ಗಪದ್ಯ-ಪಗದ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಗಪದ್ಯ-ಪಗದ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಸೆಪ್ಟೆಂಬರ್ 7, 2025

ಹುಳಿಮಾವೃಕ್ಷವಂಶ

ಮರ
ಕೋತಿಯಾಡಿಸೂ
ಮನುಜರೆ
ಈ ಹುಳಿ
ಮರ ಬಲ್ಲಿರೆ


ಹುಳಿಗಿಡದ ತಲೆಕಡಿದು
ಅತಿಶಯದ ಕಸಿಹೊಡೆದು
ನೆಲದಿಂದೇ ತಲಿಸಿಗೂಹಾಂಗ
ಬುಡದಿಂದೇ ಹಲಕವಲೊಡೆಸಿ
ಘಲ್ಲೆನಲು ಸಿಹಿ ಗೆಲ್ಲು-ಗೆಲ್ಲಲು 
ಗೆಲು-ಸೋಲ ಸೊಲ್ಲಿಡಿಸಿ
ಜಗಿದುಗಿಯುತ ಜಿಗಿದಾಡಿದ್ದ
ನೆಲಕೋತೀ ಕೋಟಿ ವಂಶ
ವೃಕ್ಷಸ್ಥರೇ

ಈ ಹುಳಿಮರವೇರ ಬಲ್ಲಿರೆ 


ಹೂತ ಹುಣಸಿಗೆ ಜೋತ ಹಳೆ ಭೂತ ಬಾವಲಿಗಳೇ
ಎದ್ದು ಬಿದ್ದು ಬರಬೇಡಿ ಹಳಿ ತಪ್ಪಿಸಿ
--ನಿಮ್ಮ ನೆನಸಿದ್ದಲ್ಲ..
*
ಹಾದಿಬದಿ ಹಾರದಿರಿ 
ಆ ದರದ ಹುಳಿನರಿಗಳೆ,
--ನಿಮಗೆ ನಿಲುಕುವುದಿಲ್ಲ
*
ಕರಿಮಾದಲ ಕೇರಂಬೊಲ 
ಆಡುಂಬೊಲದವರೇ
--ಬಿಡಿ ನಿಮಗರ್ಥವಾಗೊಲ್ಲ.
*
ಸಿಹಿಹಣ್ಣಿಗಾಸೆಗಣ್ಣ ಹಣ ಕಂಡವರೇ 
ಕಾಯ ಹುಳಿ ವಾಟೆ ಹುಳುಕು 
--ನೀವು ಕಾಣಿರೆ.

ಈ ಹುಳಿಮರದೆತ್ತರ ಬಲ್ಲಿರೆ 


ಮಧುವನದ ಋತವಾತದ 
ಕಟುಮಧುರ ವ್ರತದವರೇ
--ನಿಮ್ಮ ಸತಾಯಿಸಲಲ್ಲ.
*
ಬೊಡ್ಡು ಮರ ಮುಟ್ಟು ಮುಪ್ಪಾದರೂ 
--ಹುಳಿಗೆ ಉಪ್ಪೇ ಗತಿಯಲ್ಲ.
*
ಸಿಹಿಮೊಗೆಯ ಕಾಯೆಂದರೊ
--ಹಣ್ಣು ಹುಳಿಯೇ ಆಗೋದೆಲ್ಲ!
*
ಹುಳಿಮಾಮರ ಮುಗಿಲೆತ್ತರ

ಮರ
ಕೋತಿ
ಗಲ್ಲ.


==================================================================
ಪ್ರೇರಣೆಗಳು:
೧) https://www.prajavani.net/art-culture/article-features/snake-conservation-center-ratnapuri-karnataka-2-3515668
೦) ಗುರುರಾಜ ಕುಲಕರ್ಣೆಯವರ "#codeಗನ ಸೈನ್ಸ್ ಫ್ರಿಕ್ಷನ್" ನಲ್ಲಿನ 'ಮರಕೋತಿ ಭಾರತಿ' ಕತಿ
-೧) 'ಹುಳಿಮಾವಿನಮರ' ; "..ಕನಸಿನೊಳಗ ನಾ ಸ್ವರಾ ಕೇಳಿ ಮಾಮರಾ ಆಗತೇನೊ.." ; 'ಮಾಮರವೆಲ್ಲೋ...'

==================================================================

ಗುರುವಾರ, ಮಾರ್ಚ್ 13, 2025

ಆವಿರ್ಭೂತ -- The Emergent

ಗೋಪಾಲಕೃಷ್ಣ ಅಡಿಗರ 'ಭೂತ' ಕ್ಕೆ ಸಂವಾದಿ-ವಿವಾದಿಯಾಗಿ

"ಆವಿರ್ಭೂತ
(The Emergent)





ಹಾಡುವವು ಭವಿಷ್ಯತ್ತಿನೀಕಾಲದ ಕ್ವಾಂಟಂ ಲಿಪಿಗೂಢಗಳು:
ತೆರೆದ ನವಸುರಂಗದಂಚಿನ ಬೆಳಕಿಗೆನುವ ಬಳಸುದಾರಿ
ದಾಪುಗಾಲಿಟ್ಟು ಅಂಡೆತ್ತಿ ಓಡುವುದೇರಿ
ಲಲ್ಲೆಗರೆಯುವ ಕಡೆಗೋಲ ಬಡಿಯತ ಅವಡುಗಚ್ಚಿ
ಹಾಯುವುದೇ ಸಿಲಿಕಾನ್ ಕಣಿವೆಯ ಗಾಜ ಹೊದರೊಡೆದು.
*
ತೊಟ್ಟು ಕಳಚಿದ ಕಿವಿಯುಲಿಯ ಬಳ್ಳಿ ತೊಟ್ಟಿ ಬಳಿ
ಬಾಲವಿಲ್ಲದಿಲಿ ಮಿಣುಗುವುದು.
ಬಿರ್ಬೆಳಕಲ್ಲಿ ಕಣ್ಣು ತೆರೆದಿಡಲು ತಡಕಾಡುವ ನನ್ನ
ವಿಕರ್ಷಿಸುವವು ಮೆಲ್ಲನೆರಡು ಎಲ್ಲೀಡಿ ತೆರೆ:
ಹುಣ್ಣಿಮೆಗಲ್ಲಗುಳಿಗಳಿಂದೆದ್ದುನ್ಮತ್ತ ಪೊರೆಹರಿವ
ಕೃತಕಮತ್ತೆ ನೀರೆ?


ವರ್ತಮಾನವಾಹಿನಿಯ ತುಂಬ ಭವಿಷ್ಯತ್ತಿನ ಸುದ್ದಿ.
ನೀರ ಕೆಳಕ್ಕೊಂದೇಳು ಮಡಿ, ಮೇಲೆ ಹದಿನೇಳೆಂಟು ಮಹಡಿ ಜಹಜು ಲಕ್ಸುರಿ.
ಆಗ್ಗಾಗ್ಗೆ ಬೊಬ್ಬಿರಿದು ಖನಿಜಮಿಶ್ರಣವೆರಚುವ
ಜನಗಮನ ಮುಸುಕಿದ ಬಿಸಿನೀರಬುಗ್ಗೆ.
*
ಗ್ಯಾಜೆಟ್ಟು ಮುಚ್ಚಿದರು -
ಕಿವಿಗಡಚಿಕ್ಕುವ ಕಂಕಾಲಹಾಲುಗಳಲಿ
ಬ್ರೆಕ್ತಾಳ ಕೂಲುಸನ್ನೆ ಮುಲುಕುವ ಎತ್ತಿದ ತೋಳುಗಳ ಪರಿಷೆ.
ಮೇಲ್ಪದರಗಳಲ್ಲಿ ಕುಂತ ಧೂಳುಗಳಲ್ಲಿ ಸಂತತ
ಹೊಬ್ಬಿ ಹೊಮ್ಮುವ ಶಿಲೀಂಧ್ರ ಬೀಜಾಣು ಜಾಲ.
ಕಾಳಮಿಂಬಲೆಯ ಪರದೆಮುರಿಮರೆಯಲ್ಲಿ
ಮಾಲು ಹೆಕ್ಕುವ ಮಿಡುಕುಮೊನೆ ತೋರುಕ, - ಇವು
ಹೊಂದಿವೆ ಒಳಾಂಗಣದ ತಣ್ಣನೆಯ ವೆಲ್ವೆಟ್ಟು ನುಣಿ ಹೊದರ.


