ಸಿನಿಗೀತಾನುವಾದ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಸಿನಿಗೀತಾನುವಾದ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಆಗಸ್ಟ್ 12, 2025

Aur Aahistha | ಮೆಲ್ಲಗ ಹಲ್ ಕಿಸಿತಾ | Pankaj Udhas


ಸುಮ್ಕ ಹಲ್ ಕಿಸಿತಾ... 
ಒಂದು ಅಣುವಾದ
Aur Aahistha...
 
a gazhal 
sung by Shri Pankaj Udhas 
(Stolen Moments, 1998 album)
......



ಮೆಲ್ಲಗ ಹಲ್ ಕಿಸೀತಾ
ಆಡಿರಿ ಮಾತ
ಎದಿ ಲಬಡಬಿ ಯಾರೋ
ಕೇಳಿಸ್ಕೋತಿರಬಹುದ
ಶಬ್ದ ಬೀಳಬಾರದರಿ ತುಟಿಜಾರಿ
ಕಾಲದ ಖಾಲಿ ಕೈ
ಇವನ್ನು ಕಸೀತಾವ್ರೀ
ಕಿವಿ ಹಚ್ಚ್ಯಾವೆ
ಈ ಕಡಿ ಗ್ವಾಡೀ
ಗುಟ್ಟಿನ ಎಲ್ಲ ಮಾತ
ಕೇಳಿಸ್ಕೊಂಬಿಡತಾವ್ರೀ

ಮೆಲ್ಲಗ ಹಲ್ ಕಿಸೀತಾ
ಆಡಿರಿ ಮಾತ...


ಹೀಂಗ ನುಡಿಯಿರಿ ಹೃದಯದಾ ಮಾತ
ಎದಿ ಕೇಳಬೇಕ ತಿರುಗಿ ಕಣ್ ಮಿಡಿಬೇಕ
ಸುತ್ತಮುತ್ತಲ ಜಗತ್ತಿನ ಗದ್ದಲಕ್ಕ
ಕೆಪ್ಪಾಗ್ಬೇಕ, ಕೆಪ್ಪಾಗ್ಬೇಕ...

ಮೆಲ್ಲಗ ಹಲ್ ಕಿಸೀತಾ...


ಬನ್ನಿರೀ ಬಂದ್ ಮಾಡಿ ದರವಾಜೆ
ರಾತ್ರಿ ಕನಸನ್ನ ಕದ್ಕೋಂಡ ಹೊಂಟೀತ
ಯಾವುದೋ ಹುಚ್ಚು ಗಾಳಿ ಸೋಂಕಿ
ಎದಿ ಮಾತು ಹಾರಿ ಹೊಂಟೀತ,
ಹಾರ್ ಹೊಂಟೀತ.. 

ಮೆಲ್ಲಗ ಹಲ್ ಕಿಸೀತಾ...


ಇಂದು ಇನಿತು ಸಮೀಪ ಬಂದುಬಿಡಿರಿ
ನಡುವೆ ಬಿರುಕೆಲ್ಲ ಕುರುಹಿಲ್ಲದಂತಾಗಲಿ
ದುಮ್ಮಾನ ಬಿಮ್ಮಾನ ಎಲ್ಲಾನೂ ಸುಮ್ಮನಾಗಲಿ,
ಸುಮ್ಮನಾಗಲಿ... 

ಸುಮ್ಕ ಹಲ್ ಕಿಸಿತಾ...  





=================================================
Posting this here non-commercially  just as an appreciation of the original art. 
This blogger does not own/claim any copyright in here. No copyright infringement is intended. 
All rights belongs to the original creators & publishers of the gazhal. 
 

ಶುಕ್ರವಾರ, ಫೆಬ್ರವರಿ 14, 2025

ಪಿಂಕ್'ಫ್ಲಾಯ್ಡ್ "ಸಮಯ" | "Time" by Pink Floyd

https://en.wikipedia.org/wiki/Time_(Pink_Floyd_song)



Ticking away the moments that make up a dull day
You fritter and waste the hours in an offhand way
Kicking around on a piece of ground in your hometown
Waiting for someone or something to show you the way

ಕಳೆಯಿಲ್ಲದ ದಿನವೊಂದರ ಘಳಿಗೆಗಳ ಕಳೆಯುವಲ್ಲಿ
ಪೋಲುಮಾಡಿರ್ತೀರಿ ಗಂಟೆಗಟ್ಟಲೆ ಕೈ ಚೆಲ್ಲಿ
ಸುಮ್ಮನೆ ನೆಲವನ್ನೊದೆಯುತ್ತ ನಿಮ್ಮ ಊರಲ್ಲಿ
ಯಾರೋ ಏನೋ ದಾರಿ ತೊರಿಸಿಯಾರೆಂದು ಕಾದಲ್ಲಿ


Tired of lying in the sunshine
Staying home to watch the rain
And you are young and life is long
And there is time to kill today

ಸಾಕಾಗಿರೋದು ಬಿರುಬಿಸಿಲಲ್ ಕಾದು
ಮನಿಯಾಗ್ ಕೂತ್ಕಂಡ್ ಮಳಿ ನೋಡಬೋದು
ಯೌವನ ನಿಮದು, ಇನ್ನೂ ಭಾಳ ಬದುಕಬೋದು  
ಇವತ್ತಂತೂ ಟೈಮೇ ಟೈಮಿದೆ, ಕೊಚ್ಚಬೋದು


And then one day you find
Ten years have got behind you
No one told you when to run
You missed the starting gun

ಹಂಗಾ ಒಂದದಿನ ಗೊತ್ತಾಗ್ ಬಿಡುತ್ತ
ಹತ್ ವರಷ ನಿಮ್ಮ ಹಿಂದ ಬಿದ್ದಿರುತ್ತ
ಯಾರೂ ಹೇಳರು ಯಾವಾಗ ಓಡಬೇಕಂತ
ಸೀಟಿ ಹೊಡದದ್ದು ನಿಮಗೆಲ್ಲಿ ಗೊತ್ತ  


And you run, and you run to catch up with the sun
But it's sinking
Racing around to come up behind you again

The sun is the same in a relative way
But you're older
Shorter of breath, and one day closer to death

ಮತ್ತ ಓಡುವಿರಿ, ಓಡುವಿರಿ ಸೂರ್ಯನ ಹಿಡಿಯಲಿಕ್ಕ
ಅವನದಾದರೋ -- ಮುಳುಗುವ ಲೆಕ್ಕ
ರೇಸಿನ ಸುತ್ತಲ್ಲಿ ಮತ್ತ ನಿಮ್ಮ ಬೆನ್ ಹಿಂದೆ ಬೀಳಲಿಕ್ಕ

ಸೂರ್ಯನಿರುವ ಇದ್ದ್  ಹಂಗೇ,  ನೀವೋ ಮುದುಕರಾದಿರಿ
ಧಮ್ಮು ಕಮ್ಮಿಯಾತು, ಸಾವಿಗಿನ್ನೊಂದು ದಿನ ಹತ್ತಿರಾದಿರಿ 


Every year is getting shorter
Never seem to find the time
Plans that either come to naught
Or half a page of scribbled lines

ವರುಷ ವರುಷವೂ ಕಿರಿದಾಗುತ್ತ ಬರುತ್ತೆ
ಸಮಯ ಅನ್ನೋದು ಅದೆಲ್ಲಿ  ಸಿಗುತ್ತೆ
ಯೋಜನೆಗಳು ಒಂದೋ ಬರಿದಾಗುತ್ವೆ 
ಇಲ್ಲವೋ ಪುಟದರ್ಧ ಗೀಚಿದ್ಹಂಗೇ ಇರುತ್ವೆ


Hanging on in quiet
desperation
is the English way

The time is gone, the song is over
Thought I'd something more to say

ಹಾಂಗೇ ಜೋತು ಬಿದ್ದಿರೋದು ಸುಮ್ಮನೆ
ಹಪಹಪಿಯಲದುವೇ ಆಂಗ್ಲ ವಿಧಾನವೆ...

