ಬುಧವಾರ, ಆಗಸ್ಟ್ 19, 2026
Kala Bandar | ಮುಸಿ ಮಂಗ್ಯ | Dehli-6 | Prasoon Joshi
ರಚನೆ: ಶ್ರೀಶ್ರೀಶ್ರೀ ಮೂರ್ಶ್ರೀ ಪ್ರಸೂನ ಜೋಶಿ
ಸಂಗೀತ: ಶ್ರೀಮಾನ್ ಎ ಆರ್ ರಹಮಾನ್
ಗಾಯನ: ಬ್ಲೇಝ್, ಬೆನ್ನಿ ದಯಾಳ್, ತನ್ವಿ ಶಾ, ವಿವಿಯಾನ್ ಚೈಕ್ಸ್, ಕ್ಲೇರ್
ಚಿತ್ರ: ದಿಲ್ಲೀ-6 (2009)
ದಿಗ್ದರ್ಶನ: ಶ್ರೀ ರಾಕೇಶ ಓಂಪ್ರಕಾಶ ಮೆಹ್ರಾ
ಅನುರಣವಾದನ: ಶ್ರೀಶ್ರೀಶ್ರೀ ಮೂರ್ಶ್ರೀ ನಾವುಗಳು
-----------------------------------------------------------------------------------------------------
Disclaimer: ಎಲ್ಲ ಹಕ್ಕುಗಳೂ ಮೂಲದಲ್ಲಿನ ಕೃತಿಕಾರರು-ಹಕ್ಕುದಾರರುಗಳಿಗೇ ಸೇರಿದ್ದು.
ಈ ಪ್ರಸ್ತುತಿಯಿರುವುದು ಸೃಜನೀಯ ಅಭಿವ್ಯಕ್ತಿಯ ಅಭ್ಯಾಸದ ಭಾಗವಾಗವಷ್ಟೇ
ಹೊರತೂ ಮೂಲಕೃತಿಯ ಯಾವುದೇ ಹಕ್ಕುಗಳನ್ನು ಈ ಮೂಲಕ ಅತಿಕ್ರಮಿಸಲಲ್ಲ.
========================================================
=======================================================
ಈ ಸಿನಿಮಾಸಂದರ್ಭವು ನಿಜಜೀವನದೊಂದು ವಿಚಿತ್ರ ಸಿನಿಮೀಯ ವಿದ್ಯಮಾನಾಧರಿತವು:
https://en.wikipedia.org/wiki/Monkey-man_of_Delhi
"ಈ ಮಂಕಿಮ್ಯಾನ್ ಯಾನೆ ಕಾಲಾಬಂದರ್ ಎಂಬುದೊಂದು 2001ರಲ್ಲಿ ದೆಹಲಿಯಲ್ಲಿ
ವಿಪರೀತವಾಗಿ ವರದಿಯಾದ ನರ-ವಾನರ ರೂಪ/ವೇಷದ ವಿಚಿತ್ರಜೀವಿಯೆನ್ನಲಾದ
ಉಪದ್ರವಗಳ ಅಂತೆಕಂತೆಗಳ ಬೊಂತೆ..."
ಮೂಲದ ಸಾಲುಗಳು ಓದಲಿಕ್ಕೇ ಬೇಕಪಾಂತಂತಂದ್ರ ಇಲ್ಲಿ ಕ್ಲಿಕ್ಕಿಸಿ ನೋಡಿ.
=======================================================
ಹೇ ಮಸಿ ಮಸಿ ಮಸಿ ಮುಸಿ ಮಂಗ್ಯ
ಹೊರ ಬಂದರss ಒಳಗ್ ಕಂಡ್ಯ
ಹೇ ಮಸಿ ಮಸಿ ಮಸಿ ಮುಸಿ ಮಂಗ್ಯ
ಹುಡಕ್ಕೊಂಡವ ಕಿಂಗ್ ಯಾ ||ಪಲ್ಲವಿ||
**
ಬರೀ ನಾನಷ್ಟss ಅಲ್ಲಾ ರೀ
ಎಲ್ರೂ ಹುಡುಕಿದ್ ಅಲ್ಲಿ
ಬರೀ ಒಂದ್ ಮಂಗ್ಯನಾ ರೀ
ಎಲ್ರೀ ಮುಸೀ ಮಂಗ್ಯ, ಎಲ್ರೀ ಮುಸೀ ಮಂಗ್ಯ,
ಎಲ್ರೂ ಹುಡುಕಿದ್ ಅಲ್ಲಿ ಬರೀ ಮಂಗ್ಯನಾ ರೀ ||ರ್‍ಯಾಪ್||
**
ಬರ್ರಾ ಕಣ್ಣಡಕವ ಕಾಣ್ವ
ಕಂಣಡಿಯಾ ಕರೆಯಾ ಕಾಣ್ವ
ತಮ್ಮ ತಮದಾ ಖರೇ ಕೋತಿಯ ಕಾಣ್ವ
ನಮದಸಲಾ ಬರಕತಿಯಾ ಕಾಣ್ವ
*
ಮುಸುಕು ಮರೆಯ ಆಳದಾಗ
ರೆಕ್ಕಿ ಬಾವಲಿ ಬಿಚ್ಚಿತ್ತಲೇ
ಝಗಮಗ ಬಿಳಿ ಬಟ್ಟಿಯಾಗ
ಸಸ್ತನೀ ಸತ್ಯ ಸತ್ತಿತ್ತಲೇ
**
ಹೀರೋ ಹೀರೋ ಸರೀ ಹೀರೋ
ಲೈಫಿನತಿಸಾರವದು
ಜೋರು ಜೋರು ನೋಡ್ರಾ ಜೋರು
ಎದಿ ಚೂರು ಹಾರ್ವುದು ||ಅನು ಪಲ್ಲವಿ||
***
ಮಂಗನಾಣೆ ಶೇಂಗಾದ್ಹಾಂಗ
ದೆಂಗುವುದು ಸಿಕ್ಕು ಸಿಕ್ಹಾಂಗ
ಸಾಕುಸಾಕು ಅನ್ನೋದು ಬಾಯಾಗ
ಕೈ ಒಡ್ಡುತ ಮುಂದಕ ಮುಂದ
*
ಒಂದೆ ಜಡೆಯ ಅಕ್ಕಾತಂಗೀ
ಆಸೆಗಳೋ ಬರಿ ನವರಂಗಿ
ನಟಿಸು ಮತ್ತ ನಾಟಕ ಭಂಗಿ
ಧರಿಸೀ ಮೆರಿ ಸುಳ್ಳ ನೂರಂಗಿ
**
ಹೀರೋ ಹೀರೋ ಸರೀ ಹೀರೋ
ಲೈಫಿನತಿಸಾರವದು
ಜೋರು ಜೋರು ನೋಡ್ರಾ ಜೋರು
ಎದಿ ಚೂರು ಹಾರ್ವುದು ||ಅನು ಪಲ್ಲವಿ||
***
ಎರಡು ಫೂಟುದ್ದ ಮಂಗ್ಯಾನಂತ ಅಂವ, ನಿಂ ಕಾಲ ಕಚ್ತಾನಂತರೀ!
ಉಕ್ಕಿನಾ ಹಲ್ಲಂತ, ಪ್ಯಾಂಟ ಮ್ಯಾಗ ಸೂಪರ್ಮ್ಯಾನ ಕಾಚಾರೀ!!
{ಹೌದಂತೀನಿ!!!}
ಮತ್ತ ಮನ್ನಿ ನಂ ಮನೀ ಮೇಲಾ ಹಾರ್ತಿದ್ದ ರೀ!
ಹ್ಯೇ.. ಅಂವ ಮಾಯಾಮಂಗ, ಅಂಜನಾ ಹಾಕ್ ನೋಡಿದ್ಞ ರೀ!!
ಅನ್ಯಗ್ರಹದಾಂಜನೇಯ, ಸೂರ್ಯಂಗ್ ಕೊಟ್ ಮುಖಾ ಸುಟ್‍ಗೊಂಡವಾ ರೀ!!!
{ಅಸಾಧ್ಯ!}
ಹ್ಯೇ. ಆದೊಂದ್ ಮಂಗ್ಯನಂತ ಯಡವಟ್ಟ್ ಎಕ್ಸ್‌ಪೆರಿಮೆಂಟಂತರೀ!
ಬರ್ಮಾ ಬಝಾರ್ ಐಟಮ್ಸಿಗೆ ಆಟಂಬಾಂಬ್ ಫಿಟ್ಟಿಂಗಂತರೀ!!
ನರ-ವಾನರ-ರೋಬಾಟ ಮಿಕ್ಸ ಸೈಬೋರ್ಗಂತಾರ್ರೀ!!!
{ಕತಿಯಾತಿದು!}
ಹೋಗ್ಲೀ, ನಿಜ್ಜಾ ಅಂವನ್ನ ಕಂಡಿದ್ದು ಯಾರ್ರೀ?!
ಯಾರಿಗೊತ್ತು!!
ಮತ್ತ!!!
ಇವೆಲ್ಲ ಬರೀ ಜಾರಿಕೀ ರೀ...||ರ್‍ಯಾಪ್||
**
ರೀತಿ ರಿವಾಜೆಲ್ಲ ಗಾಳಿಗೆ ತೂರ್ರಲೆ
ನಿಮ್ಮೊಳಗ ನೀವ್ ಇಣುಕೀ ನೋಡ್ರಲೆ
ಎಲ್ಲೋ ಯಾವುದೋ ಕ್ವಾಣೀಯೊಳಗಡೆ
ಕರಿ ಮುಸೀ ಮಂಗ್ಯಾ ಹೊಕ್ಯಾಡೈತಲೆ
*
ಎಷ್ಟು ಪರದೆ ಎಷ್ಟು ಪರದೆ ಎಷ್ಟು ಪರದೆ ಎಷ್ಟು ಪರದೆ
ಎಷ್ಟು ಪರದೆ ಎಷ್ಟು ಪರದೆ ಎಷ್ಟು ಪರದೆ ಎಷ್ಟು ಪರದೆ
ಪ್ರತೀ ಪರದೀಯಾ ಹಿಂದಕು ಪರದೀ
ಪರದಿಯ ಹೊರಕೋ ಗರಿಗರಿ ವರ್ದೀ
ಪರದಿಗಳಾಳದಿ ಕೀವಿನ ಶರಧಿ
ಹುಣ್ಣಿವೆ ಕಾಣಿರಿ ಹುದುಗಿದ ವ್ಯಾಧಿ
ಸೆರೆಯುಬ್ಬರಿಸಿ ಬಂದರು ಬೆದಕಿ
ತಿಳಿದೂ ತಿಳಿಯದ ತಿಳಿಯಲೆ ಬದುಕಿ
ಇದು ಹುಚ್ಚುತನವೋ ಇಲ್ಲ ದಡ್ಡತನವೋ
ರಾಜ ಬೀದಿಲಿ ಬೆತ್ತಲೆ ತಿರುಗಿ
ನಿರ್ಲಜ್ಜ ನಶೆಯಲಿ ಬದುಕನು ಮುಗಿಸಿ
**
ಹೀರೋ ಹೀರೋ ಸರೀ ಹೀರೋ
ಲೈಫಿನತಿಸಾರವದು
ಜೋರು ಜೋರು ನೋಡ್ರಾ ಜೋರು
ಎದಿ ಚೂರು ಹಾರ್ವುದು ||ಅನು ಪಲ್ಲವಿ||
***
ಈ ಮಂಗಾ ನಂಗಿಷ್ಟಾನಾ,
ಅದೇನ್ ಬಂದಾಂತೀರ್ರೀ!