ನೀರುನೆಲೆ ಇಲ್ಲದವರಾಗುವರು ಪುತ್ರಪ್ರಪೌತ್ರಿಯರು.
ಧೂಳ್ಮರಳುಗಾಳಿ ಹೊಂಜಿ ದಕ್ಕಲಿಕ್ಕೆ ನೆಲವೂ ತೋರದಂತಾಗುವರು.
ಬಚಾಯಿಸುವ, ಸುಸ್ಥಿರಗೊಳಿಸುವ ದಿಕ್ಕ ಬಲ್ಲೆ, ಆದರೂ ದಾರಿ ಮರೆತೆ;
ಬರಿದೇ ತಿರುಗಿಸುತಿದ್ದೇನೆ ಹೀಗೆ ಚಾಲಕದಂಡ.
ಸ್ವಹಿತವ ನೆಚ್ಚಿ ಅಧೋಬುದ್ಧಿಯಾದೆವೋ;
ಇನ್ನಾದರೂ ತೈಲನಿಕ್ಷೇಪ, ಅದಿರುಗಳಿಗಗೆವುದ ನಿಯಂತ್ರಿಸಬೇಕು.


ತುಳಿವಾಗ್ಗೆ ಮೊದಲು ವಾಸನೆಯ ಹಸಿಮಣ್ಣು;
ಚುಮುಕಿಸಿದರೆ ಅಷ್ಟಿಷ್ಟು ಬೀಜದುಂಡೆಗಳ
ಬೆಳದೀತು ಸಹಜ ಹಸಿರು.
ಹದಗೆಡಿಸದೇ ಪಡೆದುದನರಗಿಸಿ ಮರಳಿಸುವ ಬದ್ದತೆಯ
ಇನ್ನಾದರೂ ಬಹುವೇ ಕೃತಿಯಲ್ಲಿಳಿಸಬೇಕು;
ಕಡಿವ ಸುಡುವ ಬಡಿವಾರವಿಲ್ಲದೇ ಪ್ರಕೃತಿದೇವತೆಯೊಪ್ಪುವ ನೆಲಮೂಲ ತಿಳಿವು.


ಬಾಯೊಳಗಣ ಪಸೆ ಕೊಳ್ಳಿ ನುಂಗಿ 
ನೆಲದಗಲ ಹವಾಗುಣ ನಾಟಕ ಬೀದಿ 
ಬಿರುಬಯಲ ಬಿಳುಚುಮೋಡಗಳಂಚಿಗೆ ಬೆಳ್ಳಿಯಯೋಡೈಡು ಪುಡಿ ಮಿಂಚಿ
ದಶನಿಮಿಷಗಳಲಾಗಿಬಿಡುವೀ-ಮಾರ್ಕೆಟ್ಟ ಡೆಲೆವರಿ
ಯಾಂಕರುಗಳ ಗುಡುಗಾಟ, ಇನ್`ಪ್ಲುಯೆನ್ಸರುಗಳ ಕಾಟ
ಆವಿರ್ಭೂತವು ಸತ್ಯೋತ್ತರ ವರ್ತಮಾನ.
ಆಗೆದುತ್ತೀ-ಭೂಮಿಕೆ, ಎಗ್ಗಿಲ್ಲದ ದತ್ತಾಂಶ ಸಂಚಯನ;
ಕ್ಲಿಕ್-ಬೇಯ್ಟು ಲೈಕುಗಳ ಕ್ರಿಪ್ಟೋ ನಂದನವನ;
ವರ್ಚುಯಲ್ವಾಸ್ತವ ಬುರುಜುಗಳ ಹೊಮ್ಮರಳ ತಳಪಾಯ.



...............................................................................................................................................
ಮೂಲ 'ಭೂತ'https://ruthumana.com/2018/03/22/2-translations-a-k-ramanujan
ಆಂಗ್ಲ 'ಆವಿರ್ಭೂತ': https://blurberan.blogspot.com/2025/03/emUrgent.html
...............................................................................................................................................



ಉಪಸಂಹಾರ ಮೊದ
ಮೊದಲಲ್ಲಾಗಿದ್ದು ಹೀಗೆ:

ಬಾಯೊಳಗಿಳಿವುದು ಬೀರು, ಮೇಲಕ್ಕೆ ಹೊಗೆಸುರುಳಿ;
ಭೂಮಿಯುದ್ದಗಲ ಇವುಗಳ ನಿಷ್ಕಾರುಣ ವ್ಯಾಧಿ;
ಬಿರುಬಯಲ ಬಿಳುಚುಮೋಡಪಿಂಡಗಳಂಚಿಗೆ ಬೆಳ್ಳಿಯಯೋಡೈಡ ಪುಡಿ ಮಿಂಚು;  
ದಶನಿಮಿಷಗಳಲಾಗುವೀ-ಮಾರ್ಕೆಟ್ಟ ಡೆಲೆವರಿ;
ಕರ್ಣಪಿಶಾಚಿ ಕಾಟ, ಇನ್ಪ್ಲೂಯೆನ್ಸರುಗಳ ಹುಡುಗಾಟ;
ಆವಿರ್ಭೂತವು ಸತ್ಯೋತ್ತರ ವರ್ತಮಾನ.
ಆಗೆದುತ್ತ ಭೂಮಿಕೆ ಎಗ್ಗಿಲ್ಲದ ದತ್ತಾಂಶ ಸಂಚಯನ;
ಕ್ಲಿಕ್-ಬೇಯ್ಟು ಲೈಕುಗಳ ಕ್ರಿಪ್ಟೋ ನಂದನವನ;
ವರ್ಚುಯಲ್ವಾಸ್ತವ ಬುರುಜುಗಳ ಹೊಮ್ಮರಳ ತಳಪಾಯ.

ಶುಕ್ರವಾರ, ಜನವರಿ 31, 2025

ಮತ್ತೆ ಜರುಗಲಿ | Aur Ho | RockStar | ವಿವಶತಾ ನಿರೂಪ | Irshad Kamil




Film: Rockstar (2012)
Song: Aur Ho / Meri Bebasi ka Bayan Hai
Lyricist: Irshad Kamil
Singer: Mohit Chauhan
Composer: AR Rahman
Directer: Imtiyaz Ali


ವಿವಶತಾ ನಿರೂಪ


ಎನ್ನ ವೈವಶ್ಯದೀ ಒಪ್ಪಿಕೆಯು
ವಶವಿಲ್ಲವೀಕ್ಷಣ ಗತಿಸುವುದು

ಹಪಹಪಿಯಾ ರಸ ಹಿಂಡೇನು
ಹಸಿತೋಳಲೀ ಬಾ ಮುರಿದೇನು

ಬಯಸಲಿ ನಾ ಮತ್ತೇನು
ಕಿತ್ತುಕೊಳ್ಳೇನು, ಬಿಟ್ಟೂಬಿಡೆನು

ಈ ಘಳಿಗೆ ಮಾಡಲಿ ನಾನೇನು
 
ಈ ಘಳಿಗೆಗೆ ನಾನೇನು ಮಾಡ್ವುದು ಎನ್ನ ನೆಮ್ಮದಿಗೆ ನಿರಾಳತೆಗೆ


ಮತ್ತೆ ಜರುಗಲಿ, ಮತ್ತೆ ಜರುಗಲಿ, ಉಸಿರುಗಳ ಉಜ್ಜಾಟ ಜರುಗಲಿ
ಜ್ವಾಲೆಯು ಮತ್ತೇಳಲಿ
ಮತ್ತೆ ಜರುಗಲಿ, ಮತ್ತೆ ಜರುಗಲಿ, ಉಸಿರುಗಳ ಉಜ್ಜಾಟ ಜರುಗಲಿ
ತಾಪವೂ ಮತ್ತೇರಲಿ
ಮತ್ತೆ ಜರುಗಲಿ, ಮತ್ತೆ ಜರುಗಲಿ, ಮತ್ತೆ ಸೇರುವ ನಾವು
ಮತ್ತೂ ಸುಟ್ಹೋಗುವ

ನಿನ್ನ ಕೂಡುವೆನು ನಾ ಮೊದಲಾಸಲ
ಪ್ರತಿಸಲ

ಎನ್ನ ವೈವಶ್ಯದ ನಿರೂಪವು


ಕಿತ್ತುಕೊಳ್ಳಲೇ ನಿನ ಬಿಟ್ಟುಬಿಡಲೇ
ಈ ಘಳಿಗೆ ನಾ ಏನನು ಮಾಡಲೇ
ಈ ಘಳಿಗೆಗೆ ನಾನೇನು ಮಾಡಲಿ ಎನ್ನ ನೆಮ್ಮದಿಗೆ ನಿರಾಳತೆಗೆ


