ಶುಕ್ರವಾರ, ಜನವರಿ 16, 2026

ಆಧುನಿಕೋತ್ತರ ಭವಿಭಾವಶ್ಲೇಷೆಗಳು

ಆಧುನಿಕ ಸಂಪ್ರದಾಯದ ಕವಿಕಾವ್ಯಕ್ಲೀಷೆಗಳ್  
ಗೆ ಸಂವಾದಿ-ವಿವಾದಿ/ಗತಿಸ್ಥಿತಿ-ಇತ್ತೇದಿಕೆಯಾಗಿ
"ಆಧುನಿಕೋತ್ತರ ಸಂಪ್ರದಾಯದ ಭವಿಭಾವಶ್ಲೇಷೆಗಳು"

.
ಮತ್ತಷ್ಟು 
ವರುಷಗಳುರುಳಿದಂತೆ ವರ್ತನೆ
ಗಳುರುಳು ತಲೆಗುಸಿರು
ಗಟ್ಟಿ ಗಟ್ಟಿ ಗಟ್ಟಿಸುತಬಂದು ಕೊನೆಗೂ ತೊಡೆ
ಗಣಕವನೆತ್ತಿಕೊಂಡು ತಾನು  
ತಾನಾಗದೆ ಗಂಟಿಕ್ಕಿ ಹುಬ್ಬು ಮಧ್ಯೆ
ಮಧ್ಯೆ ಮೆದ್ದಾಗೆರಡೆರಡೆಲೆ ನಾಕು 
ನಾಕಾಗೆಂಟೆಂಟಾಗುವಾಟ ಗಂಟುಗಂಟಾಗಿ
ಕೆಲಸವಿದೇ ಕಾರ್ಯವಿದೇ ಎಂಬಂತೆ ಗಂಟೆಕಳೆ 
ವೇಷ ಗಂಟುಕಟ್ಟೋವರೆಗೆ ಮೈಗೆ   
ಮುಖವುಳಿಸುವಾಟದಂತೆ ಮೇಲ್ನೋಟಕ್ಕೆ 
ತಾಗದಂತೆ ಒಳಗೊಳಗೇ ಕುದಿಯುತ್ತೆ ಆಖೈರು     
ಉರಿಯೊಂದು ಹಾಗೇ ಮುಂದು 
ವರಿಯುತ್ತೆ ಹೇಗೆಯಿನ್ನು ನಾ 
ಫಿಸಿಕ್ಸು ಲಾಜಿಕ್ಕು ಫಿಲಾಸಫಿ
ಸುವುದಂತ ಚಿಂತೆ ಅದೇ ಸರಪಳಿ
ಯಲಿ ಸರಿ ಸರಿ ಸರಿಯುತ್ತ  
ಹಾಳಾಗಲಾ ಒಂದಿಷ್ಟು  
ಪದಶ್ಲೇಷೆಗಳದೇನೇನಕೋ ಹೀಗೆ  
ತಲೆಗ್ಹಿಡಿಸುತ್ತದಂತ 
ಸಿಂಟ್ಯಾಕ್ಟಿಕ ಭಂಗಿ ಭಂಗಿಸಿದಂತೆ ಯಂತ 
ಯಂಥದ್ದೆಲ್ಲವರ್ಥ ಅರ್ಥಾರ್ಥ ಅಪಾರಾರ್ಥವಾಪಾರ್ಥ
ವಾಪಥ್ಯ ಸೀಮಾಂತೆಕ್ಕಿನ ಮಟ್ಟದಲಂತೂ  ತಲೆ 
ಕುಣಿಸುತ್ತೆ ಮತ್ತದೇ ಧಾಟಿಯ ಸಾವಿರ ಪದ ನೆನೆ ನೆನೆಸಿ   
ಹುದುಗುಬರಿಸುತ್ತೆ  ಮತ್ತೇರಿಸುತ್ತ ಶೆರೆಸೆರೆ ಅರರೆರೆ  
ಮತ್ತೆ ಮಾತ್ರೆಗಳೆರಡೆರಡೆಲೆಲೆ ನಾಕುನಾಕಾಗೆಂಟೆಂಟಾಗು
ವಲ್ಲಿಗೆ ಪದಪದ ಹೊಸೆವೆಸೆವಾಟಮಾಟ ಹೊಸವೆ    
ನಿಸಲು ಮತ್ತದೆ ಶಾಬ್ದಿಕ ಬೌದ್ಧಿಕ ಜಿಮ್ನಾಸ್ಟಿ
ಕಾಟವೆ ಮತ್ತೆ  ಇಷ್ಟಕ್ಕೂ, ಹಃ! ಆಧುನಿಕೋತ್ತರ ಜೀವ
ಜೀವನವೆಂದರೇನೊ? ದಾರಿಹೋಕ ಹೂ
ಮಾರ್ವ ಜೀವ ದರ್ಶನಕ್ಕಿರುವಲ್ಲಿಗೆ, ಸಂಪ್ರದಾಯಿಕ ಮಾರ್
ಜಾಲನಿಗೂ ನವ ಜೀವನವೆನುವಲ್ಲಿಗೆ!  ಕಾರಿ ಕಾರಿ ಬರೆ ಭಾವ
ಸಾರಿಕೆ ಬರೆದು ಕೊರೆದು ವಕಾಲತ್ತಿಸಿ ವೈಭವೀ
ಕರಿಸಿ ವಾಕರಿಸದೆ ವಿಸರ್ಜಿಸು
ವಾಟಕ್ಕೆ ಯಾರಿಗ್ಗೊತ್ತಿಲ್ಲದುತ್ತರವೀ ಜಗ
ದಗಲಕ್ಕೆ ಪ್ರಶ್ನೆ ಹುಡುಕೋ ತರ್ಕಮರ್ಕಟ ಕಂಟ್ರಿ ನಾ
ಯೀ ಬಾಲ ಬುದ್ದಿ 
ವಾತ ಬಿಡಿ ಬಡಿಯುತ್ತೆ ಹೇಗೂ ಕೊನೆಗೊಮ್ಮೆ.       