ಬದಲಾಗೇ ಹೋತು ನಂ ಜೀವನದ ಪರಿ
ಏನೆಲ್ಲಾ ವ್ಯವಸ್ತಾ ಇಲ್ಲಿ ಅಗೇ ಬಿಡ್ತರೀ
ಎಲ್ಲೆಲ್ಲೂ ಮಸ್ತ ಪೊಲೀಸರಾ ಗಸ್ತ ರೀ
ಹಾಂಗಾಗಿ ರಾತ್ರಿ ನೋ ವರಿ ಸುಸ್ತ ಮಕ್ಕೋಂತೇವರೀ
ಕರೆಂಟಂತೂ ಹೋಗಾಂಗೇ ಇಲ್ಲ ತಗೋರೀ
ಬಿಗ್ಬಾಸ ಕಣ್ ಮತ್ತ ತಪ್ಸಾಂಗಿಲ್ಲ ನೋಡ್ರೀ!
*
ಮಂಗ್ಯಾನ್ ಸಂಗ ನಂಗ ಹಿಂಗಾ ಇರ್ಲಿ ರೀ
ಮತ್ತ ನನ್ನೇ ಹುಚ್ ಮಂಗ್ಯಾಂತ ಒಳಗ್ಹಾಕಿ ಬಿಟ್ಟೀರಿ!
ಮಂಗ್ಯಾನ ಹಾವಳಿ ಹಿಂಗಾ ನಡೀತಿರ್ಲೀ ಬಿಡ್ರೀ
*
ಮಂಗ್ಯಾ ಮುಸೀ ಮಂಗ್ಯಾ, ಬಿಟ್ಹೋಗ್ ಬ್ಯಾಡ ಲೇ!
ಮಂಗ್ಯಾ ಮುಸೀ ಮಂಗ್ಯಾ,, ನಿಂ ಕಾಲ್ ಹಿಡಿತೀನಲೇ! ||ರ್‍ಯಾಪ್||
**
ಹೀರೋ ಹೀರೋ ಸರೀ ಹೀರೋ
ಲೈಫಿನತಿಸಾರವದು
ಜೋರು ಜೋರು ನೋಡ್ರಾ ಜೋರು
ಎದಿ ಚೂರು ಹಾರ್ವುದು ||ಅನು ಪಲ್ಲವಿ||
---------------------------------------------------------------------------------
ಕೊಸರು: ಏನಂದರೂ ಮೂಲತಃ ಜಾಹೀರಾತು-ಜಿಂಗಲ್ಲುಗಳ ದುನಿಯಾದ ಪಕ್ಕಾ ವೃತ್ತಿಪರನಾಗಿದ್ದ ಈ ಸಿನಿಕವಿಯು,
ಈ ಮುಂಚೆ ಹಾಗೆ "ನರನರನೊಳಗಡೆಯೊಂದೊಂದು ಕರಿಮಂಗನಿದ್ದಾನೆ' ಎಂದು ಕಾಣಿಸಿದ್ದವನಿಗೆ
, "ನರೇಂದ್ರನೊಳಗಡೆ ಎಲ್ಲ ಜವಾಬ್ದಾರಿಗೂ 'ಕೈ'ಕೊಟ್ಟು ಜೋಳಿಗೆಯೆತ್ತಿ ನಡೆದುಬಿಡುವ ಬರಿ ಫಕ್ಕೀರನಿದ್ದಾನೆ"
ಎಂಬ ಮುಂಗಾಣ್ಕೆಯನ್ನು ಝೆನ್ ಕೂಲ್ ಆಗಿ ಸಾಕ್ಷಾತ್ ನರೇಂದ್ರನೆದುರಲೇ ನೇಂದ್ರ ಕದಳೀ ಸುಳಿದಾನಂದಿಸುವಂದದಿ
ಜಗಜ್ಜಾಹೀರುಗೊಳಿಸಲು ಸಾಧ್ಯವಾಗಿದ್ದುದು, ಇಂದಿನ ಜೇನ್-ಝೀ ಜಿರಳೆಗಳಿಗೀತಲೂ ತಲೆಮಾರಿನಷ್ಟು ಹಿಂದೆಯೇ
ಎಂಬುದನ್ನು ಇಲ್ಲಿ ನೆನೆಯಲು ಅದೆಷ್ಟು ಅಭಿಮಾನ ಉಕ್ಕಿ ಬರುತ್ತಿಲ್ಲ ಹೇಳಿ!!!
ವಿ.ಸೂ.: ಇದೇನಿದು ಮಂಗನಿಂದ ವಿಕಾಸವಾದ ಮಾನವನ ಹೊಸ ತಳಿಮಾರು ಬಿಳಿಜಿರಲೆಗಳಾಗಿರುವ
advanced e-ಕಾಲದಲ್ಲಿ, ಪುನಃ ಮಾನವನಲ್ಲಿ ಮಂಗನನ್ನ ಕಾಣಲು ಹಿಂದಿರುಗಬೇಕಾ
ಎಂದು ಬೇಸರಿಸಿದಿರಾ? ಚಿಂತೆ ಬೇಡ! ಈ ಕರಿಮಂಗನನ್ನು ಆ ಬಿಳಿಜಿರಲೆಯಾಗಿ ಕಾಫ್ಕಾನಂದದಿ
ರೂಪಾಂತರಿಸುವ ಆಪರೇಷನ್ನನ್ನೂ ಮೂರ್ಶ್ರೀ ನಾವುಗಳು ಶೀಘ್ರ ಕೈಗೊಳ್ಳಲಿದ್ದೇವೆ, ಕಾಯಿರಿ!!!
---------------------------------------------------------------------------------
ಶನಿವಾರ, ಆಗಸ್ಟ್ 8, 2026
ಆನು ಆನೇನೆ! (ಬೈಲಾನೆ ರೂಮರು - ೩)
(ಬೈಲಾನೆ ರೂಮರು / ನಿಶ್ಯಬ್ದ ಪ್ರಮಾಣ - ೩)
*******
ಆನೆಯ ಇನ್ನೊಂದು ಭಾಗಶಃ ದರ್ಶನಕ್ಕಾಗಿ ಇಲ್ಲಿ ಸ್ಪರ್ಶಿಸಿ:
ಆನೇ ಸೈಯ! (ಬೈಲಾನೆ ರೂಮರು / ನಿಶ್ಯಬ್ದ ಪ್ರಮಾಣ - ೨)
*******
an English transcreation/transmutation/evolution is here:
el'phantom di camera
(with a pseudo_italo-spanisque title)
*******
(ಆನೆ ಭಾಗ ಒಂದನ್ನು ಇಲ್ಲಿ ತಟ್ಟಿ ನೋಡತಕ್ಕದ್ದು!)
****
ಆನುದೇವಾನವಟ್ಟಿಗಟ್ಟಿಗನು
ಕರುನಾಡಿತ್ತ ಜಗಜಟ್ಟಿಗನು
ಕುಂತಳ
ದೇಶದಾನೆ
ಗಳ ಹಳೇ ಹಟ್ಟೀಲೇನು
*
ಹುಟ್ ಬಿಟ್ಟರೂ
ನಿಗೂಢ
*
ಗಾಢಕರಿಗಾಡ
ನಡುವೆ
ನಡೆವಂತಗಾಧ ಗಾಥೆದಂತ
*
ಮಾರ್ಗಮುರಿಕ್ಕಾರನು
*
ಕರಿನಾಡ
ಕಡುಮಡುವ
ಸುಳೀಲಿಳಿವ ಮಕರದಂತ
*
ವಿಘ್ನಭಗ್ನಕಾರನು
*
ಬರಿದೆ
ಜಾರನು!
ಬಳಿಯಲಾನೆ ಬರಿದೆ ಕರಿಯೇನು
ಕರೆಯಲಾನೆ ಹಾಲುಬಿಳಿಯೇನು
*
ಕರಿಮಲವೇನು ಕರಿಮಾದಲವೇನು
ಕರಿಹಂಸವೇನು ಕದಳಿಧ್ವಂಸವೇನು
*
ಎಡದೆಡೆಗೆ ಈಡಾಗದ ಬಲಮುರಿಯೇನು
ಬಲದಬಲಕೆ ಬಲಿಬೀಳದ ಎಡಮುರಿಯೇನು
*
ಕರ
ಬರಿದೆ ಕೆಸರಾದರೂನು
ಕಮಲಗಂಟಿ ಕಿತ್ತೆಸೆದೆ ತೀರ್ವನು
*
ನರ ಕೆರಳಿ ಕೀಳ್ನುಡಿದರೇನು
ಕೇರಳಂನಾರಿಕೇಳೆಸದರೇನು
*
ಏನು ಏನಾದರೂನು
ಏನೇನಾಗದಿದ್ದರೂನು
*
ಆನೇ ಸೈಯ ಆನು!
*******
------------------------
ಕಾಲ್ನುಡಿ:
ಆನೆ ನಡೆದುದೇ ದಾರಿ
-ಹೌದೋ!?
ವಾಹನವಾಗಿಲಿ
ಮಾತ್ರ
-ಏಕೆ ಬೇಕಾದುದದೊ?!
ಎದುರಲೊಂದಿಲಿ ತಲೆ
-ಕುಣಿಸುತಣಕಿಸುತಿರೆ
ಮಾತ್ರ
ಚ..ಲಿ..ಸೊ.. ಸೊ ಸೊ
-ಸೋಮಾರಿಯಾನೆ
ಸೈಯ!!!
ಬುಧವಾರ, ಆಗಸ್ಟ್ 5, 2026
ಬೇಯಲಿ ಬೇಸಿಯನ್ನ ವರಸೆಗಳು
ಆಂಗ್ಲಮೂಲ:
Bayesian verses Bay
ಕನ್ನಡ ಮೂಲ ಪಲಕುಗಳು:
1) ಅರ್ಥವನ್ನೋದು...
2) ವರ್ತನೆಯೊಳಾವರ್ತವರ್ತವರ್ತನಿಸಿ..
| Subrahmanya Road Station | credit: self |
ಬೇಡ! ಬೇಡ!! ಮಾಣ್!!!
ಆ ವಿರುದ್ಧ ದಿಕ್ಕುಗಳಿಗೆ ಹೊರಟು
ನಿಂದೆರಡು ರೈಲ ನಡುವಲೋಡಿರುವೀ
ಮೂರನೇ ಹಳಿಗೆ ತಂದ್ನಿಲಿಸಬೇಡ ನಿನ್ನಾಲೋಚನೆಗಳ
ಇಲ್ಲದರ್ಥದ ರೈಲ ಹಾಗೆ
ನಿಲುಕಟ್ಟೆಯಿಲ್ಲವಂತಹಾ ಮಧ್ಯಮಕ್ರಮಕೆ
ನೀನೇನು ಕೇಳುವೆ, ಯಾಕಿಲ್ಲಿಂಥ ಬಿಂಬವು
ನಿಲುಕಿತ್ತಿದರಲಾ ಮುಂಜಾವ ಭಾವವು
ಉಳಿಸಿದ್ದು ಇದರಾಳ ಕರಾಳ ಸಮಸೂತ್ರವು
ಮತ್ತ ನೀನನ್ನುವೆ
ಇವೆಲ್ಲ ಹುಸಿ ಸೂತ್ರಬದ್ಧವೇ!
ಹೃದಯವ ಸುಳಿವಿಲ್ಲದಾಗಿಸೊ
ತರ್ಕಗಳಾಡುಂಬೊಲವೆ!
