ಈ ಭೂಮಿಯಲ್ಲಿ ಏನೆಲ್ಲ ಬೀಜಗಳು ಎಷ್ಟೆಲ್ಲ
ಹಿಂಗಾರು ತುಸು ಸೋಂಕಿದ್ದಷ್ಟರಲ್ಲೇ ಆರಡಿ-
ಯುದ್ದವೆದ್ದು ಮೂರಡಿ ನಿಜಜಾಗದ ಜಗದಗಲ
ಸಸ್ಯಸಂಕುಲ ಜಗಳ ಮೃಗಜಂತುಖಗಗಳ ಗದ್ದಲ ಸಹಜ-
ಜೀವನ ಪೈಪೋಟಿ
ಇನ್ನೂ
ಮೊನ್ನೆಯಾಗಿಲ್ಲ ಹಾಯ್ದು ಹಿಟಾಚಿ ತಗ್ಗುಗಳ
ತುಂಬಿಸಿ ದಿಣ್ಣೆಗಳ ತಾಚಿ ಅತ್ತಿತ್ತ
ಚದುರಿಸಿ ಶತಶತಮಾನಗಳ ದಾರಿ-
ಸುಂಕವಿಲ್ಲವೆಂದು ಗುಡ್ಡಬಿದ್ದ ಸಂಕದಕಲ್ಗಳ / ಒಡೆದರೆ
ಒಂದೀಟು ಚಕಮಕಿಸಬಹುದಾಗಿದ್ದ ಬೆಣಚಿಕಲ್ಗಳ
ಇಟ್ಟಿಗೆ ಸಿಮೆಂಟು ಮರಳು ಗೃಹ-
ಭಗ್ನಾವಶೇಶಗಳ ಸರಿಸಿ ಸಪಾಟಾಗಿಸಿ ಅಷ್ಟಿಷ್ಟು
ಭೂಮಿಕೆ ಶತಕೋಟಿಗೆ ಜಾಹೀರು ಆಖೈರಾ
ಗಿರಲಿಕ್ಕಿಲ್ಲ ಇನ್ನೂ
ಉರುಳಿಸಿದ್ದ ಮರಗಿಡಗಂಟಿಗಳ ಕೊರಳುಲಿಯುರುಳು
ಉಸಿರು ಕಪ್ಪಿಸುವ ನಾಟಾಬಡ್ಡಿ ಜಿಗ್ಗುಗಳ ಚಿಟಪಟ ಸುಡುಧಗೆ
ಹೊಗೆ ಆಗ್ಗಾಗ್ಗೆ ಸಿಟಿಜನಜೀವನ
ಹೀಗಿನ್ನೂ
ನೀರ್ - ನಿರರ್ಥ
ಎದೆಯಾಳದಿ ತುಂಬು ಅರ್ಥವಂತಿಕೆ.., ಅರ್ಥಗಳೆದೆಯೊಳು ನೀರ್-ನಿರರ್ಥ...
Wednesday, November 20, 2024
ಆವರ್ತ - ೨
Sunday, July 16, 2023
ಆನೇ ಸೈಯ! (ಬೈಲಾನೆ ರೂಮರು - ೨)
(ಬೈಲಾನೆ ರೂಮರು / ನಿಶ್ಯಬ್ದ ಪ್ರಮಾಣ - ೨)
***
an English version of the full poem is here:
el phantom di camera
*****
(ಆನೆ ಭಾಗ ಒಂದನ್ನು ಇಲ್ಲಿ ತಟ್ಟಿ ನೋಡತಕ್ಕದ್ದು!)
***
ಪೈಸೆ ಬೆಲ್ಲ ಬಾಳೆಗೆ ಬಾಗಿ
-ಲುಗಳ ತಟ್ಟುವುದು
ಇತ್ತಾದರೂ ಆ ಭಾರ
ಸೊಂಡಿಲಿನಾಶೀರ್ವಾದ ತಲೆ
ತಡೆಯದ ದಿಗಿಲು
ಹುಟ್ಟಿಸೋದು ಸಾಕಿ ಪಳಗಿ
-ಸಿದ್ದದಾದರೂ
ದೇವ್ರಾಣಿ!
