ಶಬ್ದಾಡಂಭರ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಶಬ್ದಾಡಂಭರ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಆಗಸ್ಟ್ 8, 2026

ಆನು ಆನೇನೆ! (ಬೈಲಾನೆ ರೂಮರು - ೩)

ಆನು ಆನೇನೆ! 
(ಬೈಲಾನೆ ರೂಮರು / ನಿಶ್ಯಬ್ದ ಪ್ರಮಾಣ - ೩)


*******

ಆನೆಯ ಇನ್ನೊಂದು ಭಾಗಶಃ ದರ್ಶನಕ್ಕಾಗಿ ಇಲ್ಲಿ ಸ್ಪರ್ಶಿಸಿ:
ಆನೇ ಸೈಯ!  (ಬೈಲಾನೆ ರೂಮರು / ನಿಶ್ಯಬ್ದ ಪ್ರಮಾಣ  - ೨)

*******
an English transcreation/transmutation/evolution is here:
el'phantom di camera
(with a pseudo_italo-spanisque title)

*******

(ಆನೆ ಭಾಗ ಒಂದನ್ನು ಇಲ್ಲಿ ತಟ್ಟಿ ನೋಡತಕ್ಕದ್ದು!)
 


****


ಆನುದೇವಾನವಟ್ಟಿಗಟ್ಟಿಗನು 
ಕರುನಾಡಿತ್ತ ಜಗಜಟ್ಟಿಗನು


ಕುಂತಳ ದೇಶದಾನೆ
ಗಳ ಹಳೇ ಹಟ್ಟೀಲೇನು 
*
ಹುಟ್ ಬಿಟ್ಟರೂ 
ನಿಗೂಢ 
*
ಗಾಢಕರಿಗಾಡ ನಡುವೆ 
ನಡೆವಂತಗಾಧ ಗಾಥೆದಂತ
*
ಮಾರ್ಗಮುರಿಕ್ಕಾರನು
*
ಕರಿನಾಡ ಕಡುಮಡುವ
ಸುಳೀಲಿಳಿವ ಮಕರದಂತ

ವಿಘ್ನಭಗ್ನಕಾರನು
*
ಬರಿದೆ ಜಾರನು!


ಬಳಿಯಲಾನೆ ಬರಿದೆ ಕರಿಯೇನು
ಕರೆಯಲಾನೆ ಹಾಲುಬಿಳಿಯೇನು
*
ಕರಿಮಲವೇನು ಕರಿಮಾದಲವೇನು 
ಕರಿಹಂಸವೇನು ಕದಳಿಧ್ವಂಸವೇನು
*
ಎಡದೆಡೆಗೆ ಈಡಾಗದ ಬಲಮುರಿಯೇನು
ಬಲದಬಲಕೆ ಬಲಿಬೀಳದ ಎಡಮುರಿಯೇನು
*
ಕರ ಬರಿದೆ ಕೆಸರಾದರೂನು
ಕಮಲಗಂಟಿ ಕಿತ್ತೆಸೆದೆ ತೀರ್ವನು
*
ನರ ಕೆರಳಿ ಕೀಳ್ನುಡಿದರೇನು
ಕೇರಳಂನಾರಿಕೇಳೆಸದರೇನು
*
ಏನು ಏನಾದರೂನು
ಏನೇನಾಗದಿದ್ದರೂನು
*
ಆನೇ ಸೈಯ ಆನು!


*******


------------------------
ಕಾಲ್ನುಡಿ
ಆನೆ ನಡೆದುದೇ ದಾರಿ 
-ಹೌದೋ!? 
ವಾಹನವಾಗಿಲಿ ಮಾತ್ರ 
-ಏಕೆ ಬೇಕಾದುದದೊ?!
ಎದುರಲೊಂದಿಲಿ ತಲೆ
-ಕುಣಿಸುತಣಕಿಸುತಿರೆ
ಮಾತ್ರ ಚ..ಲಿ..ಸೊ.. ಸೊ ಸೊ 
-ಸೋಮಾರಿಯಾನೆ 
ಸೈಯ!!!

ಶುಕ್ರವಾರ, ಜುಲೈ 3, 2026

ಮೇಘದ್ಯೂತ

-:ಮೇಘದ್ಯೂತ:-

#ಮಿನಿಗಾಥೆ  #worldflay


ಅಭಿನವಗಾಳಿದಾಸನ ಚಿತ್ತಭಿತ್ತಿಯಲಿ ಹಾಗೊಮ್ಮೆ 
ಬಿರುಬರಗಾಲಮಧ್ಯೇ ಮೋಡಗವಿದ ವಾತಾವರಣವಿತ್ತು....

ಬದಲಾದ ಹವಾಮಾನದಲ್ಲಿ ಸಂದೇಶಘರ್ಭಿತ ಮೇಘ 
ದ್ಯೂತಕ್ಕೂ ಮುನ್ನವೇ ಹಠಾತ್ ಸ್ಪೋಟಿಸಿಬಿಟ್ಟಿತು!

ಆಭಿಸರಣಕೆಗೆ ಮುನ್ನವೇ ಪುಷ್ಪಪ್ರೇಮಿ ಭೃಂಗರಾಜನ ದೇಹ
ಭೋರ್ಗರೆದ ಬರ್ಬರ ರಸಧಾರೆಯಲಿ ಕೊಚ್ಚಿ ಹೋಯಿತು.

