಹಾರ್ ಬರ್‍ರೋ 
ಹಿಂದಿನ ಗಟಾರನೂ
ಫ ಟಾರ್ ಫ ಟಾರ್ ಫ ಟಾರ್ ಫ ಟಾರ್ 
ಮೀಟಿ ಗಿಟಾರನು ||ಅನು ಪಲ್ಲವಿ||


***

ಎರಡ್ ಕಾಲಿನ್ ಜಿರಳೀಯಂಥವು, ನಿಂ ಕಾಲ್ ಎಳೀತಾವಂತರೀ!
ಮೊಳೀ ಲಾಠೀ ಮ್ಯಾಲೇ ಹತ್ತಿ ಹಾರ್ ಬರೋ ವರೀ!! 
ಲಕ್ಷ್ಮಣರೇಖೇ ಮ್ಯಾಗೆ ಕೆರೆ-ದಡ ಆಡೂ ಮ್ಯಾಜಿಕ್ಕೇನರೀ!!!
{ಅಸಾಧ್ಯ!}
ಹೇ ಅವೆಲ್ಲ ತುಕಡೇ-ತುಕಡೀ, ಟೀವಿ ಹಚ್ ಕಾಣಿರೀ
ಫಾರಿನ್ ಫಂಡಿಂಗ ಫಟಿಂಗರಾ ನರಿ ಷಡ್ಯಂತರ ತಿಳೀರಿ
{ಹೌದ ನೋಡ!}
ಹ್ಯೇ ಅದು ಮತ್ತ್ತೊಂದ ಕ್ರೇಜೀ ಎಕ್ಸಪೆರಿಮೆಂಟಂತರೀ!
ಆಮಾದಮೀ ಪೊರಕೀ ಸವೆದು ಹಾರ್ ಬಂದವ್ ರೀ!! 
ದಿಲ್ಲೀ ಕೆಸರಲ್ಲರಳೋ ಕಮಲ ಅಂದರ ಅರವಿಂದನಾ ಕಣ್ ರೀ!!!
{ವ್ಹಾ!}
ಸ್ವಿಗ್ಗೀ ಝೊಮ್ಯಾಟೋ ಬಿರ್ಯಾನೀ ಪಿಜ್ಜಾ ಇನ್ಯಾರ್ ಕಳ್‍ಸಿದ್ದು ರೀ!
ಪಪ್ಪು ಬೆಪ್ಪು ಕೈ ಕುಮ್ಮಕ್ಕು ಫೇಕೂ ರೇಡ್ ಹೊಡಸ್ಲಿ ರೀ..
{ಹ್ಹೋ!}
ಹೊಗ್ಲೀ ಅವಕ್ಕ ಬೇಕಾಗಿರದಾದ್ರೂ ನಿಜ್ಜಾ ಏನೇನಂತರೀ?
ಹ್ಯಾ! ಅದೆಲ್ಲ ನಮಗ್ಯಾಕ!! ರೀಲ್ ಅಜ್ಜಾರಿಗೆ ಬಿಡ್ರೀ!!!  ||ರ್‍ಯಾಪ್||
**
ರೀತಿ-ರಿವಾಜಿಗೆಲ್ಲ ಗೋಲೀ ಹೊಡೀರಲೇ
ನಿಮ್ಮನಿ ಹೊರಾಗಾ ನೀವ್ ಕಣ್ಣ ಬಿಟ್ಟು ನೋಡ್ರಲೆ
ಹಿಂದಕು ಮುಂದಕೂ ಗಲ್ಲಿಗಲ್ಲಿ ಗಲೀಜಲೇ 
ನಾಯಿ ಹೆಗ್ಗಣ ಹಂದಿ ಸಂದಿ ಹೊಕ್ಯಾಡಾವಲೇ
ಎಷ್ಟು ಜಿರಳೆ ಎಷ್ಟು ಜಿರಳೆ ಎಷ್ಟು ಜಿರಳೆ ಎಷ್ಟು ಜಿರಳೆ
ಎಷ್ಟು ಜಿರಳೆ ಎಷ್ಟು ಜಿರಳೆ ಎಷ್ಟು ಜಿರಳೆ ಎಷ್ಟು ಜಿರಳೆ
ಪ್ರತಿ ಜಿರಳೇಯಾ ಹಿಂದಕೂ ಜಿರಳೇ
ಜಿರಳೇ ಹಿಂದೆ ಬಿದ್ದ ವ್ಯವಸ್ಥೆ ಕರಿನೆರಳೇ
ವ್ಯವಸ್ಥೆಗಳಾಗ ಭ್ರಷ್ಟ ಅಸಮರ್ಥತೆ
ನೆರೆಯಬ್ಬರಿಸಲೀ ಬರವುಬ್ಬರಿಸಲೀ
ಎಲ್ಲ ಕುಪರೀಕ್ಷೆ, ಲೀಕೂ ಪರೀಕ್ಷೆ,
ತಿರುಗಾ ಪರೀಕ್ಷೇ, ಚರ್ಚಾ ಪರೀಕ್ಷೆ, 
ಕುಕ್ಕರುಗಾಲ ಸಹನೆ ಪರೀಕ್ಷೆ  ಕಾದು ಸಾಕಾಗೈತಲೆ
ಸೀಟಿ ಹಾರಿ ಬೀಳಲಿ  ಸೀಲ್ ಹರಿದು ಬರ್ರಲೆ
ಬರ್ರಾ ಬರ್ರಲೆ ಬರ್ರಾ ಬರ್ರಲೆ... 
**
ಹಾರ್‍ರೋ ಹಾರ್‍ರೋ ಹಾರ್‍ಹಾರ್ ಬರ್‍ರೋ 
ಹಿಂದಿನ ಗಟಾರನೂ
ಫ ಟಾರ್ ಫ ಟಾರ್ ಫ ಟಾರ್ ಫ ಟಾರ್ 
ಮೀಟಿ ಗಿಟಾರನು ||ಅನು ಪಲ್ಲವಿ||