ಸಮಯವೆಲ್ಲ ಹೋಯ್ತು, ಹಾಡು ಮುಗಿದೋಯ್ತು
ಇನ್ನೂ ಹೇಳೋಕ್ಕಿದೆ ಅಂದ್ಕೊಡಿದ್ನೇ...   


Home, home again
I like to be here when I can
When I come home cold and tired
It's good to warm my bones beside the fire

ಮನೆ ಸೇರಿದೆನಲ್ಲ, ಮರಳಿ ಮನೆ ಸೇರಿದೆನಲ್ಲ    
ಇಲ್ಲೇ ಇರುವೆ ನನಗೆ ಸಾಧ್ಯವಾದಾಗೆಲ್ಲ
ದಣಿದು ತಣ್ಣಗೆ ಮನೆ ಸೇರಿದಾಗೆಲ್ಲ
ಬಚ್ಚಲೊಲೆ ಬದಿ ಬೆಚ್ಚುಗೆ ಹಿತವು ಎಲುಬುಗಳಿಗೆಲ್ಲ


Far away, across the field
The tolling of the iron bell
Calls the faithful to their knees
To hear the softly spoken magic spells

ದೂರ ಬಯಲಿನಾಚೆಯೆಲ್ಲೋ ಬಡಿವ ಕಬ್ಬಿಣ ಘಂಟೆ
ಕರೆದಿದೆ ನಂಬಿದವರ ಊರಲು ಮೊಣಗಂಟೆ
ಮೆಲುದನಿಯ ಮಾಯಕ ಮಂತ್ರಗಳ ಕೇಳೋಣವಂತೆ  


ಝೆಪ್ಪಲೀನರ ಜೋಗಿ: 'ಸ್ವರ್ಗಕ್ಕೇಣಿ'

Stairway to Heaven" by  Led Zeppalin
https://en.wikipedia.org/wiki/Stairway_to_Heaven

For original lyrics :
https://duckduckgo.com/?&q=stairway+to+heaven+lyrics

Song:
https://www.youtube.com/watch?v=IS6n2Hx9Ykk



ನೋಡಿ, ಇಲ್ಲಿ ನಮಗೆ ನೆನಪಾಗಬೇಕಾದ ಅತ್ಯುತ್ಕೃಷ್ಟ ಕಾವ್ಯ, ಅಂದತ್ತರ 'ಜೋಗಿ':
https://sallaap.blogspot.com/2008/04/blog-post_15.html

*********************************

ಝೆಪ್ಪಲೀನರ ಜೋಗಿ: 'ಸ್ವರ್ಗಕ್ಕೇಣಿ'


ಅಲ್ಲೊಬ್ಬಾಕಿ ತಿಳಿದಾಳ ಪಕ್ಕಾ
ಝಗಮಗ ಹೊಳಿಯೋದೆಲ್ಲಾ ನಗನಗ 
ಮತ್ತ ಆಕಿ ಕೊಳ್ಳುವಾಕಿ ಒಂದು ಏಣಿ
ಸ್ವರ್ಗಕ್ಕ

ಮತ್ತ ತಿಳದಾಳ, ಆ ಜಾಗಾದಾಗ    
ಮುಚ್ಚಿದ್ದರೂ ಎಲ್ಲ ದರವಾಜ
ಒಂದ್ ಆವಾಜಗ ಸಿಗತಾವ    
ಅರಸಿ ಬಂದಿದ್ದss... 


ಊ‌ಊಊss 
ಮತ್ತ ಆಕಿ ಕೊಳ್ಳುವಾಕಿ ಒಂದು ಏಣಿ ಸ್ವರ್ಗಕ್ಕ...


ಅಲ್ಲೊಂದ್ ಸೂಚನಾ ಅದ ಗೋಡಿ ಮ್ಯಾಗ
ಆದರ ಆಕೆಗ ಪಕ್ಕಾ ಮಾಡ್ಕೋಬೇಕ
ಯಾರಿಗ್ಗೊತ್ತ, ಬರ್ದಿದಕ್ ಒಮ್ಮೊಮ್ಮೆ
ಎರಡೆರಡರ್ಥ

ಹಳ್ಳದ ಪಕ್ಕದ ಮರದ ಮ್ಯಾಗ
ಅಲ್ಲೊಂದ ಹಕ್ಕಿ ಹಾಡುತೈತ
ಒಮ್ಮೊಮ್ಮೆ ನಮ್ ಎಲ್ಲಾ ಯೋಚನಿ
ತಪ್ ತಪ್ಪ...


ಮತ್ತ ಆಕಿ ಕೊಳ್ಳುವಾಕಿ ಒಂದು ಏಣಿ ಸ್ವರ್ಗಕ್ಕ...

ಊಊಊ ನನಗ ಯೋಚನೀ ಮಾಡಿಸ್ತೈತ...


ನನಗೊಂದು ಭಾವನಿ  ಬರುತೈತ
ಲಕ್ಷ ಹಾಯ್ಸುವಾಗ ಪಶ್ಚಿಮಕ್ಕ
ಮತ್ತ ನನ ಆತ್ಮ ಕೂಗತೈತ
ತೊರಿಯಲಿಕ್ಕ

ನನ್ನಾಲೋಚನೆಗಳಲೀ ಕಂಡೀನಿ
ಕಾಡ ಗೂಢ ಹೊಗಿಸುರುಳೀ
ಮತ್ತ ಧ್ವನಿಗಳೊ ಅಲ್ ನಿಂದು 
ಕಂಡೋರುದ್ದ ^†


ಊಊಊ ನನಗ ಯೋಚನೀ ಮಾಡಿಸ್ತೈತ


ಮತ್ತದೇನದ ಉಸುರಿದ್ದ
ನಾವೆಲ್ಲ ಗುನುಗೂ ಅಂತನಾ ಗೂಗಿದ್ದ
ಆಗ್ಗೇ ಜೋಗಿ ನಮ್ಮ ಕರೆದೊಯ್ವ
ತಿಳಿವೀಗ.

ಮತ್ತಾ ಹೊಸದಿನಾ'ನಾ ಹುಟ್ಟುತೈತ
ಅದಕಾ ಕಾದು ನಿಂದೋರ್ಗ
ಮತ್ತಾ ಕಾಡ ಪ್ರತಿಧ್ವನಿಸುತ್ತ
ನಗುವಿಂದ.

.....

ನಿಮ್ಮ ಬೇಲಿಸಾಲಲ್ಲೀಗ ಗಲಿಬಿಲಿ
ಅಂದರ ಗಾಬರಿಯಾಕ
ಬರೀ ಕಸಮುಸರಿ ರೀ   
ಮುಂದ ವಸಂತ ಬರಲಿಕ್ಕ 

ಹೌದ್ರೀ ನಿಮಗ ಮುಂದ ಎರಡ್ ಹಾದಿ
ಏನೀಗ
ತಡವೇನಲ್ಲ ಯಾವತ್ತೂ ಹಿಡಿದ ಹಾದಿ
ಬದಲಿಸಲಿಕ್ಕ   

ಮತ್ತ ನನಗ ಯೋಚನೀ ಮಾಡಿಸ್ತೈತ
ಓ ..

ನಿಮ್ಮ ತಲಿಯೊಳಗಿನ ಈ ಗುಂಗು 
ಹಂಗ ಹೋಗಾಂಗಿಲ್ಲರೀ
ಇಲ್ಲಿ ಸೇರು ಬಾರ ಅಂತ ಜೋಗೀ-
ನಾ ಕರದಾನರೀ

ಪ್ರಿಯ ಸಖೀ ನೀ ಕೇಳ ಇಲ್ಲಿ
ಮೆಲ್ಲಗ   
ಸುಳಿವೀ ಗಾಳಿ
ನಿನ ಸುರುಳಿ ಸುತ್ತಿನೇಣಿಗೆ   
ತಳಹದಿ
ಈ  ಪಿಸುಗಾಳಿ!



