ಶುಕ್ರವಾರ, ಮಾರ್ಚ್ 27, 2026

ಚಕ್ರಾರ ಪಂಕ್ತಿ

 ಪ್ರತಿಮಾನಾಟಕದಾಭಾಸದೀಜಗದಲ್ಲಿ ಶಾಂತಿಪ್ರಿಯವೆಂದು ಬಣ್ಣಿಸಲಾದ ಮತಧರ್ಮವೊಂದರದ್ದು ಹಾವಳಿಯೆಂದು ಅಶಾಂತಗೊಂಡ ಕೆಲವರು ಅದಕ್ಕೆ ಟಾಂಗುಕೊಡಲೆಂದು ಎದುರುಮಾಡಿಕೊಂಡಿದ್ದಾದರೋ ಸುಶಾಂತಮೂರ್ತಿ ಎಂದು ಪರಿಭಾವಿಸಾಗಿರ್ದ್ದವನು ಶ್ರೀರಾಮಚಂದಿರ... ಅಲ್ಲವೆ...

----------------

ಹಾಗೆ,  ಶ್ರೀರಾಮನವಮಿಯದಿವಸನಿಮಿತ್ತಮಾತ್ರವಾದರೂ, ನೋಡಿ:

೧) https://adiga.sanchaya.net/shree_rama_navamiya_divasa/
also another A.Moo. reading video

೨) https://www.facebook.com/mogerigopalakrishnaadiga/posts/561933362232704/

೩) https://vijaykarnataka.com/lavalavk/weekly-magazine/an-article-on-poet-gopalakrishna-adiga/articleshow/62957701.cms 
 
೪) ಎಚ್ ಎಸ್ ವಿ ಕಾಲಂ: ರಾಮನವಮಿಯ ರಾತ್ರಿ...

೫) ಶ್ರೀರಾಮಾಯಣ ದರ್ಶನಂ ಕಾವ್ಯವನ್ನು ಏಕೆ ಓದಬೇಕು?


-------------

ಯುಗಯುಗಾದಿ ಕಳೆದು ಯುಗಾದಿ ಮರಳಿಬರುವ ಚಕ್ರದಲ್ಲಿ ಯುಗಾದಿಯ ನವದಿನಗಳಿಗೆ ರಾಮನವಮಿಯೂ ಆಗುತ್ತಲ್ಲವೆ..  ಅಥವಾ ಪಶ್ಚಿಮದ ಮಾರ್ಜಾಲರಾಮನ ನವಹುಟ್ಟುಗಳ ಚಕ್ರ ಎನ್ನಿ..
ಒಟ್ಟಿನಲ್ಲಿ ಯಾವುದೋ ಒಂದು ಚಕ್ರಾರ ಪಂಕ್ತಿ. ಅಲ್ಲವೇ...

"ಅಥವಾ ಚಕ್ರಾರ ಪಂಕ್ತಿ; ಚಕಮಕಿ ಕಲ್ಲನುಜ್ಜುತ್ತ
ಕೂತುಕೊಂಡಿದ್ದೇನೆ ಕತ್ತಲೊಳಗೆ,
ಪನಿವಾರ ತಿಂದು ಪಾನಕ ಕುಡಿದು ನೋನುತ್ತ
ಸ್ಫೋಟಕ್ಕೆ ಕಾದು ಕಿವಿ ಕಂಪಿಸುತ್ತ."