***

ಈ ಜಿರಳೇ ಜನ ಜೀ ಹಾಂ! ನಮಗಿಷ್ಟಾನೇ
ಇದ್ದಕ್ಕಿಂದಂಗೆಲ್ಲೆಲ್ಲಿಂದನೋ ಎದ್ದೇನ್ ಬಂದ್ವಂತೀರ್ರಿ!
ಬದಲಾಗೇ ಹೋತೂ ಕೊನೆಗೂ ದೊಣ್ಣೆ ನಾಯಕರ ಪರಿ!
ಏನೆಲ್ಲ ಬದಲಾಯಿಸಿ ಬಿಟ್ವಂತ ಮತ್ತ ರೀಲ್ ಬಿಟ್ರೂ ರೀ!
ಭಾಯಿಲೂ ಬಹಿನೋ ಮಿತ್ರೋ ಎಲ್ಲ ಫ್ರಂಡ್ಸಾಗಿ ಹೋಗ್ಯಾರ್ರೀ!
ಮತ್ತೊಮ್ಮೆಕ್ಸಾಮ್, ಮಗದೊಂದ್ ಬಿಲ್ಲು, ಅವವೇ ಬಾಣ ಬಿಟ್ ಬಿಟ್ಟರೂ ರೀ..
ಪ್ರಧಾನರ ಹಟ, ಐಟೀ ಸೆಲ್ಲ ಕಾಟ, ಇವೆಲ್ಲ ಚಾಳೀ ಟೂ ಅನ್ನೂ ಮಟ 
ಬಂದss ಬಿಟ್ಟರೂ ರೀ...
*
ಭಾಗವತರೂ ಮತ್ತ ಪದ ಚೇಂಜ್ ಮಾಡ್ಯಾರ್ರೀ..
ಮಠ ಮಂದಿರ ಮಸೀದಿ ಚರ್ಚಾ ಮರ್ತಂಗೇನಂದ್ರೂ ರೀ..!
ಜನ ಜೀ ಹಾಂ! ನಮಣ್ತಮಂದಿರಾ ಪ್ಯಾರೇ, ಬ್ಯಾರೇ ಅನಬ್ಯಾಡಿರೀ..
*

ಜೆನ್ ಝೀ! ನಂ ಜನ್ ಜೀ!! ನಂ ಮಾತ್ ನಂಬಿ ರೀ!!!
ಜೆನ್ ಝೀ! ಜೆನ್ ಅಲ್ಫಾ ಜೀ!! ನಮಗಾ ಮತ ಕೊಡ್ರೀ!!!
**
ಹಾರ್‍ರೋ ಹಾರ್‍ರೋ ಹಾರ್‍ಹಾರ್ ಬರ್‍ರೋ 
ಹಿಂದಿನ ಗಟಾರನೂ

ಫ ಟಾರ್ ಫ ಟಾರ್ ಫ ಟಾರ್ ಫ ಟಾರ್ 
ಮೀಟಿ ಗಿಟಾರನು ||ಅನು ಪಲ್ಲವಿ||

*******

-------------------------------------------------------------------------------
--------------
Disclaimer
 ಮೂಲ  'ಕಾಲಾಬಂದರ' ದ ಎಲ್ಲ ಹಕ್ಕುಗಳೂ 
ಮೂಲದಲ್ಲಿನ ಕೃತಿಕಾರರು-ಹಕ್ಕುದಾರರುಗಳಿಗೇ ಸೇರಿದ್ದು.
ಈ ಪ್ರಸ್ತುತಿಯಿರುವುದು ಸೃಜನೀಯ ಅಭಿವ್ಯಕ್ತಿಯ ಅಭ್ಯಾಸದ ಭಾಗವಾಗವಷ್ಟೇ 
ಹೊರತೂ ಮೂಲಕೃತಿಯ ಯಾವುದೇ ಹಕ್ಕುಗಳನ್ನು ಈ ಮೂಲಕ ಅತಿಕ್ರಮಿಸಲಲ್ಲ.
=========================================
==========

ಬುಧವಾರ, ಆಗಸ್ಟ್ 19, 2026

Kala Bandar | ಮುಸಿ ಮಂಗ್ಯ | Dehli-6 | Prasoon Joshi

ಗೀತೆ: ಹೇ ಕಾಲಾ ಬಂದರ್
ರಚನೆ: ಶ್ರೀಶ್ರೀಶ್ರೀ ಮೂರ್ಶ್ರೀ ಪ್ರಸೂನ ಜೋಶಿ
ಸಂಗೀತ: ಶ್ರೀಮಾನ್ ಎ ಆರ್ ರಹಮಾನ್
ಗಾಯ
: ಬ್ಲೇಝ್, ಬೆನ್ನಿ ದಯಾಳ್, ತನ್ವಿ ಶಾ, ವಿವಿಯಾನ್ ಚೈಕ್ಸ್, ಕ್ಲೇರ್
ಚಿತ್ರ:
ದಿಲ್ಲೀ-6 (2009)
ದಿಗ್ದರ್ಶನ: ಶ್ರೀ ರಾಕೇಶ ಓಂಪ್ರಕಾಶ ಮೆಹ್ರಾ
ಅನುರಣವಾದನ: ಶ್ರೀಶ್ರೀಶ್ರೀ ಮೂರ್ಶ್ರೀ ನಾವುಗಳು