***
ಕಪ್ ಕುರುಡರಾನೆ ಕಾಲ
ಮುಟ್ಟಿ ನೋಡುವಲ್ಲಿ
ಬಿಳಿಯಾನೆ ಹೆಡ್ಡರ್
ಮೈ ದಟ್ಟಿ ನೋಡುವಲ್ಲಿ
ಪಾರ್ಶ್ವನಾಥರಾಲಯ ಮತ್ತೆಲ್ಲಿ
ಖೋಟಾನೋಟಗಳ್
ಬಟಾ ಬಯಲಲ್ಲಿ
ಹೇಗ್ಬಿಡಿಸಿದರ್ಹಾಗೆಲ್ಲಲ್ಲಲ್ಲಲ್ಲಿ
ಜಗಬಯಲಾನೇರೂಮರು
*****
........................................................................................
:trigger:
https://mobile.twitter.com/stpalli/status/1174913146273714177
Saturday, July 8, 2023
ಚರಿತಾ
ಚರಿತ್ರೆಯೆಂದರೆ ಘಟನಾವಳಿಗಳಂತೆ
ಚಾರಿತ್ರ್ಯವೆಂದರೆ ಚರಿತ್ರಾನಿರೂಪಕ
ವೆಂದಾರೋಪಿಸಲಾಗಿದ್ದಂತೆ ಹೀಗೆ
ಅಂತೆಕಂತೆಗಳೇ ಸೇರಿಕೊಂಡಂತೆ
ತೋರೋದು ಕಂಡಂತೆ
ಯಿಂತಾ ಆರೋಪಸ್ವರೂಪ
ಗಳ್ಯಾವತ್ತು ಅಂದುಕೊಂಡಂತೇ
ಎಂದುಕೊಂಡಂತೆ
ಆವತ್ತು ಯಾವತ್ತು ಎಲ್ಲ ತೆಗೆದು
ಚರಿತಾಂತ ಸ್ತ್ರೀತ್ವ
ವನ್ನಾರೋಪಿಸಿದಿರೋ
ಮತ್ತೂ ತಿಳಿ
ಯದಾಗುತ್ತೆ
ಆ ಯೋನಿಯಲಿ ತೋಚಿದಂತೆ ಗೀಚಿಕೊಳ್ಳೋದ
ತೊಡೆದು ಸಯನ್ಸಂತ ಯೂನಿ
ವರಸಲಾಗಿ ವಸ್ತುನಿಷ್ಠ ಸಗಣಿ ಸಾರಿಸಲಾದಂತೆ
ಅಲ್ಲಿ ಫೇನ್ಮಣ್ಣು ಪಥಗಳಿಗೆ ಯಥಾನು ವಜನು ಹಾಕಿ
ಕೂಡಿಕಳೆದು ವರ್ಗಕ್ಕೇರಿಸಿ ಸಂಯೋಜಿಸಿ ನೋಡಿದರೆ
ಸಿಗೋದು ಎಲ್ಲ ಒಂದಾಗದಸಂಭವನೀಯತೆಯಷ್ಟೇ
ಕಿಮಾಶ್ಚರ್ಯಂ
ಅಶ್ವಾತ್ಥಾಮನನಂತ ಬಾಳ್ಮೆಗೂ
ಇಷ್ಟೆಲ್ಲಾ ಮಾಬಾರ್ತ ನೋಡಿಯೂ
ನಮ್ಮ ಮುಂದಿರೋ ಪ್ರಶ್ನೆಯು
ಏನಚ್ಚರಿಯು?!