***


ಹಪಹಪಿಯಲಿ ನಾನಾದೆನು ಕಗ್ಗಂಟೇ
ಬಿಡಿಸಿಕೊಳ್ಳೇ ಹೋ

ನಾ ತಟ್ಟುವುದೆ ನೀ ಮುಚ್ಚಿದ ಬಾಗಿಲೇ
ತೆರೆದುಕೊಳ್ಳೇ ಹೋ

ಈ ವಿವಶ ಮನದ ವಶ ಬಾ ಜೀವಂತ ಜೀವಿಸಿ ಜೀವಿಸು ಸ್ವಪ್ನವ

ಮತ್ತೆ ಜರುಗಲಿ, ಮತ್ತೆ ಜರುಗಲಿ, ಉಸಿರುಗಳ ಉಜ್ಜಾಟ ಜರುಗಲಿ
ಜ್ವಾಲೆಯು ಮತ್ತೇಳಲಿ
ಮತ್ತೆ ಜರುಗಲಿ, ಮತ್ತೆ ಜರುಗಲಿ, ಉಸಿರುಗಳ ಉಜ್ಜಾಟ ಜರುಗಲಿ
ತಾಪವೂ ಮತ್ತೇರಲಿ
ಮತ್ತೆ ಜರುಗಲಿ, ಮತ್ತೆ ಜರುಗಲಿ, ಮತ್ತೆ ಸೇರುವ ನಾವು
ಮತ್ತೂ ಸುಟ್ಹೋಗುವ


***


ನಿಲಿಸಲೂ ನಿಲಲಾರದು
ಇದು ದಣಿಯಲಾರದು
ಉಸಿರುಗಳದೀ ಬಿರುಗಾಳಿಯು
ಸುಳಿದಾಡ್ವುದು

ಸುಳಿವು ಸಹ ನೀಡದು
ಎಲ್ಲದು ಏನದು ಸುಡುವುದು
ನಡುನಡುಗಿ ನಡೆನುಡಿಯು
ಛಳಿಜ್ವರವೊ ಹಪಹಪಿಯು
ಕೆಂಡದಂತೆ ಒಳ ಉರಿಯು

ನಿಗಿನಿಗಿಯುರಿಯುತ ಧಗೆಧಗೆಯು
ಮೈಮನ ಮುಚ್ಚಿದೆ ಹೊಗೆಹೊಗೆಯು

ಎನ್ನ ವೈವಶ್ಯವೆ ಈ ದೃಶ್ಯವು
ಎನ್ನ ವೈವಶ್ಯವೆ ಈ ದೃಶ್ಯವು
ಎನ್ನ ವೈವಶ್ಯವೆ ಈ ದೃಶ್ಯವು

=========================================





ಬುಧವಾರ, ನವೆಂಬರ್ 20, 2024

ಆವರ್ತ - ೨

ಈ ಭೂಮಿಯಲ್ಲಿ ಏನೆಲ್ಲ ಬೀಜಗಳು ಎಷ್ಟೆಲ್ಲ
ಹಿಂಗಾರು ತುಸು ಸೋಂಕಿದ್ದಷ್ಟರಲ್ಲೇ ಆರಡಿ-
ಯುದ್ದವೆದ್ದು ಮೂರಡಿ ನಿಜಜಾಗದ ಜಗದಗಲ
ಸಸ್ಯಸಂಕುಲ ಜಗಳ ಮೃಗಜಂತುಖಗಗಳ ಗದ್ದಲ ಸಹಜ-
ಜೀವನ ಪೈಪೋಟಿ
ಇನ್ನೂ
ಮೊನ್ನೆಯಾಗಿಲ್ಲ ಹಾಯ್ದು ಹಿಟಾಚಿ ತಗ್ಗುಗಳ
ತುಂಬಿಸಿ ದಿಣ್ಣೆಗಳ ತಾಚಿ ಅತ್ತಿತ್ತ
ಚದುರಿಸಿ ಶತಶತಮಾನಗಳ ದಾರಿ-
ಸುಂಕವಿಲ್ಲವೆಂದು ಗುಡ್ಡಬಿದ್ದ ಸಂಕದಕಲ್ಗಳ / ಒಡೆದರೆ
ಒಂದೀಟು ಚಕಮಕಿಸಬಹುದಾಗಿದ್ದ ಬೆಣಚಿಕಲ್ಗಳ
ಇಟ್ಟಿಗೆ ಸಿಮೆಂಟು ಮರಳು ಗೃಹ-
ಭಗ್ನಾವಶೇಶಗಳ ಸರಿಸಿ ಸಪಾಟಾಗಿಸಿ ಅಷ್ಟಿಷ್ಟು
ಭೂಮಿಕೆ ಶತಕೋಟಿಗೆ ಜಾಹೀರು ಆಖೈರಾ ಗಿರಲಿಕ್ಕಿಲ್ಲ ಇನ್ನೂ
ಉರುಳಿಸಿದ್ದ ಮರಗಿಡಗಂಟಿಗಳ ಕೊರಳುಲಿಯುರುಳು
ಉಸಿರು ಕಪ್ಪಿಸುವ ನಾಟಾಬಡ್ಡಿ ಜಿಗ್ಗುಗಳ ಚಿಟಪಟ ಸುಡುಧಗೆ
ಹೊಗೆ ಆಗ್ಗಾಗ್ಗೆ ಸಿಟಿಜನಜೀವನ
ಹೀಗಿನ್ನೂ

ಭಾನುವಾರ, ಜುಲೈ 16, 2023

ಆನೇ ಸೈಯ! (ಬೈಲಾನೆ ರೂಮರು - ೨)

ಆನೇ ಸೈಯ! 
(ಬೈಲಾನೆ ರೂಮರು / ನಿಶ್ಯಬ್ದ ಪ್ರಮಾಣ -  ೨)
***

an English version of the full poem is here:
el phantom di camera

*****

(ಆನೆ ಭಾಗ ಒಂದನ್ನು ಇಲ್ಲಿ ತಟ್ಟಿ ನೋಡತಕ್ಕದ್ದು!) 


***


ಚಿಕ್ಕಂದಿನಲ್ಲಿ ಆನೆ ಹತ್ತು
ಪೈಸೆ ಬೆಲ್ಲ ಬಾಳೆಗೆ ಬಾಗಿ
-ಲುಗಳ ತಟ್ಟುವುದು
ಇತ್ತಾದರೂ ಆ ಭಾರ
ಸೊಂಡಿಲಿನಾಶೀರ್ವಾದ ತಲೆ
ತಡೆಯದ ದಿಗಿಲು
ಹುಟ್ಟಿಸೋದು ಸಾಕಿ ಪಳಗಿ
-ಸಿದ್ದದಾದರೂ
ದೇವ್ರಾಣಿ! 

***

ಕಪ್ ಕುರುಡರಾನೆ ಕಾಲ
ಮುಟ್ಟಿ ನೋಡುವಲ್ಲಿ 
ಬಿಳಿಯಾನೆ ಹೆಡ್ಡರ್
ಮೈ ದಟ್ಟಿ ನೋಡುವಲ್ಲಿ 
ಪಾರ್ಶ್ವನಾಥರಾಲಯ ಮತ್ತೆಲ್ಲಿ 
ಖೋಟಾನೋಟಗಳ್ 
ಬಟಾ ಬಯಲಲ್ಲಿ 
ಹೇಗ್ಬಿಡಿಸಿದರ್ಹಾಗೆಲ್ಲಲ್ಲಲ್ಲಲ್ಲಿ
ಜಗಬಯಲಾನೇರೂಮರು

*****



........................................................................................

:trigger:
https://mobile.twitter.com/stpalli/status/1174913146273714177

ಶನಿವಾರ, ಜುಲೈ 8, 2023

ಹತ್ತಿರದ ಬೆಟ್ಟದ ಮೆಟಾಥಿಯರಿಸ್ಟ

ಇದು ಇನ್ನೂ ಹತ್ತಿರದ ಬೆಟ್ಟದ ಕುರಿ-
ತೊದರುವಿಕೆಯಾದ್ದರಿಂದ ಸ್ವಾರಸ್ಯ-
ಕರವಿರಬಹುದೆಂದು ನೀವೆಣಿಸಿ- 
ರ ಬಹುದಾದರೂ, ಈ ಬಹುದಾರಿಗಳಂ- 
ಕುಡೊಂಕು ಕೊಂಕು ಉಬ್ಬುತಗ್ಗು ವನವಿಹಂಗ-
ಮೇತ್ಯಾದಿ ದಟ್ಟವಿವರಗಳೆಂದು ಬಗೆಬಗೆ-
ದು ಮಂಡಿಗೆ ಮೆಲ್ಲುತ್ತಿರ
ಬಹುದಾದರೂ  ಹಾಗಲ್ಲವೆಂದೊದರಿಬಿಡು-
ತ್ತಾನು ಮೊದಲೇ ಪ್ರಸಿದ್ಧಾಂತಿ ಎಷ್ಟಾದರೂ
ಆಳ ನಿರಾಳ ಕೊರೆ ಕೊರೆದು ಬೋ
ರಿಂಗೆಂದು ಬಿಡುತ್ತಾನೆ  ನಾಲ್ವತ್ತೇಳು
ನಿಮಿಷಗಳಷ್ಟು ತುತ್ತೂರಿಕೆಯಲ್ಲಿ ಸಂವಾಹಿಸಿದ್ದು ಹ್ಯಾಗೆ
ಇದು ಹಾಗಲ್ಲವೆಂಬ ಪ್ರಸಿದ್ಧಾಂತ ಪ್ರಸ್ಥಾನ ಮಾತ್ರವನೆ.