-------------------------------------------------------------------------------
----------------------
Disclaimer: ಎಲ್ಲ ಹಕ್ಕುಗಳೂ ಮೂಲದಲ್ಲಿನ ಕೃತಿಕಾರರು-ಹಕ್ಕುದಾರರುಗಳಿಗೇ ಸೇರಿದ್ದು.
ಈ ಪ್ರಸ್ತುತಿಯಿರುವುದು ಸೃಜನೀಯ ಅಭಿವ್ಯಕ್ತಿಯ ಅಭ್ಯಾಸದ ಭಾಗವಾಗವಷ್ಟೇ 
ಹೊರತೂ ಮೂಲಕೃತಿಯ ಯಾವುದೇ ಹಕ್ಕುಗಳನ್ನು ಈ ಮೂಲಕ ಅತಿಕ್ರಮಿಸಲಲ್ಲ.
=========================================
=============== 


=======================================================
ಈ ಸಿನಿಮಾಸಂದರ್ಭವು ನಿಜಜೀವನದೊಂದು ವಿಚಿತ್ರ ಸಿನಿಮೀಯ ವಿದ್ಯಮಾನಾಧರಿತವು:
https://en.wikipedia.org/wiki/Monkey-man_of_Delhi
"ಈ ಮಂಕಿಮ್ಯಾನ್ ಯಾನೆ ಕಾಲಾಬಂದರ್ ಎಂಬುದೊಂದು 2001ರಲ್ಲಿ ದೆಹಲಿಯಲ್ಲಿ 
ವಿಪರೀತವಾಗಿ ವರದಿಯಾದ ನರ-ವಾನರ ರೂಪ/ವೇಷದ ವಿಚಿತ್ರಜೀವಿಯೆನ್ನಲಾದ 
ಉಪದ್ರವಗಳ ಅಂತೆಕಂತೆಗಳ ಬೊಂತೆ..."

ಮೂಲದ ಸಾಲುಗಳು ಓದಲಿಕ್ಕೇ ಬೇಕಪಾಂತಂತಂದ್ರ ಇಲ್ಲಿ ಕ್ಲಿಕ್ಕಿಸಿ ನೋಡಿ.
=======================================================




ಹೇ ಮಸಿ ಮಸಿ ಮಸಿ ಮುಸಿ ಮಂಗ್ಯ
ಹೊರ ಬಂದರss ಒಳಗ್ ಕಂಡ್ಯ
ಹೇ ಮಸಿ ಪೂಸಿ ಕಿಸಿ ಮುಸಿ ಮಂಗ್ಯ
ಹುಡಕ್ಕೊಂಡವ ಕಿಂಗ್ ಯಾ  ||ಪಲ್ಲವಿ||
**
ಬರೀ ನಾನಷ್ಟss ಅಲ್ಲಾ ರೀ
ಎಲ್ರೂ ಹುಡುಕಿದ್ ಅಲ್ಲಿ 
ಬರೀ ಒಂದ್ ಮಂಗ್ಯನಾ ರೀ 
ಎಲ್ರೀ ಮುಸೀ ಮಂಗ್ಯ, ಎಲ್ರೀ ಮುಸೀ ಮಂಗ್ಯ,
ಎಲ್ರೂ ಹುಡುಕಿದ್ ಅಲ್ಲಿ ಬರೀ ಮಂಗ್ಯನಾ ರೀ 
||ರ್‍ಯಾಪ್||
**
ಬರ್ರಾ ಕಣ್ಣಡಕವ ಕಾಣ್ವ
ಕಂಣಡಿಯಾ ಕರೆಯಾ ಕಾಣ್ವ
ತಮ್ಮ ತಮದಾ ಖರೇ ಕೋತಿಯ ಕಾಣ್ವ
ನಮದಸಲಾ ಬರಕತಿಯಾ ಕಾಣ್ವ
*
ಮುಸುಕು ಮರೆಯ ಆಳದಾಗ
ರೆಕ್ಕಿ ಬಾವಲಿ ಬಿಚ್ಚಿತ್ತಲೇ
ಝಗಮಗ ಬಿಳಿ ಬಟ್ಟಿಯಾಗ
ಸಸ್ತನೀ ಸತ್ಯ ಸತ್ತಿತ್ತಲೇ 
**
ಹೀರೋ ಹೀರೋ ಸರೀ ಹೀರೋ 
ಲೈಫಿನತಿಸಾರವದು
ಜೋರು ಜೋರು ನೋಡ್ರಾ ಜೋರು
ಎದಿ ಚೂರು ಹಾರ್ವುದು
||ಅನು ಪಲ್ಲವಿ||

***

ಆಣೆ ಪ್ರಮಾಣ ಶೇಂಗಾದ್ಹಾಂಗ
ದೆಂಗುವುದು ಸಿಕ್ಕು ಸಿಕ್ಹಾಂಗ
ಸಾಕುಸಾಕು ಅನ್ನೋದು ಬಾಯಾಗ 
ಕೈ ಒಡ್ಡುತ ಮಂಗ ಮುಂದಕ ಮುಂದ
*
ಒಂದೆ ಜಡೆಯ ಅಕ್ಕಾತಂಗೀ
ಆಸೆಗಳೋ ಬರಿ ನವರಂಗಿ
ನಟಿಸು ಮತ್ತ ನಾಟಕ ಭಂಗಿ
ಧರಿಸೀ ಮೆರಿ ಸುಳ್ಳ ನೂರಂಗಿ 
**
ಹೀರೋ ಹೀರೋ ಸರೀ ಹೀರೋ 
ಲೈಫಿನತಿಸಾರವದು
ಜೋರು ಜೋರು ನೋಡ್ರಾ ಜೋರು
ಎದಿ ಚೂರು ಹಾರ್ವುದು
||ಅನು ಪಲ್ಲವಿ||