ಎಂಬುದಾದಂತೆ
ಉತ್ತರಿಸಲು ಪ್ರಯತ್ನಿಸುವ-
ರ ತಲೆಯೂ ಛಪ್ಪನ್ನೈವತ್ತಾರು
ಚೂರಾದಂತೇ
ಯನ್ನಲಿಕ್ಕೆ ಯಕ್ಷ ಬೇರೇನು
ಬೇತಾಳ ಬೇಕೇನು
ಉತ್ತರದಾಯಿತ್ವವಿಲ್ಲದೋನು
ಮೋಜುಗಾರ ಮಾಯಾಕಾರ ಪ್ರಶ್ನೆಕೋರನು
ಅರ್ಥಹೀನತೆಯ ವಕ್ಕಲು ಪುತ್ರಾಧಿಕರು
ಬಯಲುಬತ್ತಲಲಿ ಮತ್ತೆ ಬಣ್ಣ ತೊಡೆತೊಡಗುವರು
ಏನಚ್ಚರಿಯು ತೋರಿಕೆಗಾದರೂ ಕೆಲಸಮಾಡೋದು
========================================
mob + ಆರ್ತ = ಮಾಬಾರ್ತ
ಹತ್ತಿರದ ಬೆಟ್ಟದ ಮೆಟಾಥಿಯರಿಸ್ಟ
ಇದು ಇನ್ನೂ ಹತ್ತಿರದ ಬೆಟ್ಟದ ಕುರಿ-
ತೊದರುವಿಕೆಯಾದ್ದರಿಂದ ಸ್ವಾರಸ್ಯ-
ಕರವಿರಬಹುದೆಂದು ನೀವೆಣಿಸಿ-
ರ ಬಹುದಾದರೂ, ಈ ಬಹುದಾರಿಗಳಂ-
ಕುಡೊಂಕು ಕೊಂಕು ಉಬ್ಬುತಗ್ಗು ವನವಿಹಂಗ-
ಮೇತ್ಯಾದಿ ದಟ್ಟವಿವರಗಳೆಂದು ಬಗೆಬಗೆ-
ದು ಮಂಡಿಗೆ ಮೆಲ್ಲುತ್ತಿರ
ಬಹುದಾದರೂ ಹಾಗಲ್ಲವೆಂದೊದರಿಬಿಡು-
ತ್ತಾನು ಮೊದಲೇ ಪ್ರಸಿದ್ಧಾಂತಿ ಎಷ್ಟಾದರೂ
ಆಳ ನಿರಾಳ ಕೊರೆ ಕೊರೆದು ಬೋ
ರಿಂಗೆಂದು ಬಿಡುತ್ತಾನೆ ನಾಲ್ವತ್ತೇಳು
ನಿಮಿಷಗಳಷ್ಟು ತುತ್ತೂರಿಕೆಯಲ್ಲಿ ಸಂವಾಹಿಸಿದ್ದು ಹ್ಯಾಗೆ
ಇದು ಹಾಗಲ್ಲವೆಂಬ ಪ್ರಸಿದ್ಧಾಂತ ಪ್ರಸ್ಥಾನ ಮಾತ್ರವನೆ.
ಅಲ್ಲೀಮಟ ಹೋಗೂದು ಬ್ಯಾಡ್-
ಅನ್ನೋದು ಗೊತ್ತಿರೋ ಭೌತಾಗಮವೇ ಜ್ಯೋತಿರ್ವರ್ಷಗಳಳತೆ
ಗೋಲ್ಮಟ್ಟದಲ್ ಸರ್ವತ್ರ ಏಕಪ್ರಕಾರವಾಗಿ ಗೋಚರಿಸೋದು.
Friday, September 10, 2021
ಬೈಲಾನೆ ರೂಮರು / ನಿಶ್ಯಬ್ದ ಪ್ರಮಾಣ (೧)
ಬೈಲಾನೆ ರೂಮರಿಲ್ಲಿ
ಆದಿಯಂತ ಇಲ್ಲದಂತ
ಆಮೂಲಾಗ್ರಾಧ್ಯಂತ
ಇದೆಂತದೊ ದಂತಕತೆ
ಅವರಿವರಂದಂದಂತೆ
~~~~~~~~~~~~~~~~~~~~~~~~~
"It is high(tea) time (so) that we
address the elephant in the room(ers)"
~~~~~~~~~~~~~~~~~~~~~~~~~
ಈ ಕಡೆಯಿಂದಾ
ಕಡೆಯಾಗಕ್
ಕಡಕಡದೂ ದುಡಿತುಡಿದೂ
ಅಡಿಗಡಿಗೆ ಗಡಗಡಗುತ
ತಡೆತಡೀತ ಅಗಸೀ ಬಳಿ
ಸಾರುವಷ್ಟರಲಿ
"ಧೊಪ್ ಧೊಪ್!!"
"ಯಾರದು?!"
"ಆನೇ ಸೈಯ!!!"
ನೀ...
ನಾ...ಆ...
ನಿ!
-ಶಬ್ದಪ್ರಮಾಣವಾ
ದಂಗಾಗಿ
ಅಂದ್ ಕಂಡಿ
ಇದ್ ಆನೇ
ಇರಕ್ಕೂ ಅಂತ.