ಅಲ್ಲೀಮಟ ಹೋಗೂದು ಬ್ಯಾಡ್-
ಅನ್ನೋದು ಗೊತ್ತಿರೋ ಭೌತಾಗಮವೇ ಜ್ಯೋತಿರ್ವರ್ಷಗಳಳತೆ 
ಗೋಲ್ಮಟ್ಟದಲ್ ಸರ್ವತ್ರ ಏಕಪ್ರಕಾರವಾಗಿ ಗೋಚರಿಸೋದು. 

ಶುಕ್ರವಾರ, ಸೆಪ್ಟೆಂಬರ್ 10, 2021

ಬೈಲಾನೆ ರೂಮರು / ನಿಶ್ಯಬ್ದ ಪ್ರಮಾಣ (೧)

ಬೈಲಾನೆ ರೂಮರಿಲ್ಲಿ

 

ಆದಿಯಂತ ಇಲ್ಲದಂತ

ಆಮೂಲಾಗ್ರಾಧ್ಯಂತ

ಇದೆಂತದೊ ದಂತಕತೆ

ಅವರಿವರಂದಂದಂತೆ


~~~~~~~~~~~~~~~~~~~~~~~~~

"It is high(tea) time (so) that we 

address the elephant in the room(ers)"

~~~~~~~~~~~~~~~~~~~~~~~~~



ಈ ಕಡೆಯಿಂದಾ 

ಕಡೆಯಾಗಕ್

ಕಡಕಡದೂ ದುಡಿತುಡಿದೂ

ಅಡಿಗಡಿಗೆ ಗಡಗಡಗುತ

ತಡೆತಡೀತ ಅಗಸೀ ಬಳಿ 

ಸಾರುವಷ್ಟರಲಿ



"ಧೊಪ್ ಧೊಪ್!!"


"ಯಾರದು?!"


"ಆನೇ ಸೈಯ!!!"



ನೀ...

ನಾ...ಆ...

ನಿ!

 

-ಶಬ್ದಪ್ರಮಾಣವಾ

ದಂಗಾಗಿ

ಅಂದ್ ಕಂಡಿ 

ಇದ್ ಆನೇ 

ಇರಕ್ಕೂ ಅಂತ.



***



ಆನೆ ಕಂಡ

ರೂಂ ಅಂದರ ಅವಕಾಶ

ಆಲಯದ ಬಟಾಬಯಲೊ

ಬಟಾಬಯಲಾ

ಲಯವೊ


ಒಳಗಣಾನೆ

ಯೋ ದೇವ ಹೊರ

ಗಣ

ನೊ



***



ರೂಮಲ್ಲಿಯಾನೆ ಸುಮ್ನೆನೆ

ಬಯಲಾಗಬಹುದ

ರೂಮರ್ರು


ಬಟಾಬಯಲ್ ಬತ್ತಲೆನೆ

ಮಸ್ತ ರೋಮಿಂಗ

ಠಸ್ಕರ್ರು



***



ಬಿಳಿಯಾನೆ ಕರಿಕೋಣೆ

ಕೂಡಿಟ್ಟದು ಹೆಪ್ಪಾಯಿತೆ

ಕಣ್ಣಿದ್ದರು ಕುರುಡಿದ್ದರು

ಘೀಳಿಟ್ಟದು ಕೆಪ್ಪಾಯಿತೆ



***



ರೂಮು ಇದ್ದೆಡೆ ಯಡಮುರಿ

ಸಾಕ್ಷಿಗೆ ಸಾಕು ನಾಯಿಮರಿ

ಹಿಂದೆ ಬೊಗಳ್ತಾ ಓಡುತಲಿದ್ದರೆ

ಲದ್ದಿಬಿದ್ದಿತೊ ಮರಿ ಬೆನ್ನಹುರಿ



***


ರೂಮಾಗಲಂತೊಮ್ಮೆ 

ಆಶೀರ್ವದಿಸಿದರಾನೆ ರೊಮ್ಮನೆ

ಅಥರ್ವಶೀರ್ಷದಂತನಾಹತ 

ಚಿತ್ತದುಂಬದೇನೆ ಝುಮ್ಮನೆ



**********************************************************************

 


ಕೆಸರಲ್ಲಾಡಕ್ಕಾರೆ ಕರೀಕರಿ ಯನ್ನ ಕರ್ದು ಕಿವಿಯಲ್ಲುಸುರ್ದ ಕೊಸರು:

ಸರಕಾರೀ ಬಿಳಿಕರಿಯ ಕರ್ಕರೆಯದು ಕರ್ಕಶವಲ್ಲದಿದ್ದರೂ ಕಿರಿಕಿರಿಯೆನಿಸಿದಂತೆ ಬರಿ ತಲೆ ಕೆರೆಕೆರೆಯುತದನ ಸಂತೆಯ ತರಕಾರೀ ಸರಕೆಂಬಂತೆ ಕರಿಕಾರಲೇರಿಸಿ ಕರೆಕರೆತಂದು ಕರಾಮತ್ತಲಿ ಕರಿಕೋಣೆಯಲದರ ಬಿಳಿಹಾಲ ನೊರೆನೊರೆವಂತೆ ಕರೆಕರೆದು ಸುರಿಸುರಿದದರ ಕೆನೆ ಕಡೆಕಕಡೆದಾ ನೀರ್ಮೊಸರ ಮಾರಾಮೋಸದಿ ಶೆರೆಯಂದದಿಳಿಸಿ ಕುಡಿಕುಡಿದಮಲಲ್ಲಿಯದರ ಮದಮಲವಂ ಸಹ ಕರಿದು ಕರಿದು ಕರ್ರಗೆ ಕರ್ರಿ ಮಾಡುಂಡಾ ಮದಮತ್ತರು ಮತ್ತೆ ಮಾಡ್ ಹಾರ್ವಂತೆ ಹಾರಾಡಿ ತಲೆಬಡಿದೊಡೆದು ಕೋಡಿ ನೆತ್ತರದು ಹರಿಹರಿದು ಹರಿಹರೀಯೆಂದು ಮಡಿದರೂ ನಾಡಬಿಳಿಕರಿ ಕಾಡಕರಿಕರಿಯಾಗದೆಂಬ ಕಡುಗುಟ್ಟದನಮದುಸುರೆಯ ಶೆರೆಶೆರೆದೂ ಮತ್ತೇರದೆನುವಬಕಾರೀ ಬಿಳಿಕಾರಿನ ಹುಳಿನರಿಗಳೆಲ್ಲುಸುರಬಲ್ಲರು...



≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠

ಆನೆಯ ಇನ್ನೊಂದು ಭಾಗಶಃ ದರ್ಶನಕ್ಕಾಗಿ ಇಲ್ಲಿ ಸ್ಪರ್ಶಿಸಿ:
ಆನೇ ಸೈಯ!  (ಬೈಲಾನೆ ರೂಮರು - ೨)

an English transcreation/transmutation/evolution is here:
el'phantom di camera
(with a pseudo_italo-spanisque title)


 ಸ್ಪೂರ್ತಿಸೆಲೆ:
https://mobile.twitter.com/stpalli/status/1174913146273714177







ಬುಧವಾರ, ಜನವರಿ 8, 2020

ಕುಂಕುಮ | ಶಹರ ಮಕ್ಕೊಂಡಾಗ್ಗೆ | ರಕ್ತರಾತ್ರಿ

===================================================
Date: Fri, Sep 8, 2017 at 6:59 AM
Subject: ಅನುವಾದ: ಯಾವ ರಾತ್ರಿ ಮುಗಿಲಿಂದ ರುಧಿರವೇ ಸುರಿಯಿತೊ
To:

Dears,

translation in progress
impatience too much
times running out
help through your
comments and suggestions pls ..

twbr,
durahankari duRANdhararu

------------------------------------------------------------------------------------------------------

occasion : presentimes
moovie: Gulal
musicist lyricist singer: Piyush Mishra

links:
https://youtu.be/yQ0t8LcL498
https://creationsgalorehere.wordpress.com/2014/08/06/jab-sheher-humara-sota-hai-gulaal-lyrics-hindi/
http://bwlyric.blogspot.it/2013/12/sheher-gulaal.html







===================================================


ಒಂದುಕಾಲದ ಮಾತು ಹೇಳೋಣು
ಆದೊಂದು ಕಾಲದಲೆ
ಯಾವಾಗ್ಗೆ -
ಶಹರ ನಮ್ಮದು ಮಲಗಿಬಿಟಿತ್ತೊ
ಆ ರಾತ್ರಿ ಮಾಯಕದಲೆ

ನಾಕೂಕಡೆಯು ಮಿಕ್ಕೆಲ್ಲ ದಿಕ್ಕಿಂದಲೂ
ಕೆಂಪೇ ಹೊಚ್ಚಿತಲೆ
ಮಿಂಚುಳ್ಳೆ ಕುಣಿದುದು ಸೆರಗನು ಹೊದ್ದು
ರುಧಿರವೆ ಮಿಂದಿತಲೇ

ನಾಕುಕಡೆಯಲು ಕುಂಕುಮವೆ ಛಾಪಿಸಿತಲೆ
ನಾಕೂಕಡೆಯಲೂ
ವಿಪತ್ತಿಯಾವರಿಸಿತಲೇ..


