ದುರಹಂಕಾರಿತ್ವ

ಅಸಿಡಿಟಿಯಾದಂತೆಲ್ಲ ಅಂಟಾಸಿಡ್ಡು
ಮದ್ದು ಹಾಕುವ
ಬದಲು
ಡೈಜೆಸ್ಟಾಗಲೆಂದೊಂದಿಷ್ಟು ಜಂಕು
ಆಹಾರವನೀವುತ್ತ
ಬಂದೆ
ತಾರ್ಕಿಕ ಅಂತ್ಯಗಳನೀಯದೇ
ಹೋದೆ
ಹೊರನಡೆಯುತ್ತ
ನೀವಾರೋಪಿಸುವ ಮುನ್ನವೂ
ಒಪ್ಪಿಕೊಂಡದ್ದಾಗಿದೆ ಡಿಸ್ಕ್ಲೇಮರಿನಲ್ಲೇ ನಾ
ನೆಷ್ಟೇ ಆದರೂ ಸುಸಭ್ಯ
ದುರಹಂಕಾರಿ
ನಿಮ್ಮ ಬಳಿಯೇ ಇಟ್ಟುಕೊಳ್ಳಿ ನನ್ನ
ಮತ್ತು ನಿಂನಿಂಮ್ಮ ಪೆಥಾಲಜಿ.

2 comments:

  1. ನೀವು ಭಾಷೆಯನ್ನು ಬಳಸುವ ರೀತಿ ಕುತೂಹಲಕರವೆನಿಸುತ್ತದೆ.
    "ದುರಹಂಕಾರಿಗಳು ತುಂಬಾ ಸ್ಮಾರ್ತರಂತೆ ದುರಹಂಕಾರಿತ್ವವನ್ನು ತಮ್ಮ ಡಿಸ್ಕ್ಲೇಮರಿನ ಅಗಸೇ ಬಾಗಿಲಲ್ಲೇ ಸೇಫಂತ ತೂಗುಹಾಕಿದ್ದರು.

    "ಥಂಡಿಹಿಡಿದ ಶೀತಲಯುಗದ ನಂತರ ತುಸು ಬಿಸಿಯುಸಿರಿಗೂ ಬಿರುಗಾಳಿಯ ಘಾತಕ ಶಕ್ತಿ ಬರಬೋದನ್ನೋದನ್ನ ಅವ್ರು ಸರ್ಯಾಗಿ ಮುಂಗಾಣಲಿಲ್ಲಾಂತ ಕಾಣ್ತದೆ: ತೂಗುಹಾಕಿದ ದುರಹಂಕಾರಿತ್ವವೂ ಘಾತಿಸಿಕೊಳ್ವಂತೆ... "

    ಮುಂತಾದ ಸಾಲುಗಳಲ್ಲಿ ಬಳಸಿದ ಪದಗಳಿಗೆ ಚರಿತ್ರೆಯಿದೆ ಎನಿಸುವಂತೆ ಮಾಡುತ್ತೀರಿ. ಕೆಲವು ಕಡೆ ವೈಜ್ಞಾನಿಕ ಶಾಸ್ತ್ರದ ಶಬ್ದ ಮತ್ತು ತತ್ವಗಳನ್ನೂ ನೀವು ಉಲ್ಲೇಖಿಸುವುದರಿಂದ, ಅವುಗಳ ಬಗ್ಗೆ ಪ್ರಾಥಮಿಕ ಜ್ಞಾನ (ಶಾಲೆಯಲ್ಲಿ ಪಾಸ್ ಆಗುವುದಕ್ಕಷ್ಟೇ ನೆನಪಿಟ್ಟು ಮರೆತಿದ್ದು, ಕಲಿತಿದ್ದಲ್ಲ) ಅಗತ್ಯವಾಗುತ್ತದೆ. ಇಲ್ಲವಾದಲ್ಲಿ ಏನೋ ಸ್ವಲ್ಪ ಕಳೆದುಕೊಂಡ ಭಾವನೆ. ಇಂಥಲ್ಲಿ ಫೂಟ್ ನೋಟ್ ಕೊಟ್ಟರೆ ಉತ್ತಮ. ಆಗಲೇ ನಿಮ್ಮ ಶಾಬ್ಧಿಕ ಕಸರತ್ತಿನ ಧ್ವನಿಶಕ್ತಿಯ ಬಗ್ಗೆ ತಿಳಿದುಕೊಳ್ಳುವುದು ಸಾಧ್ಯವಾಗುತ್ತದೆ.
    ಬರೆಯುತ್ತಿರಿ,

    ReplyDelete
    Replies
    1. ಇವು ದಟ್ಟವಾದ ಚರಿತ್ರೆ-ಚಾರಿತ್ರ್ಯಗಳ ಸಿಕ್ಕಲ್ಲಿ ಸಿಕ್ಕಿ-ಕೊಂಡಂತೆ ಇರುವ ದ ಪದಗಳನ್ನುವುದೇನೋ ದಿಟವೇ. ಆದರೆ, ಆ ಸತ್-ಚರಿತ್ರೆಗಳಾದರೋ ಬಹುತೇಕವಾಗಿ ವೈಯಕ್ತಿಕವಾದವು. ಹಾಗಿದ್ದಾಗಿಯೂ ಹಾಗಾದ ಆ ವಾಕ್-ಪ್ರಯೋಗಗಳ ಬಳಿ ಸುಳಿವ ಮೂರನೇಯವರ ಅನುಭವ-ಪ್ರತಿಭೆಗಳಿಗೂ ಅವುಗಳಲ್ಲಿ ಇನ್ನೇನೇನೋ ಚರಿತ್ರೆಗಳು - ಅರ್ಥಗಳು ಭಾಸವಾಗುತ್ತ ಉದ್ದೀಪನೆಯಾಗಬಹುದು ಅನ್ನುವ ಭಾವನೆಯಲ್ಲಿ ಅವು ಕೆಲವುಗಳನ್ನು ಹಾಗೆ ಆಗಾಗ್ಗೆ ಬಹಿರಂಗವಾಗಿ ಪ್ರಯೋಗಿಸುತ್ತ ಬಂದಿರುವುದು.

      ಮಿಕ್ಕಂತೆ ನಮ್ಮ ಶಾಸ್ತ್ರಾರ್ಥ ಪದಾರ್ಥ ವಿವೇಚನೆಗಳ ಅಡಿಟಿಪ್ಪಣಿಗಳನ್ನು ನಿಧಾನಕ್ಕೆ ಅಪ್ಪಣಿಸುವ ಆಲೋಚನೆಯಿದೆ. (ಕೆಲವು ಕಡೆಗಳಲ್ಲಿ 'ಹಿಂನೆಲೆ'ಗಳನ್ನು ಈಗಾಗಲೇ ಸಣ್ಣಗೆ ಸೂಚಿಸಿದ್ದಿದೆ.) ನಿಮ್ಮ ಟಿಪ್ಪಣಿಗಳಿಗೆ ಧನ್ಯವಾದಗಳು. ಇಲ್ಲಿ ಸಿಗುತ್ತಿರಿ.

      Delete