***

ಎರಡು ಫೂಟುದ್ದ ಮಂಗ್ಯಾನಂತ ಅಂವ, ನಿಂ ಕಾಲ ಕಚ್ತಾನಂತರೀ!
ಉಕ್ಕಿನ ಹಲ್ಲಂತ, ಪ್ಯಾಂಟ ಮ್ಯಾಗ ಸೂಪರ್ಮ್ಯಾನ ಕಾಚಾ ರೀ!!
{ಹೌದಂತೀನಿ!!!} 
ಮತ್ತ ಮನ್ನಿ ನಂ ಮನೀ ಮೇಲಾ ಹಾರ್ತಿದ್ದ ರೀ!
ಹ್ಯೇ.. ಅಂವ ಮಾಯಾ
ಮಂಗ, ಅಂಜನಾ ಹಾಕ್ ನೋಡಿದ್ಞ ರೀ!!
ಅನ್ಯಗ್ರಹದಾಂಜನೇಯ, ಸೂರ್ಯಂಗ್ ಕೊಟ್ ಮುಖಾ ಸುಟ್‍ಗೊಂಡವಾ ರೀ!!!
{ಅಸಾಧ್ಯ!}
ಹ್ಯೇ. ಆದೊಂದ್ ಮಂ
ಗ್ಯನಂತ ಯಡವಟ್ಟ್ ಎಕ್ಸ್‌ಪೆರಿಮೆಂಟಂತರೀ! 
ಬರ್ಮಾ ಬಝಾರ್ ಐಟಮ್ಸಿಗೆ ಆಟಂಬಾಂಬ್ ಫಿಟ್ಟಿಂಗಂತರೀ!!
ನರ-ವಾನರ-ರೋಬಾಟ ಮಿಕ್ಸ ಸೈಬೋರ್ಗಂತಾರ್ರೀ!!! 
{ಕತಿಯಾತಿದು!}
ಹೋಗ್ಲೀ, ನಿಜ್ಜಾ ಅಂವನ್ನ  ಕಂಡಿದ್ದು ಯಾರ್ರೀ?!
ಯಾರಿಗೊತ್ತು!!
ಮತ್ತ!!! 
ಇವೆಲ್ಲ ಬರೀ ಜಾರಿಕೀ ರೀ...
||ರ್‍ಯಾಪ್||
**
ರೀತಿ ರಿವಾಜೆಲ್ಲ ಗಾಳಿಗೆ ತೂರ್ರಲೆ
ನಿಮ್ಮೊಳಗ ನೀವ್ ಇಣುಕೀ ನೋಡ್ರಲೆ
ಎಲ್ಲೋ ಯಾವುದೋ ಕ್ವಾಣೀಯೊಳಗಡೆ
ಕರಿ ಮುಸೀ ಮಂಗ್ಯಾ ಹೊಕ್ಯಾಡೈತಲೆ
*
ಎಷ್ಟು ಪರದೆ ಎಷ್ಟು ಪರದೆ ಎಷ್ಟು ಪರದೆ ಎಷ್ಟು ಪರದೆ 
ಎಷ್ಟು ಪರದೆ ಎಷ್ಟು ಪರದೆ ಎಷ್ಟು ಪರದೆ ಎಷ್ಟು ಪರದೆ 
ಪ್ರತೀ ಪರದೀಯಾ ಹಿಂದಕು ಪರದೀ
ಪರದಿಯ ಹೊರಕೋ ಗರಿಗರಿ ವರ್ದೀ
ವರದಿಗಳಾಳದಿ ಕೀವಿನ ಶರಧಿ
ಹುಣ್ಣಿವೆ ಕಾಣಿರಿ ಹುದುಗಿದ ವ್ಯಾಧಿ
ಸೆರೆಯುಬ್ಬರಿಸಿ ಬಂದರು ಬೆದಕಿ
ತಿಳಿದೂ ತಿಳಿಯದ ತಿಳಿಯಲೆ ಬದುಕಿ
ಇದು ಹುಚ್ಚುತನವೋ ಇಲ್ಲ ದಡ್ಡತನವೋ
ರಾಜ ಬೀದಿಲಿ ಬೆತ್ತಲೆ ತಿರುಗಿ
ನಿರ್ಲಜ್ಜ ನಶೆಯಲಿ ಬದುಕನು ಮುಗಿಸಿ    
**
ಹೀರೋ ಹೀರೋ ಸರೀ ಹೀರೋ 
ಲೈಫಿನತಿಸಾರವದು
ಜೋರು ಜೋರು ನೋಡ್ರಾ ಜೋರು
ಎದಿ ಚೂರು ಹಾರ್ವುದು
||ಅನು ಪಲ್ಲವಿ||

