ಇತ್ತೀಚೆಗೆ ನಿಧನರಾದ ಹಿಂದಿ ಚಲನಚಿತ್ರಗೀತಸಾಹಿತಿ, ಶ್ರೀಯುತ ಯೋಗೇಶ್ ಗೌರ್ , ಅವರ ಬಗ್ಗೆ ನಮಗೆ ತಿಳಿದದ್ದು ಕಡಿಮೆಯೇ...
ಹಾಗಿದ್ದಾಗ್ಗೆಯೂ, ಹೃಷಿಕೇಶ ಮುಖರ್ಜಿಯವರ ದಿಗ್ದರ್ಶನದ 'ಆನಂದ್' ಸಿನೇಮಾದಲ್ಲಿ ಅವರು ಬರೆದ, ಮುಖೇಶ ಹಾಡಿದ, ರಾಜೇಶ್ ಖನ್ನನ ಅಭಿನಯಿಸಿದ ಈ ಭಾವಗೀತಾತ್ಮಕ ಹಾಡು ನಮ್ಮ ಯಾವತ್ತು ಹೃನ್ಮನಗಳನ್ನು ಅದೆಂದೂ ತಾಕಿದ್ದಿದು ಹೌದು.
ಹಾಡಾಗಿಸಿ ಅಮರರಾದವರೆಲ್ಲರಿಗೂ ಕಿರುಕಾಣಿಕೆಯಾರ್ಪಣೆಯಾಗಿ ಈ ಹಾಡನುವಾದ.
************************************
ಎಲ್ಲೋ ದೂರದಿ
ಹಾಡಾಗಿಸಿ ಅಮರರಾದವರೆಲ್ಲರಿಗೂ ಕಿರುಕಾಣಿಕೆಯಾರ್ಪಣೆಯಾಗಿ ಈ ಹಾಡನುವಾದ.
************************************
ಎಲ್ಲೋ ದೂರದಿ
ದಿನ ಮುಳುಗಿದಂತೆ
ಗೋಧೂಳೀ ವಧುವದು
ವದನ ಕದ್ದಂತೆ
ಸದ್ದಿಲದೇ ಬಂದಂತೆ
ಎನ್ನ ಕಲ್ಪನೆಗಳಾಂಗಳದಲಿ
ಯಾರೋ ಕನಸುಗಳ
ದೀಪ ಹಚ್ಚಿದಂತೆ
**
ಅದೊಮ್ಮೆ ಉಸಿರದು ಭಾರವಾದಂತೆ
ಅದೊಮ್ಮೆ ಉಸಿರದು ಭಾರವಾದಂತೆ
ತುಂಬಲು ಕಂಗಳು ಇದ್ದಕಿದ್ದಂತೆ
ಆಗ್ಗೆಯೇ ಮಿಡಿದು
ಒಲವಲಿ ನಡೆದು
ಸ್ಪರ್ಶಿಸುವರಾರೋ ಎನ್ನ
ಅದೃಶದಲೆಂಬಂತೆ
**
ಒಮ್ಮೊಮ್ಮೆಯೆಲ್ಲಿ ಹೃನ್ಮನ ಸೇರವೊ ಅಂತೇ
ಬಂದಾವು ಸಂಬಂಜ ಜನ್ಮಾಂತರವೆಂಬಂತೆ
ಘನ ಸಂಕಟವು
ವೈರಿಯೆನ್ನ ಮನವು
ನನ್ನದಾಗಿಯೂ ಸಹಿಪುದು
ಅವರ ನೋವಂತೆ
**
ಅರಿವುದು ಎದೆಯದು ಗುಟ್ಟೆಲ್ಲದನು
ಹೊಂಗನಸುಗಳನು ಹೊಳೆಯಿಸುವುದನು
ಎನ್ನೀ ಕನಸುಗಳು
ಇವೇ ನನ್ನವುಗಳು
ಎನ್ನನಗಲಾರವು
ಇವುಗಳ ನೆರಳೂ.
***
*****************************************************
*****************************************************
ಅನುವಾದಿಸುವಾಗ ಹೊಸದಾಗಿ ಕಣ್ಣ ಕೋರೈಸಿದ ಈ ಹಾಡಿನ ಸಾಲುಗಳ ತನ್ನದೇ ಆದ ಸಾಂಧರ್ಭಿಕ ಅನ್ವರ್ಥತೆಗಳು ಮತ್ತೊಮ್ಮೆ ಹೃನ್ಮನಕಂಗಳನ್ನು ಭಾರವಾಗಿಸಿದವು.
