Thursday, July 16, 2015

ತಾರ್ಕಿಕಾಂತ

ಒಬ್ಬ
ತಾರ್ಕಿಕ
ಅಂತ್ಯಕ್ಕೆ
ಹಲಬುವ

ದಿಸ್ ವೇ ಅಥವಾ ದಟ್
ವೇ ಆಗಬೇಕು
ಅಂತ
ಕೂತು
ಬಿಡುವವ
ಹತ್ತು ಸಂಭಾವ್ಯತೆಗಳ
ಪಟ್ಟಿ ಮಾಡೋಕ್
ಅಂತ
ಅನೆಕ್ಸ್'ಪೆಕ್ಟೆಡಂತ
ಯಾವ್ದೂ ಆಗಬಾರದಂತ

ಪ್ರಿಪೇರ್ ಫಾರ್ ದ ಬೆಸ್ಟ್ ಅಂತ
ಯಾಕಂತ?
ಬೆಸ್ಟು ಮಿಸ್ಸು
ಮ್ಯಾನೇಜಾಗಿ ವರಸ್ಟಾಗದಿರಲಂತ

ಮತ್ತ ಬೀ ಗ್ರೇಸಿಯ-
ಸಂತ
ದಿಸ್ಸಾಗದ ದಟ್ವರಸ್ಟಿಗೆ
ಪ್ರಿಪರೇಶನ್ನು ಅಷ್ಟೇ
ಆಗೋದಾಂತ
...

ಹಾಗೆ ಹ್ಯಾಗೂ ಬಂದವರಸ್ಟ
ಸಂಭಾಳಿಕೆ ಕಷ್ಟಸಾಧ್ಯವಾಗಿಬಿಟ್ಟ-
ದಾಂತ

ನೀ-
ರಸದಿ
ರೆಸ್ಟಿಲ್ಲವಾದ ರೋಮರ್ಹೋಮರನೇ

ಪ್ರಿಯ ತಾರ್ಕಿ
ಕಾಂತನೇ
ಸ್ಕೀಮರನೇ

ಮಾತಲ್ಲಿ ನಂಬಿಕೆ ಯಾವತ್ತೋ ಕಳ್ದು
ಹೋಗಿ ಕೊಳ್ಳೋಕ್ಕೆ ಈಹೊತ್ತು ಹಾ ಹಾ
ತೊರೆವವನೇ,

ಸರಿಯಾದ್ಮಾತೇ
ಹೇಳ್ಬೇಕಂತ ಎಣಿಸೋದು

ಸಾಧುವೇ?

'ಹಾಸ್ಯಾಸ್ ಪದ' ಅಲ್ವೆ??

ಹತ್ತೆಣ್ಸಿಕೂತಲ್ಲಿ ಹನ್ನೊಂದು
ಆಗೋದೇ

ಮರೀತಿರುವೆ

ವಾಸ್ತವ

ಚಿತ್ರಿಸಿದ್ದರಿಂದ ವಿಚಿತ್ರಾಂ

.

1 comment:

  1. ಕಷ್ಟವಾದರೂ ಪದಗಳ್
    ಎಷ್ಟು ಚೆನ್ನಾಗಿದೆ ಕವನ
    ಅಸ್ಪಷ್ಟವೆನಿಸಿದರೂ ಮೊದಲ್
    ಬೆಷ್ಟು ಎನಿಸುವುದು ಬಳಿಕ
    ವಿಚಿತ್ರಾಂತದ ಕವಿಗೆ ಫಸ್ಟು ಕ್ಲಾಸ್
    ಕೊಡಲೇ ಬೇಕು!


    ReplyDelete