ಅದಕೆನ್ನ ಕ್ಷಮೆಯಾಚನೆಯಲ್ಲಗಳೆತವೆ:
ಈ ಅತಿವಾಚ್ಯತೆ ಈ ವಾಗ್ವೈಭವ
ಈ ಉಪಮಾರೂಪಕಗಳ ಕ್ಲೀಷೆ
ರೇಜಿಗೆಯೆನಗೆ ಇವೆಲ್ಲವೆ
ಮತ್ತೆ
ಕಸುಬಲ್ಲಿ ನಾ ಕವಿಯೇನಲ್ಲವೆ
ಆದರೂ ಯನ್ನಲೀ ವರಸೆಗಳಾವಾಹವೆ
ಈ ಯಕಃಶ್ಚಿತ್ ಬೇಸಿಯನ್,
ಬೇಯಲಿದ್ದಂತೆ
ಭರಿಸಿಕೊಳ್ಳುವುದೇನೆಲ್ಲ ,
ಬೇಲಿ ಸಿಕ್ಕಂತೆ
ಹಾಗೊಮ್ಮೆಯೊಂದು ಸುನಾಮಿಯಲಿ,
ಸಿಲುಕಿದುದಸ್ತವ್ಯಸ್ತತೆಗೆ
ಹುಡುಕುವುದೊಂದು ಮುಳ್ಳು ಮೊನೆ,
ಕಸಗುಡ್ಡೆಯಡಿ ಹಾದಿಗಾಣೋಕೆ
ಇದುವೇನು ಬರೀ ದಿಕ್ತಪ್ಪಿಸುವಿಕೆ,
ಇಲ್ಲವೆ, ಅಸಾಂಗತ್ಯವೇ ಇದುವೆ?
ಈಗೇನು, ಗ್ರಹೀತಗಳ ನವೀಕರಣ ಕರ್ಮಣ್ಯವೆ,
ಇಲ್ಲವೆ, ಕರ್ತರಿಯೇ ವಿಚಲಿತ ಬಾಲಕ್ಕೆ?
...ಹಳಿತಪ್ಪಿತೇ ವಿಚಾರಣೆ?
ಇಲ್ಲವೇ,
ನಿಂತಿಹುದೇ ಫುಟ್ಬೋರ್ಡಲೆ?
ಹೀಗೆ ಬರಲಾಗೋವರೆಗೆ ಬಂದೆವೆಂದೇನೆ
ದೂಶಿಸಿದ್ದೇವೆ ತರ್ಕ, ವ್ಯಾಕರಣ, ಒಳಗಿಚ್ಚ ಛಂದವನೆ
ನಿರೂಪಗಳ ಗೈರಲಿ ಕೊನೆಗುಳಿವುದಾದರೂ ವಾಸ್ತವಕ್ಕೇನೆ
ಫಾವುರೆಯ ಚರಮಕ್ಕೆ ಬ್ಯಾಲೆಯಾಡುವ ಬೈನೆ
ಇಲ್ಲವೇ,
ನಿರ್ವಾತದಮೂರ್ತ ಕ್ವಾಂಟಂ ತುಯ್ತಗಳೇನೆ
ಹಾಗೆ ನಾವು ಗೂಡುತ್ತ ನಡೆವಂತೊಮ್ಮೊಮ್ಮೆ
ಯೊಂದರ್ಥ ಮೂಡಿದಂತಾಗುತ್ತೆ ಕೂಡ
ವಾದರದರಾಚೆಗೂ-
ಢ ಬಿಡಿ ಬಿಡಿ
ಬೈಫರ್ಕೇಟಾಗುತ್ತ
ದೂರ ಸರಿಯುತರ್ಥಗಳನಂತಾನಿಯತ
ಹಾರ್ಮೋನಿಕ ಸರಣಿಯೊಂದಂತೆ
ಕಡೆಗೋಲ ತಿರುತಿರುಗಿಸುತ ಹೊಡೆಹೊಡೆದಂತೆ
ಕೂಡಿಬಂದಂತೆ ಬೆಣ್ಣೆ
ಕರಕರಗಿ ಹೋಗುವುದಂತೇss
ಪ್ರಕೃತಿ-ಪುರುಷನಂತ ಸಮಸೂತ್ರತಾ
ಭಂಗದಲುಲ್ಲಂಘಿತ ಆವೇಶ-ಅನುರೂಪತೆ
ಯನ್ನ ಕಾಲವೇ
ತಿರುಗಿ ಸರಿಪಡಿಸುತ್ತಂತೆ.
==============================================================
1) Bayes by the Bay : A workshop/conf
Bay / ಬೇ (ಬಾಯ್!)
ಸಮಸೂತ್ರತೆ / Symmetry (ಸಮಮಿತಿ)
(see esply: modern physics anomaly)
stats aberration / ದಿಕ್ತಪ್ಪಿಸುವಿಕೆ / ದಾರಿತಪ್ಪಿಸುವಿಕೆ
large-deviations/ದೀರ್ಘ-ವಿಚಲನೆಗಳು,
blackswans/ಕಾಳಹಂಸಗಳು. ...)
ಬೇಸಿಯನ್ (Bayesian) ಸಂಖ್ಯಾಶಾಸ್ತ್ರಜ್ಞರ ಬಗೆಗೆ ತುಸು ತಾಂತ್ರಿಕ ಕಿರುಪರಿಚಯ:
ಬೇಸಿಯನ್ನರ ಜಾಯಮಾನವೆಂದರೆ ಪ್ರಾಯೋಗಿಕವಾಗಿ ಘಟನೆ (event) ಗಳ ಪುನರಾವರ್ತನೆಗಳ ಅಂಕಿಅಂಶಗಳನ್ನು ಗಮನಿಸಿ ದಾಖಲಿಸಿಕೊಳ್ಳುತ್ತಾ, ಆ ಆಧಾರದಲ್ಲಿಯೇ ಅವುಗಳ ಸಂಭವನೀಯತೆ (probability)ಯನ್ನು ಲೆಖ್ಖಿಸುತ್ತ ಹೋಗುವುದು. ಆ ಆಧಾರದಲ್ಲಿಯೇ ಘಟನೆಗಳ ಸಂಭವನೀಯತೆಗಳ ವಿತರಣಾಯಾದಿ (probability distribution) ಗಳ ರೇಖಾನಕ್ಷೆ (graph / plot) ಗಳನ್ನು ರೂಪಿಸಿಕೊಳ್ಳುತ್ತ, ಅವುಗಳ ಕುರಿತು ಊಹಾಸಿದ್ಧಾಂತ (hypothesis) ಗಳನ್ನು ಮಾಡಿಕೊಳ್ಳುತ್ತಾ ಹೋಗುವುದು. ಹೊಸ ದತ್ತಾಂಶಗಳು ಸಿಗುತ್ತ ಬಂದಂತೆಲ್ಲ ಹಳೆಯ ಊಹೆಗಳನ್ನು ನವೀಕರಿಸಿಕೊಳ್ಳುತ್ತಾ ಸಾಗುವುದು (updating the priors) . ಆ ಆಧಾರದಲ್ಲಿ ಆಯಾ ಬಗೆಗಿನ ಪ್ರಯೋಗಗಳಲ್ಲಿ ಹೆಚ್ಚು ಹೆಚ್ಚಾಗಿ ಕಂಡು ಬರುವುದೇನು (typicality) , ಅಪರೂಪಕ್ಕೆ ಕಂಡು ಬರುವುದೇನು (atypicality, rare-events, large-deviations, tail-ends of distributions...) ಎಂಬಿತ್ಯಾದಿ ಒಳನೋಟಗಳನ್ನು ಬೆಳೆಸಿಕೊಳ್ಳುತ್ತಾ ಸಾಗುವುದು...
ಯಾವುದೇ ಘಟನೆಗಳ ಸಂಭವನೀಯತೆಗಳು ಮೇಲೆ ಹೇಳಿದಂತೆ ಪ್ರಯೋಗಸಿದ್ಧವಾಗುವ ದತ್ತಾಂಶಾಧಾರಿತ ತಥ್ಯಗಳಾಗಬಲ್ಲವೇ ವಿನಾಃ, ಪ್ರಯೋಗವಾಗುವುದಕ್ಕೂ ಮುನ್ನವೇ -ದತ್ತಾಂಶ ದೊರಕುವುದಕ್ಕೂ ಮುನ್ನವೇ- ಇನ್ನು ಹ್ಯಾಗೋ ಸೈದ್ಧಾಂತಿಕವಾಗಿ ಪೂರ್ವನಿರ್ಧಾರಿತವಾಗಿರಬಲ್ಲ ಮೂಲಭೂತ ತಥ್ಯಗಳಲ್ಲ ಎಂಬುದು ಬೇಸಿಯನ್ ಸಂಖ್ಯಾಶಾಸ್ತ್ರಜ್ಞರ ಅತಿಮುಖ್ಯ ಧೋರಣೆ..
ಭಾನುವಾರ, ಜುಲೈ 26, 2026
Hawa Hawa | ಚಕ್ಕರ್ದಂತೆ ಪಾದ | RockStar | Irshad Kamil
ಗೀತೆ: ಹವ ಹವ
ಗೀತಕಾರ: ಇರ್ಷಾದ್ ಕಮೀಲ್
ಸಂಗೀತ: ಎ ಆರ್ ರಹಮಾನ್
ಚಿತ್ರ: ರಾಕ್‍ಸ್ಟಾರ್ (೨೦೧೧)
ನಿರ್ದೇಶಕ: ಇಂತಿಯಾಜ್ ಅಲಿ
ಅಣುವಾದನ: ಶ್ರೀಶ್ರೀಶ್ರೀ ಮೂರ್ಶ್ರೀ ನಾವುಗಳು
---------------------------------------------------------------------------------------
ಎಲ್ಲ ಹಕ್ಕುಗಳೂ ಮೂಲದಲ್ಲಿನ ಕೃತಿಕಾರರು-ಹಕ್ಕುದಾರರುಗಳಿಗೇ ಸೇರಿದ್ದು.
ಈ ಪ್ರಸ್ತುತಿಯಿರುವುದು ಸೃಜನೀಯ ಅಭಿವ್ಯಕ್ತಿಯ ಅಭ್ಯಾಸದ ಭಾಗವಾಗವಷ್ಟೇ
ಹೊರತೂ ಮೂಲಕೃತಿಯ ಯಾವುದೇ ಹಕ್ಕುಗಳನ್ನು ಈ ಮೂಲಕ ಅತಿಕ್ರಮಿಸಲಲ್ಲ.
=================================================
==============================================
This song is said to be a narration of a version of a popular European folktale:
https://www.humanpotential.school/class/princess-with-twelve-pairs-of-golden-shoes
... of which there actually are many versions and variations:
https://en.wikipedia.org/wiki/The_Twelve_Dancing_Princesses
It also mirrors the Rockstar's heroine's story to some extent...