****

ಹಾಂಗ ಹಾದಿಯಲಿಳಿಯುತ ಹೋದ್ಹಾಂಗ^‡
ನಮ್ಮ ನೆರಳುಗಳು ನಮ್ಮಾತ್ಮಗಳ ಮೇರೆ ಮೆರೆದ್ಹಾಂಗ 
ಅಲ್ ನಡೆವಳು ನಮ್ಮ ಗುರುತಿನ ಈ ಸಖಿಯು 
ತೋರುವವಳು ಝಗಮಗ ಬೆಳ್ಳಂಬೆಳಗಿಸಿಯು  
ಹ್ಯಾಂಗ ಇನ್ನೂ ಎಲ್ಲಾ ಚಿನ್ನವಾಗಬೋದು 
ಮತ್ತ ಪ್ರಯತ್ನಪಟ್ಟು ಆಲೈಸಿದರ ಕೊನೆಗೂ
ಜೋಗಿಯ ಕೂಗು ಕೇಳಿಸೋದು  ನಿಮಗೂ  
ಆ ಹೊತ್ತು ಒಂದು ಎಲ್ಲವೂ, ಒಂದೇ ಯಾವತ್ತು   
ಉರುಳದೇ ಕಲ್ಲಾಗಿರಲು ಯಾವೊತ್ತೂ


ಮತ್ತ ಆಕಿ ಕೊಳ್ಳುವಾಕಿ ಒಂದು ಏಣಿ ಸ್ವರ್ಗಕ್ಕ...



*************************************
‡ಭುವಿಯೇ ಸ್ವರ್ಗವೆಂದಲ್ಲಿ ಸ್ವರ್ಗದೇಣಿಯನ್ನ ಇಳಿದುಬರುವುದಲ್ಲದೇ ಹತ್ತುವುದೇ ಮತ್ತೆ..!
† ಕಂಡವರಿಗಲ್ಲೊ ಕಂಡವರಿಗಷ್ಟೆ....


ಶುಕ್ರವಾರ, ಜನವರಿ 31, 2025

ಮತ್ತೆ ಜರುಗಲಿ | Aur Ho | RockStar | ವಿವಶತಾ ನಿರೂಪ | Irshad Kamil




Film: Rockstar (2012)
Song: Aur Ho / Meri Bebasi ka Bayan Hai
Lyricist: Irshad Kamil
Singer: Mohit Chauhan
Composer: AR Rahman
Directer: Imtiyaz Ali


ವಿವಶತಾ ನಿರೂಪ


ಎನ್ನ ವೈವಶ್ಯದೀ ಒಪ್ಪಿಕೆಯು
ವಶವಿಲ್ಲವೀಕ್ಷಣ ಗತಿಸುವುದು

ಹಪಹಪಿಯಾ ರಸ ಹಿಂಡೇನು
ಹಸಿತೋಳಲೀ ಬಾ ಮುರಿದೇನು

ಬಯಸಲಿ ನಾ ಮತ್ತೇನು
ಕಿತ್ತುಕೊಳ್ಳೇನು, ಬಿಟ್ಟೂಬಿಡೆನು

ಈ ಘಳಿಗೆ ಮಾಡಲಿ ನಾನೇನು
 
ಈ ಘಳಿಗೆಗೆ ನಾನೇನು ಮಾಡ್ವುದು ಎನ್ನ ನೆಮ್ಮದಿಗೆ ನಿರಾಳತೆಗೆ


ಮತ್ತೆ ಜರುಗಲಿ, ಮತ್ತೆ ಜರುಗಲಿ, ಉಸಿರುಗಳ ಉಜ್ಜಾಟ ಜರುಗಲಿ
ಜ್ವಾಲೆಯು ಮತ್ತೇಳಲಿ
ಮತ್ತೆ ಜರುಗಲಿ, ಮತ್ತೆ ಜರುಗಲಿ, ಉಸಿರುಗಳ ಉಜ್ಜಾಟ ಜರುಗಲಿ
ತಾಪವೂ ಮತ್ತೇರಲಿ
ಮತ್ತೆ ಜರುಗಲಿ, ಮತ್ತೆ ಜರುಗಲಿ, ಮತ್ತೆ ಸೇರುವ ನಾವು
ಮತ್ತೂ ಸುಟ್ಹೋಗುವ

ನಿನ್ನ ಕೂಡುವೆನು ನಾ ಮೊದಲಾಸಲ
ಪ್ರತಿಸಲ

ಎನ್ನ ವೈವಶ್ಯದ ನಿರೂಪವು


ಕಿತ್ತುಕೊಳ್ಳಲೇ ನಿನ ಬಿಟ್ಟುಬಿಡಲೇ
ಈ ಘಳಿಗೆ ನಾ ಏನನು ಮಾಡಲೇ
ಈ ಘಳಿಗೆಗೆ ನಾನೇನು ಮಾಡಲಿ ಎನ್ನ ನೆಮ್ಮದಿಗೆ ನಿರಾಳತೆಗೆ


***


ಹಪಹಪಿಯಲಿ ನಾನಾದೆನು ಕಗ್ಗಂಟೇ
ಬಿಡಿಸಿಕೊಳ್ಳೇ ಹೋ

ನಾ ತಟ್ಟುವುದೆ ನೀ ಮುಚ್ಚಿದ ಬಾಗಿಲೇ
ತೆರೆದುಕೊಳ್ಳೇ ಹೋ

ಈ ವಿವಶ ಮನದ ವಶ ಬಾ ಜೀವಂತ ಜೀವಿಸಿ ಜೀವಿಸು ಸ್ವಪ್ನವ

ಮತ್ತೆ ಜರುಗಲಿ, ಮತ್ತೆ ಜರುಗಲಿ, ಉಸಿರುಗಳ ಉಜ್ಜಾಟ ಜರುಗಲಿ
ಜ್ವಾಲೆಯು ಮತ್ತೇಳಲಿ
ಮತ್ತೆ ಜರುಗಲಿ, ಮತ್ತೆ ಜರುಗಲಿ, ಉಸಿರುಗಳ ಉಜ್ಜಾಟ ಜರುಗಲಿ
ತಾಪವೂ ಮತ್ತೇರಲಿ
ಮತ್ತೆ ಜರುಗಲಿ, ಮತ್ತೆ ಜರುಗಲಿ, ಮತ್ತೆ ಸೇರುವ ನಾವು
ಮತ್ತೂ ಸುಟ್ಹೋಗುವ


***


ನಿಲಿಸಲೂ ನಿಲಲಾರದು
ಇದು ದಣಿಯಲಾರದು
ಉಸಿರುಗಳದೀ ಬಿರುಗಾಳಿಯು
ಸುಳಿದಾಡ್ವುದು

ಸುಳಿವು ಸಹ ನೀಡದು
ಎಲ್ಲದು ಏನದು ಸುಡುವುದು
ನಡುನಡುಗಿ ನಡೆನುಡಿಯು
ಛಳಿಜ್ವರವೊ ಹಪಹಪಿಯು
ಕೆಂಡದಂತೆ ಒಳ ಉರಿಯು

ನಿಗಿನಿಗಿಯುರಿಯುತ ಧಗೆಧಗೆಯು
ಮೈಮನ ಮುಚ್ಚಿದೆ ಹೊಗೆಹೊಗೆಯು

ಎನ್ನ ವೈವಶ್ಯವೆ ಈ ದೃಶ್ಯವು
ಎನ್ನ ವೈವಶ್ಯವೆ ಈ ದೃಶ್ಯವು
ಎನ್ನ ವೈವಶ್ಯವೆ ಈ ದೃಶ್ಯವು

=========================================





ಶುಕ್ರವಾರ, ಜನವರಿ 3, 2025

UI -- What Isn't ThereIn Between

UI
User Interface to Uppimaniasm
Homagic ode to his high anthem
-:ದಕ್ಷಿಣೆಯುತ್ತರ:-



what does not lie
what does not lie
between U and I
what does not lie
does naught at all lie


not the truth
sembling lie

is not true
all that lies

lie's truth
where does it lie



the days pent
beneath they lie

in remembrance
nothing seems to lie

poles apart
pupils see to lie

backward to answer
dig what may belie
what may be lie



The heart has poured it all out,
yet here I hear you lie
The jasmine, the champak,
seldom that you bring them by
Oh dear, the match of black beads,
thou shalt get not to tie
thou shalt get knot to tie



