ಭಾನುವಾರ, ಜೂನ್ 28, 2026

Chaiyya Chaiyya | ಸೈಯ್ಯಾ ಸೈಯ್ಯಾ | #Gulzarish

ಗೀತೆ: ಚೈಯ್ಯಾ ಚೈಯ್ಯಾ
ಗೀತಕಾರ: ಗುಲ್ಜಾರ್
ಸಂಗೀತ: ಎಅರ್ ರಹಮಾನ್
ಚಿತ್ರ: ದಿಲ್ ಸೇ (೧೯೯೮)


----------------------------------------------------------------------------
ಎಲ್ಲ ಹಕ್ಕುಗಳೂ ಮೂಲಕೃತಿಕಾರರಿಗೆ ಸೇರಿದ್ದು
ಇಲ್ಲಿ ಬಳಸಿರುವುದು ಸೃಜನೀಯ ಅಭಿವ್ಯಕ್ತಿಯ ಭಾಗವಾಗಷ್ಟೇ ಹೊರತೂ
ಮೂಲಕೃತಿಯ ಯಾವುದೇ ಹಕ್ಕುಗಳನ್ನು ಇಲ್ಲಿ ಅತಿಕ್ರಮಿಸಲಲ್ಲ.
==========================================


ನೆತ್ತಿಯ ಮೇಲೆ ಅನುರಕ್ತಿಯ ಛಾಯೆಯಿದ್ದಲ್ಲಿ  
ಜನ್ನತ್ತು ನಡೆವುದಾ ಪಾದಗಳಡಿಯಲಿ
 । ಸೂಕ್ತಿ ।


ನಡೆ  ಸೈಯ್ಯ ಸೈಯ್ಯ ಸೈಯ್ಯಾ ಸೈಯ್ಯಾ
ನಡೆ ಸೈಯ್ಯ ಸೈಯ್ಯ ಸೈಯ್ಯಾ ಸೈಯ್ಯ  |ಪ|

ನೆತ್ತಿ ಪ್ರೇಮದಡೀ ನಡೆಸೈಯ್ಯಾ ಸೈಯ್ಯಾ
ಜನ್ನತ್ತು ಪಾದದಡೀ ನಡೀತಯ್ಯ  |ಅನು ಪ|


ಸಖರವರು ಪರಿಮಳದಂತೆ
ಅವರ ನುಡಿ ಉಋದೂನಂತೆ
ಎನ್ನ ಸಂಜೆ-ರಾತ್ರಿ ಎನ್ನ ಜಗವೇ ಖಾತ್ರಿ
ಆ ಸಖನೆನ್ನ ಇನಿಯನು ಸೈಂಯ್ಯಾ

ನಡೆ ಸೈಯ್ಯ ಸೈಯ್ಯ ಸೈಯ್ಯಾ ಸೈಯ್ಯಾ
ನಡೆ ಸೈಯ್ಯ ಸೈಯ್ಯ ಸೈಯ್ಯಾ ಸೈಯ್ಯ ।೧।


ತೊಟ್ಟ ಹೂವೆಲ್ಲೊ ಬಿರಿ ಠಾವೆಲ್ಲೋ 
ಸುವಾಸಿಸಲು ಕಾಂಬಹುದೆಲ್ಲೋ    
ತಾಯಿತ ಮಾಡಿಸಿ ಧರಿಸೇನು  
ಆಯತದೀ ನಿಲುಕೀತೇನು

ಸಖನೆನ್ನ ರುಜು ಗುರುವಂತೆ
ನುಡಿ ಮುತ್ತೆನಗೆ ವಚನವದೇ

ನುಡಿ ಮುತ್ತು ಮುತ್ತೆ ವಚನ ವಚನ
ನುಡಿ ಮುತ್ತೆ ಮುತ್ತು ವಚನ

ಯಾರಾದರ್ಶ ಇಬ್ಬನಿಯ ನಡೆ
ಪಾದದಡೀ ಜನ್ನತೇ  ನಡೆ
ಎಳೆ ಎಳೆ ಮೇಲೆ ಎಲೆ ಎಲೆಯ ಮೇಲೆ
ತಿಳಿಗಾಳಿಯಲರಸಿಹೆನಾ ಸೆಳೆಯ ನಡೆ