***

ಈ ಮಂಗಾ ನಂಗಿಷ್ಟಾನಾ, 
ಅದೇನ್ ಬಂದಾಂತೀರ್ರೀ!
ಬದಲಾಗೇ ಹೋತು ನಂ ಜೀವನದ ಪರಿ
ಏನೆಲ್ಲಾ ವ್ಯವಸ್ತಾ ಇಲ್ಲಿ ಅಗೇ ಬಿಡ್ತರೀ
ಎಲ್ಲೆಲ್ಲೂ ಮಸ್ತ ಪೊಲೀಸರಾ ತಿರುಗಾ ಗಸ್ತ ರೀ 
ಹಾಂಗಾಗಿ ರಾತ್ರಿ ನೋ ವರಿ ಸುಸ್ತ ಮಕ್ಕೋಂತೇವರೀ
ಕರೆಂಟಂತೂ ಹೋಗಾಂಗೇ ಇಲ್ಲ ತಗೋರೀ
ಬಿಗ್ಬಾಸ ಕಣ್ ಮತ್ತ ತಪ್ಸಾಂಗಿಲ್ಲ ನೋಡ್ರೀ!
*
ಮಂಗ್ಯಾನ್ ಸಂಗ ನಂಗ ಹಿಂಗಾ ಇರ್ಲಿ ರೀ
ಮತ್ತ ನನ್ನೇ ಹುಚ್ ಮಂಗ್ಯಾಂತ ಒಳಗ್ಹಾಕಿ ಬಿಟ್ಟೀರಿ! 
ಮಂಗ್ಯಾನ ಹಾವಳಿ ಹಿಂಗಾ ನಡೀತಿರ್ಲೀ ಬಿಡ್ರೀ
*
ಮಂಗ್ಯಾ ಮುಸೀ ಮಂಗ್ಯಾ, ಬಿಟ್ಹೋಗ್ ಬ್ಯಾಡ ಲೇ!
ಮಂಗ್ಯಾ ಮುಸೀ ಮಂಗ್ಯಾ,, ನಿಂ ಕಾಲ್ ಹಿಡಿತೀನಲೇ!
||ರ್‍ಯಾಪ್|| 
**
ಹೀರೋ ಹೀರೋ ಸರೀ ಹೀರೋ 
ಲೈಫಿನತಿಸಾರವದು
ಜೋರು ಜೋರು ನೋಡ್ರಾ ಜೋರು
ಎದಿ ಚೂರು ಹಾರ್ವುದು
||ಅನು ಪಲ್ಲವಿ||



---------------------------------------------------------------------------------
ಕೊಸರು: ಏನಂದರೂ ಮೂಲತಃ ಜಾಹೀರಾತು-ಜಿಂಗಲ್ಲುಗಳ ದುನಿಯಾದ ಪಕ್ಕಾ ವೃತ್ತಿಪರನಾಗಿದ್ದ ಈ ಸಿನಿಕವಿಯು, 
ಈ ಮುಂಚೆ ಹಾಗೆ "ನರನರನೊಳಗಡೆಯೊಂದೊಂದು  ಕರಿಮಂಗನಿದ್ದಾನೆ' ಎಂದು ಕಾಣಿಸಿದ್ದವನಿಗೆ
"ನರೇಂದ್ರನೊಳಗಡೆ ಎಲ್ಲ ಜವಾಬ್ದಾರಿಗೂ 'ಕೈ'ಕೊಟ್ಟು ಜೋಳಿಗೆಯೆತ್ತಿ ನಡೆದುಬಿಡುವ  ಬರಿ ಫಕ್ಕೀರನಿದ್ದಾನೆ" 
ಎಂಬ ಮುಂಗಾಣ್ಕೆಯನ್ನು ಝೆನ್ ಕೂಲ್ ಆಗಿ ಸಾಕ್ಷಾತ್ ನರೇಂದ್ರನೆದುರಲೇ ನೇಂದ್ರ ಕದಳೀ ಸುಳಿದಾನಂದಿಸುವಂದದಿ
 ಜಗಜ್ಜಾಹೀರುಗೊಳಿಸಲು ಸಾಧ್ಯವಾಗಿದ್ದುದು, ಇಂದಿನ ಜೇನ್-ಝೀ ಜಿರಳೆಗಳಿಗೀತಲೂ ತಲೆಮಾರಿನಷ್ಟು  ಹಿಂದೆಯೇ 
ಎಂಬುದನ್ನು ಇಲ್ಲಿ ನೆನೆಯಲು ಅದೆಷ್ಟು ಅಭಿಮಾನ ಉಕ್ಕಿ ಬರುತ್ತಿಲ್ಲ ಹೇಳಿ!!!

ವಿ.ಸೂ.: ಇದೇನಿದು ಮಂಗನಿಂದ ವಿಕಾಸವಾದ ಮಾನವನ ಹೊಸ ತಳಿಮಾರು ಬಿಳಿಜಿರಲೆಗಳಾಗಿರುವ 
advanced e-ಕಾಲದಲ್ಲಿ, ಪುನಃ ಮಾನವನಲ್ಲಿ ಮಂಗನನ್ನ ಕಾಣಲು ಹಿಂದಿರುಗಬೇಕಾ 
ಎಂದು ಬೇಸರಿಸಿದಿರಾ? ಚಿಂತೆ ಬೇಡ! ಈ ಕರಿಮಂಗನನ್ನು ಆ ಬಿಳಿಜಿರಲೆಯಾಗಿ ಕಾಫ್ಕಾನಂದದಿ 
ರೂಪಾಂತರಿಸುವ ಆಪರೇಷನ್ನನ್ನೂ ಮೂರ್ಶ್ರೀ ನಾವುಗಳು ಶೀಘ್ರ ಕೈಗೊಳ್ಳಲಿದ್ದೇವೆ, ಕಾಯಿರಿ!!! 

