ಅರ್ಥವನ್ನೋದು ಹೆರ
ಸೆಳೆತದಂತೆ
(ತನ್ನ ಎರಡೂ ಅರ್ಥಗಳಲಿ ಕೂಡ)
ಹರಹಿನೊಳೆಲ್ಲೇ ಬಿದ್ದರೂ ಕಡೆಯಲಿ
ಮಿತಿಸುತ್ತನಪ್ಪೋದ್ದಂತೆ
ನಿಧಾನವಾಗಿ
ಚಲಿಸುತ್ತಲೇ ಇದ್ದುದಾದರೆ
ಹಾಗೆ ಬದಲಾಗುತ್ತಲೇ ಇರೋದಂತಾದರೆ
ಐಡೆಂಟಿಟಿಯರ್ಥ ಕಳೆದು
ಗೊಳ್ಳೋದೇ ಆಯ್ತು
ಥೀಸಿಯಸ್ಸನ ಷಿಪ್ಪಂತೆ
*****
ವ್ಯಕ್ತಿ ಕೇಂದ್ರದಲ್ಲೇ
ತಾನೇ ತಾನಾಗುಳಿದರೂ
ಮೂಲಾssಧಾರ ಬೀಜದಲ್ಲೇ
ಸ್ಪೋಟವಿದ್ದದರss ಕುರುಹಾಗಿ
ವಿಶ್ವಕಿರಣಸಮುದ್ರ ಹಿನ್ನೆಲೆಯಲಿದ್ದಂತೆ
ಅಲ್ಲಿ ಆಲದೆಲೆಯಲ್ಲಿ ತೇಲಿಕೊಂಡಿದ್ದಂತೆ
ಅಲೆಗಳಲ್ಲಿ ಏನೆಲ್ಲ ಬಂದು ಬಡಿಯುತಿರುವಂತೆ
ಶಬ್ಧಗದ್ದಲದ ಆ ಪರಿ
ಭಾಷೆಯಲಿ ಮತ್ತೆಯರ್ಥವನ್ನೋದಂತೂ ಶುದ್ಧ
ಸಾಂದರ್ಭಿಕ ವಿದ್ಯಮಾನವಂತೇss
******
ನಾವು ಗೂಡುತ್ತ ನಡೆವಂತೊಮ್ಮೊಮ್ಮೆ
ಯೊಂದರ್ಥ ಮೂಡಿದಂತಾಗುತ್ತೆ ಕೂಡ
ವಾದರದರಾಚೆಗೂ-
ಢ ಬಿಡಿ ಬಿಡಿ
ಬೈಫರ್ಕೇಟಾಗುತ್ತ
ದೂರ ಸರಿಯುತರ್ಥಗಳನಂತಾನಿಯತ
ಹಾರ್ಮೋನಿಕ ಸರಣಿಯೊಂದಂತೆ
ಕಡೆಗೋಲ ತಿರುತಿರುಗಿಸುತ ಹೊಡೆಹೊಡೆದಂತೆ
ಕೂಡಿಬಂದಂತೆ ಬೆಣ್ಣೆ
ಕರಕರಗಿ ಹೋಗುವುದಂತೇss
*******
---------------------------------------------------------------------------------------------
ಹಿಂನೆಲೆವೀಡುಗಳು :
ಹೆರ-ಸೆಳೆತ/strange-attractor , ಹರಹು/attractor-basin , ಮಿತಿಸುತ್ತು/limit-cycle , ಹಲಕವಲೊಡೆಯುವಿಕೆ/ bifurcations , ಅನಂತ-ಅನಿಯತ- ಸರಣಿ/Harmonic-Series , ಥೀಸಿಯಸ್ಸನ-ಷಿಪ್ಪು/Ship-of-Theseus
ಬದುಕೇ ಸಂಕೀರ್ಣವಾಗಿದೆ. ನಾನು ಯಾರು ಎನ್ನುವುದನ್ನು ಸಮಾಜ ನಿರ್ಣಯಿಸುತ್ತದೆಯೇ ಹೊರತು, ನಾನು ನಿರ್ಣಯಿಸುವುದಿಲ್ಲ. ಅಂತಹದರಲ್ಲಿ ನನ್ನ ಅರ್ಥವನ್ನು ಅನ್ವೇಷಿಸುವುದು ನನ್ನ ಕಡೆಗೋಲನ್ನು ನಾನು ಹಿಡಿದಾಗಲೇ ಸಾಧ್ಯ. ಸಂಕೀರ್ಣ ಭಾವವನ್ನು ಸಮರ್ಪಕವಾಗಿ ಬಿಂಬಿಸಿದ್ದೀರಿ.
ReplyDelete