Saturday, December 5, 2015

Phir se udd chala -- ಮತ್ತೆ ಹಾರಿ ಹೊರಟೆನು

---------------------------------------------
---------------------------------------------


ನನ್ನನ್ನು ಯಾವತ್ತೂ ಬೆರಗುಗೊಳಿಸುತ್ತಲೂ ಕಾಡುವ,
ಇಮ್ತಿಯಾಜ ಅಲಿ
ಯ 'ದಿದ್ಗ್ದರ್ಶನ'ದ ರಾಕ್`ಸ್ಟಾರ್ ಸಿನೆಮಾದಿಂದ,

ಇರ್ಶಾದ ಕಮೀಲನ ರಮ್ಯ ಸೂಫಿ/ಆಧ್ಯಾತ್ಮಿಕ ಅನ್ಯೋಕ್ತಿಗಳಿರುವ,
ರಹಮಾನನ
ಸಿಂಫೋನಿಕ ಸಂಯೋಜನೆಯ, 

ಮೋಹಿತ್ ಚೌಹಾನನ ವಿಶಿಷ್ಟ ಕಂಠದಲ್ಲಿ ಮೂಡಿಬಂದ, 
ನನಗೆ ತುಂಬಾ ಆಪ್ತವಾದ ಒಂದು ಗೀತ..  


ಫಿರ್ ಸೇ ಉಡ್ ಚಲಾ

Hindi/Roman Lyrics as per the original lyricist Irshad Kamil's website:
http://www.irshadkamil.com/romandetails/458

An interesting trans-creation in English provided by the lyricist himself:
http://www.irshadkamil.com/translationsdetails/458

The following is a juggle-bandhi between translation and trans-creation...




ಮತ್ತೆ ಹಾರಿ ಹೊರಟೆ

ಹಾರಿ ತೊರೆದದ್ದಾಯ್ತು ಇಹವನು
ಕೆಳಗೆ ನಾ
ನೀಗ ನಿನ್ನ ವಶ
ವೋ ಹವೆಯೇ

ದೂರ ದೂರವೀಗ ಜನಪದರ
ಮೈಲಿಗಟ್ಟಲೆ ದೂರವೀ ಕಣಿವೆಗಳು

ಮತ್ತೆ,
ಧೂಪ ಧೂಪವೀ ಶರೀರ
ಚುಂಬಿಸೆ ಬರುವವು ಘನ ಘನವು  
ಆದರೂ,
ಘನವೊಂದ್ಯಾವುದೋ ಎಲ್ಲೋ ಸೋಂಕಿ
ಒದ್ದೆಯಾಗೋದು ತನುವು
- ಅದಾಗದು!


ಯಾವ ನೆಲೆಯಲೂ ನಿಂದಿಲ್ಲ
ನಾ
ನೆಲ್ಲೂ ನನ್ನನೂ ಕಂಡಿಲ್ಲ
ಇದು
ಒಳಗುದಿಯಂತೂ ಹೌದು
ನಾ
ಕುದ್ದವನಲ್ಲ


ಶಹರ ಒಂದೇ  ಹಳ್ಳಿ ಒಂದೇ   
ಜನ ಒಂದೇ  ಹೆಸರು ಒಂದೇ
ಹೋ..



ಮತ್ತೆ ಹಾರಿ ಹೊರಟೆನು.. ನಾ..


ಮಣ್ಣಿನ್ಹಾಂಗ ಕನಸೂ ಇವು ಎಷ್ಟೂನೂ
ರೆಪ್ಪೆ ಬಡಿದು
ಝಾಡಿಸು
ತಿರುಗಾ
ಬರುತಾವೆಯೋ!*

ಎಷ್ಟೊಂದೆಲ್ಲ ಕನಸೂ
ಯಾವ ಥರಾ ನಾನು
ತೊರೆದದ್ದಿದೆ ಮುರಿದಂತೆ
ಯಾಕೋ..

ಮತ್ತೆ ಗೂಡಿ ಹೊರಟವೇ
ಯನ್ನನೆತ್ತಿ ನೆಗೆದವೇ
ಇವು ಯಾಕೋ..


ಒಮ್ಮೊಮ್ಮೆ ಕವಲು ಕವಲಾಗಿ
ಒಮ್ಮೊಮ್ಮೆ ಚಿಗುರು ಚಿಗುರಾಗಿ
ಎನ್ನ ಜೊತೆಜೊತೆಗಾಗಿ ಇವು ತಿರುತಿರುಗಿ

ಬೆಂಗಾಡಲೊಮ್ಮೆ  ಮಳೆನಾಡಲೊಮ್ಮೆ
ದೆಸೆ ರಾವಣವಾಗೊಮ್ಮೆ  ಸತ್ತು ಬದುಕಿ

ಒಮ್ಮೊಮ್ಮೆ ಕವಲು ಕವಲಾಗಿ
ಒಮ್ಮೊಮ್ಮೆ ಚಿಗುರು ಚಿಗುರಾಗಿ


ದಿನ ರಾತ್ರಿಯಂತಾಗೊಮ್ಮೆ  ತಿರುಗಿ ದಿನವಾಗಿ

ಏನು ಸತ್ಯವೋ ಏನು ಮಾಯೆಯೋ

ಓ ದೇವ!


ಅತ್ತಲೂ ಇತ್ತಲೂ ಒಳಗೂ ಹೊರಗೂ
ಸುಳಿದಾಡುವಾ ಹವೆ
ಏನು ಗೊತ್ತು, ಕೊಂಡೊಯ್ಯಲೂಬಹುದು
ನಿನ್ನೆಡೆಗೆ
ಸೆಳೆವುದೂ ನಿನ್ನಾ ನೆನಪು
ನಿನ್ನೆಡೆಗೆ


ಬಣ್ಣಬಣ್ಣದಾ ಖಯಾಲಿಗಳಲಿ
ನಾ
ಹಾರುತ ತಿರುಗುವೆನು...

----------------------------------------------------




*ಶಾಂತಸ್ವರದ ವೀಣೆ ಮಿಡಿದಂತಾಯಿತೇ?