ಶುಕ್ರವಾರ, ಫೆಬ್ರವರಿ 14, 2025

ಝೆಪ್ಪಲೀನರ ಜೋಗಿ: 'ಸ್ವರ್ಗಕ್ಕೇಣಿ'

Stairway to Heaven" by  Led Zeppalin
https://en.wikipedia.org/wiki/Stairway_to_Heaven

For original lyrics :
https://duckduckgo.com/?&q=stairway+to+heaven+lyrics

Song:
https://www.youtube.com/watch?v=IS6n2Hx9Ykk



ನೋಡಿ, ಇಲ್ಲಿ ನಮಗೆ ನೆನಪಾಗಬೇಕಾದ ಅತ್ಯುತ್ಕೃಷ್ಟ ಕಾವ್ಯ, ಅಂದತ್ತರ 'ಜೋಗಿ':
https://sallaap.blogspot.com/2008/04/blog-post_15.html

*********************************

ಝೆಪ್ಪಲೀನರ ಜೋಗಿ: 'ಸ್ವರ್ಗಕ್ಕೇಣಿ'


ಅಲ್ಲೊಬ್ಬಾಕಿ ತಿಳಿದಾಳ ಪಕ್ಕಾ
ಝಗಮಗ ಹೊಳಿಯೋದೆಲ್ಲಾ ನಗನಗ 
ಮತ್ತ ಆಕಿ ಕೊಳ್ಳುವಾಕಿ ಒಂದು ಏಣಿ
ಸ್ವರ್ಗಕ್ಕ

ಮತ್ತ ತಿಳದಾಳ, ಆ ಜಾಗಾದಾಗ    
ಮುಚ್ಚಿದ್ದರೂ ಎಲ್ಲ ದರವಾಜ
ಸಿಗತಾವ ಒಂದ್ ಆವಾಜ    
ಅರಸಿ ಬಂದಿದ್ದss... 


ಊ‌ಊಊss 
ಮತ್ತ ಆಕಿ ಕೊಳ್ಳುವಾಕಿ ಒಂದು ಏಣಿ ಸ್ವರ್ಗಕ್ಕ...


ಅಲ್ಲೊಂದ್ ಸೂಚನಾ ಅದ ಗೋಡಿ ಮ್ಯಾಗ
ಆದರ ಆಕೆಗ ಪಕ್ಕಾ ಮಾಡ್ಕೋಬೇಕ
ಯಾರಿಗ್ಗೊತ್ತ, ಬರ್ದಿದಕ್ ಒಮ್ಮೊಮ್ಮೆ
ಎರಡೆರಡರ್ಥ

ಹಳ್ಳದ ಪಕ್ಕದ ಮರದ ಮ್ಯಾಗ
ಅಲ್ಲೊಂದ ಹಕ್ಕಿ ಹಾಡುತೈತ
ಒಮ್ಮೊಮ್ಮೆ ನಮ್ ಎಲ್ಲಾ ಯೋಚನಿ
ತಪ್ ತಪ್ಪ...


ಮತ್ತ ಆಕಿ ಕೊಳ್ಳುವಾಕಿ ಒಂದು ಏಣಿ ಸ್ವರ್ಗಕ್ಕ...

ಊಊಊ ನನಗ ಯೋಚನೀ ಮಾಡಿಸ್ತೈತ...


ನನಗೊಂದು ಭಾವನಿ  ಬರುತೈತ
ಲಕ್ಷ ಹಾಯ್ಸುವಾಗ ಪಶ್ಚಿಮಕ್ಕ
ಮತ್ತ ನನ ಆತ್ಮ ಕೂಗತೈತ
ತೊರಿಯಲಿಕ್ಕ

ನನ್ನಾಲೋಚನೆಗಳಲೀ ಕಂಡೀನಿ
ಕಾಡ ಗೂಢ ಹೊಗಿಸುರುಳೀ
ಮತ್ತ ಧ್ವನಿಗಳೊ ಅಲ್ ನಿಂದು 
ಕಂಡೋರುದ್ದ ^†


ಊಊಊ ನನಗ ಯೋಚನೀ ಮಾಡಿಸ್ತೈತ


ಮತ್ತದೇನದ ಉಸುರಿದ್ದ
ನಾವೆಲ್ಲ ಗುನುಗೂ ಅಂತನಾ ಗೂಗಿದ್ದ
ಆಗ್ಗೇ ಜೋಗಿ ನಮ್ಮ ಕರೆದೊಯ್ವ
ತಿಳಿವೀಗ.

