ಅಥವಾ
ಸೃಷೇಲಯೋಸ್ತಿಃ
.......................................
~ಸೃಷ~
ಇಕ್ಕುವ ಎವೆ ಕುಕ್ಕುವ ಸತ್ಯ
ಹಿರಣ್ಯಗರ್ಭಗತ್ತಲು
ಹುಣ್ಣಿರದ ಹುಟ್ಟು ಗಟ್ಟಲು
ಮುಚ್ಚುಮರೆಯಲಿ ಭವಿಸಿ ಬತ್ತಲು
ಹುಟ್ಟಿರದ ಕಣ್ಕಟ್ಟು ಭವ
ಧರೆಗಿಳಿಯೆ ಬಯಲಾಯಿತಾ...
~~~~~~~
~ಸ್ಥಿ ~
(ಇಲ್ಲಿಗೆ ಬೇರೇಯೇನೋ ಇನ್ನೂ ಸ್ಪುರಿಸಬೇಕಿದೆ;
ಇದಕ್ಕೆ ಕಾದದ್ದು ಸಾಕೆನಿಸಿ, ಹಾಗ್ಗೆ, ಸಧ್ಯಕ್ಕಿದು
'ತಾಕಲಿಲ್ಲದ ಟೊಣಪೆ' )
ಇದಕ್ಕೆ ಕಾದದ್ದು ಸಾಕೆನಿಸಿ, ಹಾಗ್ಗೆ, ಸಧ್ಯಕ್ಕಿದು
'ತಾಕಲಿಲ್ಲದ ಟೊಣಪೆ' )
..ವಾನೀರವಾನಂತದಿ ಬಿದ್ದೆದೊದ್ದಾಡುತಿವೆ
ಒಂದು ಬೀಗ, ಮತ್ತೊಂದು ಕೀಲಿಗೈ.
ಹೇಳದೇ ಮಾಡಿಸಿದಂತೆ ಜೋಡಿಯದೆಂದೆಂದು
ತೂರಲಾರದಾ ಬೀಗದೊಳಗಾಕೈ; ಅಥವಾ
ತೆರೆದುಕೊಳ್ಳುವುದಿಲ್ಲವಾ ಕೀಲಿಯಲಾ ಬೀಗ,
-- ಹೇಗೆಂದರೂ ಅದು ಹಾಗಷ್ಟೇ ಸೈ?
ಇರುವುದವೆರಡು, ಅರಿವುದಾದರೂ ಆವೆರಡು,
ಬೀಗಕ್ಕೂ ಜೈ; ಕೀಲಿಗೂ ಜೈ.
~~~~~~~
~ಲಯ ~
ಭಣಭಣ ನಿರಾವರಣವಾಗಿ ಕರಣ
ಪ್ರಣವ ನಾನನಳಿದು ಅನಾಹತ್ತು ನೀ
ರಸ ಬಸಿಬಸಿದು ಕೃತ
ಕೃತ್ಯವಾಯಿತಾ.., ಮತ್ತೆ ನಿರಾಕೃತವಾಯಿತಾ
ತತ್ವಮಸಿದುಂಬಿಸಿ ಎಚ್ಚ ಚಿತ್ತ ವಿರಂಜಿತ
ಕೊನೆಗೂ ಖಾಲಿಯಾಯ್ತಾ?
~~~~~~~
No comments:
Post a Comment