ಯಾವ ರಾತ್ರಿ ಮುಗಿಲಿಂದಲೆ
ರಕುತದ ಮಳಿಯೇ ಬಂದಿತ್ತಲೇ..


ಮಿಂದೆಹೋಯಿತು ಊರೆಲ್ಲವೂ
ಮಿಂದೆಹೋಯಿತು ಮಣ್ಣೆಲ್ಲವೂ
ಮಿಂದೆದ್ದಿತೇ ಸಕಲ ಜನಸ್ತೋಮವು

ಇಡೀ ಜಗತ್ತು ಕೇಳಿತು ಆಗಲೇ
ಇಷ್ಟೆಲ್ಲಾ ಆಗ್ತಿತ್ತ ಹಂಗಾದರ
ಅವಾಗಲೇನಣ ಕಣ್ಣಾಮುಚ್ಚೆ
ಮಕ್ಕೋಂಬಿಡೋದು ನೀನಾದರ

ಶಹರ ಹಿಂಗಂತಲೇ
ಹ್ಯಾಂಗ ಹೇಳೋಣು ಎಂಥಾ
ನಿದಿರಿ ಬಂತಂದರ..


ಯಾವ ರಾತ್ರಿ ಮುಗಿಲಿಂದಲೆ
ರಕುತದ ಮಳಿಯೇ ಬಂದಿತ್ತಲೇ..



ಸ್ಮಶಾನ ಮೌನವೋ ಮೂಕವೋ
ತಿಳಿಯದಂತೆ
ಜೀವನವನೆ ಕಸಿಯುತ್ತೆ
ಮಗ್ಗಲು ಬದಲಿಸಿದಂತೆ
ಬಿರುಗಾಳಿಯಂತೆ
ಮುತ್ತಿಕ್ಕುತವೆ ನೆರಳುಗಳು ಕಪ್ಪಿಡುವಂತೆ
ಒರಟು ಕೂದಲೆಲ ಕೆದರಿದಂತೆ
ನುಗ್ಗುತ್ತವೆ ಮಬ್ಬು ಪಿಶಾಚರಂತೆ
ಕಂಪಿಸುತ್ತೆ ಜೀವ ಅವು ಕುಣಿದಂತೆ


ಅಲ್ಲೆಲ್ಲೋ ಆ ಬೂಟುಗಳ ಟಕಟಕೆಯು
ಅಲ್ಲೆಲ್ಲೋ ಆ ಕೆಂಡಗಳ ಚಟಪಟೆಯು
ಅಲ್ಲೆಲ್ಲೋ ಆ ಜೀರುಂಡೆಗಳ ಕೀರಲು
ಅಲ್ಲೆಲ್ಲೋ ಆ ನಲ್ಲಿಯ ಟಿಪಟಿಪೆಯು
ಅಲ್ಲೆಲ್ಲೋ ಆ ಕಪ್ಪು ಕಿಡಕೀಯು
ಅಲ್ಲೆಲ್ಲೋ ಆ ಮಬ್ಬು ಚಿಮಣೀಯು
ಅಲ್ಲೆಲ್ಲೋ ಆ-ಕಳಿಸೋ ಗಾಳಿಮರಗೋಳು
ಅಲ್ಲೆಲ್ಲೋ ಅಡ್ಡಗೋಡೆ ಮೇಲಿಟ್ಟಂತೇನೇನೋ...
ಏಳೇಳೇಳೇಲೆಲೆಲೇಲೇಲೇ.. ಹೋ!


ಸ್ಮಶಾನಗಲ್ಲಿಯಲ್ಯಾವ ಮೂಲೆಯಲದೆಂದು ನಾಯಿ ಯಾವ್ದೋ
ಚೀರಿ ಚೀರುತ್ತ ರೋಧಿಸಿತ್ತಲೆ
ಅದ್ಯಾವಾಗ್ಗೆ ಬೀದಿಗಂಬದ ಗಬ್ಬು ಮಬ್ಬಲ್ಲಿ
ಏನ್ ಏನೋ ನಡೀತಿತ್ತಲೆ
ನೆರಳು ಯಾವುದೋ ತುಸುತುಸುವೇ ಯಾವತ್ತನು
ನಾಪತ್ತೆನೆರಳುಗೋಳಲಿ ಕಳೀತಿತ್ತಲೆ
ಸೇತುವೆಗಂಬಗತ್ತಲೆಗೋಳಿಗೆ ಬೆಚ್ಚಗ್ಯಾವಾಗ್ಗೆ
ನಿಧಾನ ಮೋಟಾರು ಬೆಳಗುತಿತ್ತಲೆ

ಆಗ್ಗೆ,

ಶಹರ ನಮದು ಮಕ್ಕೊಂತಲೆ  ||(೩ಸಲ)||


ಶಹರ ನಮ್ಮದು ಮಕ್ಕೋಂಡಾಗಲೆ
ಗೊತ್ತಾ ನಿನಗ ಏನ್ ಏನೆಲ್ಲ ನಡೀತೈತೆss
ಇತ್ತ ಹೆಣಗಳೆದ್ದು ಕುಣಿಯುತ್ತಲೆ
ಅತ್ತ ಬದುಕಿದವ ಶವ ಸಾಯುತ್ತ್ತಲೆ
ಇತ್ತ ಚೀರುವಳು ಫ್ರೀಯಾಸ್ಪತ್ರೆಯಲಾಕೆ ಕಂಪಿಸುತ್ತಲೆ
ಅವಳೆದುರ ಬರತೈತ ಮತ್ತ ನವಮಾಂಸದ ಒಂದು ಮುದ್ದೆ
ಇತ್ತಲೇಳ್ತವೆ ತಕರಾರುಗೋಳೆತ್ತರೆತ್ತರ ಮೈಮೈಗೋಳ ಜಟಾಪಟಿ ಲೇವಾದೇವೀಲೇ
ಅತ್ತ ಸಂಭಧಗಳುಬ್ಬಿಸುತ ಘಾಯ,  ಕಂಡರೂವೆ ದೂರದಲಲೆವ ಕಂಗಳದುವ ಸತ್ತಂತಲೆ
ಅದರೂ ಅದನೆ ಎತ್ತಿ ಬಣ್ಣಬಣ್ಣಗಳ ಹರಕೆಜಾತ್ರೆಗೋಳೇ ಆಗತೈತಲೆ
ಮದ್ಯಮಧ್ಯೇ ಮಿಂದ ನೈವೇದ್ಯೆಯಿಂದಲೆದ್ದುದಿಸಿದೇ ಕುಚೋದ್ಯೆ
ಅರೆನಗ್ನದೇಹಗಳ ನೋಡು ಹೇಗೆ ತೊಡೆದು ಶೃಂಗಾರ ಮಾಡೈತೆಲೆ
ಕೆಂಪುಬಳ್ಕಂಮುಸುಡಿಗಳಿಗೇನೇನೋ ಪುಂಡಾಟಿಕೆ ನಡೆಸೋಕಲೆಲ್ಲೋ ತುರಿಸೈತೆ


ಅವರೆಲ್ಲ ಕೇಳ್ತಾರೆ ಹೈರಾಣಾಗೇ, ಹೀಗೆಲ್ಲಾ ಅಗೋದ್ ಯಾವಾಗ್ಗೆ
ಅದ ತಿಳಿಸಿಬಿಡು ಅವರಿಗೆ, ಹೀಂಗ ಹಿಂಗಾಗೋದು ಯಾವ್ ಯಾವಾಗ್ಗೆ

ಅಂದರ,

ಶಹರ ನಮದು ಮಕ್ಕೊಂಡಾಗ್ಗೆ
ಶಹರ ನಮ್ಮದು ಮಕ್ಕೊಂಡಾಗ್ಗೆ
ಶಹರ ನಮ್ಮದು ಮಕ್ಕೊಂಡ್ಹಾಗೇ

ಹೋ..!