---------------------------------------------------------------------------------

ಶುಕ್ರವಾರ, ಜನವರಿ 16, 2026

ಆಧುನಿಕೋತ್ತರ ಭವಿಭಾವಶ್ಲೇಷೆಗಳು

ಆಧುನಿಕ ಸಂಪ್ರದಾಯದ ಕವಿಕಾವ್ಯಕ್ಲೀಷೆಗಳ್  
ಗೆ ಸಂವಾದಿ-ವಿವಾದಿ/ಗತಿಸ್ಥಿತಿ-ಇತ್ತೇದಿಕೆಯಾಗಿ
"ಆಧುನಿಕೋತ್ತರ ಸಂಪ್ರದಾಯದ ಭವಿಭಾವಶ್ಲೇಷೆಗಳು"

.
ಮತ್ತಷ್ಟು 
ವರುಷಗಳುರುಳಿದಂತೆ ವರ್ತನೆ
ಗಳುರುಳು ತಲೆಗುಸಿರು
ಗಟ್ಟಿ ಗಟ್ಟಿ ಗಟ್ಟಿಸುತಬಂದು ಕೊನೆಗೂ ತೊಡೆ
ಗಣಕವನೆತ್ತಿಕೊಂಡು ತಾನು  
ತಾನಾಗದೆ ಗಂಟಿಕ್ಕಿ ಹುಬ್ಬು ಮಧ್ಯೆ
ಮಧ್ಯೆ ಮೆದ್ದಾಗೆರಡೆರಡೆಲೆ ನಾಕು 
ನಾಕಾಗೆಂಟೆಂಟಾಗುವಾಟ ಗಂಟುಗಂಟಾಗಿ
ಕೆಲಸವಿದೇ ಕಾರ್ಯವಿದೇ ಎಂಬಂತೆ ಗಂಟೆ ಕಳೆ 
ವೇಷ ಗಂಟುಕಟ್ಟೋವರೆಗೆ ಮುಖ 
ವುಳಿಸುವಾಟದಂತೆ ಮೇಲ್ನೋಟಕ್ಕೆ 
ತಾಗದಂತೆ ಒಳಗೊಳಗೇ ಕುದಿಯುತ್ತೆ ಆಖೈರು     
ತಿದಿಯೊಂದು ಹಾಗೇ ಮುಂದರಿ
ಯುತ್ತ ಹೇಗೆ
ಯಿನ್ನು ನಾ ಫಿಸಿಕ್ಸು ಲಾಜಿಕ್ಕು ಫಿಲಾಸಫಿ
ಸುವುದಂತ ಚಿಂತೆ ಅದೇ ಸರಪಳಿ
ಯಲಿ ಸರಿ ಸರಿ ಸರಿಯುತ್ತ  
ಹಾಳಾಗಲಾ ಒಂದಿಷ್ಟು  
ಪದಶ್ಲೇಷೆಗಳದೇನೇನಕೋ ಹೀಗೆ  
ತಲೆಗ್ಹಿಡಿಸುತ್ತದಂತ 
ಸಿಂಟ್ಯಾಕ್ಟಿಕ ಭಂಗಿ ಭಂಗಿಸಿದಂತೆ ಯಂತ 
ಯಂಥದ್ದೆಲ್ಲವರ್ಥ ಅರ್ಥಾರ್ಥ ಅಪಾರಾರ್ಥವಾಪಾರ್ಥ
ವಾಪಥ್ಯ ಸೀಮಾಂತೆಕ್ಕಿನ ಮಟ್ಟದಲಂತೂ ತಲೆ 
ಕುಣಿಸುತ್ತೆ ಮತ್ತದೇ ಧಾಟಿಯ ಸಾವಿರ ಪದ ನೆನೆ ನೆನೆಸಿ   
ಹುದುಗುಬರಿಸುತ್ತೆ ಮತ್ತೇರಿಸುತ್ತ ಶೆರೆ ಸೆರೆ ಅರರೆರೆ ಮತ್ತೆ
ಮಾತ್ರೆಗಳೆರಡೆರಡೆಲೆಲೆ ನಾಕುನಾಕಾಗೆಂಟೆಂಟಾಗು
ವಲ್ಲಿಗೆ ಪದಪದ ಹೊಸೆವೆಸೆವಾಟಮಾಟ ಹೊಸವೆ    
ನಿಸಲು ಮತ್ತದೆ ಶಾಬ್ದಿಕ ಬೌದ್ಧಿಕ ಜಿಮ್ನಾಸ್ಟಿ
ಕಾಟವೆ ಮತ್ತೆ  ಇಷ್ಟಕ್ಕೂ, ಹಃ! ಆಧುನಿಕೋತ್ತರ ಜೀವ
ಜೀವನವೆಂದರೇನೊ? ದಾರಿಹೋಕ ಹೂ
ಮಾರ್ವ ಜೀವ ದರ್ಶನಕ್ಕಿರುವಲ್ಲಿಗೆ, ಸಾಂಪ್ರದಾಯಿಕ ಮಾರ್
ಜಾಲನಿಗೂ ನವ ಜೀವನವೆನುವಲ್ಲಿಗೆ!  ಕಾರಿ ಕಾರಿ ಬರೆ ಭಾವ
ಸಾರಿಕೆ ಬರೆದು ಕೊರೆದು ವಕಾಲತ್ತಿಸಿ ವೈಭವೀ
ಕರಿಸಿ ವಿಸರ್ಜಿಸು
ವಾಟಕ್ಕೆ ವಾಕರಿಸದೆ ಯಾರಿಗ್ಗೊತ್ತಿಲ್ಲ
ದುತ್ತರವೀ ಜಗ
ದಗಲಕ್ಕೆ ಪ್ರಶ್ನೆ ಹುಡುಕೋ ತರ್ಕಮರ್ಕಟ ಕಂಟ್ರಿ ನಾ
ಯೀ ಬಾಲ ಬುದ್ದಿ 
ವಾತ ಬಿಡಿ ಬಡಿಯುತ್ತೆ ಹೇಗೂ ಕೊನೆಗೊಮ್ಮೆ.       