==============================================
ಚಕ್ಕರ್ದಂತೆ ಪಾದ ರೊಂಯ್ಯ ರೊಂಯ್ಯ ಅಯ್ಯಯ್ಯೊ
ಆಗಸ ತಲಿಸುತ್ತ ಸುತ್ತಿತಯ್ಯೊ
ಮತ್ತ ನಾವು ಕೇಳಿದ್ವಯ್ಯಯ್ಯಯ್ಯಯ್ಯೋ
ರಾಣಿ ತಿರುಗ್ತಾಳ ಬೆಳ್ಳ ಕಾಲ ಬೆಳ್ಳಗ ಹೊಳ್ಳಿಸಿ
ಚಕಚಕಚಕ ಚಮಕೀ ಚುಕ್ಕಿ
ರಾಣೀ ಮತ್ತ ಕಾಲೀಗೆ ಬುದ್ದಿ
ಹೋದವ್ಳು ಸವೆಸ್ಯಾಳ ಹೊಳ್ಳಿ
ಒಂದ ರಾತ್ರಿ ಹನ್ನೆರಡೊ ಚಪ್ಲಿ
ರಾಜನಿಗೋ ಸ್ಥಿಮಿತ ತಪ್ಪಿ
ಕರೆಸಿದನೊ ಖಬರಿಯಪ್ಪಿ
ಇದೇನ್ ಮಷ್ಕಿರಿಯಪ್ಪಪ್ಪೋ ಹ್ಹೋ..
ಹೋಕ್ಕಾಳೆಲ್ಲಿಗಾ ನೋ..ಡೋ..
ಕದ್ ಬೆನ್ ಬಿದ್ನೋ.. ಅಂವ
ರಾತ್ರಿ ರಾಣೀಯೊ ಭಗದೊಳಗ
ಧಗಧಗನಾ ನಡಿಯೂದ ಕಂಡಾ (ಹ್ಹೋ)
ಹವಾ ಹವಾ ಹವಾ ಹವಾ
ಹವಾ ಹವಾ ಹವಾ ಹವಾ
(ಓಹ್ ಹ್ಹೋ)
ಬೆಂಕೀದೇನ್ ಜ್ವಾಲೆ (ಓಹ್ ಹ್ಹೋ)
ರಾಣಿದೇನ್ ಜಾಲವೆ (ಓಹ್ ಹ್ಹೋ)
ಕುಣಿಯೋದು ಥಕ ಥಕ (ಓಹ್ ಹ್ಹೋ)
ನಾಗರ ನಶೆ ಪಕ್ಕಾ (ಓಹ್ ಹ್ಹೋ)
ಖಬರೀ ಗಾಬರಿಬಿದ್ದ (ಓಹ್ ಹ್ಹೋ)
ಹೊಳ್ಳಿಸಿದ ಪಾದ! (ಓಹ್ ಹ್ಹೋ)
ಎದ್ದೂ ಬಿದ್ದೂ ಬಡಬಡಿಸಿದನವ
ಅವ್ವ ಅವ್ವ
ಹವಾ ಹವಾ! ರಾಣಿ ಹವಾ!!
ಹವಾ ಹವಾ, ಹವಾ!!!
ಕುಣಿಸ್ಯಾಳ ಆ ಪಾದಾನಾ
ಬಿಡು ಸಿಪಾಹಿಗಳೇನ ತಾನ
ಓಹೋ ಬಜಾನ ಗಾನ
ಕಾಣೆ ನಿಲ್ಲಲ್ಲಾ ಪಾದ
ವಾಹ ಆ ಹಾವ ಭಾವ!
ವಾಹ ವಾಹ
ಹವಾ ಹವಾ
ಎಗ್ಗ್ ಸಿಗ್ಗಿಲ್ಲ
ಹವಾ ಹವಾ
ನಿಲ್ಲಲ್ಲ ಮತ್ತ
ಪಾದ ಪಾದ ಪಾದ
ರಾಜ ಉರಿಬಿದ್ದ
ದಿನಾ ರಾತ್ರೀನು
ಜೋಡು ಹನ್ನೆರ್ಡ ಸವೆಸ್ಯಾಳ ರಾಣಿ
ಕತಿ ಆಗೈತಿ ಹಿಂಗೆಲ್ಲಾ
ಹವಾ ಹವಾ
ಹವಾ ಹವಾ
ಪಾದ ನಿಲ್ಲೋಲ್ಲ ಯಾರಪ್ಪಣೆಗೂ
ಇವು ತಿರುಗ್ತಾ..ವೆ
ಕುಣೀತಾ..ವೆ
ಅತ್ತಾಗಿತ್ತಾ ಎತ್ತ ಎತ್ತ ಮಸ್ತೀ ಲೆ
ಪಿತ್ತ ನೆತ್ತಿಗೇರಿ ರಾಜನಂತೂ ಅಂದ
ಓ ರಾಣಿ, ಯಾಕ್ಹಿಂಗ ಮಕ್ಕುಗಿದೀ
ಮೂಗು ಮುರಿದೀ ಸ್ವಾಟೆ ತಿರುವಿದೀ
ನನ ಮರ್ಯಾದಿ ಬಜ್ಜಿ ಹುರಿದೀ
ಇವತ್ತಿಂದ ಬಂದ್ ನಿಂದೆಲ್ಲ ಓಡಾಟ
ಅದ ಕೇಳಿ ರಾಣಿ ನಕ್ಕು ಹಿಂಗಂದಳು
ಓ ರಾಜ, ಚಿನ್ನದಾ ಗೋಡೆ ಗೋಳು
ಎನ್ನನೆಂದು ಖುಷಿಯಾಗಿಡವು
ಬಿಡುಗಡೆಗೆ ನಡೆಸೆನ್ನನು
ಓ ಯನ್ನ ದೇವಾ..
ತೆಕ್ಕೋ ಯಲ್ಲ ದೌಲತ್ತನು
ಬಿಟ್ಟುಬಿಡೋ ಯನ್ನನು
ಹವ ಹವ
ಹವ ಹವ
ಹಿಂಜರಿದು ಹಿಂದಕ್ಕ ಮುಚ್ಚು ಮರೇಲಿ
ಮಾಡದಿದ್ದೇನದು ಮಂದೀ ಮಂದೇಲೀ
ಮೈಮನ ಮರೆತು ಸ್ವಚ್ಛಂದ ಛಂದದಿ
ಕುಣಿದಾಳವಳು ತನ್ನಯ ಗುಂಗಲ್ಲಿ
ತನ್ನದೇ ರಂಗು ರಂಗ ಭಂಗಿ
ಹಂಗಿಲ್ಲ ಲಜ್ಜಿ ಒಜ್ಜಿ ಹೆಜ್ಜಿ
ಕುಣಿದಾಳು ಥಕ ಥೈ ಥೈ ಗೆಜ್ಜಿ
ನರ್ತಿಸುತ್ತ ಸುತ್ತಿ ಸುತ್ತಿ ಸುತ್ತಿ
ಹೋದಳು ಸುಳಿಗಾಳಿ ಹಾಂಗ
ಹವಾ ಹವಾ
ಹ್ಹೊ ರಾಣಿ ಹವಾ
ಪಾದ ನಿಲ್ಲಲ್ಲ ...
ನಿಲ್ಲೊಲ್ಲ ಯಾರಪ್ಪಣೆಗೂ
ಇವು ಸುತ್ತುತಾವೆ
ಕುಣಿಯುತ್ತಾವೆ
ಅಲ್ಲಿ ಇಲ್ಲಿ ಎಲ್ಲಿ ಎಲ್ಲೆಲ್ಲು ಪಾದ
ಚಕಚಕಚಕ ಚಮಕೀ ಚುಕ್ಕಿ
ಚಮಕೀ ಚುಕ್ಕಿ
ಚಮಕೀ ಚುಕ್ಕಿ
ಹವಾ ಹವಾ
ಹವಾ ಹವಾ
ಹವಾ ಹವಾ
=====================================
ಇಲ್ಲಿ ಪ್ರಸ್ತುತಿಯಾಗಿರುವ ಯೂರೋಪಿನ ಹಳೇ ಜನಪದ ಕಥೆ:
ಒಂದಾನೊಂದು ದೇಶಕಾಲದಲ್ಲಿ ಓರ್ವ ರಾಜ ಚಿಂತಾಕ್ರಾಂತನಾಗಿದ್ದಾನೆ. ಅವನ ಮಗಳು ಯುವರಾಣಿಯ ಡಜನ್ ಚಿನ್ನದ ಬೂಟುಗಳು ಅದು ಹೇಗೋ ಪ್ರತೀ ರಾತ್ರಿ ಸವೆಯುತ್ತಿವೆ. ಏನು ಮಾಟಮಂತ್ರವೋ ಏನೋ.. ರಾತ್ರಿ ಅವಳು ಡಜನ್ ಬೂಟುಗಳನ್ನು ಕೊಳಾಯಿಸಿ ಹಾಗೆ ಗುಟ್ಟಾಗಿ ಎಲ್ಲಿಗೋ ಹೋಗುತ್ತಿದ್ದಾಳೋ ಏನೋ.. ಯಾರನ್ನೋ ಕೂಡುತ್ತಿದ್ದಾಳೋ ಮತ್ತಿನ್ನೇನೋ.. ಅದೇನು ಕಥೆ ಎಂಬುದನ್ನು ಪತ್ತೆಮಾಡಲು ಅದ್ಯಾಕೋ ಬಂದ ಯಾವ ಜಾಸೂಸಿ-ಖಬರಿಗಳಿಂದಲೂ ಸಾಧ್ಯವಾಗುತ್ತಿಲ್ಲ....
ಕೊನೆಗೆ ನಮ್ಮ ಹೀರೋ--ಒಬ್ಬ ಹದಿಹರೆಯದ ಹೊಸ ಸೈನಿಕ--ಎಂಟ್ರಿ ಕೊಡುತ್ತಾನೆ. ಅವನ ಬಳಿ ಯಾವುದೋ ಜಕ್ಕಿಣಿ ಇನ್ನೊಂದಾವುದೋ ಕಥೆಯ ಕೊನೆಗೆ ಮೆಚ್ಚಿ ಹರಸಿ ಕೊಟ್ಟ ಕೆಲವು ಮಾಂತ್ರಿಕ ಕೊಡುಗೆಗಳಿವೆ. ಅದರಲ್ಲಿ ಅವನನ್ನು ಅದೃಶ್ಯ ಮಾಡಬಲ್ಲ ಒಂದು ಮಾಯಾಟೋಪಿಯೂ, ಯಾವುದೇ ಲೋಕದಲ್ಲಿಯೂ ದಾರಿ ತೋರಿಸಬಲ್ಲ ಒಂದು ಮಾಯಾದಂಡವೂ, ಮತ್ತಿನ್ನೇನೇನೋ ಎಲ್ಲ ಇವೆ...
ಹಾಗೊಂದು ರಾತ್ರಿ ಕಾವಲಿಗಿದ್ದ ಇವನಿಗೆ ಮತ್ತು ಬರಿಸುವ ವೈನ್ ಕೊಟ್ಟು ಅವಳು ಒಂದು ಗುಪ್ತ ಭೂಗತ ಲೋಕಕ್ಕೆ ತೆರಳುತ್ತಾಳೆ. ಅದನ್ನು ಕುಡಿದು ಬಿದ್ದಂತೆ ಹುಸಿ ನಟಿಸಿದ ಅವನು, ಜಾಗರೂಕತೆಯಿಂದ ಅದೃಶ್ಯರೂಪದಲ್ಲಿ ರಾಜಕುಮಾರಿಯನ್ನು ಹಿಂಬಾಲಿಸುತ್ತಾನೆ. ಆ ಹಾದಿಯಲ್ಲಿ ಅವನು ಕ್ರಮವಾಗಿ ಬೆಳ್ಳಿ, ಬಂಗಾರ, ಮತ್ತು ವಜ್ರಗಳ ಮೂರು ಕಾಡುಗಳನ್ನು ನೋಡುತ್ತಾನೆ.. ಹುಶಾರಾಗಿ ಕೆಲವು ಸಾಕ್ಷ್ಯಗಳನ್ನೂ ಸಂಗ್ರಹಿಸುತ್ತಾನೆ. ಆ ಕೊನೆಯಲ್ಲಿ ಅವಳು ತನ್ನ ಹನ್ನೆರಡು ಜೋಡಿ ಬೂಟುಗಳು ನಜ್ಜುಗಜ್ಜಾಗುವವರೆಗೆ ಒಂದು ದಯ್ಯದೊಂದಿಗೆ ಅಗ್ಗಿಷ್ಟಿಕೆಯ ಸುತ್ತ ನರ್ತಿಸುವ ಭಯಂಕರ ದೃಶ್ಯ ನೋಡುತ್ತಾನೆ. ಜಾಗರೂಕತೆಯಿಂದ ಸಾಕ್ಷ್ಯಗಳೊಂದಿಗೆ ಅಲ್ಲಿಂದ ಸುರಕ್ಷಿತವಾಗಿ ಮರಳಿ, ರಾಜನಿಗೆ ಇದನ್ನೆಲ್ಲಾ ವರದಿ ಮಾಡುತ್ತಾನೆ.