ನೆತ್ತಿ ಪ್ರೇಮದಡೀ ನಡೆಸೈಯ್ಯಾ ಸೈಯ್ಯಾ
ಜನ್ನತ್ತು ಪಾದದಡೀ ನಡೀತಯ್ಯ  
ನಡೆ ಸೈಯ್ಯ ಸೈಯ್ಯ ಸೈಯ್ಯಾ ಸೈಯ್ಯಾ
ನಡೆ ಸೈಯ್ಯ ಸೈಯ್ಯ ಸೈಯ್ಯಾ ಸೈಯ್ಯ  ।೨।


ನಾನಾ ಗುಂಗಿನ ಚೊಂಚೇನು 
ಆ ಇರುಳೂ ಬೆಳಕಿನ ಹೊಂಚೇನು
ತುಂಟಾಡುವ  ಚಂಚಲ ಕುಂಚವೇನು
ನಾ ರಂಗ ರೂಪಕs ಹೊಂಜೇನು

ಚಿತ್ತದಿ ಪ್ರೇಮ ಪ್ರಭಾವಳಿ
ಪಾದದಡಿ ನಾಕ ನಡಾವಳಿ 
ಸಂಜಿ-ರಾತ್ರಿ ಎನ್ನ ಜಗವೆ ಖಾತ್ರಿ
ಆ ಸಖನೆನ್ನ ಇನಿಯನೆ  ಸೈಂಯ್ಯಾ

ನಡೆ ಸೈಯ್ಯ ಸೈಯ್ಯ ಸೈಯ್ಯಾ ಸೈಯ್ಯಾ
ನಡೆ ಸೈಯ್ಯ ಸೈಯ್ಯ ಸೈಯ್ಯಾ ಸೈಯ್ಯ  ।೩।


=============================================================
ನೋಡಿ: 
1) https://blog.chandrahasa.com/archives/3168  
2) https://groups.google.com/g/rec.music.indian.misc/c/J04dtxkIQ48  
3) https://gulzar101.blogspot.com/2011/12/chhaiyya-chhaiyya-dil-se.html 
4) https://www.youtube.com/watch?v=znNAdZdtbFE

=============================================================

ಗುಲ್ಜಾರ ಸೂಫೀ ಕಲಂಮಿನ ಆಯತನ ವಾಂ ಮಂತ್ರಪುಷ್ಪವೆ ಸೈಯ್ಯ..!


ಸಹೃದಯಿ ಕಾವ್ಯಾಸ್ವಾದ ಸಾಧಕರೇ., 


ಶ್ರೀಶ್ರೀಶ್ರೀ ಮೂರ್ಶ್ರೀ ನಾವುಗಳ ಚಿತ್ತಭಿತ್ತಿ-
ಯ ಹಿನ್ನೆಲೆಯಲ್ಲಿರುವುದು ಟ್ಯೂಬ್ಲೈಟಿನ ಪ್ರಭಾವಳಿಯೇ!?!


ವೇದಮಂತ್ರಗಳು ಸಾಕಷ್ಟು ಕಿವಿ ಮೇಲೆ ಬೀಳುವಲ್ಲಿ ಬೆಳೆದ ಇತಿ ಶ್ರೀಗಳಿಗೆ
ಪ್ರಾಯಶಃ ಅಂಥಾ 'ಅನುಕೂಲ'ವಿಲ್ಲದೇ ಬೆಳೆದಿರಬಹುದಾದ ಶ್ರೀಮನ್ಮಹಾ
ರಾಜೇಂದ್ರರೇ
"ಚಂದ್ರ ನೀರ ಹೂ"  ಎಂದು ಪ್ರಸಾದಿಸಿದ ಮೇಲಷ್ಟೇ
"ಚಃದ್ರಮಾವಾ ಅಪಾಂ ಆಯತನಂ" ಎಂಬ 
ಮಂತ್ರಪುಷ್ಪದ ಕಾವ್ಯಾಯತನವು ಅಪ್ಯಾಯಮಾನವಾಂಗಿದ್ದು!


