ಕೈಲಾಶ ಖೇರರ ಗಾಢವಾದ ಗಾಯಕಿಯಲ್ಲಿ
ಕಾಡುವಂತೆ ಧ್ವನಿಸಲ್ಪಟ್ಟಿರುವ
ರಮ್ಯ (ಸೂಫಿ-ಆಧ್ಯಾತ್ಮಿಕ?) ಪ್ರತಿಮೆಗಳ
ಒಂದು ಚಿಕ್ಕ ಚೊಕ್ಕ ಗೀತ
------
Original Song (Hindi):
Meetha sa Ishq Lage
Lyricist: VIRAG MISHRA
Artists: - KAILASH KHER
· SUZANNE D'MELLO
· BAPPA LAHIRI
Movie: A-Flat (2010)
--------
ಸಿಹಿಯಾಗಿ ಒಲವನ್ನಿಸೋದು
ಅಗಲಿಕೆ ಕಹಿಬೇವು
ಸ್ನೇಹವೆನದದುವೆ ದಿಟವೊ
ಹುಸಿಯೊಂಟಿತನವು
ಬೆಳದಿಂಗಳನ್ನ ಮೇಲೆ
ಚಾದರ ಹೊದ್ದಿಸಿತೊ
ಹೊದ್ದೆಯೇನು ನೀನು ಎನ್ನ
ಉಸಿರು ಮರಳಿ ಬಂದಿತೊ
ಮದರಂಗಿ ಬಣ್ಣ ಹಾಗೇ ಗಾಢವಾಯಿತೊ
ಒಂದು ಕ್ಷಣದಿ ಹಾ ಏನಾಯಿತೊ
ಗೆಜ್ಜೆಗಳಾ ಸದ್ದು ಹೇಗೆ ನಿತ್ತುಬಿಟ್ಟಿತೊ
ಒಂದು ಕ್ಷಣದಿ ಹಾ ಏನಾಯಿತೊ
ಮನ ಒಪ್ಪದೊ
ಏನೂ ತಿಳಿಯದೋ
ಹುಚ್ಚು ಪತಂಗ ಹಾರ್ವುದೋ
ತಾನ ಧಿರತಾನ ತಿರತಾನ ಧಿರನ ತೊಂ
ಮಾತಿಲ್ಲದೇನೆಲ್ಲಾ ಹೇಳಿಬಿಟ್ಟನೊ
ರಾತ್ರಿ ಪೂರ ಮಥಿಸುತಿದ್ದೆನೊ
ದೇವದೂತನೋರ್ವನೆನ್ನ ತಡವಿ ನಡೆದನೊ
ಯಾರದು ನಾ ಅರಸುತಿದ್ದೆನೊ
ಮನ ಒಪ್ಪದೊ
ಏನೂ ತಿಳಿಯದೋ
ಹುಚ್ಚು ಪತಂಗ ಹಾರ್ವುದೋ
ತಾನ ಧೀಂ ತಾನ ಧಿರತಾನ ಧಿರನ ತೂಂ
*****
No comments:
Post a Comment