ಶಿಕ್ಷೆಯಾಗಿ ರಾಜನು ಆ ರಾಜಕುಮಾರಿಯನ್ನು ಅರಮನೆಯಲ್ಲೇ ಗೃಹಬಂಧನದಲ್ಲಿರಿಸಲು ಬಯಸುತ್ತಾನೆ. ಆದರೆ ರಾಜಕುಮಾರಿ ರಾಜನಿಗೆ ತಾನು ಅರಮನೆಯನ್ನೇ--ಅಂದರೆ ಸಿಂಹಾಸನದ ಮೇಲಿನ ತನ್ನ ಹಕ್ಕನ್ನೇ ತ್ಯಜಿಸುತ್ತೇನೆ ಎನ್ನುತ್ತಾಳೆ. ಬದಲಿಗೆ ನೃತ್ಯ ಮಾಡುವ ತನ್ನ ಸ್ವಾತಂತ್ರ್ಯವನ್ನ ಬೇಡುತ್ತಾಳೆ. ನೋಡುನೋಡುತ್ತಿದ್ದಂತೆಯೇ ಅವಳು ನರ್ತಿಸುತ್ತ ಹೊಗೆಸುರುಳಿಯಂತೆ ಗಾಳಿಯಲ್ಲಿ ಕರಗಿ ಮಾಯ!
----------------------------------------------------------
ಕೊಸರು: ನೆನಪುಗಳು ಬಲು ಖತರ್ನಾಕು ಕಣ್ರೀ! ಹಿಂದಿನ ದಶಕದಲ್ಲಿ ನಾವುಗಳೂ ಮತ್ತು ನಮ್ಮ ಶ್ರೀಮಾನ್ ಪುರೋಹಿತರೂ ಒಂದು ಸಮ್ಮೇಳನದ ನೈಮಿತ್ಯದಲ್ಲಿ ಒಟ್ಟೊಟ್ಟಿಗೆ ಪ್ರಾಹದಲ್ಲೆಲ್ಲಾ ನೋಡಾಡಿಕೊಂಡು ಬಂದವರು, ಅದರದೆಲ್ಲಾ ಫೋಟೋ-ವೀಡಿಯೋ ಕೇಳಿದವರಿಗೆ ಮಾತ್ರ ಉಲ್ಟಾ ನಕರಾ ಹೊಡೀತಿದ್ದೆವು. "ಹೋಗಿಬಂದ ನಮ್ಮ ಶಿಫಾರಸಿನ ಮೇರೆಗೇ ಪ್ರಾಹದಲ್ಲಿಯೇ ಈ 'ಕಲ್ಲತಾರೆ'ಯ ಗಾಥೆಗಳ ಚಿತ್ರೀಕರಣವಾಗಿದೆ.. ಈ ಗೀತಗಳನ್ನು ಯೂಟ್ಯೂಬಿನಲಿ ನೋಡಿದರೆ ಸಾಕು! -- ನಮ್ಮನ್ನು ಫೋಟೊ ವೀಡಿಯೋ ಎಂದು ಕೇಳದಿರಿ.." -- ಎಂದು ಒಂದಿಷ್ಟು ಕಾಲ ಪುಂಗಿದ್ದೆವಂತ ನೆನಪು. ಈಗ ನೋಡಿದರೆ, ಅರೆ ಆ ಸಿನಿಮಾ ಬಂದದ್ದು ನಮ್ಮ ಪ್ರಾಹ ಭೇಟಿಗೂ ೩ ವರ್ಷ ಮುಂಚೆಯೇ! ಹಾಡುಗಳು ಬಿಡುಗಡೆಯಾದಾಗಲೇ ಒಂದೇಟಿಗೇ ಅಭಿಮಾನಿಗಳಾಗಿದ್ದು ಸ್ಪಷ್ಟ ನೆನಪು. ಆದರೂ ಹೀಗೇಕೆ ಕರ್ರಪ್ಟಾಗಿದೆಯಲ್ಲ ನಮ್ಮ ಮೆಮೊರಿ ಕಾರ್ಡು...!
ಶುಕ್ರವಾರ, ಜುಲೈ 3, 2026
ಮೇಘದ್ಯೂತ
-:ಮೇಘದ್ಯೂತ:-
#ಮಿನಿಗಾಥೆ #worldflay
ಅಭಿನವಗಾಳಿದಾಸನ ಚಿತ್ತಭಿತ್ತಿಯಲಿ ಹಾಗೊಮ್ಮೆ
ಬಿರುಬರಗಾಲಮಧ್ಯೇ ಮೋಡಗವಿದ ವಾತಾವರಣವಿತ್ತು....
ಬದಲಾದ ಹವಾಮಾನದಲ್ಲಿ ಸಂದೇಶಘರ್ಭಿತ ಮೇಘ
ದ್ಯೂತಕ್ಕೂ ಮುನ್ನವೇ ಹಠಾತ್ ಸ್ಪೋಟಿಸಿಬಿಟ್ಟಿತು!
ಆಭಿಸರಣಕೆಗೆ ಮುನ್ನವೇ ಪುಷ್ಪಪ್ರೇಮಿ ಭೃಂಗರಾಜನ ದೇಹ
ಭೋರ್ಗರೆದ ಬರ್ಬರ ರಸಧಾರೆಯಲಿ ಕೊಚ್ಚಿ ಹೋಯಿತು.
ಭೃಂಗನ ಬೆನ್ನೇರಿ ಬಂದ ವಿಧಿವಿಲಾಸದಲಿ ವಿರಹ ವಿಹಲ್ವಿ ಪುಷ್ಪ
ನರಳಿ ನರಳಿ ಮತ್ತರಳದಂತೆ ಸುರುಳಿ ಸುತ್ತಿ ಸುಳಿವಿಲ್ಲವಾದಳು.
ಈ ಮೆಲೊಡ್ರಾಮಾದಲ್ಲೀಗ ಏನು ಮಾಯಾಮಾಂತ್ರಿಕ
ವಾಸ್ತವ ತಲೆಕೆಳಗು ತಂತ್ರ ಹೂಡಿದರೂ ಅಷ್ಟೇ...
ವರ್ಧಂತಿಯನ್ನು ವದಂತಿ ಎಂಬಂತೆ ಜಯಂತಿಯೇ
ಓ ಇನಿಯಾ ಎಂದು ಅನಂತನಾಗುವತ್ತ ನಡೆದರೂ ಅಷ್ಟೇ...
ಪ್ರಶ್ನೆ ಹಾಗೇ ಉಳಿಯುತ್ತದೆ:
"bodyಹೋದ soulನಿಂದ ಹೂವು ಅರಳಬಲ್ಲದೆ..?!"
------------------------------------------------------------------------------------
ಜಗತ್ತಿನಲೆಂದೂ ಎಂದೂ ಯಾವ ಎಐ ಬಂದರೂ ಅಷ್ಟೇ
ಅವುಗಳಿಗೇನೇ ತಲೆಕೆಳಗು ಪ್ರಾಂಪ್ಟಿಂಜಿನೀರು ಕುಡಿಸಿದರೂ ಅಷ್ಟೇ
ಅವು ಇಂಥ ಮಿನಿ world-flay ಒಂದನೆಂದೂ ಬರೆದುಕೊಡಲಾರವು
ಅಂತಂತಂದು ಶ್ರೀಶ್ರೀಶ್ರೀ ಮೂರ್ಶ್ರೀ ನಾವುಗಳಾದ ನಾವುಗಳು
ಈ ಮೂಲಕ ಶರಂಪರ ಪರಾಶರಪರಂಪರಾಪರಪರ ಪರಪರ
ಷರಾ ಬರೆದಿಡುತಿದ್ದೇವೆ.
ಭಾನುವಾರ, ಜೂನ್ 28, 2026
Chaiyya Chaiyya | ಸೈಯ್ಯಾ ಸೈಯ್ಯಾ | #Gulzarish
ಗೀತೆ: ಛೈಂಯ ಛೈಂಯ
ಗೀತಕಾರ: ಗುಲ್ಜಾರ್
ಸಂಗೀತ: ಎಅರ್ ರಹಮಾನ್
ಚಿತ್ರ: ದಿಲ್ ಸೇ (೧೯೯೮)
---------------------------------------------------------------------------------------
ಎಲ್ಲ ಹಕ್ಕುಗಳೂ ಮೂಲದಲ್ಲಿನ ಕೃತಿಕಾರರು-ಹಕ್ಕುದಾರರುಗಳಿಗೇ ಸೇರಿದ್ದು.
ಈ ಪ್ರಸ್ತುತಿಯಿರುವುದು ಸೃಜನೀಯ ಅಭಿವ್ಯಕ್ತಿಯ ಅಭ್ಯಾಸದ ಭಾಗವಾಗವಷ್ಟೇ
ಹೊರತೂ ಮೂಲಕೃತಿಯ ಯಾವುದೇ ಹಕ್ಕುಗಳನ್ನು ಈ ಮೂಲಕ ಅತಿಕ್ರಮಿಸಲಲ್ಲ.