==========================================

ಬುದ್ದಿವಂತ(ಮಂಕ)ರು ಎಂದು ಮಿತ್ರರಿಂದ ಕೂಗಲ್ಪಟ್ಟವರು ಊ..ಐ ನಾಮ ಕಣ್ಣಮೇಲೆ ಹಾಕಿ-
ಸಿಕೊಂಡರು...
ನಿಜದಲ್ಲಿ ನಾಮ-ದೇವ ಉಪ್ಪ-ಇಂದ್ರನಿಗೆ ಮುಗಿಸಲೆಂದು ಕಡಿಯುತಿದ್ದ ಕೈ
-ಗಳಲಿ ಸುಳ್ಸುಳ್ಳೇ ತಮ್ಮ ತಲೆ ಕೆರೆಸಿಸಿಕೊಂಡರು...
ತತ್ಫಲವಾಗಿ ಬಹು ಸಂವತ್ಸರಗಳಿಂದ 'ಏನಿಲ್ಲ ಏನಿಲ್ಲ' ಎನ್ನುತ್ತಲೇ
ಸುಮ್ಮನೇ ತಲೆಕೊರೆಯುತ್ತ ಇದ್ದ ಆಂಗ್ಲಾನುವಾದನ ಹುಣ್ಣು ತಾವುಗಳ ಕೈತಾಗಿ-
ಸಿಕೊಂಡಂತಾಯಿತು.
---------------------------------------------------------------------------------------------------------------------------

Original Song:


---------------------------------------------------------------------------------------------

Below are the original Kannada lyrics (as may be heard)
--along with a rather rough ' literal translation' in English


ಏನಿಲ್ಲ ಏನಿಲ್ಲ
ನಿನ್ನ ನನ್ನ ನಡುವೆ ಏನಿಲ್ಲ
ಏನೇನಿಲ್ಲ

What is not there?
(There isnt anything?)
What is not there!
(There isnt anything!)
Between you and me
what is not there
what all is not there(!/?)


ನಿಜದಂತಿರುವ ಸುಳ್ಳಲ್ಲ
ಸುಳ್ಳುಗಳೆಲ್ಲ ನಿಜವಲ್ಲ
ಸುಳ್ಳಿನ ನಿಜವು ಸುಳ್ಳಲ್ಲ

Not the truth-resembling lie
Not all the lies are true
Truth of lie is not lie

 
ಕಳೆದ ದಿನಗಳಲೇನೂ ಇಲ್ಲ
ನೆನಪುಗಳಲಿ ಏನೇನಿಲ್ಲ
ಉತ್ತರ, ದಕ್ಷಿಣ
ಸೇರಿಸೋದೆಂಬರೆ ನೀನಿಲ್ಲ
ಪ್ರಶ್ನೆಗೆ ಉತ್ತರ
ಹುಡುಕಿದರೆ ಏನೇನಿಲ್ಲ
ಕೆದಕಿದರೆ ಏನೇನಿಲ್ಲ

what/nothing is in the days-spent
what all is not there in memories
north, south
to join them, you are not there
for the question, the answer
if it is searched, what all isn't there(?!)
if it is digged, what all isn't there(?!)

 
ಮನಸಿನೊಳಗೆ ಖಾಲಿ ಖಾಲಿ
ನೀ ಮನದೊಳಗೆ ಇದ್ದರೂ
ಮಲ್ಲಿಗೆ ಸಂಪಿಗೆ
ತರದೆ ಹೋದರು ನೀ ನನಗೆ
ಓ ನಲ್ಲ ನೀನಲ್ಲ
ಕರಿಮಣಿ ಮಾಲೀಕ ನೀ
ನಲ್ಲ

in the heart, it is just emptiness
though thou art there in the heart
the jasmine, the champak,
if you do not bring them for me
oh dear, you aren't,
the owner of the 'black bead' (mangalasuthra / thali),
aren't you dear!


*******       *******       *******       *******       *******      

ಶನಿವಾರ, ಜೂನ್ 5, 2021

ತಾನ.. ಧಿರತಾನ.. | Meethasa Ishq lage | Kailash-Kher / Virag Mishra

ಕೈಲಾಶ ಖೇರರ ಗಾಢವಾದ ಗಾಯಕಿಯಲ್ಲಿ
ಕಾಡುವಂತೆ ಧ್ವನಿಸಲ್ಪಟ್ಟಿರುವ
ರಮ್ಯ (ಸೂಫಿ-ಆಧ್ಯಾತ್ಮಿಕ?) ಪ್ರತಿಮೆಗಳ
ಒಂದು ಚಿಕ್ಕ ಚೊಕ್ಕ ಗೀತ
------

Original Song (Hindi):
Meetha sa Ishq Lage

Lyricist: VIRAG MISHRA

Artists: - KAILASH KHER
· SUZANNE D'MELLO 
· BAPPA LAHIRI
 

Movie: A-Flat (2010)

--------

ಸಿಹಿಯಾಗಿ ಒಲವನ್ನಿಸೋದು
ಅಗಲಿಕೆ ಕಹಿಬೇವು
ಸ್ನೇಹವೆನದದುವೆ ದಿಟವೊ
ಹುಸಿಯೊಂಟಿತನವು

ಬೆಳದಿಂಗಳನ್ನ ಮೇಲೆ
ಚಾದರ ಹೊದ್ದಿಸಿತೊ
ಹೊದ್ದೆಯೇನು ನೀನು ಎನ್ನ
ಉಸಿರು ಮರಳಿ ಬಂದಿತೊ

ಮದರಂಗಿ ಬಣ್ಣ ಹಾಗೇ ಗಾಢವಾಯಿತೊ
ಒಂದು ಕ್ಷಣದಿ ಹಾ ಏನಾಯಿತೊ
ಗೆಜ್ಜೆಗಳಾ ಸದ್ದು ಹೇಗೆ ನಿತ್ತುಬಿಟ್ಟಿತೊ
ಒಂದು ಕ್ಷಣದಿ ಹಾ ಏನಾಯಿತೊ

ಮನ ಒಪ್ಪದೊ
ಏನೂ ತಿಳಿಯದೋ
ಹುಚ್ಚು ಪತಂಗ ಹಾರ್ವುದೋ
ತಾನ ಧಿರತಾನ ತಿರತಾನ ಧಿರನ ತೊಂ


ಮಾತಿಲ್ಲದೇನೆಲ್ಲಾ ಹೇಳಿಬಿಟ್ಟನೊ
ರಾತ್ರಿ ಪೂರ ಮಥಿಸುತಿದ್ದೆನೊ
ದೇವದೂತನೋರ್ವನೆನ್ನ ತಡವಿ ನಡೆದನೊ
ಯಾರದು ನಾ ಅರಸುತಿದ್ದೆನೊ

ಮನ ಒಪ್ಪದೊ
ಏನೂ ತಿಳಿಯದೋ
ಹುಚ್ಚು ಪತಂಗ ಹಾರ್ವುದೋ
ತಾನ ಧೀಂ ತಾನ ಧಿರತಾನ ಧಿರನ ತೂಂ

*****

 


ಸೋಮವಾರ, ಮೇ 3, 2021

ಬಳಿಬಂದರಾರೋ ಬೆಳ್ಳಂಬೆಳಗ್ಗೆ | Jagjith Singh / Saeed Rahi | koi paas aaya sawEre sawEre



---------------------------------------------------------

ಗೀತ ರಚನಾಕಾರ:  ಸಯೀದ್ ರಾಹಿ
ಮೂಲ ಸಂಯೋಜಕ /ಗಾಯಕ: ಜಗಜಿತ್ ಸಿಂಗ್
(Come Alive LP  / ೧೯೭೯)

ರಾಗ: ಲಲಿತ / ಲಲತ್ / ಲಲಾಟ
ತಾಳ :  ೫ ಮಾತ್ರೆಗಳ ಜಾಝ್ ತಾಳ / ಸೂಲಫಾಕ ತಾಳ
/ ೫x೨=೧೦ ಮಾತ್ರೆಗಳ ಮಾರ್ಪು-ಝಾಪ್ ತಾಳ


