ಕಟ್ಟಿಗಿ ಉರಿದು ಕೆಂಡವಾಕೈತೋ
ಕೆಂಡವಾಕೈತೊ
ಬೂದಿ
ಎದಿ ಉರಿದರೇನಾಗತೈತೊ
ಹೊಗಿಯಿಲ್ಲ ಬೂದಿಯಿಲ್ಲ
ಎದಿ ಉರಿಸಬ್ಯಾಡಿರೋ ಲೇ
ಹಾಯೇ
ಎದಿ ಉರಿಸಬ್ಯಾಡಿರೋ ಲೇ
ಬರ್ಫ ಕರಗಿ ನೀರಾಗತೈತೋ
ನೀರ್ಮೋಡವಾಗಿ ಹಾರಿ ಹೋಕೈತೋ
ನೋವು ಎದಿಯಾಗ ಹಿಂಗ ಕುಂತೈತೋ ಕುಂತು
ಕುಂತೈತೋ ಕುಂತು ಕುಂತೈತೋ ಹಿಂಗ ಕುಂತs ಐತೋ
ಕರಗಾಕಿಲ್ಲೋ ಹರಿದೋಗಾಕಿಲ್ಲೋ..
*
ನದಿಯಾಗ ಕೊಚ್ಚಿ ಹೊಂಟಾರೆ ತೀರಕ್ಕ
ಕೂಗಿ ಕರಿಬ್ಯಾಕೋ ಬಿಡದಾ ಕರಿಬ್ಯಾಕೋ
ಹೋ ..
ಎದಿ ಉರಿಸಬ್ಯಾಡಿರೋ ಲೇ...
ಹುಸಿವಚನ ಎಲ್ಲ ಮಾತೂ
ಹಾಯ್
ಹುಸಿವಚನ ಎಲ್ಲ ಬರಿ ಮಾತೂ
ಒಂದು ಋತು ಮಳಿ ನೀರು
ಸುರಿದು ಸುರಿದು ಎಲ್ಲ ಹರಿದ್ಹೋಕೈತೋ
ಎಲ್ಲ ಹರಿದ್ಹೋಕೈತೋ
ಕಣ್ಣಿಂದ
ಜೀವ ಸೆಲೆಯೂ..
*
ಮಳಿಯಿಂದೀ ದಾಹ ಎಲ್ ತೀರತೈತೋ
ಜೀವ ಹಚ್ಚಬ್ಯಾಡೋ ಎದಿ ಹಚ್ಚಬ್ಯಾಡೋ ಲೇ..
ಹೋ ...
ಎದಿ ಉರಿಸಬ್ಯಾಡಿರೋ ಲೇ...
ಎದಿ ಹಚ್ಚಬ್ಯಾಡಿರೋ ಲೇ...
ಎದಿ ಉರಿಸಬ್ಯಾಡಿರೋ ಲೇ
ಹಾಯೇ
ಮಂಗಳವಾರ, ನವೆಂಬರ್ 25, 2025
Laakad Jal Ke | ಎದಿಯುರಿಸಬ್ಯಾಡಿರೋ ಲೇ | Omkara | Othello
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