ತರುವಾಯ ಅಸಲು ವಿಷಯವೇನೆಂದರೆ, ಅಡಿಗರ 'ಶ್ರೀರಾಮನವಮಿಯ ದಿವಸ'ಕ್ಕೆ ಅಂತರ್ಜಾಲದಲ್ಲಿ ಸಧ್ಯ ಅಪ್ಲೋಡಾಗಿರುವ ವಿವರಣೆಗಳನ್ನ ನೋಡಿದಾಗ ಇಲ್ಲಿನ ಈ 'ಚಕ್ರಾರ ಪಂಕ್ತಿ' ಎಂಬುದನ್ನ ನಮ್ಮ ಕನ್ನಡದ ಪ್ರಸಿದ್ಧ ಅಧ್ಯಾಪಕರು ವಿಮರ್ಶಕರು ಕವಿಗಳು ಇತ್ಯಾದಿಗಳು ಸರಿಯಾಗಿ ಶಬ್ದಶಃ ಅರ್ಥಬಿಡಿಸದೇ.. ಬಿಡಿಸಿನೋಡದೇ.. ನೋಡಿ ಅರಿಯದೆ.. ಅವಸವಸರವಾಗಿ ಜಾರಿಕೊಂಡಂತೆ.... "ಚಕ್ರದಂತೆ ಉರುಳುವ ಕಾಲ ಅಥವಾ ವಿಕಾಸವಾದದ ಚಕ್ರವನ್ನು (ಚಕ್ರಾರ) ಸಾಲಾಗಿ (ಪಂಕ್ತಿ) ಜೋಡಿಸಿದಂತೆ, " ಅಂತೇನೋ ಗೊಣಗಿ ತಪ್ಪಿಸಿಕೊಳ್ಳುವಂತೆ ಕಂಡುಬರುತ್ತಿದೆ...

ಚಿಂತಿಸಬೇಡಿ! ನಾವಿದ್ದೇವಲ್ಲ!! 
-ಎಂದು ಈ ಕೆಳಗಿನಂತೆ ಅಪ್ಪಣೆಕೊಡಿಸಿದ್ದು ಶ್ರೀಶ್ರೀಶ್ರೀ ಮೂರ್ಶ್ರೀ ನಾವುಗಳು!!! 

ಈ ಪದಪುಂಜ ನೋಡಿದ ಮೊತ್ತ ಮೊದಲ್ಮೊದಲಲ್ಲಿ ಶ್ರೀ^3 ನಾವುಗಳ ಚಿತ್ತದಲ್ಲಿ ಮೂಡಿದ ಚಿತ್ರ ಎಂದರೆ ಅದು "ಅರೆಯುವ ಹಲ್ಲುಗಳಿರುವ ಚಕ್ರದ (=gears) ದಂತಪಂಕ್ತಿಗಳ ಅರೆಯುವ ಆಕ್ಷನ್.." ನದ್ದು..   ಆ ರೀತಿಯಲ್ಲಿ ಚಕ್ರ+ಅರ++ಪಂಕ್ತಿ ಅಂತ ಮೊದಲನೇಯ ತರಹದ ಸಮಾಸ ನಿಷ್ಪತ್ತಿ ಎಂದೊಂದಪ್ಪಣೆ.

ಹಾಗೆ ಚಕಮಕಿಕಲ್ಲುಗಳನ್ನೇ ಅರೆಯುವ ಹಲ್ಲುಗಳನ್ನಾಗಿ ಹೊಂದಿರುವ ಗಿಯರ್-ಚಕ್ರ ಗಳು ಪಕ್ಕ ಪಕ್ಕ ಒಂದನ್ನೊಂದು ಉಜ್ಜಿಕೊಳ್ಳುತ್ತಾ ಕಿಡಿ ಹೊತ್ತಿಸುತ್ತ ತಮ್ಮ ಮಧ್ಯೆ ಸಿಲುಕಿದುದನ್ನು ಅರೆಯುತ್ತ ಕೂಡವಿರುವ ಯಂತ್ರ-ಇಸಂ ಭರಿತ ದೃಶ್ಯ ಅಂದುಕೊಂಡರೆ ಅದು ಅಲ್ಲಿನ ರಾಕ್ಕೆಟ್ಟುಗಳ  ಶೋಕೇಸಿಗೆ ಸೇರಿಕೊಳ್ಳುತ್ತೆ...  ಹಾಗೆ ಚಕ್ರವ್ಯೂಹದ ದಂತಭಗ್ನಕ್ಕೆ ಈಡಾದ ಅಭಿಮನ್ಯು ಕಥೆಗಳೂ ನೆನಪಾದರೆ ಹೋಗಲಿ ಎನ್ನುವ...   'ತುರಿಮಣೆ' = 'dentally forward' ಎನ್ನುವ ಬೂಮರ್ರಾಂಗಪಾರ್ಥ ಕೂಡ ನೆನಪಾಗಿ ಬಿಟ್ಟರೆ, ವಿಧಿ ಇಲ್ಲದೇ, ಥೂ ಬಿಡ್ತೂ ಅನ್ನೀಪ್ಪಾ👻