=================================================
ನೆತ್ತಿಯ ಮೇಲೆಲ್ಲಿ ಅನುರಕ್ತಿ ಛಾಯೆ ಹಾಂಗಿತ್ತ
ಪಾದಗಳಡಿಯಾಗಲ್ಲಿ ಜನ್ನತ್ತ ನಡೆದಿತ್ತ ।ಸೂಕ್ತಿ।
ನಡೆಸಯ್ಯ ಸೈಯ್ಯ ಸೈಂಯಾ ಸಯ್ಯಾ
ನಡೆಸಯ್ಯ ಸೈಯ್ಯ ಸೈಂಯಾ ಸಯ್ಯಾ |ಪ|
ನೆತ್ತಿ ಪ್ರೇಮದಡೀ ನಡೆಸಯ್ಯ ಸೈಂಯ್ಯ
ಪಾದ ಜನ್ನತ್ತಿನಲೀ ನಡೀತಯ್ಯ |ಅನು ಪ|
ಸಖನಾರಾ ಪರಿಮಳದ್ಹಾಂಗ
ನುಡಿಮಾರು ಉಋದೂನ್ಹಾಂಗ
ಎನ್ನ ಸಂಜಿ-ರಾತ್ರಿ ಎನ್ನ ಜಗವೇ ಖಾತ್ರಿ
ಆ ಸಖನೆನ್ನ ಇನಿಯನು ಸಯ್ಯಾ
ನಡೆಸಯ್ಯ ಸೈಯ್ಯ ಸೈಂಯಾ ಸಯ್ಯಾ
ನಡೆಸಯ್ಯ ಸೈಯ್ಯ ಸೈಂಯಾ ಸಯ್ಯಾ ।೧।
ಹೂದೊಟ್ಟೆಲ್ಲಿ ತೊನೆದಿದ್ದೇನs
ಸುಗಂಧ ವಲ್ಲಿ ಕಾಣ ಸಿಲುಕಿತೇನs
ತಾಯಿತವನಾಗಿಸಿ ಧರಿಸೇನು
ಆಯತದಂದದಿ ನಿಲುಕೀತೇನs
ಆ ಸಖನೆನ್ನಾ ನಿಜ ಗುರು ಹಾಂಗ
ಅಣಿ ಮುತ್ತೆನಗೆ ವಚನವದೇ
ಅಣಿಮುತ್ತು ಮುತ್ತೆ ಎನ್ನ ವಚನ ವಚನ
ಅಣಿಮುತ್ತು ಮುತ್ತೆ ಎನ್ನ ವಚನ
ಯಾರಾಸದೃಶ ಇಬ್ಬನಿಯ ನಡೆ^†
ಪಾದದಡೀ ಫಿಋದೋಸೆ ನಡೆ
ಎಳೆ ಎಳೆ ಮೇಲೆ ಎಲೆ ಎಲೆಯ ಮೇಲೆ
ತಿಳಿ ಗಾಳಿಯಲರಸಿಹೆನಾ ಸೆಳೆಯ ನಡೆ
ನೆತ್ತಿ ಪ್ರೇಮದಡೀ ನಡೆಸಯ್ಯ ಸೈಂಯ್ಯ
ಪಾದ ಜನ್ನತ್ತಿನಲೀ ನಡೀತಯ್ಯ
ನಡೆಸಯ್ಯ ಸೈಯ್ಯ ಸೈಂಯಾ ಸಯ್ಯಾ
ನಡೆಸಯ್ಯ ಸೈಯ್ಯ ಸೈಂಯಾ ಸಯ್ಯಾ ।೨।
ನಾನಾ ಗುಂಗಿನ ಚೊಂಚೇನು
ಆ ಇರುಳೂ ಬೆಳಕಿನ ಹೊಂಚೇನು
ತುಂಟಾಡುವ ಚಂಚಲ ಕುಂಚವೇನು
ನಾ ರಂಗ ರೂಪಕs ಹೊಂಜೇನು
ಯಾವ ಚಿತ್ತಕ ಪ್ರೇಮದ ಛಾಯಾವಳೀ
ಆ ಪಾದದಿ ನಾಕವೆ ನಡಾವಳೀss
ಸಂಜಿ-ರಾತ್ರಿ ಎನ್ನ ಜಗವೆ ಖಾತ್ರಿ
ಆ ಸಖನೆನ್ನಾ ಇನಿಯನೆ ಸಯ್ಯಾ
ನಡೆಸಯ್ಯ ಸೈಯ್ಯ ಸೈಂಯಾ ಸಯ್ಯಾ
ನಡೆಸಯ್ಯ ಸೈಯ್ಯ ಸೈಂಯಾ ಸಯ್ಯಾ ।೩।
=============================================================
ನೋಡಿ:
1) https://blog.chandrahasa.com/archives/3168
2) https://groups.google.com/g/rec.music.indian.misc/c/J04dtxkIQ48
3) https://gulzar101.blogspot.com/2011/12/chhaiyya-chhaiyya-dil-se.html
4) https://www.youtube.com/watch?v=znNAdZdtbFE
†) "ಮುಂಜಾವತೊಟ್ಟು ಇರು ಹಂಗ ಬಿಟ್ಟು ಬರಿ ಹಾಂಗ ತೂಗತsದೋ..."
†) "ನಸುಕಿನ ಕಿರಣಗಳಿಂದಲಿದೆ ಮಂಜಿನ ಹನಿಗಳಿಗೆ ಲೀನವಾಗುವಿಕೆಯ ತಾಲೀಮು..."
=============================================================
ಗುಲ್ಜಾರ ಸೂಫೀ ಕಲಂಮಿನ ಆಯತನ ವಾಂ ಮಂತ್ರಪುಷ್ಪವೆ ಸೈಯ್ಯ..!
ಸಹೃದಯಿ ಕಾವ್ಯಾಸ್ವಾದ ಸಾಧಕರೇ.,
ಶ್ರೀಶ್ರೀಶ್ರೀ ಮೂರ್ಶ್ರೀ ನಾವುಗಳ ಚಿತ್ತಭಿತ್ತಿ-
ಯ ಹಿನ್ನೆಲೆಯಲ್ಲಿರುವುದು ಟ್ಯೂಬ್ಲೈಟಿನ ಪ್ರಭಾವಳಿಯೇ!?!
ವೇದಮಂತ್ರಗಳ ಪುಷ್ಪಗಳನ್ನು ವ್ಯಾಪಕವಾಗಿ ಕಿವಿಯ ಮೇಲೆ ಇರಿಸುವ
ವಾತಾವರಣದಲ್ಲೇ ಬೆಳೆದ ಇತಿ ಶ್ರೀಗಳಿಗೆ
ಪ್ರಾಯಶಃ ಅಂಥಾ 'ಭಾಗ್ಯ'ವಿಲ್ಲದೆಯು ಬೆಳೆಬೆಳೆದಿರಬಹುದಾದ
ಶ್ರೀಮನ್ಮಹಾ ರಾಜೇಂದ್ರರೇ
"ಚಂದ್ರ ನೀರ ಹೂ" ಎಂದು ಪ್ರಸಾದಿಸಿದ ಮೇಲಷ್ಟೇ
"ಚಃದ್ರಮಾವಾ ಅಪಾಂ ಆಯತನಂ" ಎಂಬ
ಮಂತ್ರಪುಷ್ಪದ ಕಾವ್ಯಾಯತನವು ಅಪ್ಯಾಯಮಾನವಾಂಗಿದ್ದು!
ಅದೇ ಗುಂಗಿನ ಭೃಂಗ ಗುಲ್ಜಾರನ ತೋಟದಲ್ಲಿ
"ಹೂವೇನು ಅರಳಿಹ ಠಾವೇನು
ಮೂಸುವೆನಾ ವಾಸನೆಯೇನು
ತಾಯಿತದಂತೆ ಧರಿಸುವೆನು
ಆಯತದೀ ನಿಲುಕೀತೇನು"
ಎಂದು ಬಂದದ್ದು... ಛೇ...
ಬರೀ ಅನು-ವಾದನ ಕಲ್ಪನಾ-ವಿಲಾಸವೇ..?
ಮಕ್ಕೀ-ಕಾ-ಮಕ್ಕೀಯಲ್ಲ ಎಂದರೆ
ಉಘೇ ಉಘೇ ಎಂಬವರು
ಭೃಂಗಕ್ಕ-ಭೃಂಗ ಎಂದರೂ
ವ್ರತಭಂಗವಾದಂತೆ ಮತ್ತೆ
ಮಕ್ಕುಗಿವುದಿಲ್ಲ ಎಂದೇನು ಗ್ಯಾರಂಟಿ!?!
ಹೋಗಲಿ, ಟ್ಯೂಬ್ ಲೈಟ್ ಕೊನೆಗೂ ಹತ್ತಿತೇ ಎಂದು ನೋಡಿದರೆ
ಹತ್ತಿದ್ದೂ ಸಹ ವೊಲ್ಟೇಜು ಪೂರ್ತಿಯಿರದೇ ತುಸು ಮಂದವಿರುತ್ತದೆ!
ಮಕ್ಕಳಾಟದಿ "ಸುಬಃ ಶಾಮ ರಾತ್ ಮೆರೆ ಖಾಯೆ ಲಾತ್ ವೊ
ಯಾರು ಮೆರಾ ಸೈಯ್ಯಾ ಸೈಯ್ಯಾ..!" ಎಂದು ಅಣಕುವಾಡು ಗುನುಗಿ
ಛೈಯ್ಯ ಛೈಯ್ಯ ಎಂದು ಕುಣಿದು ದಶಕವಾದ ಮೇಲೆ
ಅದರಲ್ಲಿ ರಹಮಾನನ ಮೇಘರಾಗಮಾಲೆಗಳ ಬಂಡಿಯ ಮಾನ್ಯತೆ ಮನ ದಟ್ಟಾದದ್ದು...
ಮತ್ತೊಂದು ದಶಕವಾಗುವ ಹೊತ್ತಿಗೆ ಅದರ ಸುಖೀ ಗಾಯಕಿಯ ಹುಕಿ ಹುದುಗಿ ಬಂದಿದ್ದು...
ಮತ್ತೊಂದರ್ಧ ದಶಕವಾಗುವಾಗ ತತ್ಸಂಬಂಧ ಗುಲ್ಜಾರನ ಸಂದರ್ಶನಗಳ ಸಂದರ್ಶಿಸಿದ್ದು...
ನಿಧಾನ ನಮಗೆ ಈ ಸಾಲುಗಳಲ್ಲಿ ಇನ್ನೇನೇನೋ ಇದ್ದಿರಲಿಕ್ಕೇ ಸೈಯ್ಯಾ! ಎನಿಸ ತೊಡಗಿದ್ದು..
ಇವತ್ತು ಧಿಗ್ಗನೆ ಎದ್ದು ಯಾವ್ಯಾವುದೋ ಗುಂಗು ಗುಂಗುಗಳಲ್ಲಿ ಈ ಹಾಡಿನ ರಂಗು ರಂಗಾದ
ಪಲಕು ಪಲಕುಗಳ ಪದರ ಪದರಗಳು ಲೇಯರ್ಡ್ ಕೇಕಿನಂತೆ ಅನುವಾದನ ವ್ಯಾಸಪೀಠಾರೋಹಿಸಿದ್ದು...
ಸೊ,
ಇದನು ಮೂಸಿ ಮೂಸಿ ನಿಮ್ಮ ಎದೆದುಂಬಿದನ್ನು
ನೀವು ಸಹ ನಮ್ಮತ್ತ ಪುನಃ ಸೂಸಿ ಬಿಡಿ!
--ಎಂದು ಇತಿ ನಿಂಮ
ಶ್ರೀ ದುರಃಂ..!
ಶುಕ್ರವಾರ, ಜೂನ್ 5, 2026
ಗಡಿ-ಬಿಡಿ ಬಿಡುಗಡೆಗೆ rhyಮ!
ರ್ಹೈಮಣ್ಯೇ ವ್ಯಾಧಿ ಕಾ ರಸ್ತ್ಯೇ
ಮಾಮ್ ಫಲೇಶು ಪ್ರಾಸಾಚಮನ:
:ಹದಿಬದೆಯ ಧರ್ಮ:
https://kn.wikipedia.org/wiki/ಹದಿಬದೆಯ_ಧರ್ಮ
:ಹಾದಿಬದಿಯ ಕರ್ಮ:
https://en.wikipedia.org/wiki/
:ಹಾದಿಬದಿಯ ಫಾರ್ಮ:
https://www.newindianexpress.
:ಹಾದಿಬೀದಿಯ ಡ್ರಾಮಾ:
https://kn.wikisource.org/
:ಹಾಡಿ ಬೀಡಿನ ಟ್ರಾಮಾ:
https://www.youtube.com/watch?
