ಭಾನುವಾರ, ಜುಲೈ 26, 2026

Hawa Hawa | ಚಕ್ಕರ್ದಂತೆ ಪಾದ | RockStar | Irshad Kamil

ಗೀತೆ:        ಹವ ಹವ
ಗೀತಕಾರ:  ಇರ್ಷಾದ್ ಕಮೀಲ್
ಸಂಗೀತ:   ಎ ಆರ್ ರಹಮಾನ್
ಚಿತ್ರ:         ರಾಕ್‍ಸ್ಟಾರ್ (೨೦೧೧)
ನಿರ್ದೇಶಕ: ಇಂತಿಯಾಜ್ ಅಲಿ

ಅಣುವಾದನ: ಶ್ರೀಶ್ರೀಶ್ರೀ ಮೂರ್ಶ್ರೀ ನಾವುಗಳು


---------------------------------------------------------------------------------------
ಎಲ್ಲ ಹಕ್ಕುಗಳೂ ಮೂಲದಲ್ಲಿನ ಕೃತಿಕಾರರು-ಹಕ್ಕುದಾರರುಗಳಿಗೇ ಸೇರಿದ್ದು.
ಈ ಪ್ರಸ್ತುತಿಯಿರುವುದು ಸೃಜನೀಯ ಅಭಿವ್ಯಕ್ತಿಯ ಅಭ್ಯಾಸದ ಭಾಗವಾಗವಷ್ಟೇ 
ಹೊರತೂ ಮೂಲಕೃತಿಯ ಯಾವುದೇ ಹಕ್ಕುಗಳನ್ನು ಈ ಮೂಲಕ ಅತಿಕ್ರಮಿಸಲಲ್ಲ.
=================================================
 

==============================================

This song is said to be a narration of a version of a popular European folktale
 (of  which there are many versions), given that it somewhat mirrors the heroine's story:
https://www.humanpotential.school/class/princess-with-twelve-pairs-of-golden-shoes
https://en.wikipedia.org/wiki/The_Twelve_Dancing_Princesses

==============================================
 

ಚಕ್ಕರ್ದಂತೆ ಪಾದ ರೊಂಯ್ಯ ರೊಂಯ್ಯ ಅಯ್ಯಯ್ಯೊ
ಆಗಸ ಚಿತ್ತದ ಸುತ್ತ ಸುತ್ತಿತಯ್ಯೊ 
ಮತ್ತ ನಾವು ಕೇಳಿದ್ವಯ್ ಐ ಐ ಅಯ್ಯೋ
ರಾಣಿ ತಿರುಗ್ತಾಳ ಬೆಳ್ಳ ಕಾಲ ಬೆಳ್ಳಗ ಹೊಳ್ಳಿಸಿ

ಚಕಚಕಚಕ ಚಮಕೀ ಚುಕ್ಕಿ
ರಾಣೀ ಮತ್ತ ಕಾಲೀಗೆ ಬುದ್ದಿ
ಹೋದವ್ಳು ಸವೆಸ್ಯಾಳ ಹೊಳ್ಳಿ
ಒಂದ ರಾತ್ರಿ ಹನ್ನೆರಡೊ ಚಪ್ಲಿ 

ರಾಜನಿಗೋ ಸ್ಥಿಮಿತ ತಪ್ಪಿ
ಕರೆಸಿದನೊ ಖಬರಿಯಪ್ಪಿ
ಇದೇನ್ ಮಷ್ಕಿರಿಯಪ್ಪಪ್ಪೋ ಹ್ಹೋ..
ಹೋಕ್ಕಾಳೆಲ್ಲಿಗಾ ನೋ..ಡೋ..