ಮತ್ತಾ ಹೊಸದಿನಾ'ನಾ ಹುಟ್ಟುತೈತ
ಅದಕಾ ಕಾದು ನಿಂದೋರ್ಗ
ಮತ್ತಾ ಕಾಡ ಪ್ರತಿಧ್ವನಿಸುತ್ತ
ನಗುವಿಂದ.

.....

ನಿಮ್ಮ ಬೇಲಿಸಾಲಲ್ಲೀಗ ಗಲಿಬಿಲಿ
ಅಂದರ ಗಾಬರಿಯಾಕ
ಬರೀ ಕಸಮುಸರಿ ರೀ   
ಮುಂದ ವಸಂತ ಬರಲಿಕ್ಕ 

ಹೌದ್ರೀ ನಿಮಗ ಮುಂದ ಎರಡ್ ಹಾದಿ
ಏನೀಗ
ತಡವೇನಲ್ಲ ಯಾವತ್ತೂ ಹಿಡಿದ ಹಾದಿ
ಬದಲಿಸಲಿಕ್ಕ   

ಮತ್ತ ನನಗ ಯೋಚನೀ ಮಾಡಿಸ್ತೈತ
ಓ ..

ನಿಮ್ಮ ತಲಿಯೊಳಗಿನ ಈ ಗುಂಗು 
ಹಂಗ ಹೋಗಾಂಗಿಲ್ಲರೀ
ಇಲ್ಲಿ ಸೇರು ಬಾರ ಅಂತ ಜೋಗೀ-
ನಾ ಕರದಾನರೀ

ಪ್ರಿಯ ಸಖೀ ನೀ ಕೇಳ ಇಲ್ಲಿ
ಮೆಲ್ಲಗ   
ಸುಳಿವೀ ಗಾಳಿ
ನಿನ ಸುರುಳಿ ಸುತ್ತಿನೇಣಿಗೆ   
ತಳಹದಿ
ಈ  ಪಿಸುಗಾಳಿ!



****

ಹಾಂಗ ಹಾದಿಯಲಿಳಿಯುತ ಹೋದ್ಹಾಂಗ^‡
ನಮ್ಮ ನೆರಳುಗಳು ನಮ್ಮಾತ್ಮಗಳ ಮೇರೆ ಮೆರೆದ್ಹಾಂಗ 
ಅಲ್ ನಡೆವಳು ನಮ್ಮ ಗುರುತಿನ ಈ ಸಖಿಯು 
ತೋರುವವಳು ಝಗಮಗ ಬೆಳ್ಳಂಬೆಳಗಿಸಿಯು  
ಹ್ಯಾಂಗ ಇನ್ನೂ ಎಲ್ಲಾ ಚಿನ್ನವಾಗಬೋದು 
ಮತ್ತ ಪ್ರಯತ್ನಪಟ್ಟು ಆಲೈಸಿದರ ಕೊನೆಗೂ
ಜೋಗಿಯ ಕೂಗು ಕೇಳಿಸೋದು  ನಿಮಗೂ  
ಆ ಹೊತ್ತು ಒಂದು ಎಲ್ಲವೂ, ಒಂದೇ ಯಾವತ್ತು   
ಉರುಳದೇ ಕಲ್ಲಾಗಿರಲು ಯಾವೊತ್ತೂ


ಮತ್ತ ಆಕಿ ಕೊಳ್ಳುವಾಕಿ ಒಂದು ಏಣಿ ಸ್ವರ್ಗಕ್ಕ...



*************************************
‡ಭುವಿಯೇ ಸ್ವರ್ಗವೆಂದಲ್ಲಿ ಸ್ವರ್ಗದೇಣಿಯನ್ನ ಇಳಿದುಬರುವುದಲ್ಲದೇ ಹತ್ತುವುದೇ ಮತ್ತೆ..!
† ಕಂಡವರಿಗಲ್ಲೊ ಕಂಡವರಿಗಷ್ಟೆ ತಿಳಿದದಾ....


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