ತುಂಬಾ ಮಾತಾಡಿರ್ತೀನಿ..;
ತುಂಬಾ ಅಲ್ದಿದ್ರೂ - ಬರ್ದಿರ್ತೀನಿ.
ಅದೆಲ್ಲದಕ್ಕೂ ಮುಂಚೆ
"ನಿಮಗೇನೋ ಹೇಳ್ಬೇಕು, ನಿಮ್ಜೊತೆ ಏನನ್ನೋ ಹಂಚ್ಕೋಬೇಕು..."
"ನಿಮಗೇನೋ ಹೇಳ್ಬೇಕು, ನಿಮ್ಜೊತೆ ಏನನ್ನೋ ಹಂಚ್ಕೋಬೇಕು..."
-ಅನ್ನೋ ಭಾವ.
ಬರ್ದೂ ಮಾತಾಡ್ಯೂ ಆದ್ಮೇಲೆ ಮನದಲ್ಲೇಳೋ ಪ್ರಶ್ನೆ ಅಂದ್ರೆ...
ಬರೆದು ಬರೆದು
ಕಹಳೆಯೂದಿ
ಅಂದುಕೊಂಡಿದುದನ್ನ
ಹೇಳಿದೆನಾ?
ಹೇಳಿದೆ-ನಾ-ನೆಂದು
ಅಂದುಕೊಂಡೆನಾ?
ಓದಿ ಕೇಳಿ ಅಭ್ಯಸಿಸಿ
ಅದ ನೀ
ಅರ್ಥೈಸಿಕೊಂಡಿದ್ದಾ?
ಅಂದುಕೊಂಡಷ್ಟೇ ಅರ್ಥ
ವೆಂದುಕೊಂಡಿದ್ದಾ?
*******
No comments:
Post a Comment