ಅದೇ ಗುಂಗಿನ ಭೃಂಗ ಗುಲ್ಜಾರನ ತೋಟದಲ್ಲಿ
 
"ಹೂವೇನು ಅರಳಿಹ ಠಾವೇನು
ಮೂಸುವೆನಾ ವಾಸನೆಯೇನು
ತಾಯಿತದಂತೆ ಧರಿಸುವೆನು
ಆಯತದೀ ನಿಲುಕೀತೇನು"

 
ಎಂದು ಬಂದದ್ದು... ಛೇ... 
ಬರೀ ಅನು-ವಾದನ  ಕಲ್ಪನಾ-ವಿಲಾಸವೇ..?

ಮಕ್ಕೀ-ಕಾ-ಮಕ್ಕೀಯಲ್ಲ  ಎಂದರೆ  
ಉಘೇ ಉಘೇ ಎಂಬವರು 
ಭೃಂಗಕ್ಕ-ಭೃಂಗ ಎಂದರೂ 
ವ್ರತಭಂಗವಾದಂತೆ ಮತ್ತೆ 
ಮಕ್ಕುಗಿವುದಿಲ್ಲ ಎಂದೇನು ಗ್ಯಾರಂಟಿ!?! 


ಹೋಗಲಿ, ಟ್ಯೂಬ್ ಲೈಟ್ ಕೊನೆಗೂ ಹತ್ತಿತೇ ಎಂದು ನೋಡಿದರೆ
ಹತ್ತಿದ್ದೂ ಸಹ ವೊಲ್ಟೇಜು ಪೂರ್ತಿಯಿರದೇ ತುಸು ಮಂದವಿರುತ್ತದೆ!


ಮಕ್ಕಳಾಟದಿ  "ಸುಬಃ ಶಾಮ ರಾತ್ ಮೆರೆ ಖಾಯೆ ಲಾತ್ ವೊ 
ಯಾರು ಮೆರಾ ಸೈಯ್ಯಾ ಸೈಯ್ಯಾ..!"
ಎಂದು ಅಣಕುವಾಡು ಗುನುಗಿ 
ಛೈಯ್ಯ ಛೈಯ್ಯ ಎಂದು ಕುಣಿದು ದಶಕವಾದ ಮೇಲೆ 
ಅದರಲ್ಲಿ ರಹಮಾನನ ಮೇಘರಾಗಮಾಲೆಗಳ ಬಂಡಿಯ ಮಾನ್ಯತೆ ಮನ ದಟ್ಟಾದದ್ದು...
ಮತ್ತೊಂದು ದಶಕವಾಗುವ ಹೊತ್ತಿಗೆ ಅದರ ಸುಖೀ ಗಾಯಕಿಯ ಹುಕಿ ಹುದುಗಿ ಬಂದಿದ್ದು...
ಮತ್ತೊಂದರ್ಧ ದಶಕವಾಗುವಾಗ ತತ್ಸಂಬಂಧ ಗುಲ್ಜಾರನ ಸಂದರ್ಶನಗಳ ಸಂದರ್ಶಿಸಿದ್ದು...
ನಿಧಾನ ನಮಗೆ ಈ ಸಾಲುಗಳಲ್ಲಿ ಇನ್ನೇನೇನೋ ಇದ್ದಿರಲಿಕ್ಕೇ ಸೈಯ್ಯಾ! ಎನಿಸ ತೊಡಗಿದ್ದು..
ಇವತ್ತು ಧಿಗ್ಗನೆ ಎದ್ದು ಯಾವ್ಯಾವುದೋ ಗುಂಗು ಗುಂಗುಗಳಲ್ಲಿ ಈ ಹಾಡಿನ ರಂಗು ರಂಗಾದ
ಪಲಕು ಪಲಕುಗಳ ಪದರ ಪದರಗಳು ಲೇಯರ್ಡ್ ಕೇಕಿನಂತೆ ಅನುವಾದನ ವ್ಯಾಸಪೀಠಾರೋಹಿಸಿದ್ದು...

ಸೊ,
ಇದನು ಮೂಸಿ ಮೂಸಿ ನಿಮ್ಮ ಎದೆದುಂಬಿದನ್ನು
ನೀವು ಸಹ ನಮ್ಮತ್ತ ಪುನಃ ಸೂಸಿ ಬಿಡಿ!

--ಎಂದು ಇತಿ ನಿಮ್ಮ
  ಶ್ರೀ ದುರಃಂ..!


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