================================================   
    
ಆತ್ಮೀಯ bondhuಗಳೇ,  
ಮೊನ್ನಿತ್ತೀಚೆಗೆ ನಾವೇನು ನಿಮ್ಮ ಜೊತೆ ಬಿಹೇವಿಯರಿಸಂ ವೇಷಗಟ್ಟುವಿಕೆಯ ಬಗೆಗೆ ಗಂಟೆಗಂಟಲು  ಅವಲೋಕಿಸಿದೆವೋ .. 
ನಮ್ಮ ಆಧುನಿಕ ಕವಿಕಾವ್ಯೋದ್ಯೋಗರಹಸ್ಯವನ್ನು ಆಟೊರಿಕ್ಷಾಟನೆಯಲ್ಲಿ ಕತ್ತೆಯುಚ್ಚೆಹೊಯ್ವಂದದ ಅಪ್ರಕಟಿತ ಕವನವೊಂದೋದೇನು 
ಬಯಲುಗೊಳಿಸಿದ್ದೆವೋ...  ಅದಕ್ಕೆಲ್ಲ ಮುನ್ನುಡಿಯಂತೆ..  ದಶಕವೊಂದರಷ್ಟು ಹಿಂದೆ..  ಹಾಗೆ ತಲೆ ತಳೆಯದ 
ಖಾಚಿತ್ಯಗಳು ವರ್ತನೆಯಲ್ಲಿ ಆವರ್ತಿಸುವ ವಿದ್ಯಮಾನವನ್ನು ಬ್ಲಾಗಾಭಿವ್ಯಕ್ತಿಗೊಳಿಸಿದ್ದೆವು.. 
 ಆಗ ಅದು 
ಶ್ರೀಶ್ರೀಶ್ರೀ ದುರಹಂಕಾರಿಗಳ ಮುಂಗಾಣ್ಕೆಯಾಗಿತ್ತು ಎಂದು ಈಗ ಸತ್ಯೋತ್ತರವಾಗಿ ಭಾವಿಸಲು ಒಂದು ತೊಡಕಲ್ಲದ
ತೊಡಕೇನೆಂದರೆ .. ಈಗ ಪುನರಾವಲೋಕಿಸಲು ಯತ್ನಿಸಿದರೆ ಅದು ಹೀಗೆ  ಬೆಳೆಯುವ ಟ್ಯೂಮರಿನ ಮೊಳಕೆ ಮಾತ್ರವಾಗಿತ್ತು 
ಎಂಬ ಸೂಚನೆ ಆಗಲೇ ಶ್ರೀಶ್ರೀಶ್ರೀ ದುರಹಂಕಾರಿಗಳಿಗೆ ಇದ್ದಿತು ಎನ್ನಲು ಬಲವಾದ ಆಧಾರಗಳಿದ್ದಂತೆ ಅನಿಸುವುದಿಲ್ಲ...  
ಎನಿವೆ..  ಏನೀಗ..?, ಎಂದರೆ, ಹೇಗೂ ಇತ್ತೀಚೆಗೆ ನಮಗೆ ಪ್ರತಿಸ್ಪಂದನೆಯ 'ಭೂತ'ವೊಂದು ಮೆತ್ತಿಕೊಂಡಿರಲಾಗಿ..   
ಆವೊಂದು "ಆಧುನಿಕ ಕವಿಕಾವ್ಯಕ್ಲೀಷೆ"ಗೆ ಪ್ರತಿಧ್ವನಿ ಅಥವಾ ಸ್ಟೇಟಸ್-update  ಎನ್ನುವಂತೆ 
"ಆಧುನಿಕೋತ್ತರ ಸಂಪ್ರದಾಯ
 ಭವಿಭಾವಶ್ಲೇಷೆ"ಗಳನ್ನು ವಿಶ್ಲೇಷಿಸಿ ಸಂಶ್ಲೇಶಿಸಿ 
ತಮ್ಮ ಆವಾಗಾಹನೆಗೆ ತನ್ಮೂಲಕ ನೀಡುತ್ತಿದ್ದೇವೆ..   
ಓಡಿಸಿಯಾದರೂ ಓಡದೇ ಓದಿ ನೋಡಿ ..!   
ಧನ್ಯಬಾದಗಳೊಂದಿಗೆ
ಶ್ರೀದುರಹಂಕಾರಿತ್ವಕ್ಕೆ ಯಾವತ್ತು ಪರ್ಯಾಯದಲ್ಲಿ  
ಶ್ರೀಶ್ರೀಶ್ರೀ ಮೂರ್ಶ್ರೀ ನಾವುಗಳು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