ಇತ್ತೀಚೆಗೆ ನಿಧನರಾದ ಹಿಂದಿ ಚಲನಚಿತ್ರಗೀತಸಾಹಿತಿ, ಶ್ರೀಯುತ ಯೋಗೇಶ್ ಗೌರ್ , ಅವರ ಬಗ್ಗೆ ನಮಗೆ ತಿಳಿದದ್ದು ಕಡಿಮೆಯೇ...
ಹಾಗಿದ್ದಾಗ್ಗೆಯೂ, ಹೃಷಿಕೇಶ ಮುಖರ್ಜಿಯವರ ದಿಗ್ದರ್ಶನದ 'ಆನಂದ್' ಸಿನೇಮಾದಲ್ಲಿ ಅವರು ಬರೆದ, ಮುಖೇಶ ಹಾಡಿದ, ರಾಜೇಶ್ ಖನ್ನನ ಅಭಿನಯಿಸಿದ ಈ ಭಾವಗೀತಾತ್ಮಕ ಹಾಡು ನಮ್ಮ ಯಾವತ್ತು ಹೃನ್ಮನಗಳನ್ನು ಅದೆಂದೂ ತಾಕಿದ್ದಿದು ಹೌದು. ಹಾಡಾಗಿಸಿ ಅಮರರಾದವರೆಲ್ಲರಿಗೂ ಕಿರುಕಾಣಿಕೆಯಾರ್ಪಣೆಯಾಗಿ ಈ ಹಾಡನುವಾದ.
ಅನುವಾದಿಸುವಾಗ ಹೊಸದಾಗಿ ಕಣ್ಣ ಕೋರೈಸಿದ ಈ ಹಾಡಿನ ಸಾಲುಗಳ ತನ್ನದೇ ಆದ ಸಾಂಧರ್ಭಿಕ ಅನ್ವರ್ಥತೆಗಳು ಮತ್ತೊಮ್ಮೆ ಹೃನ್ಮನಕಂಗಳನ್ನು ಭಾರವಾಗಿಸಿದವು.
ಹಾಗ್ಗೆ, ಅನುವಾದಕ್ಕಿಳಿವ ಮುನ್ನ ಎಲ್ಲವೂ ಗೊತ್ತು ಎನಿಸುವುದು -- ಅನುವಾದಕ್ಕಿಳಿದಾಗ ಇದೆಲ್ಲ ಗೊತ್ತೇ ಇರಲಿಲ್ಲವಲ್ಲ ಎಂದಾಗವುದು.., ಇದೆಲ್ಲ ಯಥಾಪ್ರಕಾರವೇ!
ಈ ಹಾಡಿನ ಸಂಗೀತ ನಿರ್ದೇಶಕ ಸಲಿಲಚೌಧರಿಯವರು ಬೆಂಗಾಲಿಯಲ್ಲಿ ಇದೇ ಧಾಟಿಯಲ್ಲಿ ಈ ಮುಂಚೆಯೇಇನ್ನೊಂದು ಹಾಡನ್ನು ಸಂಯೋಜಿಸಿರುವುದೂ ತಿಳಿಯಿತು. ಅದರ ಸಂದರ್ಭ-ಅರ್ಥಗಳೆಲ್ಲ ಬೇರೆಯಿದ್ದರೂ ಸಂವೇದನಾಶೀಲವಾಗಿಯಂತೂ ಇರುವುದು ಅನುಭವವೇದ್ಯವಾಯಿತು.
ಅಂದರೆ, ನಮ್ಮ ಈ ಪ್ರಸ್ತುತ ಚಿತ್ರಗೀತ ಸಾಹಿತಿ ದಿವಂಗತ ಶ್ರೀ ಯೋಗೇಶ್ ಗೌರ್ ಅವರು, ಆನಂದ ಸಿನೆಮಾದ ಸಂದರ್ಭದೊಟ್ಟೊಟ್ಟಿಗೆ ಈ ಮೊದಲೇ ಸಂಯೋಜಿತವಾದ ಸಂಗೀತಕ್ಕೆ ತಕ್ಕಂತೆ ಬರೆಯುವ ಪಣವನ್ನು ಸಹಾ ಏಕಕಾಲದಲ್ಲಿ ಸುಲಲಿತವಾಗಿ ನಿಭಾಯಿಸಿದ್ದಾರೆ ಎನ್ನಬಹುದು. ಅವರಿಗೆ ನಮ್ಮ ನಮನಗಳು.
ಅಲ್ಲೆಲ್ಲೋ ಆ ಬೂಟುಗಳ ಟಕಟಕೆಯು
ಅಲ್ಲೆಲ್ಲೋ ಆ ಕೆಂಡಗಳ ಚಟಪಟೆಯು
ಅಲ್ಲೆಲ್ಲೋ ಆ ಜೀರುಂಡೆಗಳ ಕೀರಲು
ಅಲ್ಲೆಲ್ಲೋ ಆ ನಲ್ಲಿಯ ಟಿಪಟಿಪೆಯು
ಅಲ್ಲೆಲ್ಲೋ ಆ ಕಪ್ಪು ಕಿಡಕೀಯು
ಅಲ್ಲೆಲ್ಲೋ ಆ ಮಬ್ಬು ಚಿಮಣೀಯು
ಅಲ್ಲೆಲ್ಲೋ ಆ-ಕಳಿಸೋ ಗಾಳಿಮರಗೋಳು
ಅಲ್ಲೆಲ್ಲೋ ಅಡ್ಡಗೋಡೆ ಮೇಲಿಟ್ಟಂತೇನೇನೋ...
ಏಳೇಳೇಳೇಲೆಲೆಲೇಲೇಲೇ.. ಹೋ!