================================================   
    
ಆತ್ಮೀಯ bondhuಗಳೇ,  
ಮೊನ್ನಿತ್ತೀಚೆಗೆ ನಾವೇನು ನಿಮ್ಮ ಜೊತೆ ಬಿಹೇವಿಯರಿಸಂ ವೇಷಗಟ್ಟುವಿಕೆಯ ಬಗೆಗೆ ಗಂಟೆಗಂಟಲು  ಅವಲೋಕಿಸಿದೆವೋ .. 
ನಮ್ಮ ಆಧುನಿಕ ಕವಿಕಾವ್ಯೋದ್ಯೋಗರಹಸ್ಯವನ್ನು ಆಟೊರಿಕ್ಷಾಟನೆಯಲ್ಲಿ ಕತ್ತೆಯುಚ್ಚೆಹೊಯ್ವಂದದ ಅಪ್ರಕಟಿತ ಕವನವೊಂದೋದೇನು 
ಬಯಲುಗೊಳಿಸಿದ್ದೆವೋ...  ಅದಕ್ಕೆಲ್ಲ ಮುನ್ನುಡಿಯಂತೆ..  ದಶಕವೊಂದರಷ್ಟು ಹಿಂದೆ..  ಹಾಗೆ ತಲೆ ತಳೆಯದ 
ಖಾಚಿತ್ಯಗಳು ವರ್ತನೆಯಲ್ಲಿ ಆವರ್ತಿಸುವ ವಿದ್ಯಮಾನವನ್ನು ಬ್ಲಾಗಾಭಿವ್ಯಕ್ತಿಗೊಳಿಸಿದ್ದೆವು.. 
 ಆಗ ಅದು 
ಶ್ರೀಶ್ರೀಶ್ರೀ ದುರಹಂಕಾರಿಗಳ ಮುಂಗಾಣ್ಕೆಯಾಗಿತ್ತು ಎಂದು ಈಗ ಸತ್ಯೋತ್ತರವಾಗಿ ಭಾವಿಸಲು ಒಂದು ತೊಡಕಲ್ಲದ
ತೊಡಕೇನೆಂದರೆ .. ಈಗ ಪುನರಾವಲೋಕಿಸಲು ಯತ್ನಿಸಿದರೆ ಅದು ಹೀಗೆ  ಬೆಳೆಯುವ ಟ್ಯೂಮರಿನ ಮೊಳಕೆ ಮಾತ್ರವಾಗಿತ್ತು 
ಎಂಬ ಸೂಚನೆ ಆಗಲೇ ಶ್ರೀಶ್ರೀಶ್ರೀ ದುರಹಂಕಾರಿಗಳಿಗೆ ಇದ್ದಿತು ಎನ್ನಲು ಬಲವಾದ ಆಧಾರಗಳಿದ್ದಂತೆ ಅನಿಸುವುದಿಲ್ಲ...  
ಎನಿವೆ..  ಏನೀಗ..?, ಎಂದರೆ, ಹೇಗೂ ಇತ್ತೀಚೆಗೆ ನಮಗೆ ಪ್ರತಿಸ್ಪಂದನೆಯ 'ಭೂತ'ವೊಂದು ಮೆತ್ತಿಕೊಂಡಿರಲಾಗಿ..   
ಆವೊಂದು "ಆಧುನಿಕ ಕವಿಕಾವ್ಯಕ್ಲೀಷೆ"ಗೆ ಪ್ರತಿಧ್ವನಿ ಅಥವಾ ಸ್ಟೇಟಸ್-update  ಎನ್ನುವಂತೆ 
"ಆಧುನಿಕೋತ್ತರ ಸಂಪ್ರದಾಯ
 ಭವಿಭಾವಶ್ಲೇಷೆ"ಗಳನ್ನು ವಿಶ್ಲೇಷಿಸಿ ಸಂಶ್ಲೇಶಿಸಿ 
ತಮ್ಮ ಆವಾಗಾಹನೆಗೆ ತನ್ಮೂಲಕ ನೀಡುತ್ತಿದ್ದೇವೆ..   
ಓಡಿಸಿಯಾದರೂ ಓಡದೇ ಓದಿ ನೋಡಿ ..!   
ಧನ್ಯಬಾದಗಳೊಂದಿಗೆ
ಶ್ರೀದುರಹಂಕಾರಿತ್ವಕ್ಕೆ ಯಾವತ್ತು ಪರ್ಯಾಯದಲ್ಲಿ  
ಶ್ರೀಶ್ರೀಶ್ರೀ ಮೂರ್ಶ್ರೀ ನಾವುಗಳು

ಸೋಮವಾರ, ಮಾರ್ಚ್ 18, 2019

ಮಿಸ್ತ್ರಾಲ ಮಿಸ್ಕ್ಯಾರಿಯೇಜು | ರ್ಯಾಪಾವೃತ್ತಿ

-:ಮಿಸ್ತ್ರಾಲ ಹವೆಯ ಮಿಸ್ಕ್ಯಾರಿಯೇಜು:-  

(ಹಿಪ್/ಹಾಪ್/ರ್ಯಾಪ್ ಅನುಸರಣದೊಂದೆಸೆತ)   