ಸೋಮವಾರ, ಮಾರ್ಚ್ 18, 2019

ಮಿಸ್ತ್ರಾಲ ಮಿಸ್ಕ್ಯಾರಿಯೇಜು | ರ್ಯಾಪಾವೃತ್ತಿ

-:ಮಿಸ್ತ್ರಾಲ ಹವೆಯ ಮಿಸ್ಕ್ಯಾರಿಯೇಜು:-  

(ಹಿಪ್/ಹಾಪ್/ರ್ಯಾಪ್ ಅನುಸರಣದೊಂದೆಸೆತ)   

===============================


ಉಂಟು ದಿನ ಬರಿ ಇಪ್ಪ-
ತ್ತೆಂಟು ಅಂತಂದು ಬಂದರೂ ಫೆಬ್ರ-
ವರಿಬಂದರೆ ಬಂದು ಸಂದ ಪರಿಯಲಿ
ವರಿಯೆಂದರೆ ವರಿಯದಾ-
ವರಿಸಿ ಬಿಡುವುದು ತಣ್ಣ-
ನುರಿಯದು ತನ್ನ-
ನುರಿಸೋದು ತನ್ನ-
ನದೆಲ್ಲಿ ಅರಿಯಿಸೋದು ಅರಿ
ತಾರಿಸಬೋದು ಅಂತಾರೀತಿ
ಹರಸಿ ಅರಸೋದದದೆಲ್ಲ ಹರಸಾ
-ಹಸವೀ ಶರಧಿ ನಡುವಣ-
ದೀ ಹಿರಿದ್ವೀಪ ಸಾರ್ದೇಙ್ಞ-
ದೀ ಜನಗಣ-
ಮನ ಸಿಗದೇ ಹೋಪ ತುದಿಯ-
ದೀ ಕರಾಲಿಸಿನಲಿ ಬರಿ ಮಿಸ್-
ತ್ರಾಲ ಕರಾಮತಿಯಿಲ್ಲಿ ಒರಿಸ್ತಾ-
ನೋದಿಂದ ಸಪಾಟು ಬಟಾ
ಬಯಲದದೇನು ಮೊದಲಾಗಿ ಹೈ
ವೆಯೇ ಸಿಕ್ಕಂತಾಗಿ ನೋಡಿ ಮೆಡಿ-
ಟೆರೇನಿಯನಿನ್ನೀ ಹವೆ ಬಲ್-
ಮೂಡಿ ಈ ತಂಗಾಳಿ ಬಲು ಗಯ್-
-ಯಾಳಿ ಬಿರುಗಾಳಿಯಂತೆ ಬೀಸುತವೆ ಈ ಮನೋ-
ದ್ವೀಪದೂರಲಿ ದೂರ-ದೂರ-
ದೂರದಲಿ ಕಂಡೂಕಂಡು ದೊರಕದದೆಂ-
ದು ದೂರುತಿರುವಲ್ಲಿಯಾ-
ತಿರುವಲ್ಲಿಯಾ ದಿಗಂತಗಪ್ಪಿಸುವಂ-
ತಪ್ಪತಪ್ಪಿಸುವಂತೆ ಮತ್ತೆ ಮುಗಿ-ಮುಗಿ-
ಮುಗಿಲುಗಳದೇನು ಮುಗಿಬಿದ್ದು ಗವಿ-
ಯುತ್ತವೆಯೊ ಸುತ್ತಲಾ-
ವರಿಸುತ್ತ ದಿಗಿ-ದಿಗಿ-
ದಿಗಿಲುಗತ್ತಿಸುತ್ತಲಾಗತ್ತಲಲ್-
ಗಣ್ಣಿಟ್ಟವರಿಗೆ ಹಠಾತ್ತನೆ ಮೂಡಿ ಜಗ-
ಮಗಿಸುವಂಥ್ಯಾವ-
ನ್ನೂರು ತಾರೆ ಕೂಡ ಮುಚ್ಹೋಗ್-
ವಂಥಾ ಮಾಡ ಮಾಡುವ ಮಾಟ
ಮಾಡುವ ಪಿಸು-
ಮಾತನಾಡುವಲ್ಲಿ ಧುಡುಕಿ ಗುಡು
ಗುಡುಗಾಟವಾಡುವ ಹಂ-
ಬಲವ ತರುವೊಲವಾಂ-
ಬೋಧದಾ ಘನ ಗರ್ಭದೊಳದೇನೋ
ಏನೋ
ಭವಿಸದಲ್ಲ -
ಸುರಿವುದಿಲ್ಲ.
ಮಬ್ಬು ಗಬ್ಬ ಸಂಕಲ್ಪ ನೂರ್-
ಗಪ್ಪಿಟ್ಟರೂ ಬಿಲ್ಲ ಮೂಡಿಸಿದರೂ
ಸ್ಪುರಿಸೋದಿಲ್ಲವೀ ಮಳೆ-
ಗಾಡಿಲ್ಲದ ಸುಡುಗಾಡನಾಡ ಗುಡ್ಡ-
ಗಾಡು ತಡೆತಡೆದು ತಂಗಾಳಿಗಳ-
ನಿಲಿಸಿಲ್ಲೊಗ್ಗೂಡಿಸೂ ತೇವ-
ವದಿಲ್ಲೇ ಮಳೆಯಾಗಲ್ಲ ಹಾ-
ಗೆಲ್ಲ ಗಾಳಿ ಹಾವಳಿ ಬಿಡುವುದಿಲ್ಲ
-ವಿಲ್ಲಿ ತಳೆದ ಬಸಿರಿಲ್ಲೇ ಧರೆಕಾಣದಿಲ್ಲ ಮತ್ತಿನ್-
ಯಾವ ಬಿರುಸಿರಿಗೋ ಬೇರೆಲ್ಲಿಗೋ ಸಂ-ಹೌ-
ಹಾರಿದಂತಿದೆಯಲ್ಲ ಇದೆಲ್ಲ ಸಲ್ಲದಿದೆಲ್ಲ ನಮ
ಗಿಲ್ಲೆ ಮಳೆಯಾಗಿದ್ದಿರಬಹುದಾದರೂ ನಮ್
ಹೊತ್ತಿಗೊಂದು ಹನಿ ದೊರಕಲೇ
ಇಲ್ಲ ಕೊನೆಗು.

ಗುರುವಾರ, ಮಾರ್ಚ್ 7, 2019

ತರ್ಕಕೂಪೀ ತಾರ್ತೂಫಿ

ಹೀಂಗೆ ಅಂದ್ರೆ ತರ್ಕ
ಹಾಂಗಲ್ಲ ಅಂದ್ರೂ ತರ್ಕ
ಇನ್ನು ಹ್ಯಾಂಗಂದ್ರೆ ಹಂಗೇನೂ
ಹೇಳೊಕ್ಕಾಗೊಲ್ಲಾಂದ್ರೋಂದ್ರೂನೂವೇಯ
ಪ್ರತರ್ಕ
ಇದೆಲ್ಲದರ ಮೇಲೇನೂಂತ ನೋಡಲೇ-
ನೋ ಎಂಬಂತೆ ಮೇಲ್ಮುಖ
ಜಿಗಿದುಗಿದದಾಮೇಲೆ ಪುನರಪಿ ಕೂಪ
-ದೊಳಳಾಳ ಬಿದ್ದೇಳೂ ಮಾಂ
-ಡೂಕ್ಯಗಳು ಪ್ರಕೂಪದಲ್ಲರಳೂ
ತಾರ್ತೂಫೀ ಮಶ್-
ರೂಮಿ ನಾವ್ ಗೆಂಡೆ ಮೊಟ್ಟೇ
-ಚಿಪ್ಪಿನೊಳ ಭಾಗ-
ಶಃ ಮುಟ್ಮುಟ್ಟಿ
ನೋಡ್ಕ್ಯಳ್ಳ ಶ್ರೀ-
ಮಾನ್ key

ಗುರುವಾರ, ಮೇ 3, 2018

ತತ್ವ ಮಸಿ

ಅಥವಾ

ಸೃಷೇಲಯೋಸ್ತಿಃ


 .......................................




~ಸೃಷ


ಇಕ್ಕುವ ಎವೆ ಕುಕ್ಕುವ ಸತ್ಯ 
ಹಿರಣ್ಯಗರ್ಭಗತ್ತಲು
ಹುಣ್ಣಿರದ ಹುಟ್ಟು ಗಟ್ಟಲು 
ಮುಚ್ಚುಮರೆಯಲಿ ಭವಿಸಿ ಬತ್ತಲು
ಹುಟ್ಟಿರದ ಕಣ್ಕಟ್ಟು ಭವ
ಧರೆಗಿಳಿಯೆ ಬಯಲಾಯಿತಾ...


~~~~~~~



~ಸ್ಥಿ ~

(ಇಲ್ಲಿಗೆ ಬೇರೇಯೇನೋ ಇನ್ನೂ ಸ್ಪುರಿಸಬೇಕಿದೆ;
ಇದಕ್ಕೆ ಕಾದದ್ದು ಸಾಕೆನಿಸಿ, 
ಹಾಗ್ಗೆ, ಸಧ್ಯಕ್ಕಿದು
'ತಾಕಲಿಲ್ಲದ ಟೊಣಪೆ' )


..ವಾನೀರವಾನಂತದಿ ಬಿದ್ದೆದೊದ್ದಾಡುತಿವೆ
ಒಂದು ಬೀಗ, ಮತ್ತೊಂದು ಕೀಲಿಗೈ.
ಹೇಳದೇ ಮಾಡಿಸಿದಂತೆ ಜೋಡಿಯದೆಂದೆಂದು
ತೂರಲಾರದಾ ಬೀಗದೊಳಗಾಕೈ; ಅಥವಾ
ತೆರೆದುಕೊಳ್ಳುವುದಿಲ್ಲವಾ ಕೀಲಿಯಲಾ ಬೀಗ,
-- ಹೇಗೆಂದರೂ ಅದು ಹಾಗಷ್ಟೇ ಸೈ?
ಇರುವುದವೆರಡು, ಅರಿವುದಾದರೂ ಆವೆರಡು,
ಬೀಗಕ್ಕೂ ಜೈ; ಕೀಲಿಗೂ ಜೈ.