(ನೋಡಿ:  A 'wild' improvisation:
https://www.youtube.com/watch?v=ariXkdS7heY
ಪಂ . ಝಾಕಿರ್ ಹುಸೇನ್ - ಹರಿಪ್ರಸಾದ್ ಚೌರಾಸಿಯಾ ಅವರೊಂದಿಗಿನ ಕಚೇರಿ :
https://www.youtube.com/watch?v=TxF8qAFUrTQ )

-------------------------------------------------------

 

ಬಳಿ ಬಂದರಾರೋ

ಬೆಳ್ಳಂಬೆಳಗ್ಗೆ

ಯನ್ನ ಮೈದಡವಿದರು

ಬೆಳ್ಳಂಬೆಳಗ್ಗೆ


ಎನ್ನದೇ ಕಥೆಯ

ತುಸುವೇ ತಿರುಗಿಸಿ

ಯನಗೇ ಅರುಹಿದರು

ಬೆಳಗ್ಗೆ ಬೆಳಗ್ಗೆ


ನಿನ್ನೆಯಿರುಳಲಂತಿದ್ದಿದು 

ಸಂಭಾಳಿಸು ಸಂಭಾಳಿಸು

ಅಲ್ಲೇ ತಡಂಬಡಿಸಿದ್ದು

ಬೆಳಗ್ಗೆ ಬೆಳಗ್ಗೆ


ಕಳೆದಿತೆನ್ನ ರಾತ್ರಿ 

ಪೂರ ಪಾನಗೃಹದಿ

ದೈವ ನೆನಪಾಯಿತು

ಬೆಳಗ್ಗೆ ಬೆಳಗ್ಗೆ


ಇರುಳಿಡೀ ಬೆಳಗಿತ್ತು

ಯಾವೊಂದು ಬತ್ತಿ

ಅದನೇ ಸುಟ್ಟೆವು    

ಬೆಳಗ್ಗೆ ಬೆಳಗ್ಗೆ. 

 


 

 

koī paas aayā savere savere

mujhe āzmāyā savere savere


merī dāstāñ ko zarā sā badal kar

mujhe hī sunāyā savere savere


jo kahtā thā kal shab sambhalnā sambhalnā

vahī laḌkhaḌāyā savere savere


kaTī raat saarī merī mai-kade meñ

ḳhudā yaad aayā savere savere


jaleethī shamā raaT bhar jis ke khāTir

ushee ko jalāya savere savere

ಇರುಳಿಡೀ ಬೆಳಗಿತ್ತು ಯಾವೊಂದು ಜ್ಯೋತಿ 

ಬೂದಿಯಾಯಿತದುವೆ ಬೆಳ್ಳಂಬೆಳಗೆ 

ಶನಿವಾರ, ಜೂನ್ 20, 2020

ದೂರದಲ್ಲೆಲ್ಲೋ ದಿನ ಮುಳುಗಿದಂತೆ / kahin door jab din dhal jaayen / योगेश गौर


ಇತ್ತೀಚೆಗೆ ನಿಧನರಾದ ಹಿಂದಿ ಚಲನಚಿತ್ರಗೀತಸಾಹಿತಿ, ಶ್ರೀಯುತ ಯೋಗೇಶ್ ಗೌರ್ , ಅವರ ಬಗ್ಗೆ ನಮಗೆ ತಿಳಿದದ್ದು ಕಡಿಮೆಯೇ... 
ಹಾಗಿದ್ದಾಗ್ಗೆಯೂ, ಹೃಷಿಕೇಶ ಮುಖರ್ಜಿಯವರ ದಿಗ್ದರ್ಶನದ 'ಆನಂದ್' ಸಿನೇಮಾದಲ್ಲಿ ಅವರು ಬರೆದ, ಮುಖೇಶ ಹಾಡಿದ, ರಾಜೇಶ್ ಖನ್ನನ ಅಭಿನಯಿಸಿದ ಈ ಭಾವಗೀತಾತ್ಮಕ ಹಾಡು ನಮ್ಮ ಯಾವತ್ತು ಹೃನ್ಮನಗಳನ್ನು ಅದೆಂದೂ ತಾಕಿದ್ದಿದು ಹೌದು.

ಹಾಡಾಗಿಸಿ ಅಮರರಾದವರೆಲ್ಲರಿಗೂ ಕಿರುಕಾಣಿಕೆಯಾರ್ಪಣೆಯಾಗಿ ಈ ಹಾಡನುವಾದ.


   ************************************ 


ಎಲ್ಲೋ ದೂರದಿ
ದಿನ ಮುಳುಗಿದಂತೆ
ಗೋಧೂಳೀ ವಧುವದು
ವದನ ಕದ್ದಂತೆ
ಸದ್ದಿಲದೇ ಬಂದಂತೆ

ಎನ್ನ ಕಲ್ಪನೆಗಳಾಂಗಳದಲಿ
ಯಾರೋ ಕನಸುಗಳ
ದೀಪ ಹಚ್ಚಿದಂತೆ

**

  ಅದೊಮ್ಮೆ ಉಸಿರದು ಭಾರವಾದಂತೆ
ತುಂಬಲು ಕಂಗಳು ಇದ್ದಕಿದ್ದಂತೆ

ಆಗ್ಗೆಯೇ ಮಿಡಿದು
ಒಲವಲಿ ನಡೆದು
ಸ್ಪರ್ಶಿಸುವರಾರೋ ಎನ್ನ
ಅದೃಶದಲೆಂಬಂತೆ

**

ಒಮ್ಮೊಮ್ಮೆಯೆಲ್ಲಿ ಹೃನ್ಮನ ಸೇರವೊ ಅಂತೇ  
ಬಂದಾವು ಸಂಬಂಜ ಜನ್ಮಾಂತರವೆಂಬಂತೆ 

ಘನ ಸಂಕಟವು
ವೈರಿಯೆನ್ನ ಮನವು
ನನ್ನದಾಗಿಯೂ ಸಹಿಪುದು
ಅವರ ನೋವಂತೆ

**

ಅರಿವುದು ಎದೆಯದು ಗುಟ್ಟೆಲ್ಲದನು
ಹೊಂಗನಸುಗಳನು ಹೊಳೆಯಿಸುವುದನು

ಎನ್ನೀ ಕನಸುಗಳು
ಇವೇ ನನ್ನವುಗಳು
ಎನ್ನನಗಲಾರವು
ಇವುಗಳ ನೆರಳೂ.

***


  *****************************************************


ಅನುವಾದಿಸುವಾಗ ಹೊಸದಾಗಿ ಕಣ್ಣ ಕೋರೈಸಿದ ಈ ಹಾಡಿನ ಸಾಲುಗಳ ತನ್ನದೇ ಆದ ಸಾಂಧರ್ಭಿಕ ಅನ್ವರ್ಥತೆಗಳು ಮತ್ತೊಮ್ಮೆ ಹೃನ್ಮನಕಂಗಳನ್ನು ಭಾರವಾಗಿಸಿದವು.
 
ಹಾಗ್ಗೆ, ಅನುವಾದಕ್ಕಿಳಿವ ಮುನ್ನ ಎಲ್ಲವೂ ಗೊತ್ತು ಎನಿಸುವುದು -- ಅನುವಾದಕ್ಕಿಳಿದಾಗ ಇದೆಲ್ಲ ಗೊತ್ತೇ ಇರಲಿಲ್ಲವಲ್ಲ ಎಂದಾಗವುದು.., ಇದೆಲ್ಲ ಯಥಾಪ್ರಕಾರವೇ!
 
ಈ ಹಾಡಿನ ಸಂಗೀತ ನಿರ್ದೇಶಕ ಸಲಿಲಚೌಧರಿಯವರು ಬೆಂಗಾಲಿಯಲ್ಲಿ ಇದೇ ಧಾಟಿಯಲ್ಲಿ ಈ ಮುಂಚೆಯೇ ಇನ್ನೊಂದು ಹಾಡನ್ನು ಸಂಯೋಜಿಸಿರುವುದೂ ತಿಳಿಯಿತು. ಅದರ ಸಂದರ್ಭ-ಅರ್ಥಗಳೆಲ್ಲ ಬೇರೆಯಿದ್ದರೂ ಸಂವೇದನಾಶೀಲವಾಗಿಯಂತೂ ಇರುವುದು ಅನುಭವವೇದ್ಯವಾಯಿತು.