===============================


ಉಂಟು ದಿನ ಬರಿ ಇಪ್ಪ-
ತ್ತೆಂಟು ಅಂತಂದು ಬಂದರೂ ಫೆಬ್ರ-
ವರಿಬಂದರೆ ಬಂದು ಸಂದ ಪರಿಯಲಿ
ವರಿಯೆಂದರೆ ವರಿಯದಾ-
ವರಿಸಿ ಬಿಡುವುದು ತಣ್ಣ-
ನುರಿಯದು ತನ್ನ-
ನುರಿಸೋದು ತನ್ನ-
ನದೆಲ್ಲಿ ಅರಿಯಿಸೋದು ಅರಿ
ತಾರಿಸಬೋದು ಅಂತಾರೀತಿ
ಹರಸಿ ಅರಸೋದದದೆಲ್ಲ ಹರಸಾ
-ಹಸವೀ ಶರಧಿ ನಡುವಣ-
ದೀ ಹಿರಿದ್ವೀಪ ಸಾರ್ದೇಙ್ಞ-
ದೀ ಜನಗಣ-
ಮನ ಸಿಗದೇ ಹೋಪ ತುದಿಯ-
ದೀ ಕರಾಲಿಸಿನಲಿ ಬರಿ ಮಿಸ್-
ತ್ರಾಲ ಕರಾಮತಿಯಿಲ್ಲಿ ಒರಿಸ್ತಾ-
ನೋದಿಂದ ಸಪಾಟು ಬಟಾ
ಬಯಲದದೇನು ಮೊದಲಾಗಿ ಹೈ
ವೆಯೇ ಸಿಕ್ಕಂತಾಗಿ ನೋಡಿ ಮೆಡಿ-
ಟೆರೇನಿಯನಿನ್ನೀ ಹವೆ ಬಲ್-
ಮೂಡಿ ಈ ತಂಗಾಳಿ ಬಲು ಗಯ್-
-ಯಾಳಿ ಬಿರುಗಾಳಿಯಂತೆ ಬೀಸುತವೆ ಈ ಮನೋ-
ದ್ವೀಪದೂರಲಿ ದೂರ-ದೂರ-
ದೂರದಲಿ ಕಂಡೂಕಂಡು ದೊರಕದದೆಂ-
ದು ದೂರುತಿರುವಲ್ಲಿಯಾ-
ತಿರುವಲ್ಲಿಯಾ ದಿಗಂತಗಪ್ಪಿಸುವಂ-
ತಪ್ಪತಪ್ಪಿಸುವಂತೆ ಮತ್ತೆ ಮುಗಿ-ಮುಗಿ-
ಮುಗಿಲುಗಳದೇನು ಮುಗಿಬಿದ್ದು ಗವಿ-
ಯುತ್ತವೆಯೊ ಸುತ್ತಲಾ-
ವರಿಸುತ್ತ ದಿಗಿ-ದಿಗಿ-
ದಿಗಿಲುಗತ್ತಿಸುತ್ತಲಾಗತ್ತಲಲ್-
ಗಣ್ಣಿಟ್ಟವರಿಗೆ ಹಠಾತ್ತನೆ ಮೂಡಿ ಜಗ-
ಮಗಿಸುವಂಥ್ಯಾವ-
ನ್ನೂರು ತಾರೆ ಕೂಡ ಮುಚ್ಹೋಗ್-
ವಂಥಾ ಮಾಡ ಮಾಡುವ ಮಾಟ
ಮಾಡುವ ಪಿಸು-
ಮಾತನಾಡುವಲ್ಲಿ ಧುಡುಕಿ ಗುಡು
ಗುಡುಗಾಟವಾಡುವ ಹಂ-
ಬಲವ ತರುವೊಲವಾಂ-
ಬೋಧದಾ ಘನ ಗರ್ಭದೊಳದೇನೋ
ಏನೋ
ಭವಿಸದಲ್ಲ -
ಸುರಿವುದಿಲ್ಲ.
ಮಬ್ಬು ಗಬ್ಬ ಸಂಕಲ್ಪ ನೂರ್-
ಗಪ್ಪಿಟ್ಟರೂ ಬಿಲ್ಲ ಮೂಡಿಸಿದರೂ
ಸ್ಪುರಿಸೋದಿಲ್ಲವೀ ಮಳೆ-
ಗಾಡಿಲ್ಲದ ಸುಡುಗಾಡನಾಡ ಗುಡ್ಡ-
ಗಾಡು ತಡೆತಡೆದು ತಂಗಾಳಿಗಳ-
ನಿಲಿಸಿಲ್ಲೊಗ್ಗೂಡಿಸೂ ತೇವ-
ವದಿಲ್ಲೇ ಮಳೆಯಾಗಲ್ಲ ಹಾ-
ಗೆಲ್ಲ ಗಾಳಿ ಹಾವಳಿ ಬಿಡುವುದಿಲ್ಲ
-ವಿಲ್ಲಿ ತಳೆದ ಬಸಿರಿಲ್ಲೇ ಧರೆಕಾಣದಿಲ್ಲ ಮತ್ತಿನ್-
ಯಾವ ಬಿರುಸಿರಿಗೋ ಬೇರೆಲ್ಲಿಗೋ ಸಂ-ಹೌ-
ಹಾರಿದಂತಿದೆಯಲ್ಲ ಇದೆಲ್ಲ ಸಲ್ಲದಿದೆಲ್ಲ ನಮ
ಗಿಲ್ಲೆ ಮಳೆಯಾಗಿದ್ದಿರಬಹುದಾದರೂ ನಮ್
ಹೊತ್ತಿಗೊಂದು ಹನಿ ದೊರಕಲೇ
ಇಲ್ಲ ಕೊನೆಗು.