==============================================================
ಅರ್ಥವಾಗದಂತರ್ಥಗಳಯಿಕ್ಕಟ್ಟಿಂದ ಹೊರಗಣ
ಹುಡಕಿ ಹೊರಟೂ ಸಿಗದ ಮಾತುಗಳ ಕೇಆರ್
ಮಾರ್ಕೆಟ್ಟಿನ ನಡುವಣ
ಮಟಮಟ ಮಧ್ಯಾಹ್ನಮೌನದಿ ಕಾದುಕುದಿವಲ್ಲಿ ಧಿಗ್ಗನೊಮ್ಮೆ
ಮೊಳೆದ ಶಿಖರಾಂತ್ಯಕ್ಕೊಂದ್ಮೂರುಮೊಳ
ಕಥೆಗವಿತೆ ನೇಯುವಾಂತ...
ಸಂತೆಯಾರುವುದರೊಳಗೆ.
-------------------------------------------------------------------------------------------
ಸಾಹಿತ್ಯಳ ಸಾಥ್ ಸಾಹಿತ್ಯಳ ಸನ್ನಿಧಿ
ರಾಹಿತ್ಯದ ರಾತ್ ರಾಹಿತ್ಯದ ರಾತ್ರಿ
ಅನಹೋನೀ ಬಾತ್ ಯಾಗಿಹೋಗದ ಮಾತುಗಳಲಿ
-------------------------------------ಊಹೂಂ-------------------------------------
ಕಾವ್ಯಗನ್ನಿಕೆಯ ಗಲ್ಲಿಗಳಲಿ
ಅನೂಹ್ಯ ಜರಕು ಕೊರಕಲುಗಳಲಿ
ಲಯಲಾಲಿತ್ಯವೇರಿ ತೂರಾಡುತ್ತ
ಭ್ರಾಮಕರೂಪಕ ಉಪಮಾಸಂಗತ
ಶೋಭಿತ ಪದ ಮದ್ದಾನಿ ನುಗ್ಗಿ
ಬಂದೀತನ್ನುವಷ್ಟರಲ್ಲೇ ಹೋ
..ದಂತ
ದುರಂತೋ.
ದುರಂತೋ.
==============================================================
:ಉಪಸಂಹಾರ:
ಬೆಂದಕಾಳೂರಿನ ಸಂದಿಗೊಂದಲವೇ ಗಾಂಡುಗಾಬರಿಸಿದಲ್ಲಿ
ದೀದಿಯೂರ ಬೀದಿಯಬ್ಬರಮಧ್ಯೇ
----------!ಟ್ರಾಂ!---------
ಬೇರೆಯುಬ್ಬರಿಸೋದುರಂತೋ
ವೇ.
ಅಥವಾ ಶೀಘ್ರಸ್ಖಲನ
ದೀದಿಯ ದುರಂತೋ ಎಕ್ಸಪ್ರೆಸ್ಸು ಕೋಲಕಟ್ಟೆಯಿಂದ ಬೆಂದಕಾಳೂರಿನವರೆಗೆ ಹಾದಿ ತಪ್ಪಿ ಬಂದಂತಹ ಪ್ರಯಾಣ ಸ್ವಾರಸ್ಯಕರವಾಗಿದೆ. ಪಯಣ ಮುಂದುವರೆಯುತ್ತಿರಲಿ.
ಪ್ರತ್ಯುತ್ತರಅಳಿಸಿಧೊನ್ಯೊಬೋದ್!
ಅಳಿಸಿ