ಕದ್ ಬೆನ್ ಬಿದ್ನೋ.. ಅಂವ
ರಾತ್ರಿ ರಾಣೀಯೊ ಭಗದೊಳಗ
ಧಗಧಗನಾ ನಡಿಯೂದ ಕಂಡಾ (ಹ್ಹೋ)

ಹವಾ ಹವಾ ಹವಾ ಹವಾ
ಹವಾ ಹವಾ ಹವಾ ಹವಾ
(ಓಹ್ ಹ್ಹೋ)

ಬೆಂಕೀದೇನ್ ಜ್ವಾಲೆ  (ಓಹ್ ಹ್ಹೋ)
ರಾಣಿದೇನ್ ಜಾಲವೆ (ಓಹ್ ಹ್ಹೋ)
ಕುಣಿಯೋದು ಥಕ ಥಕ (ಓಹ್ ಹ್ಹೋ)
ನಾಗರ ನಶೆ ಪಕ್ಕಾ (ಓಹ್ ಹ್ಹೋ)

ಖಬರೀ ಗಾಬರಿಬಿದ್ದ  (ಓಹ್ ಹ್ಹೋ)
ಹೊಳ್ಳಿಸಿದ ಪಾದ! (ಓಹ್ ಹ್ಹೋ)
ಎದ್ದೂ ಬಿದ್ದೂ ಬಡಬಡಿಸಿದನವ 
ಅವ್ವ ಅವ್ವ
ಹವಾ ಹವಾ! ರಾಣಿ ಹವಾ!!
ಹವಾ ಹವಾ, ಹವಾ!!!

ಕುಣಿಸ್ಯಾಳ ಪಾದನಾ 
ಬಿಡು ಸಿಪಾಹಿಗಳೇನ ತಾನ  
ಓಹೋ ಬಜಾನ ಗಾನ 
ಕಾಣೆ ನಿಲ್ಲಲ್ಲಾ ಪಾದ 
ವಾಹ ಆ ಹಾವ ಭಾವ! 

ಹವಾ ಹವಾ 
ಎಗ್ಗ್ ಸಿಗ್ಗಿಲ್ಲ 
ಹವಾ ಹವಾ 
ನಿಲ್ಲಲ್ಲ ಮತ್ತ 
ಪಾದ ಪಾದ ಪಾದ

ರಾಜ ಉರಿಬಿದ್ದ
ದಿನಾ ರಾತ್ರೀನು
ಜೋಡು ಹನ್ನೆರ್ಡ ಸವೆಸ್ಯಾಳ ರಾಣಿ
ಕತಿ ಆಗೈತಿ ಹಿಂಗೆಲ್ಲಾ

ಹವಾ ಹವಾ 
ಹವಾ ಹವಾ 
ಪಾದ ನಿಲ್ಲೋಲ್ಲ ಯಾರಪ್ಪಣೆಗೂ
ಇವು ತಿರುಗ್ತಾ..ವೆ 
ಕುಣೀತಾ..ವೆ
ಅತ್ತಾಗಿತ್ತಾ ಎತ್ತ ಎತ್ತ ಮಸ್ತೀ ಲೆ



ಪಿತ್ತ ನೆತ್ತಿಗೇರಿ ರಾಜನಂತೂ ಅಂದ
ಓ ರಾಣಿ, ಯಾಕ್ಹಿಂಗ ಮಕ್ಕುಗಿದೀ 
ಮೂಗು ಮುರಿದೀ ಸ್ವಾಟೆ ತಿರುವಿದೀ
ನನ ಮರ್ಯಾದಿ ಬಜ್ಜಿ ಹುರಿದೀ
ಇವತ್ತಿಂದ ಬಂದ್ ನಿಂದೆಲ್ಲ ಓಡಾಟ 

ಅದ ಕೇಳಿ ರಾಣಿ ನಕ್ಕು ಹಿಂಗಂದಳು
ಓ ರಾಜ, ಚಿನ್ನದಾ ಗೋಡೆ ಗೋಳು 
ಎನ್ನನೆಂದು ಖುಷಿಯಾಗಿಡವು
ಬಿಡುಗಡೆಗೆ ನಡೆಸೆನ್ನನು
ಓ ಯನ್ನ ದೇವಾ..
ತೆಕ್ಕೋ ನಿನ್ನ ದೌಲತ್ತನು 
ಬಿಟ್ಟುಬಿಡೋ ಎನ್ನನು  
   