ಹಾಗ್ಗೆ, ಅನುವಾದಕ್ಕಿಳಿವ ಮುನ್ನ ಎಲ್ಲವೂ ಗೊತ್ತು ಎನಿಸುವುದು -- ಅನುವಾದಕ್ಕಿಳಿದಾಗ ಇದೆಲ್ಲ ಗೊತ್ತೇ ಇರಲಿಲ್ಲವಲ್ಲ ಎಂದಾಗವುದು.., ಇದೆಲ್ಲ ಯಥಾಪ್ರಕಾರವೇ!
ಈ ಹಾಡಿನ ಸಂಗೀತ ನಿರ್ದೇಶಕ ಸಲಿಲಚೌಧರಿಯವರು ಬೆಂಗಾಲಿಯಲ್ಲಿ ಇದೇ ಧಾಟಿಯಲ್ಲಿ ಈ ಮುಂಚೆಯೇ ಇನ್ನೊಂದು ಹಾಡನ್ನು ಸಂಯೋಜಿಸಿರುವುದೂ ತಿಳಿಯಿತು. ಅದರ ಸಂದರ್ಭ-ಅರ್ಥಗಳೆಲ್ಲ ಬೇರೆಯಿದ್ದರೂ ಸಂವೇದನಾಶೀಲವಾಗಿಯಂತೂ ಇರುವುದು ಅನುಭವವೇದ್ಯವಾಯಿತು.
ಅಂದರೆ, ನಮ್ಮ ಈ ಪ್ರಸ್ತುತ ಚಿತ್ರಗೀತ ಸಾಹಿತಿ ದಿವಂಗತ ಶ್ರೀ ಯೋಗೇಶ್ ಗೌರ್ ಅವರು, ಆನಂದ ಸಿನೆಮಾದ ಸಂದರ್ಭದೊಟ್ಟೊಟ್ಟಿಗೆ ಈ ಮೊದಲೇ ಸಂಯೋಜಿತವಾದ ಸಂಗೀತಕ್ಕೆ ತಕ್ಕಂತೆ ಬರೆಯುವ ಪಣವನ್ನು ಸಹಾ ಏಕಕಾಲದಲ್ಲಿ ಸುಲಲಿತವಾಗಿ ನಿಭಾಯಿಸಿದ್ದಾರೆ ಎನ್ನಬಹುದು. ಅವರಿಗೆ ನಮ್ಮ ನಮನಗಳು.
ಅಂದರೆ, ನಮ್ಮ ಈ ಪ್ರಸ್ತುತ ಚಿತ್ರಗೀತ ಸಾಹಿತಿ ದಿವಂಗತ ಶ್ರೀ ಯೋಗೇಶ್ ಗೌರ್ ಅವರು, ಆನಂದ ಸಿನೆಮಾದ ಸಂದರ್ಭದೊಟ್ಟೊಟ್ಟಿಗೆ ಈ ಮೊದಲೇ ಸಂಯೋಜಿತವಾದ ಸಂಗೀತಕ್ಕೆ ತಕ್ಕಂತೆ ಬರೆಯುವ ಪಣವನ್ನು ಸಹಾ ಏಕಕಾಲದಲ್ಲಿ ಸುಲಲಿತವಾಗಿ ನಿಭಾಯಿಸಿದ್ದಾರೆ ಎನ್ನಬಹುದು. ಅವರಿಗೆ ನಮ್ಮ ನಮನಗಳು.
ಸುಂದರವಾದ ಭಾವಾನುವಾದ, ಅಭಿನಂದನೆಗಳು.
ReplyDeleteಕಾಕ! ದೂರದ ಸಹೃದಯರೊಬ್ಬರು ಸ್ವಪ್ರೇರಣೆಯಿಂದಲೇ ಬಂದು ಓದಿ ತಿಳಿದು ಆನಂದಿಸಿ ಮಾಡುವ ಒಂದು ಸಾಲಿನ ಪ್ರತಿಕ್ರಿಯೆ, ಹತ್ತಿರವಿದ್ದರೂ ಓದದೇ ಮೂಗುಮುರಿಯಬಲ್ಲ ಇತರ ಬಗೆಗಿನ ಇರಿಸುಮುರಿಸುತುರಿಸುಗಳನ್ನೂ ಓಡಿಸಬಲ್ಲದಲ್ಲವೇ!! ತಪ್ಪದೇ ಬಂದೋದಿ ಪ್ರತಿಕ್ರಿಯಿಸುವ ನಿಮಗೆ ಸಂತೋಷಪೂರ್ವಕ ಧನ್ಯವಾದಗಳು :)
Delete