:ಹಾಡಿ ಬೇಡುವ ಧರ್ಮ:
https://kn.wikisource.org/
:ಹೊಡಿಬಡಿಯ ಮರ್ಮ:
https://www.prajavani.net/
ಶುಕ್ರವಾರ, ಮಾರ್ಚ್ 27, 2026
ಚಕ್ರಾರ ಪಂಕ್ತಿ
----------------
ಹಾಗೆ, ಶ್ರೀರಾಮನವಮಿಯದಿವಸನಿಮಿತ್ತಮಾತ್ರವಾದರೂ, ನೋಡಿ:
೧) https://adiga.sanchaya.net/shree_rama_navamiya_divasa/
also another A.Moo. reading video
೨) https://www.facebook.com/mogerigopalakrishnaadiga/posts/561933362232704/
೩) https://vijaykarnataka.com/lavalavk/weekly-magazine/an-article-on-poet-gopalakrishna-adiga/articleshow/62957701.cms
೪) ಎಚ್ ಎಸ್ ವಿ ಕಾಲಂ: ರಾಮನವಮಿಯ ರಾತ್ರಿ...
೫) ಶ್ರೀರಾಮಾಯಣ ದರ್ಶನಂ ಕಾವ್ಯವನ್ನು ಏಕೆ ಓದಬೇಕು?
-------------
ಯುಗಯುಗಾದಿ ಕಳೆದು ಯುಗಾದಿ ಮರಳಿಬರುವ ಚಕ್ರದಲ್ಲಿ ಯುಗಾದಿಯ ನವದಿನಗಳಿಗೆ ರಾಮನವಮಿಯೂ ಆಗುತ್ತಲ್ಲವೆ.. ಅಥವಾ ಪಶ್ಚಿಮದ ಮಾರ್ಜಾಲರಾಮನ ನವಹುಟ್ಟುಗಳ ಚಕ್ರ ಎನ್ನಿ..
ಒಟ್ಟಿನಲ್ಲಿ ಯಾವುದೋ ಒಂದು ಚಕ್ರಾರ ಪಂಕ್ತಿ. ಅಲ್ಲವೇ...
"ಅಥವಾ ಚಕ್ರಾರ ಪಂಕ್ತಿ; ಚಕಮಕಿ ಕಲ್ಲನುಜ್ಜುತ್ತ
ಕೂತುಕೊಂಡಿದ್ದೇನೆ ಕತ್ತಲೊಳಗೆ,
ಪನಿವಾರ ತಿಂದು ಪಾನಕ ಕುಡಿದು ನೋನುತ್ತ
ಸ್ಫೋಟಕ್ಕೆ ಕಾದು ಕಿವಿ ಕಂಪಿಸುತ್ತ."
ತರುವಾಯ ಅಸಲು ವಿಷಯವೇನೆಂದರೆ, ಅಡಿಗರ 'ಶ್ರೀರಾಮನವಮಿಯ ದಿವಸ'ಕ್ಕೆ ಅಂತರ್ಜಾಲದಲ್ಲಿ ಸಧ್ಯ ಅಪ್ಲೋಡಾಗಿರುವ ವಿವರಣೆಗಳನ್ನ ನೋಡಿದಾಗ ಇಲ್ಲಿನ ಈ 'ಚಕ್ರಾರ ಪಂಕ್ತಿ' ಎಂಬುದನ್ನ ನಮ್ಮ ಕನ್ನಡದ ಪ್ರಸಿದ್ಧ ಅಧ್ಯಾಪಕರು ವಿಮರ್ಶಕರು ಕವಿಗಳು ಇತ್ಯಾದಿಗಳು ಸರಿಯಾಗಿ ಶಬ್ದಶಃ ಅರ್ಥಬಿಡಿಸದೇ.. ಬಿಡಿಸಿನೋಡದೇ.. ನೋಡಿ ಅರಿಯದೆ.. ಅವಸವಸರವಾಗಿ ಜಾರಿಕೊಂಡಂತೆ.... "ಚಕ್ರದಂತೆ ಉರುಳುವ ಕಾಲ ಅಥವಾ ವಿಕಾಸವಾದದ ಚಕ್ರವನ್ನು (ಚಕ್ರಾರ) ಸಾಲಾಗಿ (ಪಂಕ್ತಿ) ಜೋಡಿಸಿದಂತೆ, " ಅಂತೇನೋ ಗೊಣಗಿ ತಪ್ಪಿಸಿಕೊಳ್ಳುವಂತೆ ಕಂಡುಬರುತ್ತಿದೆ...
ಚಿಂತಿಸಬೇಡಿ! ನಾವಿದ್ದೇವಲ್ಲ!!
-ಎಂದು ಈ ಕೆಳಗಿನಂತೆ ಅಪ್ಪಣೆಕೊಡಿಸಿದ್ದು ಶ್ರೀಶ್ರೀಶ್ರೀ ಮೂರ್ಶ್ರೀ ನಾವುಗಳು!!!
ಈ ಪದಪುಂಜ ನೋಡಿದ ಮೊತ್ತ ಮೊದಲ್ಮೊದಲಲ್ಲಿ ಶ್ರೀ^3 ನಾವುಗಳ ಚಿತ್ತದಲ್ಲಿ ಮೂಡಿದ ಚಿತ್ರ ಎಂದರೆ ಅದು "ಅರೆಯುವ ಹಲ್ಲುಗಳಿರುವ ಚಕ್ರದ (=gears) ದಂತಪಂಕ್ತಿಗಳ ಅರೆಯುವ ಆಕ್ಷನ್.." ನದ್ದು.. ಆ ರೀತಿಯಲ್ಲಿ ಚಕ್ರ+ಅರ++ಪಂಕ್ತಿ ಅಂತ ಮೊದಲನೇಯ ತರಹದ ಸಮಾಸ ನಿಷ್ಪತ್ತಿ ಎಂದೊಂದಪ್ಪಣೆ.
ಹಾಗೆ ಚಕಮಕಿಕಲ್ಲುಗಳನ್ನೇ ಅರೆಯುವ ಹಲ್ಲುಗಳನ್ನಾಗಿ ಹೊಂದಿರುವ ಗಿಯರ್-ಚಕ್ರ ಗಳು ಪಕ್ಕ ಪಕ್ಕ ಒಂದನ್ನೊಂದು ಉಜ್ಜಿಕೊಳ್ಳುತ್ತಾ ಕಿಡಿ ಹೊತ್ತಿಸುತ್ತ ತಮ್ಮ ಮಧ್ಯೆ ಸಿಲುಕಿದುದನ್ನು ಅರೆಯುತ್ತ ಕೂಡವಿರುವ ಯಂತ್ರ-ಇಸಂ ಭರಿತ ದೃಶ್ಯ ಅಂದುಕೊಂಡರೆ ಅದು ಅಲ್ಲಿನ ರಾಕ್ಕೆಟ್ಟುಗಳ ಶೋಕೇಸಿಗೆ ಸೇರಿಕೊಳ್ಳುತ್ತೆ... ಹಾಗೆ ಚಕ್ರವ್ಯೂಹದ ದಂತಭಗ್ನಕ್ಕೆ ಈಡಾದ ಅಭಿಮನ್ಯು ಕಥೆಗಳೂ ನೆನಪಾದರೆ ಹೋಗಲಿ ಎನ್ನುವ... 'ತುರಿಮಣೆ' = 'dentally forward' ಎನ್ನುವ ಬೂಮರ್ರಾಂಗಪಾರ್ಥ ಕೂಡ ನೆನಪಾಗಿ ಬಿಟ್ಟರೆ, ವಿಧಿ ಇಲ್ಲದೇ, ಥೂ ಬಿಡ್ತೂ ಅನ್ನೀಪ್ಪಾ👻
ಇನ್ನೊಂದು ಅರ್ಥ... ಅಂತರಂಗದ ಸುರುಳಿಬಿಚ್ಚಿ ಸರ್ಚ್ ಲೈಟಿನಲ್ಲಿ ಹಾಸಿದ ಹೆದ್ದಾರಿ.., ಅಲ್ಲಲ್ಲ, ಕ್ಷಮಿಸಿ, ಅಂತರ್ಜಾಲದ ಸುರುಳಿಯಲಿಳಿದು ಏಐ ಕರಾಮತಿಯ ಸರ್ಚ್-ಇಂಜಿನ್ ಹೈವೇಲೈಟಲ್ಲಿ ಸಿಲುಕಿದ ಕೊಂಡಿ:
ಗ್ರೀಕ್ ಛಂದಸ್ಸುಗಳಲ್ಲಿ "ಒಂದೇ ತೆರನ ಸಾಲು ಉದ್ದಕ್ಕೂ ತಿರುತಿರುಗಿ ಬರುವ ಪಂಕ್ತಿಧಾಟಿ (ಸ್ಟೈಕಿಕ್ ವರ್ಸ್)"
ಹಾಗೆ ಮತ್ತೊಂದು ಅರ್ಥ ಸಾದ್ಯತೆ: cycloid trajectory :
https://kn.wikipedia.org/wiki/%E0%B2%9A%E0%B2%95%E0%B3%8D%E0%B2%B0%E0%B2%9C
Aaaand, the bottom line
that trumps it all is,
ತಿರುಗಿ ಭಾಸೋಭಾಸಃ ಎನ್ನಲಿಕ್ಕೆ!!! :
"ಭಾಸಕವಿ ಸ್ವಪ್ನವಾಸವದತ್ತ ನಾಟಕದಲ್ಲಿ ನುಡಿದ "ಚಕ್ರಾರಪಂಕ್ತಿರಿವಗಚ್ಛತಿ ಭಾಗ್ಯಪಂಕ್ತಿ" ಎನ್ನುವ ಮಾತು ಮನುಷ್ಯನಿಗೆ ಮಾತ್ರವಲ್ಲದೆ ಈ ಪದಗಳ ಚರಿತ್ರೆಗೂ ಅನ್ವಯಿಸುತ್ತದೆ."
https://archive.org/stream/bmshri.devagange0000mvse/bmshri.devagange0000mvse_djvu.txt
ಇದರ ತಾತ್ಪರ್ಯ ಹೀಗೆ:
‘ಕಾಲವು ಬದಲಾಯಿಸಿದಂತೆಲ್ಲ ಅದೃಷ್ಟವು ಚಕ್ರದ ಅರೆಕೋಲುಗಳಂತೆ ಮೇಲಕ್ಕೂ ಕೆಳಕ್ಕೂ ಉರುಳುತ್ತದೆ.’"
https://www.prajavani.net/community/motivation/the-wheel-of-luck-2-801945.html
"Cakraarapanktiriva gacchati bhaagyapanktih.."
"Worldly fortunes circle round with the wheel of time moving up and down like the wheels of a chariot".
https://bhagavadgita.org.in/Blogs/5ad04e8f5369ed119c551fa5
-----------------------------------------
ಇತಿ ಶರಣೂ ಶರಣೆಂದವರು
ಅಪ್ಪಣೆಕೊಡಿಸಲೆಂದು ಬಂದು
ಚಕ್ರಾರದಂತಪಂಕ್ತಿಗಳು ಛಪ್ಪನ್ನೈವತ್ತಾರ್ಚೂರಾದವೋ
ಎಂದೋಡಿದ ಶ್ರೀ^೩ ಮೂರ್ಶ್ರೀ ನಾವಪ್ಪಗೋಳು!
