Wednesday, November 26, 2014

ಅಥಃ ಕವಿ ಕಿರಣ ಪ್ರಕರಣಂ

"ಕತ್ತಲೆಗೆ ಹೆದರಿ ರವಿಯು ತನ್ನ ಕಿರಣಗಳನ್ನು ಬೀರದೆ ಇರುವನೇ?
  ದುರ್ಜನರ ನಿಂದೆಗೆ ಹೆದರಿ ಕವಿಯಾದವನು ಕಾವ್ಯ ರಚಿಸದೇ ಇರುವನೇ?"


-----------------------------------------------------------------------------------


ಪ್ರಿಯ ರನ್ನನೇ,
ವಿಷಯಗಳ ಮೇಲೆ ಬೆಳಕು ಚೆಲ್ಲುವ
ರವಿ, ವ್ಯಾಖ್ಯಾನ ಪ್ರಿಯ ಕವಿ
ಸಮಯ ಕುಪ್ಪಳಿದಾಯ್ತು
ಅಂತಾಗಿ
ಸ್ವಯಂಪ್ರಭೆಯಿಲ್ಲದವು ಕೂಡಾ, ಅಲ್ಲ,
ಸ್ವಪ್ರಭಾವಳಿ ಇಲ್ಲದವು ಮಾತ್ರ
ಝಗಮಗಿಸೋದು ಈಗ
ಲಂತೂ ಅಂಥಾ ಕಾವ್ಯ - ಕವಿಗಳು ಚಂದ್ರ
ನ ತೋರುಮುಖದಂತೆ ಬಿಳೀ
ಸೂರ್ಯನೆಡೆಗೆ ಮುಖ ಮಾಡೋದೂ ಇಲ್ಲ
ಸೂರ್ಯಕಾಂತಿ ಹೂ ಹಿಂಭಾಗವಿದ್ದಂತೆ
ಸದಾ ನೆರಳಿಗೀಡಾಗಿ ಗುಹ್ಯವೋಗುಹ್ಯ
ವಂತ ಕೂತುಬಿಡೋದು ಮರೆಯಲ್ಲಿ
ಮಂಜಿನ ತೆರೆಯಲ್ಲಿ
ಹೊತ್ತು ಹೋಗದವರು, ಮತ್ತೂ ಹೋಗ
ಬೇಕಾದವರು ತಂತಮ್ಮ ಕಂನಡಕಂಗಳ ಕೊಳಾಯ್ಸಿಕೊಂಡು
ಯಾವುದೋ ಟಾರ್ಚುದೀಪದ ಬೆಳಕಲ್ಲಿ
ಶೋಧಿಸ ಹೊರಟುಬರುತ್ತಾರೆ ನಮ್ಮೆಡೆಗೆ... 


===================================

ಮೇಲಿನದ್ದು ಮೊದಲು ಮೂಡಿದ ಸರಳ ಆಕೃತಿ 
ಅದನ್ನು ಈ ಕೆಳಗಿನಂತೆ ತಿದ್ದಿ ಇನ್ನೂ ಗೋಜಲು ಮಾಡುವುದರ ಮೂಲಕ 
ಅರ್ಥಾತರ್ಥಾರ್ಥ ಸಾಧ್ಯತೆಗಳನ್ನ ವಿಸ್ತರಿಸಬಹುದು...

===================================


ಪ್ರಿಯ ರನ್ನನೇ,
ವಿಷಯಂಗಳ ಮೇಲೆ ಬೆಳಕಂ ಚೆಲ್ಲುವ
ರವಿ, ವ್ಯಾಖ್ಯಾನಾಂಪ್ರಿಯ
ಕವಿ ಸಮಯಂ
ಮು  ಕುಪ್ಪಳಿದಾಯ್ತುಂ
ಮಂತಲಾಗಿ ಸ್ವಪ್ರಭಾವಳಿ
ಯಿಲ್ಲದವು ಕೂಡಾ
ಹೀನವು ಮಾತ್ರವು
ಝಗಮಗಿಸೋದು ಈಗ
ಲಂತೂ ಅಂಥಾ ಕಾವ್ಯ - ಕವಿಗಳು ಚಂದ್ರ
ನ ತೋರುಮುಖದಂತೆ ಬಿಳೀ
ಸೂರ್ಯನೆಡೆಗೆ ಮುಖ
ಮಾಡೋದೂ
ಇಲ್ಲ - ಸದಾ ಸೂರ್ಯಕಾಂತಿ
ಹೂ ಹಿಂಭಾಗವಿದ್ದಂತೆ
ನೆರಳಿಗೀಡಾಗಿ ಗುಹ್ಯವೋ
ಗುಹ್ಯವಂತ
ಕೂತುಬಿಡೋದು ಮರೆಯಲ್ಲಿ
ಮಂಜಿನ ತೆರೆಯಲ್ಲಿ ಮಬ್ಬ
ಹೊತ್ತು
ಹೋಗದವರು, ಮತ್ತೂ
ಹೋಗಬೇಕಾದವರು ತಂತಮ್ಮ ಕಂ
ನಡ
ಕಂಗಳ ಕೊಳಾಯ್ಸಿ
ಕೊಂಡು ಯಾವುದೋ ಟಾರ್ಚುದೀಪ
ದ ಬೆಳಕಲ್ಲಿ ಶೋಧಿಸ
ಹೊರಟುಬರುವರು
ನಮ್ಮೆಡೆಗೀಗ



------------------------------------------------------------------------------------------------------------
ಬಹುಶಃ ಓದುಗನೊಬ್ಬನಿಗೆ ಈ ಮೇಲಿನೆರೆಡು ಪ್ರಯತ್ನಗಳ ಮಿಶ್ರಣದಲ್ಲಿ ಆಗಬಹುದಾದ ಇನ್ಯಾವುದೋ ಒಂದು ರಚನೆ ಹೆಚ್ಚು ಅಪ್ಯಾಯಮಾನವಾಗಿ ಕಾಣಬಹುದು...  
ಆ ದಿಶೆಯಲ್ಲಿ ಈ ತಾಣದ 'ಸರ್ಜನೀಯ ಸಾಮಾನ್ಯ' ಲೈಸೆನ್ಸ್  ಅನ್ನು ತಂತಮ್ಮ ಪೊಯೆತಿಕ್ಕ್ಲು  ಲಯಿಸೆನ್ಸಿ ನ ಜೊತೆಜೊತೆಗೆ ಬಳಸಿಕೊಂಡು ಪ್ರಯತ್ನಿಸುವವರಿಗೆ ಸ್ವಾಗತವು ಈ ಮೂಲಕ ಅಂಡರ್ಸ್ಟುದ್ಗತವು!

No comments:

Post a Comment