ಅಂದರೆ, ನಮ್ಮ ಈ
ಪ್ರಸ್ತುತ ಚಿತ್ರಗೀತ ಸಾಹಿತಿ ದಿವಂಗತ ಶ್ರೀ ಯೋಗೇಶ್ ಗೌರ್ ಅವರು, ಆನಂದ ಸಿನೆಮಾದ ಸಂದರ್ಭದೊಟ್ಟೊಟ್ಟಿಗೆ ಈ ಮೊದಲೇ ಸಂಯೋಜಿತವಾದ ಸಂಗೀತಕ್ಕೆ ತಕ್ಕಂತೆ ಬರೆಯುವ ಪಣವನ್ನು ಸಹಾ ಏಕಕಾಲದಲ್ಲಿ ಸುಲಲಿತವಾಗಿ ನಿಭಾಯಿಸಿದ್ದಾರೆ ಎನ್ನಬಹುದು. ಅವರಿಗೆ ನಮ್ಮ ನಮನಗಳು.



ಬುಧವಾರ, ಜನವರಿ 8, 2020

ಕುಂಕುಮ | ಶಹರ ಮಕ್ಕೊಂಡಾಗ್ಗೆ | ರಕ್ತರಾತ್ರಿ

===================================================
Date: Fri, Sep 8, 2017 at 6:59 AM
Subject: ಅನುವಾದ: ಯಾವ ರಾತ್ರಿ ಮುಗಿಲಿಂದ ರುಧಿರವೇ ಸುರಿಯಿತೊ
To:

Dears,

translation in progress
impatience too much
times running out
help through your
comments and suggestions pls ..

twbr,
durahankari duRANdhararu

------------------------------------------------------------------------------------------------------

occasion : presentimes
moovie: Gulal
musicist lyricist singer: Piyush Mishra

links:
https://youtu.be/yQ0t8LcL498
https://creationsgalorehere.wordpress.com/2014/08/06/jab-sheher-humara-sota-hai-gulaal-lyrics-hindi/
http://bwlyric.blogspot.it/2013/12/sheher-gulaal.html







===================================================


ಒಂದುಕಾಲದ ಮಾತು ಹೇಳೋಣು
ಆದೊಂದು ಕಾಲದಲೆ
ಯಾವಾಗ್ಗೆ -
ಶಹರ ನಮ್ಮದು ಮಲಗಿಬಿಟಿತ್ತೊ
ಆ ರಾತ್ರಿ ಮಾಯಕದಲೆ

ನಾಕೂಕಡೆಯು ಮಿಕ್ಕೆಲ್ಲ ದಿಕ್ಕಿಂದಲೂ
ಕೆಂಪೇ ಹೊಚ್ಚಿತಲೆ
ಮಿಂಚುಳ್ಳೆ ಕುಣಿದುದು ಸೆರಗನು ಹೊದ್ದು
ರುಧಿರವೆ ಮಿಂದಿತಲೇ

ನಾಕುಕಡೆಯಲು ಕುಂಕುಮವೆ ಛಾಪಿಸಿತಲೆ
ನಾಕೂಕಡೆಯಲೂ
ವಿಪತ್ತಿಯಾವರಿಸಿತಲೇ..


ಯಾವ ರಾತ್ರಿ ಮುಗಿಲಿಂದಲೆ
ರಕುತದ ಮಳಿಯೇ ಬಂದಿತ್ತಲೇ..


ಮಿಂದೆಹೋಯಿತು ಊರೆಲ್ಲವೂ
ಮಿಂದೆಹೋಯಿತು ಮಣ್ಣೆಲ್ಲವೂ
ಮಿಂದೆದ್ದಿತೇ ಸಕಲ ಜನಸ್ತೋಮವು

ಇಡೀ ಜಗತ್ತು ಕೇಳಿತು ಆಗಲೇ
ಇಷ್ಟೆಲ್ಲಾ ಆಗ್ತಿತ್ತ ಹಂಗಾದರ
ಅವಾಗಲೇನಣ ಕಣ್ಣಾಮುಚ್ಚೆ
ಮಕ್ಕೋಂಬಿಡೋದು ನೀನಾದರ

ಶಹರ ಹಿಂಗಂತಲೇ
ಹ್ಯಾಂಗ ಹೇಳೋಣು ಎಂಥಾ
ನಿದಿರಿ ಬಂತಂದರ..


ಯಾವ ರಾತ್ರಿ ಮುಗಿಲಿಂದಲೆ
ರಕುತದ ಮಳಿಯೇ ಬಂದಿತ್ತಲೇ..



ಸ್ಮಶಾನ ಮೌನವೋ ಮೂಕವೋ
ತಿಳಿಯದಂತೆ
ಜೀವನವನೆ ಕಸಿಯುತ್ತೆ
ಮಗ್ಗಲು ಬದಲಿಸಿದಂತೆ
ಬಿರುಗಾಳಿಯಂತೆ
ಮುತ್ತಿಕ್ಕುತವೆ ನೆರಳುಗಳು ಕಪ್ಪಿಡುವಂತೆ
ಒರಟು ಕೂದಲೆಲ ಕೆದರಿದಂತೆ
ನುಗ್ಗುತ್ತವೆ ಮಬ್ಬು ಪಿಶಾಚರಂತೆ
ಕಂಪಿಸುತ್ತೆ ಜೀವ ಅವು ಕುಣಿದಂತೆ


ಅಲ್ಲೆಲ್ಲೋ ಆ ಬೂಟುಗಳ ಟಕಟಕೆಯು
ಅಲ್ಲೆಲ್ಲೋ ಆ ಕೆಂಡಗಳ ಚಟಪಟೆಯು
ಅಲ್ಲೆಲ್ಲೋ ಆ ಜೀರುಂಡೆಗಳ ಕೀರಲು
ಅಲ್ಲೆಲ್ಲೋ ಆ ನಲ್ಲಿಯ ಟಿಪಟಿಪೆಯು
ಅಲ್ಲೆಲ್ಲೋ ಆ ಕಪ್ಪು ಕಿಡಕೀಯು
ಅಲ್ಲೆಲ್ಲೋ ಆ ಮಬ್ಬು ಚಿಮಣೀಯು
ಅಲ್ಲೆಲ್ಲೋ ಆ-ಕಳಿಸೋ ಗಾಳಿಮರಗೋಳು
ಅಲ್ಲೆಲ್ಲೋ ಅಡ್ಡಗೋಡೆ ಮೇಲಿಟ್ಟಂತೇನೇನೋ...
ಏಳೇಳೇಳೇಲೆಲೆಲೇಲೇಲೇ.. ಹೋ!


ಸ್ಮಶಾನಗಲ್ಲಿಯಲ್ಯಾವ ಮೂಲೆಯಲದೆಂದು ನಾಯಿ ಯಾವ್ದೋ
ಚೀರಿ ಚೀರುತ್ತ ರೋಧಿಸಿತ್ತಲೆ
ಅದ್ಯಾವಾಗ್ಗೆ ಬೀದಿಗಂಬದ ಗಬ್ಬು ಮಬ್ಬಲ್ಲಿ
ಏನ್ ಏನೋ ನಡೀತಿತ್ತಲೆ
ನೆರಳು ಯಾವುದೋ ತುಸುತುಸುವೇ ಯಾವತ್ತನು
ನಾಪತ್ತೆನೆರಳುಗೋಳಲಿ ಕಳೀತಿತ್ತಲೆ
ಸೇತುವೆಗಂಬಗತ್ತಲೆಗೋಳಿಗೆ ಬೆಚ್ಚಗ್ಯಾವಾಗ್ಗೆ
ನಿಧಾನ ಮೋಟಾರು ಬೆಳಗುತಿತ್ತಲೆ