ಹವ ಹವ
ಹವ ಹವ

ಹಿಂಜರಿದು ಹಿಂದಕ್ಕ ಮುಚ್ಚು ಮರೇಲಿ
ಮಾಡದಿದ್ದೇನದು ಮಂದೀ ಮಂದೇಲೀ
ಮೈಮನ ಮರೆತು ಸ್ವಚ್ಛಂದ ಛಂದದಿ
ಕುಣಿದಾಳವಳು ತನ್ನಯ ಗುಂಗಲ್ಲಿ

ತನ್ನದೇ ರಂಗು ರಂಗ ಭಂಗಿ
ಹಂಗಿಲ್ಲ ಹೆಜ್ಜಿ ಲಜ್ಜಿ ಒಜ್ಜಿ
ಕುಣಿದಾಳು ಥಕ ಥೈ ಥೈ ಗೆಜ್ಜಿ 
ನರ್ತಿಸುತ್ತ ಸುತ್ತಿ ಸುತ್ತಿ ಸುತ್ತಿ
ಹೋದಾಳು ಸುಳಿಗಾಳಿಯಂದದಿ

ಹವಾ ಹವಾ
ಹ್ಹೊ ರಾಣಿ ಹವಾ 
ಪಾದ ನಿಲ್ಲಲ್ಲ ...
ನಿಲ್ಲೊಲ್ಲ ಯಾರಪ್ಪಣೆಗೂ
ಇವು ಸುತ್ತುತಾವೆ
ಕುಣಿಯುತ್ತಾವೆ
ಅಲ್ಲಿ ಇಲ್ಲಿ ಎಲ್ಲಿ ಎಲ್ಲಿ ಎಲ್ಲೆಲ್ಲು
ಚಕಚಕಚಕ ಚಮಕೀ ಚುಕ್ಕಿ
ಚಮಕೀ ಚುಕ್ಕಿ
ಚಮಕೀ ಚುಕ್ಕಿ
ಹವಾ ಹವಾ
ಹವಾ ಹವಾ
ಹವಾ ಹವಾ

=====================================


ಕೊಸರು: ನೆನಪುಗಳು ವಿಚಿತ್ರ. ಮೂರ್ಶ್ರೀ ನಾವುಗಳೂ ಮತ್ತು ನಮ್ಮ ಶ್ರೀಮಾನ್ ಪುರೋಹಿತರೂ ಒಟ್ಟೊಟ್ಟಿಗೆ ಪ್ರಾಹದಲ್ಲೆಲ್ಲಾ ನೋಡಾಡಿಕೊಂಡು ಬಂದಮೇಲೆ: "ಅಲ್ಲೆಲ್ಲಾ ಈ ಕಲ್ಲತಾರೆಯ ಗಾಥೆಗಳ ಚಿತ್ರೀಕರಣವಾಗಿದೆ, ಹಾಡುಗಳನ್ನ ನೋಡಿದರೆ ಸಾಕು -- ನಮ್ಮಂತ ಬ(ಭ)ಡವರನ್ನ ಫೋಟೊ ವೀಡಿಯೋ ಎಂದು ಕೇಳದಿರಿ..!" -- ಎಂದು ಒಂದಿಷ್ಟು ಕಾಲ ಪುಂಗಿದ್ದೆವಂತ ನೆನಪು. ಈಗ ನೋಡಿದರೆ, ಅರೆ ಆ ಸಿನಿಮಾ ಬಂದದ್ದು ನಮ್ಮ ಭೇಟಿಗೂ ೩ ವರ್ಷ ಮುಂಚೆಯೇ! ಹಾಡುಗಳು ಬಿಡುಗಡೆಯಾದಾಗಲೇ ಒಂದೇಟಿಗೇ ಅಭಿಮಾನಿಗಳಾಗಿದ್ದು ಸ್ಪಷ್ಟ ನೆನಪು. ಆದರೂ ಹೀಗೇಕೆ ಕರ್ರಪ್ಟಾಗಿದೆಯಲ್ಲ ನಮ್ಮ ಮೆಮೊರಿ ಕಾರ್ಡು...!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