ಇನ್ನೊಂದು ಅರ್ಥ... ಅಂತರಂಗದ ಸುರುಳಿಬಿಚ್ಚಿ ಸರ್ಚ್ ಲೈಟಿನಲ್ಲಿ ಹಾಸಿದ ಹೆದ್ದಾರಿ.., ಅಲ್ಲಲ್ಲ, ಕ್ಷಮಿಸಿ, ಅಂತರ್ಜಾಲದ ಸುರುಳಿಯಲಿಳಿದು ಏಐ ಕರಾಮತಿಯ ಸರ್ಚ್-ಇಂಜಿನ್ ಹೈವೇಲೈಟಲ್ಲಿ ಸಿಲುಕಿದ ಕೊಂಡಿ:
 ಗ್ರೀಕ್ ಛಂದಸ್ಸುಗಳಲ್ಲಿ "ಒಂದೇ ತೆರನ ಸಾಲು ಉದ್ದಕ್ಕೂ ತಿರುತಿರುಗಿ ಬರುವ ಪಂಕ್ತಿಧಾಟಿ (ಸ್ಟೈಕಿಕ್ ವರ್ಸ್)" 


ಹಾಗೆ ಮತ್ತೊಂದು ಅರ್ಥ ಸಾದ್ಯತೆ: cycloid trajectory :
https://kn.wikipedia.org/wiki/%E0%B2%9A%E0%B2%95%E0%B3%8D%E0%B2%B0%E0%B2%9C


Aaaand, the bottom line 
that trumps it all is, 
ತಿರುಗಿ ಭಾಸೋಭಾಸಃ ಎನ್ನಲಿಕ್ಕೆ!!! :

"ಭಾಸಕವಿ ಸ್ವಪ್ನವಾಸವದತ್ತ ನಾಟಕದಲ್ಲಿ ನುಡಿದ "ಚಕ್ರಾರಪಂಕ್ತಿರಿವಗಚ್ಛತಿ ಭಾಗ್ಯಪಂಕ್ತಿ" ಎನ್ನುವ ಮಾತು ಮನುಷ್ಯನಿಗೆ ಮಾತ್ರವಲ್ಲದೆ ಈ ಪದಗಳ ಚರಿತ್ರೆಗೂ ಅನ್ವಯಿಸುತ್ತದೆ."
https://archive.org/stream/bmshri.devagange0000mvse/bmshri.devagange0000mvse_djvu.txt

ಇದರ ತಾತ್ಪರ್ಯ ಹೀಗೆ:
‘ಕಾಲವು ಬದಲಾಯಿಸಿದಂತೆಲ್ಲ ಅದೃಷ್ಟವು ಚಕ್ರದ ಅರೆಕೋಲುಗಳಂತೆ ಮೇಲಕ್ಕೂ ಕೆಳಕ್ಕೂ ಉರುಳುತ್ತದೆ.’"
https://www.prajavani.net/community/motivation/the-wheel-of-luck-2-801945.html

"Cakraarapanktiriva gacchati bhaagyapanktih.."
"Worldly fortunes circle round with the wheel of time moving up and down like the wheels of a chariot".
https://bhagavadgita.org.in/Blogs/5ad04e8f5369ed119c551fa5


-----------------------------------------
ಇತಿ  ಶರಣೂ ಶರಣೆಂದವರು  
ಅಪ್ಪಣೆಕೊಡಿಸಲೆಂದು ಬಂದು
ಚಕ್ರಾರದಂತಪಂಕ್ತಿಗಳು ಛಪ್ಪನ್ನೈವತ್ತಾರ್ಚೂರಾದವೋ 
ಎಂದೋಡಿದ  ಶ್ರೀ^೩ ಮೂರ್ಶ್ರೀ ನಾವಪ್ಪಗೋಳು!