ಆಗ್ಗೆ,

ಶಹರ ನಮದು ಮಕ್ಕೊಂತಲೆ  ||(೩ಸಲ)||


ಶಹರ ನಮ್ಮದು ಮಕ್ಕೋಂಡಾಗಲೆ
ಗೊತ್ತಾ ನಿನಗ ಏನ್ ಏನೆಲ್ಲ ನಡೀತೈತೆss
ಇತ್ತ ಹೆಣಗಳೆದ್ದು ಕುಣಿಯುತ್ತಲೆ
ಅತ್ತ ಬದುಕಿದವ ಶವ ಸಾಯುತ್ತ್ತಲೆ
ಇತ್ತ ಚೀರುವಳು ಫ್ರೀಯಾಸ್ಪತ್ರೆಯಲಾಕೆ ಕಂಪಿಸುತ್ತಲೆ
ಅವಳೆದುರ ಬರತೈತ ಮತ್ತ ನವಮಾಂಸದ ಒಂದು ಮುದ್ದೆ
ಇತ್ತಲೇಳ್ತವೆ ತಕರಾರುಗೋಳೆತ್ತರೆತ್ತರ ಮೈಮೈಗೋಳ ಜಟಾಪಟಿ ಲೇವಾದೇವೀಲೇ
ಅತ್ತ ಸಂಭಧಗಳುಬ್ಬಿಸುತ ಘಾಯ,  ಕಂಡರೂವೆ ದೂರದಲಲೆವ ಕಂಗಳದುವ ಸತ್ತಂತಲೆ
ಅದರೂ ಅದನೆ ಎತ್ತಿ ಬಣ್ಣಬಣ್ಣಗಳ ಹರಕೆಜಾತ್ರೆಗೋಳೇ ಆಗತೈತಲೆ
ಮದ್ಯಮಧ್ಯೇ ಮಿಂದ ನೈವೇದ್ಯೆಯಿಂದಲೆದ್ದುದಿಸಿದೇ ಕುಚೋದ್ಯೆ
ಅರೆನಗ್ನದೇಹಗಳ ನೋಡು ಹೇಗೆ ತೊಡೆದು ಶೃಂಗಾರ ಮಾಡೈತೆಲೆ
ಕೆಂಪುಬಳ್ಕಂಮುಸುಡಿಗಳಿಗೇನೇನೋ ಪುಂಡಾಟಿಕೆ ನಡೆಸೋಕಲೆಲ್ಲೋ ತುರಿಸೈತೆ


ಅವರೆಲ್ಲ ಕೇಳ್ತಾರೆ ಹೈರಾಣಾಗೇ, ಹೀಗೆಲ್ಲಾ ಅಗೋದ್ ಯಾವಾಗ್ಗೆ
ಅದ ತಿಳಿಸಿಬಿಡು ಅವರಿಗೆ, ಹೀಂಗ ಹಿಂಗಾಗೋದು ಯಾವ್ ಯಾವಾಗ್ಗೆ

ಅಂದರ,

ಶಹರ ನಮದು ಮಕ್ಕೊಂಡಾಗ್ಗೆ
ಶಹರ ನಮ್ಮದು ಮಕ್ಕೊಂಡಾಗ್ಗೆ
ಶಹರ ನಮ್ಮದು ಮಕ್ಕೊಂಡ್ಹಾಗೇ

ಹೋ..!

ಸೋಮವಾರ, ಜೂನ್ 18, 2018

ಭಾವ ಇಲ್ಲಿ ಅಭಾವ


ಹವೆಯೊಂದು ಹೀಗೆ  ಸುಳಿದಾಡೆ ಬಂತು
ಲತೆ ಅದುರಿತು,
ಹೂ ಉದುರಿತು.
ಪವನದ್ದಲ್ಲ, ದವನದ್ದಲ್ಲ ,
ತಪ್ಪು ಯಾರದ್ದು?
ಪರಿಮಳ ಹವೆಯಲಿ ಕಳೆದು ಹೋಯ್ತು,
ಏನು ಉಳಿಯುತು!?

a light breeze passes by,
shivers a branch, fell
a flower.
neither of the breeze;
nor of the flower;
whose fallacy it is!?
fragrance lost -
in the thin air,
nothing lasts!?





ಗುರುವಾರ, ನವೆಂಬರ್ 23, 2017

ದೂರ ಸರಿದರು / Ab ke hum bichdein

                 ...ದೂರ ಸರಿದರು...

ಈಗ್ಗೆ ನಾವಗಲಿದ್ದರೆ ಸಿಗುವ ಮತ್ತೆಂದೋ ಕನಸುಗಳಲಿ
ಹೇಗೆಲ್ಲ ಒಣಗಿದಾ ಹೂ ಸಿಗುವಂತೆ ಮತ್ತೆ ಹೊತ್ತಗೆಗಳಲಿ

ಹುಡುಕುವುದು ಖಾಲಿ ಒಡೆದೆದೆಗಳಾಳ ನಂಬಿಕೆ ಮುತ್ತೆ
ಈ ಖಜಾನೆ ನಿನಗೆ ಸಾಧ್ಯವೋ ಸಿಲುಕಲು ಪಾಳುಬೀಳ್ಗಳಲಿ

ನೀ ದೈವವೂ ಅಲ್ಲ ಎನ್ನ ಮೋಹ ದೇವರಂತಲೂ
ಇಬ್ಬರೂ ಮನುಷ್ಯರೆಂದರೂ ಸಿಲುಕುವುದೇನಕೋ ಇಷ್ಟು ಮುಸುಕಲಿ

ಜಗದುಃಖವನೂ ಬೆರೆಸು ಎದೆದುಃಖದ ಸೆರಗಲಿ
ನಶೆಯುಬ್ಬರಿಪುದು ಸೆರೆಗೆ ಸೆರೆ ಸೇರುವಲ್ಲಿ

ಇಂದೇನು ಮಾತುಗಳಿಗೆ ನಾವು ಗಲ್ಲಿಗಾದೆವೊ
ಏನಚ್ಚರಿ ಸಿಗುವುದು ನಾಳೆ ಪೀಳಿಗೆಗಳಿಗೆ  ಪಠ್ಯಗಳಲಿ

ಅಂದಿನ ಆ ನಾನಿಲ್ಲ ವಾ ನೀನೂ ಇಲ್ಲ ಮಾಜಿ ಯಾ ಫರಾಜ
ಸಮ್ಮಿಳಿದಂತೆ ಕಾಮನೆಯ ಎರಡು ಛಾಯೆಗಳು ಮರೀಚಿಕೆಯಲಿ


----------------------------------------------


For glimpses of the original Urdu Ghazal
penned by Sir Ahmed Faraz :


0. As rendered by his maestro Mehdi Hassan
in raga Mangalbhairav/Bhupeshwari/Bhupkali/... :




-----------------------------------------------------------------------------


For more of meanings and English translations:

1. https://creative.sulekha.com/if-we-part-now-an-urdu-ghazal-of-faraaz-in-english-translation_30876_blog

2. https://ekfankaar.wordpress.com/2009/07/23/ab-ke-ham-bichde/

0. https://rekhta.org/ghazals/ab-ke-ham-bichhde-to-shaayad-kabhii-khvaabon-men-milen-ahmad-faraz-ghazals
(clicking on the words in this website gets you the meaning there itself)

ಭಾನುವಾರ, ಡಿಸೆಂಬರ್ 7, 2014

ಈ ತಿರುವಿನಿಂದ ಹೊರಡುವವು / Is Mod Se Jaate Hain

ಈ ತಿರುವಿನಿಂದ ಹೊರಡುವುದು 
ತುಸು ಭಾರನಡೆ ರಸ್ತೆಗಳು 
ತುಸು ತೀವ್ರನಡೆ ಹಾದಿಗಳು

ಕಲ್ಲಿನ ಹವೇಲಿಗಳಿಗೆ
ಗಾಜಿನ ಮನೆಗಳಲಿ
ತುಣುಕುಗಳ ಗೂಡಿನವರೆಗೆ
ಈ ತಿರುವಿನಿಂದ ಹೊರಡುವುದು

ಬಿರುಗಾಳಿಯಂತೆದ್ದು ಹಾದಿಯೊಂದು ಹಾಯುವುದು
ನಸುನಾಚಿದಂತ್ಯಾವುದೋ ಪದಗಳಿಂದ ಹೊಮ್ಮುವುದು

ಈ ರೇಶಿಮೆಹಾದಿಗಳಲಿ
ಹಾದಿಯೊಂದು ಅದೂ ಇದ್ದೀತು
ನಿನ್ನ ವರೆಗೆ ತಲುಪುವಂತದ್ದು
ಈ ತಿರುವಿನಿಂದ ಹೊರಡುವುದು

