ಎದೆಗೂಡಲ್ಲಿ ಕಲ್ಗುಡಿಯ ಕಟ್ಟಿ
ಕಲ್ಲು ಕಲ್ಲಲಿ ಹಾಲು ಸೂಸಿದೆದೆ
ರಸಭರಿತ ಎದೆ ಇದಿರು
ಕಲ್ಲು! ಕಲ್ಲು! ಇದೇಕೆ..?
*****
ಎದೆಯಾಳದಿ ತುಂಬು ಅರ್ಥವಂತಿಕೆ..,
ಅರ್ಥಗಳೆದೆಯೊಳು ನೀರ್-ನಿರರ್ಥ...
*****
*****
ನಿನ್ನಲೆನ್ನದೇನಿದೆ?!
.. ಮನದ ತುಂಬ ಚಿಂತೆ ;
ಅದಕೆ ಅಲ್ಲವೇನೋ ನಿನ್ನ
ಕಂತೆ ಕಂತೆ ಕವಿತೆ
ಸುಡುಸುಡು ಚಿತೆ!
.. ಮನದ ತುಂಬ ಚಿಂತೆ ;
ಅದಕೆ ಅಲ್ಲವೇನೋ ನಿನ್ನ
ಕಂತೆ ಕಂತೆ ಕವಿತೆ
ಸುಡುಸುಡು ಚಿತೆ!
(--ಮನಸ್ವಿನಿ)