Sunday, February 25, 2018

ವರ್ತನೆಯೊಳಾವರ್ತವರ್ತವರ್ತನಿಸಿ..

               ( ಆವೃತ್ತಿ  - ೧.೨೩)
--------------------------------------------------------


ನಗರಗಳೊಳಗೆ, ನಾಗರೀಕರೊಂದಿಗೆ ಬೆರೆಕೆ
ಯಾಗಿಹೋಗುತ್ತ ಬದುಕು, ಕಾಗೆ ಗೂಗೆ
ನಾಯಿ ಬೆಕ್ಕು ಮೈನ ಗುಬ್ಬಿಗಳಂತೆ

ಲತೆಯು ಪಾಂಗಿನಲ್ಲಿ ಗಂಟಿಯನ್ನಪ್ಪುತ್ತ ಸುತ್ತುತ್ತ ಬೆಳೆಯುತ್ತೆ
ಡ್ರಿಪ್ಪಿನ ತೊಟ್ಟಿಕ್ಕುವ ಲಯಕ್ಕೆ
ಮನ್ಸೂರೆ ಹಾಡತೊಡಗಿರುತ್ತಾರೆ ಪ್ರಜ್ನೆಯ
ಯಾವುದೋ ಪಾತಳಿಯಲ್ಲಿ, ಕೆಲವೇ ಚದುರದಂಗುಲಗಳಷ್ಟು ಮಣ್ಣಿಗೆ
ಅನುವಾಗುವಲ್ಲಿ, ಜೀವದಜಾಡು ಆ ಸಿಮೆಂಟುಸಾರಿಸಿದಂಗಳದಲ್ಲಿ
ಇನ್ನ್ನೂ ಮರವಾಗುವ ಹಾದಿಗುಂಟ ಒಂದು ನೇರಳೇ
ಗಿಡ, ಇರುವೆ ಜೇನುಹುಳ ಇಣಚಿಯಂತ ಒಂದು ಪರಿಸರ
-ವ್ಯವಸ್ಥೆಯಾಗಿರುತ್ತೆ, ಅಲ್ಲಿ, ಆ ಕಾಂಕ್ರೀಟುವನದಲ್ಲಿ
ಪಾರಿವಾಳವೊ ಗೂಡುಕಟ್ಟಿರುತ್ತೆ ಕಬ್ಬಿಣದ ಕಂಬಿಗಳಲ್ಲಿ
ಪಿಷ್ಟಿಗೊಬ್ಬರದುಂಬಿಸೋವಲ್ಲಿ ಹೊರಕಿರಿದ ಅಶ್ವತ್ಥವೊಂದರ
ಬ್ರಹ್ಮರೂಪಾಯ ಬೇರುಗಳ ವಿಲೋಮಚಲನೆ
ಅಥವಾ ಕಟ್ಟೋಣಗಳ ನಿರಂತರ ನಿರಚನೆ
ಪುನಾರಚನೆ

ಈ ಗೊಂದಲಪುರದಲ್ಲಿ ಪುರ-
ಸಂಚಲನವೊಂದಕ್ಕೀಡಾದಂತೆ ಟ್ರಾಫಿಕ್ಕು
ಹಾಗ್ಗೆ ತಗುಲ್ಹಾಕ್ಕೊಳ್ಳೊದೇ
ಸಿಕ್ಕು, ಕಾದುಕುದಿವಂತೆಯರ್ಥ
-ಹೀನತೆ, ಡಿಫ್ಯೂಸಾಗುತ್ತೆ ನಿಧಾನ
ಉಕ್ಕಿ ಚೆಲ್ಲುತ್ತೆ.

ಆ ನಿಲುಗಡೆಯಿಲ್ಲದ ನಿಲ್ದಾಣದಲಿ ನಮ್ಮ ನಿಲ್ಲದೋಡುವ ರೈಲಿಗೆ
ಋಜುವಾದ ಹಸಿರುನಿಶಾನೆ ಬೀಸುವ ಸ್ಟೇಷನ್ಮಾಸ್ತರ
ಹೀಗೆ  ನಮಗೆ ಕೋಳಿ ಕೂಗಿಯೇ ಬೆಳಗು ನಿಜದಲಿ
ಎಂದುಬಿಟ್ಟ ರೈಲಿಗೆ ಇಲಿಗಳ ಹಾದಿಹಿಡಿದೊಂದು ಇಣಚಿಯೂ ಬಂದು
ನಿಂದಲ್ಲಿ ಬಾಗಿಲವರೆಗೆ ಹೋದರೂ, ಬೋಗಿದಾಟದು.
ಏನಿದಾಟವು?
ಸೀಮೆಗಳು ಆಕ್ಸಿಡೆಂಟಲೇ ಆದರೂ ಯಾವತ್ತು, ಕಷ್ಟವೇ,
ಕಾಸ್ಟವೇ ಎನುವ  ಸೀಮೋಲ್ಲಂಘನಯಾನವು.