-----------------------------------------------------
PS: https://archive.org/stream/in.ernet.dli.2015.382137/2015.382137.Tantra-Sara_djvu.txt
"...ತಂತ್ರಶಾಸ್ರ್ರದ ಅವಸ್ಥೆಯೂ ಇದೇ ತೆರನಾಯಿತು...  ''ಚಕ್ರಾರಪಂಕ್ತಿರಿವ ಗಚ್ಛತಿ ಭಾಗ್ಯಪಂಕ್ತಿ'':  ಕಾಲಚಕ್ರದ ಯಾವುದೋ  ಒಂದು ಅರವನ್ನು ಆತುಕೊಂಡಿದ್ದ ತಂತ್ರಪರಂಪರೆ ಅದರೊಡನೆಯೇ  ಮಗುಚಿಕೊಂಡಿತು..."

ಶುಕ್ರವಾರ, ಜನವರಿ 16, 2026

ಆಧುನಿಕೋತ್ತರ ಭವಿಭಾವಶ್ಲೇಷೆಗಳು

ಆಧುನಿಕ ಸಂಪ್ರದಾಯದ ಕವಿಕಾವ್ಯಕ್ಲೀಷೆಗಳ್  
ಗೆ ಸಂವಾದಿ-ವಿವಾದಿ/ಗತಿಸ್ಥಿತಿ-ಇತ್ತೇದಿಕೆಯಾಗಿ
"ಆಧುನಿಕೋತ್ತರ ಸಂಪ್ರದಾಯದ ಭವಿಭಾವಶ್ಲೇಷೆಗಳು"