ಭೃಂಗನ ಬೆನ್ನೇರಿ ಬಂದ ವಿಧಿವಿಲಾಸದಲಿ ವಿರಹ ವಿಹಲ್ವಿ ಪುಷ್ಪ
ನರಳಿ ನರಳಿ ಮತ್ತರಳದಂತೆ ಸುರುಳಿ ಸುತ್ತಿ ಸುಳಿವಿಲ್ಲವಾದಳು.

ಈ ಮೆಲೊಡ್ರಾಮಾದಲ್ಲೀಗ ಏನು ಮಾಯಾಮಾಂತ್ರಿಕ
ವಾಸ್ತವ ತಲೆಕೆಳಗು ತಂತ್ರ ಹೂಡಿದರೂ ಅಷ್ಟೇ...

ವರ್ಧಂತಿಯನ್ನು ವದಂತಿ ಎಂಬಂತೆ ಜಯಂತಿಯೇ 
ಓ ಇನಿಯಾ ಎಂದು ಅನಂತನಾಗುವತ್ತ ನಡೆದರೂ ಅಷ್ಟೇ...

ಪ್ರಶ್ನೆ ಹಾಗೇ ಉಳಿಯುತ್ತದೆ:


"bodyಹೋದ soulನಿಂದ ಹೂವು ಅರಳಬಲ್ಲದೆ..?!"


------------------------------------------------------------------------------------

ಜಗತ್ತಿನಲೆಂದೂ ಎಂದೂ ಯಾವ ಎಐ ಬಂದರೂ ಅಷ್ಟೇ
ಅವುಗಳಿಗೇನೇ ತಲೆಕೆಳಗು ಪ್ರಾಂಪ್ಟಿಂಜಿನೀರು ಕುಡಿಸಿದರೂ ಅಷ್ಟೇ
ಅವು ಇಂಥ ಮಿನಿ world-flay ಒಂದನೆಂದೂ ಬರೆದುಕೊಡಲಾರವು
ಅಂತಂತಂದು ಶ್ರೀಶ್ರೀಶ್ರೀ ಮೂರ್ಶ್ರೀ ನಾವುಗಳಾದ ನಾವುಗಳು 
ಈ ಮೂಲಕ ಶರಂಪರ ಪರಾಶರಪರಂಪರಾಪರಪರ ಪರಪರ 
ಷರಾ ಬರೆದಿಡುತಿದ್ದೇವೆ.

ಗುರುವಾರ, ಮೇ 3, 2018

ತತ್ವ ಮಸಿ

ಅಥವಾ

ಸೃಷೇಲಯೋಸ್ತಿಃ


 .......................................




~ಸೃಷ


ಇಕ್ಕುವ ಎವೆ ಕುಕ್ಕುವ ಸತ್ಯ 
ಹಿರಣ್ಯಗರ್ಭಗತ್ತಲು
ಹುಣ್ಣಿರದ ಹುಟ್ಟು ಗಟ್ಟಲು 
ಮುಚ್ಚುಮರೆಯಲಿ ಭವಿಸಿ ಬತ್ತಲು
ಹುಟ್ಟಿರದ ಕಣ್ಕಟ್ಟು ಭವ
ಧರೆಗಿಳಿಯೆ ಬಯಲಾಯಿತಾ...


~~~~~~~



~ಸ್ಥಿ ~

(ಇಲ್ಲಿಗೆ ಬೇರೇಯೇನೋ ಇನ್ನೂ ಸ್ಪುರಿಸಬೇಕಿದೆ;
ಇದಕ್ಕೆ ಕಾದದ್ದು ಸಾಕೆನಿಸಿ, 
ಹಾಗ್ಗೆ, ಸಧ್ಯಕ್ಕಿದು
'ತಾಕಲಿಲ್ಲದ ಟೊಣಪೆ' )


..ವಾನೀರವಾನಂತದಿ ಬಿದ್ದೆದೊದ್ದಾಡುತಿವೆ
ಒಂದು ಬೀಗ, ಮತ್ತೊಂದು ಕೀಲಿಗೈ.
ಹೇಳದೇ ಮಾಡಿಸಿದಂತೆ ಜೋಡಿಯದೆಂದೆಂದು
ತೂರಲಾರದಾ ಬೀಗದೊಳಗಾಕೈ; ಅಥವಾ
ತೆರೆದುಕೊಳ್ಳುವುದಿಲ್ಲವಾ ಕೀಲಿಯಲಾ ಬೀಗ,
-- ಹೇಗೆಂದರೂ ಅದು ಹಾಗಷ್ಟೇ ಸೈ?
ಇರುವುದವೆರಡು, ಅರಿವುದಾದರೂ ಆವೆರಡು,
ಬೀಗಕ್ಕೂ ಜೈ; ಕೀಲಿಗೂ ಜೈ.


~~~~~~~ 


~ಲಯ ~

ಭಣಭಣ ನಿರಾವರಣವಾಗಿ ಕರಣ
ಪ್ರಣವ ನಾನನಳಿದು ಅನಾಹತ್ತು ನೀ
ರಸ ಬಸಿಬಸಿದು ಕೃತ
ಕೃತ್ಯವಾಯಿತಾ.., ಮತ್ತೆ ನಿರಾಕೃತವಾಯಿತಾ
ತತ್ವಮಸಿದುಂಬಿಸಿ ಎಚ್ಚ ಚಿತ್ತ ವಿರಂಜಿತ
ಕೊನೆಗೂ ಖಾಲಿಯಾಯ್ತಾ?

~~~~~~~