Thursday, April 18, 2013

ಆಧುನಿಕ ಕವಿಕಾವ್ಯಕ್ಲೀಷೆಗಳು

ವರ್ಷಗಳುರುಳಿದಂತೆ ತಲೆ
ತಳೆಯದ ಖಾಚಿತ್ಯ ವರ್ತನೆ
ಯೊಳಾವರ್ತವರ್ತವರ್ತನಿಸಿ
ಬಂದು ಅನಾಮತ್ತು ಡಬ್ಬಲೊಂದು
ಡಬ್ಬಲು ಜೀರೋನೆತ್ತಿ ತಾನೇ
ತಾನಾಗಿ ಕ್ಲಾಸಿಕ್ಕು
ಹಾವಾಡಿಸುತ್ತ ಸುತ್ತ ಸುತ್ತಲೂ ಸಿಕ್ಕು
ಸಿಕ್ಕಾಗಿ ಕೂತಂತೆ ಕೆಲಸವಿಲ್ಲ ಕಾರ್ಯವಿಲ್ಲೆಂಬಂತೆ ಸಿಕ್ಕು
ಬಿಡಿಸೋ ವಿದ್ಯೆ ಜನ್ಮಜಾತದಂತಾಗಿ ಮೆದುಳಿಗೆ
ಸ್ಕ್ರೀನುಸೇವರಿನಂತೆ ಮೇಲ್ನೋಟಕ್ಕೆ
ಸಿಗದಂತೆ ಬ್ಯಾಗ್ರೌಂಡಲ್ಲಿ ಹರಿಯುತ್ತೆ ಅಖಂಡ
ಲಹರಿಯೊಂದು ಮತ್ತೆ ಮುಂದು
ವರಿಯುತ್ತೆ (ಹೀಗೆಯಾದರೆ ನಾ
ಫಿಜಿಕ್ಸು ಮಾಡೋದೆಂದಿಗೆ ಮತ್ತೆಯಂತ ಚಿಂತೆ ಬೇರೆ
ಯೆಳೆಯಲ್ಲಿ ಸಮಾಂತರ ಹರಿ ಹರಿಯುತ್ತ ಕ್ಷೀಣ
ಆದ್ಯತೆಗಳಲ್ಲಿ) ಹಾಳಾಗಲಿ ಈ ಒಂದು
ಲಯ ವಿನ್ಯಾಸ ಛಂದಗಳನ್ನೋದದೇಕೆ ಹಾಗೆ
ತಲೆ ಸೆಳೆಯುತ್ತದಂತ
ಸಿಂಟ್ಯಾಕ್ಟಿಕಲಿ ಭಂಗಿಸಿದರೂ ಶನಿಪಿಶಾಚಿ
ಯಂತೆ ಯಂತದ್ದೋ ಪ್ಯಾಟ್ಟರ್ನು ಪುನರಾವರ್ತ
ಸಿಮ್ಯಾಂಟೆಕ್ಕಿನ ಮಟ್ಟದಲಿ ಹಂಗಿಸುತ್ತೆ ಮತ್ತದೇ
ಧಾಟಿಯ ಸಾವಿರ ಕಾವ್ಯವೆಂದು ಬರೆಸುತ್ತೆ ಅಟೊಮೆಟಿಕಲಿ
ಕರಣ ಹಾವಾಡಿಸಲು ಪ್ರವೃತ್ತಿಸುತ್ತೆ ಹಾಗೆ
ಬರೆದಿದ್ದರ ವಿನ್ಯಾಸ ಮುಚ್ಚಿಹಾಕಲು ಅದೇ
ಹಳೇಯ ಬೌದ್ಧಿಕ ಕಸರತ್ತಿನ ಮಾರ್ಪಾಡುಗಳು ಮತ್ತೆ
ಇಷ್ಟಕ್ಕೂ, ಹೇ, ಆಧುನಿಕ
ಕಾವ್ಯವೆಂದರೇನು? ಗದ್ಯವೊಂದು ಕೂಡ ಕಾವ್ಯ
ವಂತನಿಸೋವಲ್ಲಿಗೆ, ಬರೆದ ಕವನಗಳು ವಾಚ್ಯ
ಗದ್ಯವೆನಿಸೋ ಹೊತ್ತಿಗೆ? ಬರೀತ ಮೂಲ
ಧಾತುಗಳ ಕರ್ಮಗಳ ಮೆರೆದು
ವಿಭಕ್ತಿ ಕರ್ತೃ ಎಲ್ಲ
ಮರೆದು ಸಮಾಸ ನಿಷ್ಪತ್ತಿ ಸಂಧಿ
ವಿಗ್ರಹಗಳ ಅಡ್ಡ
ಗೋಡೆ ಮೇಲಿಟ್ಟ ಉದ್ದೇಶಪೂರಿತ ಮಬ್ಬುತನಕ್ಕೆ
ಅಮೂರ್ತ ಬಹುಅರ್ಥಪೀಡಿತವಂತ ಸಂ
ಭ್ರಮಿಸಿ ತನಗೇ ಗೊತ್ತಿಲ್ಲದ ಪ್ರಶ್ನೆ
ಮೂಡಿದಂತಾಗುವಲ್ಲಿ ಬಾಲರ ಪ್ರತಿಭೆಯಲ್ಲಿ ಉತ್ತರ
ತರಿಸೋ ಭೂಪ, ಕಂತ್ರಿ, ಪ್ರಾಧ್ಯಾಪಕ-
ಬುದ್ಧಿ! ಶಡ್ಡೌನಾಗಬಾರದೇ ಸಡನ್ನಾಗಿ
ಕರೆಂಟು ಕಟ್ಟಾಗಿ...
....._____.....

3 comments:

  1. ಜೋಗದ ಧಬಧಬೆಯಂತಹ ಕವನ! ಓದುವಾಗಲೇ ಸೋತು ಹೋದೆ. ನನ್ನ ದುರಹಂಕಾರ ನುಚ್ಚು ನೂರಾಯಿತು!

    ReplyDelete
    Replies
    1. ಏನೆಂದು ಹೇಳೋಣ... ದುರಹಂಕಾರಿಗಳ ದುರಹಂಕಾರ ಇಮ್ಮಡಿಸಿತು!

      Delete
  2. ಈ ಕೆಲವು ವಿವರಗಳನ್ನು ನಾವುಗಳು ನೀಡುವುದು ನೀಡೆಡ್ಡೇನೋ... :

    ಡಬ್ಬಲೊನ್ ಡಬ್ಬಲ್ಜೀರೋ ಅನ್ನುವುದು ನೊಕಿಯ ಕಂಪನಿಯ ಒಂದು ಹಳೆಯ (ನಿಜಕ್ಕೂ ಕ್ಲಾಸಿಕ್ಕು) ಮೊಬೈಲು ಸಾಧನ. ಅದರಲ್ಲಿ ಸ್ನೇಕ್ ಕ್ಲಾಸಿಕ್ ಅನ್ನುವ ಒಂದು ಬಹಳವೇ ಗೀಳು ಹಿಡಿಸುವ "ಸರಳ" ಆಟ. ಇದನ್ನು ಮಾನವನ ಕೈಗಳು ಅರೆಪ್ರಜ್ಣಾವಸ್ತೆಯಲ್ಲಿ ಕೂಡ ತಾನೇತಾನಾಗಿ ನಿರಾಯಾಸ ಆಡತೊಡಗುತ್ತಿದ್ದುದು ಸರ್ವೇ common ya!

    ReplyDelete