Thursday, May 10, 2018

ಇತ್ತು

'ಇರುವು' / 'ಇತ್ತು' / 'ಗಾಳಿಗೋಪುರ' / 'ಮರಳ್ಮರಳು'  

/ "ಬೀಸಿತು 'ಅರಳದೇ ಮರಳಿದೇ' ಎನುವ ಲೋಪಸಂಧಿವಾತಂ"

 

 

.
ತಿಳಿ
ಬೆಳಕಲ್ಲಿ
ಮಿರಮಿರನೆ ಮೆರೆದಂತೆ
ತಂಬೆಳಕಿಗೋ ಅದುವು
ನೊರೆನೊರೆಯೊರೆದಂತೆ
ಯಾವತ್ತಿಮಿರ ಮರೆವಂತೇ
ನೋ ಮರ್ಮರವನೆ
ಮೊರೆಮೊರೆಮೊರೆಯುತಾ
ಬೆಳ್ಳಬೆಳ್ಳಾದ ಮಳ್ಮಳ್ಳ

ತೀರದುದ್ದ
ಇಲಿಬಿಲತರಿತಂತೆ
ಗುಹೆ ಗುಹೆಯ
ಬಗೆ ಬಗೆವ
ಕರಣ
ಹುಗಿ ಹುಗಿವ
ಪಾದ
ತೆಗೆತೆಗೆವಾಟ
ದಾ
ದ್ಯಂತ
ಬೆಳೆಬೆಳೆದಂ
ತಾ
ದಂತ
ದಂತಃಪುರದಲಿ
ಹಾಗೆ ಹೊರಳಲು
ಮರಳು!
ಹೊಮ್ಮರಳು!!
ಹುಸಿಮರಳು
ತಳದಿ
..... 
.... 
...
..
.


.......
೦೫/೧೮

Thursday, May 3, 2018

ತತ್ವ ಮಸಿ

ಅಥವಾ

ಸೃಷೇಲಯೋಸ್ತಿಃ


 .......................................




~ಸೃಷ


ಇಕ್ಕುವ ಎವೆ ಕುಕ್ಕುವ ಸತ್ಯ 
ಹಿರಣ್ಯಗರ್ಭಗತ್ತಲು
ಹುಣ್ಣಿರದ ಹುಟ್ಟು ಗಟ್ಟಲು 
ಮುಚ್ಚುಮರೆಯಲಿ ಭವಿಸಿ ಬತ್ತಲು
ಹುಟ್ಟಿರದ ಕಣ್ಕಟ್ಟು ಭವ
ಧರೆಗಿಳಿಯೆ ಬಯಲಾಯಿತಾ...


~~~~~~~



~ಸ್ಥಿ ~

(ಇಲ್ಲಿಗೆ ಬೇರೇಯೇನೋ ಇನ್ನೂ ಸ್ಪುರಿಸಬೇಕಿದೆ;
ಇದಕ್ಕೆ ಕಾದದ್ದು ಸಾಕೆನಿಸಿ, 
ಹಾಗ್ಗೆ, ಸಧ್ಯಕ್ಕಿದು
'ತಾಕಲಿಲ್ಲದ ಟೊಣಪೆ' )


..ವಾನೀರವಾನಂತದಿ ಬಿದ್ದೆದೊದ್ದಾಡುತಿವೆ
ಒಂದು ಬೀಗ, ಮತ್ತೊಂದು ಕೀಲಿಗೈ.
ಹೇಳದೇ ಮಾಡಿಸಿದಂತೆ ಜೋಡಿಯದೆಂದೆಂದು
ತೂರಲಾರದಾ ಬೀಗದೊಳಗಾಕೈ; ಅಥವಾ
ತೆರೆದುಕೊಳ್ಳುವುದಿಲ್ಲವಾ ಕೀಲಿಯಲಾ ಬೀಗ,
-- ಹೇಗೆಂದರೂ ಅದು ಹಾಗಷ್ಟೇ ಸೈ?
ಇರುವುದವೆರಡು, ಅರಿವುದಾದರೂ ಆವೆರಡು,
ಬೀಗಕ್ಕೂ ಜೈ; ಕೀಲಿಗೂ ಜೈ.


~~~~~~~ 


~ಲಯ ~

ಭಣಭಣ ನಿರಾವರಣವಾಗಿ ಕರಣ
ಪ್ರಣವ ನಾನನಳಿದು ಅನಾಹತ್ತು ನೀ
ರಸ ಬಸಿಬಸಿದು ಕೃತ
ಕೃತ್ಯವಾಯಿತಾ.., ಮತ್ತೆ ನಿರಾಕೃತವಾಯಿತಾ
ತತ್ವಮಸಿದುಂಬಿಸಿ ಎಚ್ಚ ಚಿತ್ತ ವಿರಂಜಿತ
ಕೊನೆಗೂ ಖಾಲಿಯಾಯ್ತಾ?

~~~~~~~

Tuesday, May 1, 2018

ತಾಕಲಿಲ್ಲದ ಟೊಣಪೆಯ...

ಆ ನೀರವಾನಂತ ನಿರಾವರಣದಿ ಬಿದ್ದೆದೊದ್ದಾಡುತಿವೆ
ಒಂದು ಬೀಗ, ಮತ್ತೊಂದು ಕೀಲಿಗೈ.
ಹೇಳದೇ ಮಾಡಿಸಿದಂತೆ ಜೋಡಿಯದೆಂದೆಂದು
ತೂರಲಾರದಾ ಬೀಗದೊಳಗಾಕೈ; ಅಥವಾ
ತೆರೆದುಕೊಳ್ಳುವುದಿಲ್ಲವಾ ಕೀಲಿಯಲಾ ಬೀಗ,
-- ಹೇಗೆಂದರೂ ಅದು ಹಾಗಷ್ಟೇ ಸೈ?
ಇರುವುದವೆರಡು, ಅರಿವುದಾದರೂ ಆವೆರಡು,
ಬೀಗಕ್ಕೂ ಜೈ; ಕೀಲಿಗೂ ಜೈ.