-:ಮಿಸ್ತ್ರಾಲ ಹವೆಯ ಮಿಸ್ಕ್ಯಾರಿಯೇಜು:-
(ಹಿಪ್/ಹಾಪ್/ರ್ಯಾಪ್ ಅನುಸರಣದೊಂದೆಸೆತ)
===============================
ಉಂಟು ದಿನ ಬರಿ ಇಪ್ಪ-
ತ್ತೆಂಟು ಅಂತಂದು ಬಂದರೂ ಫೆಬ್ರ-
ವರಿಬಂದರೆ ಬಂದು ಸಂದ ಪರಿಯಲಿ
ವರಿಯೆಂದರೆ ವರಿಯದಾ-
ವರಿಸಿ ಬಿಡುವುದು ತಣ್ಣ-
ನುರಿಯದು ತನ್ನ-
ನುರಿಸೋದು ತನ್ನ-
ನದೆಲ್ಲಿ ಅರಿಯಿಸೋದು ಅರಿ
ತಾರಿಸಬೋದು ಅಂತಾರೀತಿ
ಹರಸಿ ಅರಸೋದದದೆಲ್ಲ ಹರಸಾ
-ಹಸವೀ ಶರಧಿ ನಡುವಣ-
ದೀ ಹಿರಿದ್ವೀಪ ಸಾರ್ದೇಙ್ಞ-
ದೀ ಜನಗಣ-
ಮನ ಸಿಗದೇ ಹೋಪ ತುದಿಯ-
ದೀ ಕರಾಲಿಸಿನಲಿ ಬರಿ ಮಿಸ್-
ತ್ರಾಲ ಕರಾಮತಿಯಿಲ್ಲಿ ಒರಿಸ್ತಾ-
ನೋದಿಂದ ಸಪಾಟು ಬಟಾ
ಬಯಲದದೇನು ಮೊದಲಾಗಿ ಹೈ
ವೆಯೇ ಸಿಕ್ಕಂತಾಗಿ ನೋಡಿ ಮೆಡಿ-
ಟೆರೇನಿಯನಿನ್ನೀ ಹವೆ ಬಲ್-
ಮೂಡಿ ಈ ತಂಗಾಳಿ ಬಲು ಗಯ್-
-ಯಾಳಿ ಬಿರುಗಾಳಿಯಂತೆ ಬೀಸುತವೆ ಈ ಮನೋ-
ದ್ವೀಪದೂರಲಿ ದೂರ-ದೂರ-
ದೂರದಲಿ ಕಂಡೂಕಂಡು ದೊರಕದದೆಂ-
ದು ದೂರುತಿರುವಲ್ಲಿಯಾ-
ತಿರುವಲ್ಲಿಯಾ ದಿಗಂತಗಪ್ಪಿಸುವಂ-
ತಪ್ಪತಪ್ಪಿಸುವಂತೆ ಮತ್ತೆ ಮುಗಿ-ಮುಗಿ-
ಮುಗಿಲುಗಳದೇನು ಮುಗಿಬಿದ್ದು ಗವಿ-
ಯುತ್ತವೆಯೊ ಸುತ್ತಲಾ-
ವರಿಸುತ್ತ ದಿಗಿ-ದಿಗಿ-
ದಿಗಿಲುಗತ್ತಿಸುತ್ತಲಾಗತ್ತಲಲ್-
ಗಣ್ಣಿಟ್ಟವರಿಗೆ ಹಠಾತ್ತನೆ ಮೂಡಿ ಜಗ-
ಮಗಿಸುವಂಥ್ಯಾವ-
ನ್ನೂರು ತಾರೆ ಕೂಡ ಮುಚ್ಹೋಗ್-
ವಂಥಾ ಮಾಡ ಮಾಡುವ ಮಾಟ
ಮಾಡುವ ಪಿಸು-
ಮಾತನಾಡುವಲ್ಲಿ ಧುಡುಕಿ ಗುಡು
ಗುಡುಗಾಟವಾಡುವ ಹಂ-
ಬಲವ ತರುವೊಲವಾಂ-
ಬೋಧದಾ ಘನ ಗರ್ಭದೊಳದೇನೋ
ಏನೋ
ಭವಿಸದಲ್ಲ -
ಸುರಿವುದಿಲ್ಲ.
ಮಬ್ಬು ಗಬ್ಬ ಸಂಕಲ್ಪ ನೂರ್-
ಗಪ್ಪಿಟ್ಟರೂ ಬಿಲ್ಲ ಮೂಡಿಸಿದರೂ
ಸ್ಪುರಿಸೋದಿಲ್ಲವೀ ಮಳೆ-
ಗಾಡಿಲ್ಲದ ಸುಡುಗಾಡನಾಡ ಗುಡ್ಡ-
ಗಾಡು ತಡೆತಡೆದು ತಂಗಾಳಿಗಳ-
ನಿಲಿಸಿಲ್ಲೊಗ್ಗೂಡಿಸೂ ತೇವ-
ವದಿಲ್ಲೇ ಮಳೆಯಾಗಲ್ಲ ಹಾ-
ಗೆಲ್ಲ ಗಾಳಿ ಹಾವಳಿ ಬಿಡುವುದಿಲ್ಲ
-ವಿಲ್ಲಿ ತಳೆದ ಬಸಿರಿಲ್ಲೇ ಧರೆಕಾಣದಿಲ್ಲ ಮತ್ತಿನ್-
ಯಾವ ಬಿರುಸಿರಿಗೋ ಬೇರೆಲ್ಲಿಗೋ ಸಂ-ಹೌ-
ಹಾರಿದಂತಿದೆಯಲ್ಲ ಇದೆಲ್ಲ ಸಲ್ಲದಿದೆಲ್ಲ ನಮ
ಗಿಲ್ಲೆ ಮಳೆಯಾಗಿದ್ದಿರಬಹುದಾದರೂ ನಮ್
ಹೊತ್ತಿಗೊಂದು ಹನಿ ದೊರಕಲೇ
ಇಲ್ಲ ಕೊನೆಗು.
No comments:
Post a Comment