Wednesday, February 23, 2011

ಅದರರ್ಥಹೀನತೆ

ಆಕಾಶಬೀದಿಯಲಿ ವಿಹಗವಿಹಾರ
ತೂರಿ ತರಗೆಲೆಯಾಗಿ ತೇಲಿ ಪಟವಾಗಿ
ಮೀರ ಹೊರಟುದದು ಬದುಕೆಂದೆಯಾ...
ಹಾರಾಟವಿದು ಹೋರಾಟವೆಂದೆಯಾ.

ಬದುಕ ಹುಚ್ಚು ಹರಿವುಗಳಲಿ
ಅನೂಹ್ಯ ದೊರಕಲು ಕೊರಕಲುಗಳಲಿ
ಅಲೆ ಏರಿಳಿದು ಅಲೆದಲೆದು...
ಅಂತ ಶಾಂತೋದಧಿಯೆಂದೆಯಾ
ತಿರುಗಿ ಮೇಘದಿ ನಿಂದೆಯಾ...

ಬಚ್ಚ ಬಯಲಲಿ ತಿರುಗಾಟ
ಅದರರ್ಥಹೀನತೆ ಪರಮಾರ್ಥ
ಮರುಳಾದುದೇ ತಿರುಳೆಂದೆಯಾ...
ಇರುಳ ಮಬ್ಬುಗತ್ತಲಲಿ 
ಬರಿದೇ ಬತ್ತಲಾದೆಯಾ..?..

3 comments:

  1. ದುರಹ೦ಕಾರಿಗಳೆ..[ಹಾಗೇನೂ ಅನ್ನಿಸಲಿಲ್ಲ..]
    ನಿಮ್ಮಕವಿತೆಗಳು ಚನ್ನಾಗಿವೆ..ಕೆಲವೊ೦ದನ್ನು ನನ್ನದೇ ಭಾವದಲ್ಲಿ ಅರ್ಥ ಮಾಡಿಕೊ೦ಡಿದ್ದೇನೆ!

    ನಿಮ್ಮ ಬ್ಲಾಗ್ ಹೆಸರು ಮಾತ್ರ ನನಗೆ ಸೋಜಿಗವನ್ನು೦ಟು ಮಾಡುತ್ತಿದೆ!

    ವ೦ದನೆಗಳು.

    ReplyDelete
  2. ಕ್ಷಮಿಸಿ..
    ನಿಮ್ಮ ಬಳಕೆಯ ಹೆಸರು’ದುರಹ೦ಕಾರಿ’ ಅನ್ನುವುದರ ಬಗ್ಗೆ ಅಚ್ಚರಿ..
    ಬ್ಲಾಗ್ ಹೆಸರಿನ ಬಗ್ಗೆಯಲ್ಲ..

    ReplyDelete
    Replies
    1. ನಿಮ್ಮ ಅಚ್ಚರಿಯ ಅರ್ಚರಿಗೆ ಉತ್ತರಸ್ವರೂಪವೇನೋ ಎಂಬಂತೆ ಕೂಡ "ದುರಹಂಕಾರಿತ್ವ" ಅಂತ ಒಂದು ಡಿಸ್ಕ್ಲೇಮರು ಆಗಿದ್ದು ಉಂಟು: http://neer-nirartha.blogspot.in/p/blog-page_30.html .

      ಪ್ರತಿವ೦ದನೆಗಳು

      Delete