~~~~~~~ 


~ಲಯ ~

ಭಣಭಣ ನಿರಾವರಣವಾಗಿ ಕರಣ
ಪ್ರಣವ ನಾನನಳಿದು ಅನಾಹತ್ತು ನೀ
ರಸ ಬಸಿಬಸಿದು ಕೃತ
ಕೃತ್ಯವಾಯಿತಾ.., ಮತ್ತೆ ನಿರಾಕೃತವಾಯಿತಾ
ತತ್ವಮಸಿದುಂಬಿಸಿ ಎಚ್ಚ ಚಿತ್ತ ವಿರಂಜಿತ
ಕೊನೆಗೂ ಖಾಲಿಯಾಯ್ತಾ?

~~~~~~~

ಭಾನುವಾರ, ಫೆಬ್ರವರಿ 25, 2018

ವರ್ತನೆಯೊಳಾವರ್ತವರ್ತವರ್ತನಿಸಿ..

               ( ಆವೃತ್ತಿ  - ೧.೨೩)
--------------------------------------------------------


ನಗರಗಳೊಳಗೆ, ನಾಗರೀಕರೊಂದಿಗೆ ಬೆರೆಕೆ
ಯಾಗಿಹೋಗುತ್ತ ಬದುಕು, ಕಾಗೆ ಗೂಗೆ
ನಾಯಿ ಬೆಕ್ಕು ಮೈನ ಗುಬ್ಬಿಗಳಂತೆ

ಲತೆಯು ಪಾಂಗಿನಲ್ಲಿ ಗಂಟಿಯನ್ನಪ್ಪುತ್ತ ಸುತ್ತುತ್ತ ಬೆಳೆಯುತ್ತೆ
ಡ್ರಿಪ್ಪಿನ ತೊಟ್ಟಿಕ್ಕುವ ಲಯಕ್ಕೆ
ಮನ್ಸೂರೆ ಹಾಡತೊಡಗಿರುತ್ತಾರೆ ಪ್ರಜ್ನೆಯ
ಯಾವುದೋ ಪಾತಳಿಯಲ್ಲಿ, ಕೆಲವೇ ಚದುರದಂಗುಲಗಳಷ್ಟು ಮಣ್ಣಿಗೆ
ಅನುವಾಗುವಲ್ಲಿ, ಜೀವದಜಾಡು ಆ ಸಿಮೆಂಟುಸಾರಿಸಿದಂಗಳದಲ್ಲಿ
ಇನ್ನ್ನೂ ಮರವಾಗುವ ಹಾದಿಗುಂಟ ಒಂದು ನೇರಳೇ
ಗಿಡ, ಇರುವೆ ಜೇನುಹುಳ ಇಣಚಿಯಂತ ಒಂದು ಪರಿಸರ
-ವ್ಯವಸ್ಥೆಯಾಗಿರುತ್ತೆ, ಅಲ್ಲಿ, ಆ ಕಾಂಕ್ರೀಟುವನದಲ್ಲಿ
ಪಾರಿವಾಳವೊ ಗೂಡುಕಟ್ಟಿರುತ್ತೆ ಕಬ್ಬಿಣದ ಕಂಬಿಗಳಲ್ಲಿ
ಪಿಷ್ಟಿಗೊಬ್ಬರದುಂಬಿಸೋವಲ್ಲಿ ಹೊರಕಿರಿದ ಅಶ್ವತ್ಥವೊಂದರ
ಬ್ರಹ್ಮರೂಪಾಯ ಬೇರುಗಳ ವಿಲೋಮಚಲನೆ
ಅಥವಾ ಕಟ್ಟೋಣಗಳ ನಿರಂತರ ನಿರಚನೆ
ಪುನಾರಚನೆ

ಈ ಗೊಂದಲಪುರದಲ್ಲಿ ಪುರ-
ಸಂಚಲನವೊಂದಕ್ಕೀಡಾದಂತೆ ಟ್ರಾಫಿಕ್ಕು
ಹಾಗ್ಗೆ ತಗುಲ್ಹಾಕ್ಕೊಳ್ಳೊದೇ
ಸಿಕ್ಕು, ಕಾದುಕುದಿವಂತೆಯರ್ಥ
-ಹೀನತೆ, ಡಿಫ್ಯೂಸಾಗುತ್ತೆ ನಿಧಾನ
ಉಕ್ಕಿ ಚೆಲ್ಲುತ್ತೆ.

ಆ ನಿಲುಗಡೆಯಿಲ್ಲದ ನಿಲ್ದಾಣದಲಿ ನಮ್ಮ ನಿಲ್ಲದೋಡುವ ರೈಲಿಗೆ
ಋಜುವಾದ ಹಸಿರುನಿಶಾನೆ ಬೀಸುವ ಸ್ಟೇಷನ್ಮಾಸ್ತರ
ಹೀಗೆ  ನಮಗೆ ಕೋಳಿ ಕೂಗಿಯೇ ಬೆಳಗು ನಿಜದಲಿ
ಎಂದುಬಿಟ್ಟ ರೈಲಿಗೆ ಇಲಿಗಳ ಹಾದಿಹಿಡಿದೊಂದು ಇಣಚಿಯೂ ಬಂದು
ನಿಂದಲ್ಲಿ ಬಾಗಿಲವರೆಗೆ ಹೋದರೂ, ಬೋಗಿದಾಟದು.
ಏನಿದಾಟವು?
ಸೀಮೆಗಳು ಆಕ್ಸಿಡೆಂಟಲೇ ಆದರೂ ಯಾವತ್ತು, ಕಷ್ಟವೇ,
ಕಾಸ್ಟವೇ ಎನುವ  ಸೀಮೋಲ್ಲಂಘನಯಾನವು.

ಅಲ್ಲಿ ತುದಿ ದಿಗಂತದಿ ಹರಳುಗಟ್ಟಿದ ಘನಸಮುದ್ರದಲೊಂದೆಡೆ
ಸೆಲೆಯೊಡೆವ ಕಾಚಿದರುಣಮಧ್ಯಗವಿದಂತಃಸ್ಥಿತಿ
-ಗತಿ
ದಕ್ಕಿಸಿಕೊಳ್ಳುವಾಟಕ್ಕೆ ಓಂ ಸ್ವಸ್ತಿ.

ಅಥವಾ,

ಪ್ರಕೃತಿ-ಪುರುಷನಂತ ಸಿಮೆಟ್ರಿ
ಬ್ರೇಕಿಂಗ್ನಲ್ಲಿ ವೈಲೇಟಾದ ಚಾರ್ಜ-ಪಾರಿಟಿ
ಯನ್ನ ಕಾಲವೇ
ತಿರುಗಿ ಸರಿಪಡಿಸುತ್ತಂತೆ.


------------------------------------------------
ಈಗ್ಗೆ ನಾಲ್ಕೈದು ವರ್ಷಗಳಿಂದ ಬರೆಯುತ್ತ ಬಂದಿದ್ದು ..,
ಇನ್ನೂ ಮುಂದುವರಿಯಲಿಕ್ಕಿರುವಂಥದ್ದು.  

ಗುರುವಾರ, ಜುಲೈ 16, 2015

ತಾರ್ಕಿಕಾಂತ

ಒಬ್ಬ
ತಾರ್ಕಿಕ
ಅಂತ್ಯಕ್ಕೆ
ಹಲಬುವ

ದಿಸ್ ವೇ ಅಥವಾ ದಟ್
ವೇ ಆಗಬೇಕು
ಅಂತ
ಕೂತು
ಬಿಡುವವ
ಹತ್ತು ಸಂಭಾವ್ಯತೆಗಳ
ಪಟ್ಟಿ ಮಾಡೋಕ್
ಅಂತ
ಅನೆಕ್ಸ್'ಪೆಕ್ಟೆಡಂತ
ಯಾವ್ದೂ ಆಗಬಾರದಂತ

ಪ್ರಿಪೇರ್ ಫಾರ್ ದ ಬೆಸ್ಟ್ ಅಂತ
ಯಾಕಂತ?
ಬೆಸ್ಟು ಮಿಸ್ಸು
ಮ್ಯಾನೇಜಾಗಿ ವರಸ್ಟಾಗದಿರಲಂತ

ಮತ್ತ ಬೀ ಗ್ರೇಸಿಯ-
ಸಂತ
ದಿಸ್ಸಾಗದ ದಟ್ವರಸ್ಟಿಗೆ
ಪ್ರಿಪರೇಶನ್ನು ಅಷ್ಟೇ
ಆಗೋದಾಂತ
...

ಹಾಗೆ ಹ್ಯಾಗೂ ಬಂದವರಸ್ಟ