ಅಲ್ಲಿ ತುದಿ ದಿಗಂತದಿ ಹರಳುಗಟ್ಟಿದ ಘನಸಮುದ್ರದಲೊಂದೆಡೆ
ಸೆಲೆಯೊಡೆವ ಕಾಚಿದರುಣಮಧ್ಯಗವಿದಂತಃಸ್ಥಿತಿ
-ಗತಿ
ದಕ್ಕಿಸಿಕೊಳ್ಳುವಾಟಕ್ಕೆ ಓಂ ಸ್ವಸ್ತಿ.

ಅಥವಾ,

ಪ್ರಕೃತಿ-ಪುರುಷನಂತ ಸಿಮೆಟ್ರಿ
ಬ್ರೇಕಿಂಗ್ನಲ್ಲಿ ವೈಲೇಟಾದ ಚಾರ್ಜ-ಪಾರಿಟಿ
ಯನ್ನ ಕಾಲವೇ
ತಿರುಗಿ ಸರಿಪಡಿಸುತ್ತಂತೆ.


------------------------------------------------
ಈಗ್ಗೆ ನಾಲ್ಕೈದು ವರ್ಷಗಳಿಂದ ಬರೆಯುತ್ತ ಬಂದಿದ್ದು ..,
ಇನ್ನೂ ಮುಂದುವರಿಯಲಿಕ್ಕಿರುವಂಥದ್ದು.  

ದೂರ ಮೀರು; ದಾಹ ತೀರು

ದೇಹದೂರ ಮನಸುಭಾರ
ಋಣವು ತೀರಿ ಹೋಯಿತೇ
ಒಲುಮೆ ತೆರೆಯು ಇಳಿಯಿತೇ

ದಿನದಿ ನೆನಪು ರಾತ್ರಿ ಕನಸು
ನಿನದೆ ಸುತ್ತ ಹರಿದಿದೆ
ಮನದ ಪರದೆ ಹರಿದಿದೆ

ಪಾರತೊರೆವ ತೊರೆಯ ತೀರ
ತೆರೆತೆರೆಯೂ ಚೀರಿದೆ
ದಾಹ ತೀರದಾಗಿದೆ

ತೆವಳು-ಬುದ್ಧಿ ತೆವಲು-ತೀವ್ರ
ಇಹಪರಗಳ ಮೀರಿದೆ
ಹೃದಯ ಕಿವಿಗೆ ಬಡಿಯದೇ

ಫಳಫಳ ನಿನ್ನೆದೆಹೊಳೆಯಲಿ ನಾ
ನೊಳಸುಳಿಯಲೀ ಸಿಲುಕಿಹೆ
ಸೆಳಕೊಳ್ಳಬಾರದೇ
                    ಎನ್ನ ನೀ
                          ನೆಳಕೊಳ್ಳಬಾರದೇ


                                                         ~~ಪೃಥ್ವಿರಂ

==========================
ದಶಕವೊಂದರಷ್ಟು ಹಿಂದೆ 
ಗೆಳೆಯರೊಬ್ಬರ ಹನಿಗವಿತೆಯೊಂದರ ಮೇಲೆ
ಇಂಪ್ರೋವೈಸಿದ್ದು.  ಅವರು ಬರೆದ್ಮುಗಿಸಿದ ಮೊದಲ ಸಾಲುಗಳಲ್ಲೇ ತೆರೆ ಬಿದ್ದಿದ್ದರೂ ನಂಥರ
ತೆರೆದ ಸಾಲುಗಳು ಏನೋ ತದ್ವಿರುದ್ದವಾಗಿ ಬಿದ್ದ ಹೆದ್ದರೆಯನ್ನು ಮತ್ತೆಬ್ಬಿಸುವಂತೆ ಕಾಣುತ್ತಿದೆ
-ಯೆಂದರೆ, ಅದೂ ಸರಿಯೇ 
ಅಲ್ಲವೇ..!  
ಇದೆಲ್ಲ ಡಿಸ್ಸೊನೆನ್ಸು ಇಂಕೋಹರೆನ್ಸುಗಳನ್ನು ಇ
-ಸ್ತ್ರೀ ಹೊಡೆಯ
ಲೆತ್ನಿಸುವವರಿದ್ದರವರಿಗೆಂದಿನಂತೆ ಈ ಬ್ಲಾಗಿಲಿನಗಸಿಯ 
                                                                      ಸರ್ಜನೀಯ-ಸಾಮಾನ್ಯ
                                                                          -ಸ್ವಾಗತವು  ಅಂಡರ್ಸ್ಟುಡ್ಗತವು!