.
ಮತ್ತಷ್ಟು 
ವರುಷಗಳುರುಳಿದಂತೆ ವರ್ತನೆ
ಗಳುರುಳು ತಲೆಗುಸಿರು
ಗಟ್ಟಿ ಗಟ್ಟಿ ಗಟ್ಟಿಸುತಬಂದು ಕೊನೆಗೂ ತೊಡೆ
ಗಣಕವನೆತ್ತಿಕೊಂಡು ತಾನು  
ತಾನಾಗದೆ ಗಂಟಿಕ್ಕಿ ಹುಬ್ಬು ಮಧ್ಯೆ
ಮಧ್ಯೆ ಮೆದ್ದಾಗೆರಡೆರಡೆಲೆ ನಾಕು 
ನಾಕಾಗೆಂಟೆಂಟಾಗುವಾಟ ಗಂಟುಗಂಟಾಗಿ
ಕೆಲಸವಿದೇ ಕಾರ್ಯವಿದೇ ಎಂಬಂತೆ ಗಂಟೆ ಕಳೆ 
ವೇಷ ಗಂಟುಕಟ್ಟೋವರೆಗೆ ಮುಖ 
ವುಳಿಸುವಾಟದಂತೆ ಮೇಲ್ನೋಟಕ್ಕೆ 
ತಾಗದಂತೆ ಒಳಗೊಳಗೇ ಕುದಿಯುತ್ತೆ ಆಖೈರು     
ತಿದಿಯೊಂದು ಹಾಗೇ ಮುಂದರಿ
ಯುತ್ತ ಹೇಗೆ
ಯಿನ್ನು ನಾ ಫಿಸಿಕ್ಸು ಲಾಜಿಕ್ಕು ಫಿಲಾಸಫಿ
ಸುವುದಂತ ಚಿಂತೆ ಅದೇ ಸರಪಳಿ
ಯಲಿ ಸರಿ ಸರಿ ಸರಿಯುತ್ತ  
ಹಾಳಾಗಲಾ ಒಂದಿಷ್ಟು  
ಪದಶ್ಲೇಷೆಗಳದೇನೇನಕೋ ಹೀಗೆ  
ತಲೆಗ್ಹಿಡಿಸುತ್ತದಂತ 
ಸಿಂಟ್ಯಾಕ್ಟಿಕ ಭಂಗಿ ಭಂಗಿಸಿದಂತೆ ಯಂತ 
ಯಂಥದ್ದೆಲ್ಲವರ್ಥ ಅರ್ಥಾರ್ಥ ಅಪಾರಾರ್ಥವಾಪಾರ್ಥ
ವಾಪಥ್ಯ ಸೀಮಾಂತೆಕ್ಕಿನ ಮಟ್ಟದಲಂತೂ ತಲೆ 
ಕುಣಿಸುತ್ತೆ ಮತ್ತದೇ ಧಾಟಿಯ ಸಾವಿರ ಪದ ನೆನೆ ನೆನೆಸಿ   
ಹುದುಗುಬರಿಸುತ್ತೆ ಮತ್ತೇರಿಸುತ್ತ ಶೆರೆ ಸೆರೆ ಅರರೆರೆ ಮತ್ತೆ
ಮಾತ್ರೆಗಳೆರಡೆರಡೆಲೆಲೆ ನಾಕುನಾಕಾಗೆಂಟೆಂಟಾಗು
ವಲ್ಲಿಗೆ ಪದಪದ ಹೊಸೆವೆಸೆವಾಟಮಾಟ ಹೊಸವೆ    
ನಿಸಲು ಮತ್ತದೆ ಶಾಬ್ದಿಕ ಬೌದ್ಧಿಕ ಜಿಮ್ನಾಸ್ಟಿ
ಕಾಟವೆ ಮತ್ತೆ  ಇಷ್ಟಕ್ಕೂ, ಹಃ! ಆಧುನಿಕೋತ್ತರ ಜೀವ
ಜೀವನವೆಂದರೇನೊ? ದಾರಿಹೋಕ ಹೂ
ಮಾರ್ವ ಜೀವ ದರ್ಶನಕ್ಕಿರುವಲ್ಲಿಗೆ, ಸಾಂಪ್ರದಾಯಿಕ ಮಾರ್
ಜಾಲನಿಗೂ ನವ ಜೀವನವೆನುವಲ್ಲಿಗೆ!  ಕಾರಿ ಕಾರಿ ಬರೆ ಭಾವ
ಸಾರಿಕೆ ಬರೆದು ಕೊರೆದು ವಕಾಲತ್ತಿಸಿ ವೈಭವೀ
ಕರಿಸಿ ವಿಸರ್ಜಿಸು
ವಾಟಕ್ಕೆ ವಾಕರಿಸದೆ ಯಾರಿಗ್ಗೊತ್ತಿಲ್ಲ
ದುತ್ತರವೀ ಜಗ
ದಗಲಕ್ಕೆ ಪ್ರಶ್ನೆ ಹುಡುಕೋ ತರ್ಕಮರ್ಕಟ ಕಂಟ್ರಿ ನಾ
ಯೀ ಬಾಲ ಬುದ್ದಿ 
ವಾತ ಬಿಡಿ ಬಡಿಯುತ್ತೆ ಹೇಗೂ ಕೊನೆಗೊಮ್ಮೆ.       