ಸಂಭಾಳಿಕೆ ಕಷ್ಟಸಾಧ್ಯವಾಗಿಬಿಟ್ಟ-
ದಾಂತ

ನೀ-
ರಸದಿ
ರೆಸ್ಟಿಲ್ಲವಾದ ರೋಮರ್ಹೋಮರನೇ

ಪ್ರಿಯ ತಾರ್ಕಿ
ಕಾಂತನೇ
ಸ್ಕೀಮರನೇ

ಮಾತಲ್ಲಿ ನಂಬಿಕೆ ಯಾವತ್ತೋ ಕಳ್ದು
ಹೋಗಿ ಕೊಳ್ಳೋಕ್ಕೆ ಈಹೊತ್ತು ಹಾ ಹಾ
ತೊರೆವವನೇ,

ಸರಿಯಾದ್ಮಾತೇ
ಹೇಳ್ಬೇಕಂತ ಎಣಿಸೋದು

ಸಾಧುವೇ?

'ಹಾಸ್ಯಾಸ್ ಪದ' ಅಲ್ವೆ??

ಹತ್ತೆಣ್ಸಿಕೂತಲ್ಲಿ ಹನ್ನೊಂದು
ಆಗೋದೇ

ಮರೀತಿರುವೆ

ವಾಸ್ತವ

ಚಿತ್ರಿಸಿದ್ದರಿಂದ ವಿಚಿತ್ರಾಂ

.

ಬುಧವಾರ, ನವೆಂಬರ್ 26, 2014

ಅಥಃ ಕವಿ ಕಿರಣ ಪ್ರಕರಣಂ

"ಕತ್ತಲೆಗೆ ಹೆದರಿ ರವಿಯು ತನ್ನ ಕಿರಣಗಳನ್ನು ಬೀರದೆ ಇರುವನೇ?
  ದುರ್ಜನರ ನಿಂದೆಗೆ ಹೆದರಿ ಕವಿಯಾದವನು ಕಾವ್ಯ ರಚಿಸದೇ ಇರುವನೇ?"


-----------------------------------------------------------------------------------


ಪ್ರಿಯ ರನ್ನನೇ,
ವಿಷಯಗಳ ಮೇಲೆ ಬೆಳಕು ಚೆಲ್ಲುವ
ರವಿ, ವ್ಯಾಖ್ಯಾನ ಪ್ರಿಯ ಕವಿ
ಸಮಯ ಕುಪ್ಪಳಿದಾಯ್ತು
ಅಂತಾಗಿ
ಸ್ವಯಂಪ್ರಭೆಯಿಲ್ಲದವು ಕೂಡಾ, ಅಲ್ಲ,
ಸ್ವಪ್ರಭಾವಳಿ ಇಲ್ಲದವು ಮಾತ್ರ
ಝಗಮಗಿಸೋದು ಈಗ
ಲಂತೂ ಅಂಥಾ ಕಾವ್ಯ - ಕವಿಗಳು ಚಂದ್ರ
ನ ತೋರುಮುಖದಂತೆ ಬಿಳೀ
ಸೂರ್ಯನೆಡೆಗೆ ಮುಖ ಮಾಡೋದೂ ಇಲ್ಲ
ಸೂರ್ಯಕಾಂತಿ ಹೂ ಹಿಂಭಾಗವಿದ್ದಂತೆ
ಸದಾ ನೆರಳಿಗೀಡಾಗಿ ಗುಹ್ಯವೋಗುಹ್ಯ
ವಂತ ಕೂತುಬಿಡೋದು ಮರೆಯಲ್ಲಿ
ಮಂಜಿನ ತೆರೆಯಲ್ಲಿ
ಹೊತ್ತು ಹೋಗದವರು, ಮತ್ತೂ ಹೋಗ
ಬೇಕಾದವರು ತಂತಮ್ಮ ಕಂನಡಕಂಗಳ ಕೊಳಾಯ್ಸಿಕೊಂಡು
ಯಾವುದೋ ಟಾರ್ಚುದೀಪದ ಬೆಳಕಲ್ಲಿ
ಶೋಧಿಸ ಹೊರಟುಬರುತ್ತಾರೆ ನಮ್ಮೆಡೆಗೆ... 


===================================

ಮೇಲಿನದ್ದು ಮೊದಲು ಮೂಡಿದ ಸರಳ ಆಕೃತಿ 
ಅದನ್ನು ಈ ಕೆಳಗಿನಂತೆ ತಿದ್ದಿ ಇನ್ನೂ ಗೋಜಲು ಮಾಡುವುದರ ಮೂಲಕ 
ಅರ್ಥಾತರ್ಥಾರ್ಥ ಸಾಧ್ಯತೆಗಳನ್ನ ವಿಸ್ತರಿಸಬಹುದು...

===================================


ಪ್ರಿಯ ರನ್ನನೇ,
ವಿಷಯಂಗಳ ಮೇಲೆ ಬೆಳಕಂ ಚೆಲ್ಲುವ
ರವಿ, ವ್ಯಾಖ್ಯಾನಾಂಪ್ರಿಯ
ಕವಿ ಸಮಯಂ
ಮು  ಕುಪ್ಪಳಿದಾಯ್ತುಂ
ಮಂತಲಾಗಿ ಸ್ವಪ್ರಭಾವಳಿ
ಯಿಲ್ಲದವು ಕೂಡಾ
ಹೀನವು ಮಾತ್ರವು
ಝಗಮಗಿಸೋದು ಈಗ
ಲಂತೂ ಅಂಥಾ ಕಾವ್ಯ - ಕವಿಗಳು ಚಂದ್ರ
ನ ತೋರುಮುಖದಂತೆ ಬಿಳೀ
ಸೂರ್ಯನೆಡೆಗೆ ಮುಖ
ಮಾಡೋದೂ
ಇಲ್ಲ - ಸದಾ ಸೂರ್ಯಕಾಂತಿ
ಹೂ ಹಿಂಭಾಗವಿದ್ದಂತೆ
ನೆರಳಿಗೀಡಾಗಿ ಗುಹ್ಯವೋ
ಗುಹ್ಯವಂತ
ಕೂತುಬಿಡೋದು ಮರೆಯಲ್ಲಿ
ಮಂಜಿನ ತೆರೆಯಲ್ಲಿ ಮಬ್ಬ
ಹೊತ್ತು
ಹೋಗದವರು, ಮತ್ತೂ
ಹೋಗಬೇಕಾದವರು ತಂತಮ್ಮ ಕಂ
ನಡ
ಕಂಗಳ ಕೊಳಾಯ್ಸಿ
ಕೊಂಡು ಯಾವುದೋ ಟಾರ್ಚುದೀಪ
ದ ಬೆಳಕಲ್ಲಿ ಶೋಧಿಸ
ಹೊರಟುಬರುವರು
ನಮ್ಮೆಡೆಗೀಗ



------------------------------------------------------------------------------------------------------------
ಬಹುಶಃ ಓದುಗನೊಬ್ಬನಿಗೆ ಈ ಮೇಲಿನೆರೆಡು ಪ್ರಯತ್ನಗಳ ಮಿಶ್ರಣದಲ್ಲಿ ಆಗಬಹುದಾದ ಇನ್ಯಾವುದೋ ಒಂದು ರಚನೆ ಹೆಚ್ಚು ಅಪ್ಯಾಯಮಾನವಾಗಿ ಕಾಣಬಹುದು...  
ಆ ದಿಶೆಯಲ್ಲಿ ಈ ತಾಣದ 'ಸರ್ಜನೀಯ ಸಾಮಾನ್ಯ' ಲೈಸೆನ್ಸ್  ಅನ್ನು ತಂತಮ್ಮ ಪೊಯೆತಿಕ್ಕ್ಲು  ಲಯಿಸೆನ್ಸಿ ನ ಜೊತೆಜೊತೆಗೆ ಬಳಸಿಕೊಂಡು ಪ್ರಯತ್ನಿಸುವವರಿಗೆ ಸ್ವಾಗತವು ಈ ಮೂಲಕ ಅಂಡರ್ಸ್ಟುದ್ಗತವು!