ಗುರುವಾರ, ಅಕ್ಟೋಬರ್ 15, 2026

ಹೂಸ್ ಹೂಸ್ ಇನ್ ಹೂಸ್ ಹೋಸೊ ಏನೋ..

ಬೆಂದಕಾಳೂರಿನೊಂದು ಸಂದಿಗೊಂದಿಯಲ್ಲಿ ಕೇಳಿ ಬಂದಿದ್ದು...


ಅಯ್ಯೋ.. ಅದೇನು 
ಮನೇ ತುಂಬಾ ಹೂ ಸುವಾಸನೆ 
ಅಂತೀರಾ!

ಅದೆಲ್ಲ ಅವ್ರೆ ಅಂತೀನಿ!!

ಹೂಂ, 
ಅವ್ರೆ!!! 

ಈ ಸಲ ಅವ್ರೆ ಬಿತ್ತವ್ರೆ.. ಬೆಳಸವ್ರೆ.. 
ಬೆಳೆಸಿದ್ದು ಅವ್ರೆ ಕಿತ್ತವ್ರೆ, ಕುಯ್ದವ್ರೆ! 
ಹಾಸ್ಕಂಡ್ ಬಿಡಿಸವ್ರೆ.. ಮಾರವ್ರೆ..
ಉಳಿದದ್ದು ವಾಪಾಸ್ ತಂದವ್ರೆ.. 
ಉಫಾಕಿ ಬೇಯ್ಸವ್ರೆ.. 
ಬೆಂದದ್ದ ಹಿತುಕವ್ರೆ! 
ತಿಂದವ್ರೆ..  

ಹಂಗಾಗಿ...
ಈಗ ಬತ್ತಾ ಇರ ವಾಸ್ನೆ..
ಅದು ಅವ್ರೆ ಅಂತೀನಿ!!!

---

ಅಲ್ಲಾ ಇವ್ರೇ.., 
ಹಂಗಾರೆ ನಮ್ಗೂ ಸ್ವಲ್ಪ ಅವ್ರೇ ಬೇಕಿತ್ತಲ!

 

-------------------------------------------------------------
ವಿ.ಸೂ.: ಹಂಗಾರೆ ಹೂ ಸೇಸ್ 
ಹೂಸ್ ಹೂಸ್ ಇನ್ ಹೂಸ್ ಹೋಸೊ 
ಏನೋ.. ಎಂದು ಕೇಳಿದಿರಾ... 

ಐ ಗೆಸ್ಸ್..  
ಆ ಕಥೆ ಹಿಂಗ್ಹಿಂಗೆ:

ಅತ್ತ ಜೆಂಟ್ಸ್ ಹಾಸ್ಟೆಲ್‍ನಾಗೆ ಲೇಟಾಧಾಂಗೆಲ್ಲ ಅರ್ಜೆಂಟಿಗೆ 
ಯಾರ ಚಣ್ಣ ಯಾರ್ ಯಾರೋ ಹಾಕ್ಯಂಡು
ಓಡೋಗಾದು ಸರ್ವೇ ಕಾಮನ್‍ಯಾ.. 

ಅಂತಿದ್ದಂತೆ...

ಲೇಟ್ ಲೀ 
ಇತ್ತ ಲೇಡೀಸ್ ಪೀಜೀ ಕಡೆಗೂ 
ಯಾರ್ ಲೆಗ್ಗಿಂಗು ಯಾರೋ, ಜೆಗ್ಗಿಂಗು ಇನ್ಯಾರೋ 
ಅರಜೆಂಟಾಗಿ ಹಾಕ್ಯಂಡು ಓಡೋಗೋರು 
ಅಂತ...

ಅದರಾಗೂ ಒನ್ನೊಂದ್ಸಲಾ 
ಯಾರದ್ದೊ 
ಬೆಡ್ದಿಂದ ಇನ್ಯಾರದ್ದೋ ಬಾಯ್‍ಫ್ರೆಂಡು
ಹಾಂಗೆ ಅರ್ಜಂಟರ್ಜಂಟಲ್ಲಿ ಸಿಕ್ಕ ಲೆಗ್ಗಿಂಗು ಜೆಗ್ಗಿಂಗಲ್ಲೇ 
ಕಾಲ್ ತೂರಿಸಿ ಅಂಡ್ ಮೇಲೇರಿಸ್‍ಕ್ಯಂಡು
ಕಿಟಕೀಯಿಂದಲೋ ಬಾಲ್ಕನಿಯಿಂದಲೋ ಹಾರಿ 
ಓಡ್ಹೋಗ್ತಿದಿದ್ದೂ ಹಂಗೆ 
ಸರ್ವೇ ಕಾಮಾನ್ಯ ವಿದ್ಯಮಾನವಾಗಿ 

ಕೊನೆಗೆ
ಎಲ್ಲರ ಹೋಸಲ್ಲು ಹೂಸೇ... 
ಎಂಬಿತ್ಯಾದಿ ನಾಣ್ಣುಡಿಗಳು ಚಲಾವಣೆಯಂತೆ.