================================================   
    
ಆತ್ಮೀಯ bondhuಗಳೇ,  
ಮೊನ್ನಿತ್ತೀಚೆಗೆ ನಾವೇನು ನಿಮ್ಮ ಜೊತೆ ಬಿಹೇವಿಯರಿಸಂ ವೇಷಗಟ್ಟುವಿಕೆಯ ಬಗೆಗೆ ಗಂಟೆಗಂಟಲು  ಅವಲೋಕಿಸಿದೆವೋ .. 
ನಮ್ಮ ಆಧುನಿಕ ಕವಿಕಾವ್ಯೋದ್ಯೋಗರಹಸ್ಯವನ್ನು ಆಟೊರಿಕ್ಷಾಟನೆಯಲ್ಲಿ ಕತ್ತೆಯುಚ್ಚೆಹೊಯ್ವಂದದ ಅಪ್ರಕಟಿತ ಕವನವೊಂದೋದೇನು 
ಬಯಲುಗೊಳಿಸಿದ್ದೆವೋ...  ಅದಕ್ಕೆಲ್ಲ ಮುನ್ನುಡಿಯಂತೆ..  ದಶಕವೊಂದರಷ್ಟು ಹಿಂದೆ..  ಹಾಗೆ ತಲೆ ತಳೆಯದ 
ಖಾಚಿತ್ಯಗಳು ವರ್ತನೆಯಲ್ಲಿ ಆವರ್ತಿಸುವ ವಿದ್ಯಮಾನವನ್ನು ಬ್ಲಾಗಾಭಿವ್ಯಕ್ತಿಗೊಳಿಸಿದ್ದೆವು.. 
 ಆಗ ಅದು 
ಶ್ರೀಶ್ರೀಶ್ರೀ ದುರಹಂಕಾರಿಗಳ ಮುಂಗಾಣ್ಕೆಯಾಗಿತ್ತು ಎಂದು ಈಗ ಸತ್ಯೋತ್ತರವಾಗಿ ಭಾವಿಸಲು ಒಂದು ತೊಡಕಲ್ಲದ
ತೊಡಕೇನೆಂದರೆ .. ಈಗ ಪುನರಾವಲೋಕಿಸಲು ಯತ್ನಿಸಿದರೆ ಅದು ಹೀಗೆ  ಬೆಳೆಯುವ ಟ್ಯೂಮರಿನ ಮೊಳಕೆ ಮಾತ್ರವಾಗಿತ್ತು 
ಎಂಬ ಸೂಚನೆ ಆಗಲೇ ಶ್ರೀಶ್ರೀಶ್ರೀ ದುರಹಂಕಾರಿಗಳಿಗೆ ಇದ್ದಿತು ಎನ್ನಲು ಬಲವಾದ ಆಧಾರಗಳಿದ್ದಂತೆ ಅನಿಸುವುದಿಲ್ಲ...  
ಎನಿವೆ..  ಏನೀಗ..?, ಎಂದರೆ, ಹೇಗೂ ಇತ್ತೀಚೆಗೆ ನಮಗೆ ಪ್ರತಿಸ್ಪಂದನೆಯ 'ಭೂತ'ವೊಂದು ಮೆತ್ತಿಕೊಂಡಿರಲಾಗಿ..   
ಆವೊಂದು "ಆಧುನಿಕ ಕವಿಕಾವ್ಯಕ್ಲೀಷೆ"ಗೆ ಪ್ರತಿಧ್ವನಿ ಅಥವಾ ಸ್ಟೇಟಸ್-update  ಎನ್ನುವಂತೆ 
"ಆಧುನಿಕೋತ್ತರ ಸಂಪ್ರದಾಯ
 ಭವಿಭಾವಶ್ಲೇಷೆ"ಗಳನ್ನು ವಿಶ್ಲೇಷಿಸಿ ಸಂಶ್ಲೇಶಿಸಿ 
ತಮ್ಮ ಆವಾಗಾಹನೆಗೆ ತನ್ಮೂಲಕ ನೀಡುತ್ತಿದ್ದೇವೆ..   
ಓಡಿಸಿಯಾದರೂ ಓಡದೇ ಓದಿ ನೋಡಿ ..!   
ಧನ್ಯಬಾದಗಳೊಂದಿಗೆ
ಶ್ರೀದುರಹಂಕಾರಿತ್ವಕ್ಕೆ ಯಾವತ್ತು ಪರ್ಯಾಯದಲ್ಲಿ  
ಶ್ರೀಶ್ರೀಶ್ರೀ ಮೂರ್ಶ್ರೀ ನಾವುಗಳು

ಮಂಗಳವಾರ, ಜನವರಿ 13, 2026

ಕಂನಡಿ..ಘಾ?!

ಕುರಿತೋದದೆಯುಂ ಕಾವ್ಯಪ್ರಯೋಗಪರಿಣತಮತಿಗಳ್!

ಬಿಡಿಸರಿಯದೆಯುಂ ಟೀಕಾಮೆಚ್ಚುಗಪರಿಣತಮತಿಗಳ್?!

ತೆರೆದ್ನೋಡದೆಯುಂ ಸಿನಿಮಾನಿಶೇಧಪರಿಣತಮತಿಗಳ್!?!