ದೂರದಿಂದೊಂದು ಸಾರುವುದು
ಬಳಿಸಾರಿಯು ಹೊರಳುವುದು
ಒಬ್ಬಂಟಿಯೊಂದು ಹಾದಿಯು
ನಿಲಲಾರದು ಚಲಿಸಲೂ ಆರದು

ಇದ ಯೋಚಿಸಿ ಕುಳಿತಿರುವೆ
ಹಾದಿಯೊಂದು ಅದೂ ಇದ್ದೀತು
ನಿನ್ನ ವರೆಗೆ ತಲುಪುವಂತದ್ದು
ಈ ತಿರುವಿನಿಂದ ಹೊರಡುವುದು 

---------------------


ಗುರುವಾರ, ನವೆಂಬರ್ 27, 2014

ಆಹಕ್ಕೆ ಬೇಕು / Ah! does require / आह को चाहिए || ಘಾಲಿಬ್ / Ghalib / ग़ालिब

ಆಹಕ್ಕೆ ಬೇಕು ಒಂದಿಡೀ ಆಯಸ್ಸು ನೆತ್ತಿಗೇರುವವರೆಗೆ
ಯಾರು ಬದುಕಿಯಾರು ನಿನ್ನ ಮುಂಗುರುಳಿನ ಚಿತ್ತವಾಗುವವರೆಗೆ 

ಜಾಲ ಪ್ರತಿಯಲೆಯಲೂ ಇವೆ ಜಾಲಾಡುತ್ತ ಶತದಂತ ಮಕರಗಳು
ನೋಡೋಣವೇ, ಏನೆಲ್ಲವಾಯ್ತು ಹನಿಗಳಿಗೆ ಮುತ್ತಾಗುವವರೆಗೆ

ಅನುರಕ್ತಿ ತಾಳ್ಮೆ-ಬೇಡೋಣವು; ಅಭೀಪ್ಸೆಯೋ ಚಡಪಡಿಸೋಣವು
ಹೃದಯದ್ದೇನು ಬಣ್ಣವನ್ನೋಣವೋ --  ರಕ್ತ-ಹರಿಯೋಣದವರೆಗೆ

ಒಪ್ಪೋಣ, ನೀ ಅಸಡ್ಡೆ ಮಾಡುವುದಿಲ್ಲವಂತ, ಆದರೂ
ಬೂದಿಯಾಗುವೆವು ನಾವಂತೂ, ನಿಮಗೆ ತಿಳಿಯುವವರೆಗೆ

ನಸುಕಿನ ಕಿರಣಗಳಿಂದಲಿದೆ ಮಂಜಿನ ಹನಿಗಳಿಗೆ ಲೀನವಾಗುವಿಕೆಯ ತಾಲೀಮು
ನಾನೂ ಇರುವೆ, ಒಂದು ದಯದೃಷ್ಟಿಯಾಗುವವರೆಗೆ

ಒಂದು ದೃಷ್ಟಿ  ಸಾಲದು ಇಡೀ ಜೀವನಕೆ, ಖಬರಿಲ್ಲದವಳೇ
ಒಟ್ಟಂದದಾ ಶಾಖವಿದೆ  ಕುಣಿಯುವ ಕಿಡಿಯೊಂದಿರುವವರೆಗೆ

ಅಸ್ತಿತ್ವದಾ ದುಃಖದ್ದು, ಅಸಾದ, ಇನ್ಯಾವುದರಿಂದಾದೀತು ಮರಣವಲ್ಲದೇ ಇಲಾಜು
ದೀಪ ಉರಿಯುವುದು ಯಾವತ್ತು ಬಣ್ಣಗಳಲಿ ಬೆಳಕಾಗುವವರೆಗೆ...





ಸೋಮವಾರ, ಮಾರ್ಚ್ 3, 2014

ओ माझी रे.. / ಅಂಬಿಗನೇ.. / O majhi re..

ಅಂಬಿಗನೇ,
ಎನ್ನಯ ತೀರ
ನದಿಯ ಈ ಧಾರೆಯು

ದಡದಗುಂಟ ಹರಿಯುವವರೇ
ಎಲ್ಲೋ ಕೇಳಿದ್ದುಂಟಲ್ಲವೋ?
ಕಾಗದದ ದೋಣಿಗಳಿಗೆ
ಎಲ್ಲೂ ತೀರವಿರೋದಿಲ್ಲವು...
ಅಂಬಿಗನೇ,
ಯಾವೊಂದು ತೀರ
ವದು ತೀರ
ಕ್ಕೆ ಸೇರಿಬರುವುದೋ
ಅದು, ಎನ್ನಯ ತೀರವು..

ನೀರಿನೊಳಗೆ ಹರಿಯುತಿಹವು ಹಲವು ದಂಡೆ
ಒಡೆದಂಥವು;
ಬೀದಿಗಳಲಿ ಸಿಗುತಲಿಹವು ಸಕಲ ಆಸರೆ
ತಪ್ಪಿದಂಥವು
ಅಂಬಿಗನೇ,
ಆಸರೆಯೊಂದು ನಡುನೀರಲ್ಲಿ
ಸಿಗುವುದಾದರೆ ಅದು,
ಎನ್ನಯ ಆಸರೆಯು




ಮೂಲ :
ಗುಲ್ಜಾರ್ ವಿರಚಿತ,
ಖೂಬ್'ಸೂರತ್ (೧೯೭೫) ಚಲನಚಿತ್ರದಲ್ಲಿನ
"ಓ ಮಾಝಿ ರೇ.."   ಗೀತೆ :

O Maanjhi Re
Apna Kinara
Nadiya Ki Dhara Hai

Saahilon Pe Behenewale
Kabhi Suna To Hoga Kahi
Kagazon Ki Kashtiyon Ka
Kahi Kinara Hota Nahi
O Maanjhi Re
Koi Kinara
Jo Kinare Se Mile Woh
Apna Kinara Hai

Paniyon Mein Bah Rahe hain
Kayee Kinare
Toote Huye
Raaston Mein Mil Gaye Hain
Sabhi Saharein
Choote Huye
O Maanjhi Re
Koi Sahara
Majdhare Mein Mile toh
Apna Sahara Hai...

------------------------------------------------------------------------------------------------------------

ಇನ್ನೊಂದು ಪ್ರಯತ್ನ:

ಓ ಅಂಬಿಗನೇ,
ಎನ್ನಯಾ ದಡವು 
ನದಿಯ ಈ ಹರಿವು

ಪಾತ್ರಗಳಲಿ  ಹರಿಯುವವರೇ
ಎಲ್ಲೋ ಕೇಳಿದ್ದುಂಟಲ್ಲವೋ?
ಪತ್ರಗಳಾ ದೋಣಿಗಳಿಗೆ
ಎಲ್ಲೂ ಪಾರವಿರೋದಿಲ್ಲವು...
ಓ ಅಂಬಿಗನೇ,
ಯಾವೊಂದು ಪಾರ
ವದು ಪಾರದೀ
ಸೇರಿಬರುವುದೋ
ಅದು, ಎನ್ನಯಾ ಪಾರವು..

ಜಲಗಳಲ್ಲಿ ಗಮಿಸುತಿಹವು ದಂಡೆ ಹಲವು
ಛಿದ್ರಗೊಂಡು  ;
ಬೀದಿಗಳಲಿ ಕಲೆತುಹೋಗಿವೆ ಆಸರೆ ಸಕಲವೂ 
ಕಳಚಿಕೊಂಡು ;
ಓ ಅಂಬಿಗನೇ,
ಯಾವುದೊ ಒಂದಾಸರೆ ಮಧ್ಯಧಾರೆ
ಯಲಿ  ಸಿಕ್ಕರೆ
ಅದು, ಎನ್ನಯಾ ಆಸರೆಯು