Saturday, February 24, 2018

ಸಿನಿಮೀಯ - ೧


-:ಲೂಸಿಯಾ:-

ವಾಸ್ತವದಿ
ನಾನು
ಕನಸಿದಂತೆ
ಒಂದು
ಕನಸನರಸುವಂತೆ
ವಾಸ್ತವದಲೊಂದು
ಕನಸಿನೊಳಗೆ
ಕನಸಾಗಿ...

ಸಾಕು ಮುಗಿಸೋಣವಂತ
ಬಿದ್ದ ಪತನ
-ವಾಸ್ತವದಿ
ಕನಸು ಮುರಿಯಿತು.

******

-:BirdMan:-

..And yet
the bird appeared
flushing upon the shithole
The Man flew.

Phir se udd chala mein!


*****



Saturday, February 10, 2018

ಸಂತೆಯೊಳಗಣ ಏಕಾಂತ; ದುರಂತೋ!

==============================================================

ಅರ್ಥವಾಗದಂತರ್ಥಗಳಯಿಕ್ಕಟ್ಟಿಂದ ಹೊರಗಣ
ಹುಡಕಿ ಹೊರಟೂ ಸಿಗದ ಮಾತುಗಳ ಕೇಆರ್ 
ಮಾರ್ಕೆಟ್ಟಿನ ನಡುವಣ 
ಮಟಮಟ ಮಧ್ಯಾಹ್ನಮೌನದಿ ಕಾದುಕುದಿವಲ್ಲಿ ಧಿಗ್ಗನೊಮ್ಮೆ
ಮೊಳೆದ ಶಿಖರಾಂತ್ಯಕ್ಕೊಂದ್ಮೂರುಮೊಳ 
ಕಥೆಗವಿತೆ ನೇಯುವಾಂತ...
ಸಂತೆಯಾರುವುದರೊಳಗೆ.

   -------------------------------------------------------------------------------------------    

                                         ಸಾಹಿತ್ಯಳ ಸಾಥ್                             ಸಾಹಿತ್ಯಳ ಸನ್ನಿಧಿ
                                         ರಾಹಿತ್ಯದ ರಾತ್                            ರಾಹಿತ್ಯದ ರಾತ್ರಿ 
                                      ಅನಹೋನೀ ಬಾತ್                      ಯಾಗಿಹೋಗದ ಮಾತುಗಳಲಿ

-------------------------------------ಊಹೂಂ-------------------------------------

ಕಾವ್ಯಗನ್ನಿಕೆಯ ಗಲ್ಲಿಗಳಲಿ
ಅನೂಹ್ಯ ಜರಕು ಕೊರಕಲುಗಳಲಿ
ಲಯಲಾಲಿತ್ಯವೇರಿ ತೂರಾಡುತ್ತ
ಭ್ರಾಮಕರೂಪಕ ಉಪಮಾಸಂಗತ
ಶೋಭಿತ ಪದ ಮದ್ದಾನಿ ನುಗ್ಗಿ 
ಬಂದೀತನ್ನುವಷ್ಟರಲ್ಲೇ  ಹೋ
..ದಂತ
 ದುರಂತೋ.


==============================================================


:ಉಪಸಂಹಾರ:
ಬೆಂದಕಾಳೂರಿನ ಸಂದಿಗೊಂದಲವೇ  ಗಾಂಡುಗಾಬರಿಸಿದಲ್ಲಿ
ದೀದಿಯೂರ ಬೀದಿಯಬ್ಬರಮಧ್ಯೇ  
----------!ಟ್ರಾಂ!--------- 
ಬೇರೆಯುಬ್ಬರಿಸೋದುರಂತೋ 
                ವೇ.


ಅಥವಾ ಶೀಘ್ರಸ್ಖಲನ