-----------------------------------------------------
PS: https://archive.org/stream/in.ernet.dli.2015.382137/2015.382137.Tantra-Sara_djvu.txt
"...ತಂತ್ರಶಾಸ್ರ್ರದ ಅವಸ್ಥೆಯೂ ಇದೇ ತೆರನಾಯಿತು... ''ಚಕ್ರಾರಪಂಕ್ತಿರಿವ ಗಚ್ಛತಿ ಭಾಗ್ಯಪಂಕ್ತಿ'': ಕಾಲಚಕ್ರದ ಯಾವುದೋ ಒಂದು ಅರವನ್ನು ಆತುಕೊಂಡಿದ್ದ ತಂತ್ರಪರಂಪರೆ ಅದರೊಡನೆಯೇ ಮಗುಚಿಕೊಂಡಿತು..."
ಶುಕ್ರವಾರ, ಜನವರಿ 16, 2026
ಆಧುನಿಕೋತ್ತರ ಭವಿಭಾವಶ್ಲೇಷೆಗಳು
ಆಧುನಿಕ ಸಂಪ್ರದಾಯದ ಕವಿಕಾವ್ಯಕ್ಲೀಷೆಗಳ್
ಗೆ ಸಂವಾದಿ-ವಿವಾದಿ/ಗತಿಸ್ಥಿತಿ-ಇತ್ತೇದಿಕೆಯಾಗಿ
"ಆಧುನಿಕೋತ್ತರ ಸಂಪ್ರದಾಯದ ಭವಿಭಾವಶ್ಲೇಷೆಗಳು"
.ವರುಷಗಳುರುಳಿದಂತೆ ವರ್ತನೆ
ಗಳುರುಳು ತಲೆಗುಸಿರು
ಗಟ್ಟಿ ಗಟ್ಟಿ ಗಟ್ಟಿಸುತಬಂದು ಕೊನೆಗೂ ತೊಡೆ
ಗಣಕವನೆತ್ತಿಕೊಂಡು ತಾನು
ತಾನಾಗದೆ ಗಂಟಿಕ್ಕಿ ಹುಬ್ಬು ಮಧ್ಯೆ
ಮಧ್ಯೆ ಮೆದ್ದಾಗೆರಡೆರಡೆಲೆ ನಾಕು
ನಾಕಾಗೆಂಟೆಂಟಾಗುವಾಟ ಗಂಟುಗಂಟಾಗಿ
ಕೆಲಸವಿದೇ ಕಾರ್ಯವಿದೇ ಎಂಬಂತೆ ಗಂಟೆ ಕಳೆ
ವೇಷ ಗಂಟುಕಟ್ಟೋವರೆಗೆ ಮುಖ
ವುಳಿಸುವಾಟದಂತೆ ಮೇಲ್ನೋಟಕ್ಕೆ
ತಾಗದಂತೆ ಒಳಗೊಳಗೇ ಕುದಿಯುತ್ತೆ ಆಖೈರು
ತಿದಿಯೊಂದು ಹಾಗೇ ಮುಂದರಿ
ಯುತ್ತ ಹೇಗೆ
ಯಿನ್ನು ನಾ ಫಿಸಿಕ್ಸು ಲಾಜಿಕ್ಕು ಫಿಲಾಸಫಿ
ಸುವುದಂತ ಚಿಂತೆ ಅದೇ ಸರಪಳಿ
ಯಲಿ ಸರಿ ಸರಿ ಸರಿಯುತ್ತ
ಹಾಳಾಗಲಾ ಒಂದಿಷ್ಟು
ಪದಶ್ಲೇಷೆಗಳದೇನೇನಕೋ ಹೀಗೆ
ತಲೆಗ್ಹಿಡಿಸುತ್ತದಂತ
ಸಿಂಟ್ಯಾಕ್ಟಿಕ ಭಂಗಿ ಭಂಗಿಸಿದಂತೆ ಯಂತ
ಯಂಥದ್ದೆಲ್ಲವರ್ಥ ಅರ್ಥಾರ್ಥ ಅಪಾರಾರ್ಥವಾಪಾರ್ಥ
ವಾಪಥ್ಯ ಸೀಮಾಂತೆಕ್ಕಿನ ಮಟ್ಟದಲಂತೂ ತಲೆ
ಕುಣಿಸುತ್ತೆ ಮತ್ತದೇ ಧಾಟಿಯ ಸಾವಿರ ಪದ ನೆನೆ ನೆನೆಸಿ
ಹುದುಗುಬರಿಸುತ್ತೆ ಮತ್ತೇರಿಸುತ್ತ ಶೆರೆ ಸೆರೆ ಅರರೆರೆ ಮತ್ತೆ
ಮಾತ್ರೆಗಳೆರಡೆರಡೆಲೆಲೆ ನಾಕುನಾಕಾಗೆಂಟೆಂಟಾಗು
ವಲ್ಲಿಗೆ ಪದಪದ ಹೊಸೆವೆಸೆವಾಟಮಾಟ ಹೊಸವೆ
ನಿಸಲು ಮತ್ತದೆ ಶಾಬ್ದಿಕ ಬೌದ್ಧಿಕ ಜಿಮ್ನಾಸ್ಟಿ
ಕಾಟವೆ ಮತ್ತೆ ಇಷ್ಟಕ್ಕೂ, ಹಃ! ಆಧುನಿಕೋತ್ತರ ಜೀವ
ಜೀವನವೆಂದರೇನೊ? ದಾರಿಹೋಕ ಹೂ
ಮಾರ್ವ ಜೀವ ದರ್ಶನಕ್ಕಿರುವಲ್ಲಿಗೆ, ಸಾಂಪ್ರದಾಯಿಕ ಮಾರ್
ಜಾಲನಿಗೂ ನವ ಜೀವನವೆನುವಲ್ಲಿಗೆ! ಕಾರಿ ಕಾರಿ ಬರೆ ಭಾವ
ಸಾರಿಕೆ ಬರೆದು ಕೊರೆದು ವಕಾಲತ್ತಿಸಿ ವೈಭವೀ
ಕರಿಸಿ ವಿಸರ್ಜಿಸು
ವಾಟಕ್ಕೆ ವಾಕರಿಸದೆ ಯಾರಿಗ್ಗೊತ್ತಿಲ್ಲ
ದುತ್ತರವೀ ಜಗ
ದಗಲಕ್ಕೆ ಪ್ರಶ್ನೆ ಹುಡುಕೋ ತರ್ಕಮರ್ಕಟ ಕಂಟ್ರಿ ನಾ
ಯೀ ಬಾಲ ಬುದ್ದಿ
ವಾತ ಬಿಡಿ ಬಡಿಯುತ್ತೆ ಹೇಗೂ ಕೊನೆಗೊಮ್ಮೆ.
================================================
ಆತ್ಮೀಯ bondhuಗಳೇ,
ಮೊನ್ನಿತ್ತೀಚೆಗೆ ನಾವೇನು ನಿಮ್ಮ ಜೊತೆ ಬಿಹೇವಿಯರಿಸಂ ವೇಷಗಟ್ಟುವಿಕೆಯ ಬಗೆಗೆ ಗಂಟೆಗಂಟಲು ಅವಲೋಕಿಸಿದೆವೋ ..
ನಮ್ಮ ಆಧುನಿಕ ಕವಿಕಾವ್ಯೋದ್ಯೋಗರಹಸ್ಯವನ್ನು ಆಟೊರಿಕ್ಷಾಟನೆಯಲ್ಲಿ ಕತ್ತೆಯುಚ್ಚೆಹೊಯ್ವಂದದ ಅಪ್ರಕಟಿತ ಕವನವೊಂದೋದೇನು
ಬಯಲುಗೊಳಿಸಿದ್ದೆವೋ... ಅದಕ್ಕೆಲ್ಲ ಮುನ್ನುಡಿಯಂತೆ.. ದಶಕವೊಂದರಷ್ಟು ಹಿಂದೆ.. ಹಾಗೆ ತಲೆ ತಳೆಯದ
ಖಾಚಿತ್ಯಗಳು ವರ್ತನೆಯಲ್ಲಿ ಆವರ್ತಿಸುವ ವಿದ್ಯಮಾನವನ್ನು ಬ್ಲಾಗಾಭಿವ್ಯಕ್ತಿಗೊಳಿಸಿದ್ದೆವು..
ಆಗ ಅದು ಶ್ರೀಶ್ರೀಶ್ರೀ ದುರಹಂಕಾರಿಗಳ ಮುಂಗಾಣ್ಕೆಯಾಗಿತ್ತು ಎಂದು ಈಗ ಸತ್ಯೋತ್ತರವಾಗಿ ಭಾವಿಸಲು ಒಂದು ತೊಡಕಲ್ಲದ
ತೊಡಕೇನೆಂದರೆ .. ಈಗ ಪುನರಾವಲೋಕಿಸಲು ಯತ್ನಿಸಿದರೆ ಅದು ಹೀಗೆ ಬೆಳೆಯುವ ಟ್ಯೂಮರಿನ ಮೊಳಕೆ ಮಾತ್ರವಾಗಿತ್ತು
ಎಂಬ ಸೂಚನೆ ಆಗಲೇ ಶ್ರೀಶ್ರೀಶ್ರೀ ದುರಹಂಕಾರಿಗಳಿಗೆ ಇದ್ದಿತು ಎನ್ನಲು ಬಲವಾದ ಆಧಾರಗಳಿದ್ದಂತೆ ಅನಿಸುವುದಿಲ್ಲ...
ಎನಿವೆ.. ಏನೀಗ..?, ಎಂದರೆ, ಹೇಗೂ ಇತ್ತೀಚೆಗೆ ನಮಗೆ ಪ್ರತಿಸ್ಪಂದನೆಯ 'ಭೂತ'ವೊಂದು ಮೆತ್ತಿಕೊಂಡಿರಲಾಗಿ..
ಆವೊಂದು "ಆಧುನಿಕ ಕವಿಕಾವ್ಯಕ್ಲೀಷೆ"ಗೆ ಪ್ರತಿಧ್ವನಿ ಅಥವಾ ಸ್ಟೇಟಸ್-update ಎನ್ನುವಂತೆ
"ಆಧುನಿಕೋತ್ತರ ಸಂಪ್ರದಾಯದ ಭವಿಭಾವಶ್ಲೇಷೆ"ಗಳನ್ನು ವಿಶ್ಲೇಷಿಸಿ ಸಂಶ್ಲೇಶಿಸಿ
ತಮ್ಮ ಆವಾಗಾಹನೆಗೆ ತನ್ಮೂಲಕ ನೀಡುತ್ತಿದ್ದೇವೆ..
ಓಡಿಸಿಯಾದರೂ ಓಡದೇ ಓದಿ ನೋಡಿ ..!
ಧನ್ಯಬಾದಗಳೊಂದಿಗೆ
ಶ್ರೀದುರಹಂಕಾರಿತ್ವಕ್ಕೆ ಯಾವತ್ತು ಪರ್ಯಾಯದಲ್ಲಿ
ಶ್ರೀಶ್ರೀಶ್ರೀ ಮೂರ್ಶ್ರೀ ನಾವುಗಳು
ಮಂಗಳವಾರ, ಜನವರಿ 13, 2026
ಕಂನಡಿ..ಘಾ?!
ಕುರಿತೋದದೆಯುಂ ಕಾವ್ಯಪ್ರಯೋಗಪರಿಣತಮತಿಗಳ್!
ಬಿಡಿಸರಿಯದೆಯುಂ ಟೀಕಾಮೆಚ್ಚುಗಪರಿಣತಮತಿಗಳ್?!
ತೆರೆದ್ನೋಡದೆಯುಂ ಸಿನಿಮಾನಿಶೇಧಪರಿಣತಮತಿಗಳ್!?!