***
ಆನೆ ಕಂಡ
ರೂಂ ಅಂದರ ಅವಕಾಶ
ಆಲಯದ ಬಟಾಬಯಲೊ
ಬಟಾಬಯಲಾ
ಲಯವೊ
ಒಳಗಣಾನೆ
ಯೋ ದೇವ ಹೊರ
ಗಣ
ನೊ
***
ರೂಮಲ್ಲಿಯಾನೆ ಸುಮ್ನೆನೆ
ಬಯಲಾಗಬಹುದ
ರೂಮರ್ರು
ಬಟಾಬಯಲ್ ಬತ್ತಲೆನೆ
ಮಸ್ತ ರೋಮಿಂಗ
ಠಸ್ಕರ್ರು
***
ಬಿಳಿಯಾನೆ ಕರಿಕೋಣೆ
ಕೂಡಿಟ್ಟದು ಕಪ್ಪಾಯಿತೆ
ಕಣ್ಣಿದ್ದರು ಕುರುಡಿದ್ದರು
ಘೀಳಿಟ್ಟದು ಕೆಪ್ಪಾಯಿತೆ
***
ರೂಮು ಇದ್ದೆಡೆ ಯಡಮುರಿ
ಸಾಕ್ಷಿಗೆ ಸಾಕು ನಾಯಿಮರಿ
ಹಿಂದೆ ಬೊಗಳ್ತಾ ಓಡುತಲಿದ್ದರೆ
ಲದ್ದಿಬಿದ್ದಿತೊ ಮರಿ ಬೆನ್ನಹುರಿ
***
ರೂಮಾಗಲಂತೊಮ್ಮೆ
ಆಶೀರ್ವದಿಸಿದರಾನೆ ರೊಮ್ಮನೆ
ಅಥರ್ವಶೀರ್ಷದಂತನಾಹತ
ಚಿತ್ತದುಂಬದೇನೆ ಝುಮ್ಮನೆ
**********************************************************************
ಕೆಸರಲ್ಲಾಡಕ್ಕಾರೆ ಕರೀಕರಿ ಯನ್ನ ಕರ್ದು ಕಿವಿಯಲ್ಲುಸುರ್ದ ಕೊಸರು:
ಸರಕಾರೀ ಬಿಳಿಕರಿಯ ಕರ್ಕರೆಯದು ಕರ್ಕಶವಲ್ಲದಿದ್ದರೂ ಕಿರಿಕಿರಿಯೆನಿಸಿದಂತೆ ಬರಿ ತಲೆ ಕೆರೆಕೆರೆಯುತದನ ಸಂತೆಯ ತರಕಾರೀ ಸರಕೆಂಬಂತೆ ಕರಿಕಾರಲೇರಿಸಿ ಕರೆಕರೆತಂದು ಕರಾಮತ್ತಲಿ ಕರಿಕೋಣೆಯಲದರ ಬಿಳಿಹಾಲ ನೊರೆನೊರೆವಂತೆ ಕರೆಕರೆದು ಸುರಿಸುರಿದದರ ಕೆನೆ ಕಡೆಕಕಡೆದಾ
ನೀರ್ಮೊಸರ ಮಾರಾಮೋಸದಿ ಶೆರೆಯಂದದಿಳಿಸಿ ಕುಡಿಕುಡಿದಮಲಲ್ಲಿಯದರ ಮದಮಲವಂ ಸಹ ಕರಿದು ಕರಿದು ಕರ್ರಗೆ ಕರ್ರಿ
ಮಾಡುಂಡಾ ಮದಮತ್ತರು ಮತ್ತೆ ಮಾಡ್ ಹಾರ್ವಂತೆ ಹಾರಾಡಿ ತಲೆಬಡಿದೊಡೆದು ಕೋಡಿ ನೆತ್ತರದು ಹರಿಹರಿದು ಹರಿಹರೀಯೆಂದು ಮಡಿದರೂ ನಾಡಬಿಳಿಕರಿ ಕಾಡಕರಿಕರಿಯಾಗದೆಂಬ
ಕಡುಗುಟ್ಟದನಮದುಸುರೆಯ ಶೆರೆಶೆರೆದೂ ಮತ್ತೇರದೆನುವಬಕಾರೀ ಬಿಳಿಕಾರಿನ
ಹುಳಿನರಿಗಳೆಲ್ಲುಸುರಬಲ್ಲರು...
≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠
ಆನೆಯ ಇನ್ನೊಂದು ಭಾಗಶಃ ದರ್ಶನಕ್ಕಾಗಿ ಇಲ್ಲಿ ಸ್ಪರ್ಶಿಸಿ:
ಆನೇ ಸೈಯ! (ಬೈಲಾನೆ ರೂಮರು - ೨)
an English version is here:
el phantom di camera
ಸ್ಪೂರ್ತಿಸೆಲೆ:
https://mobile.twitter.com/stpalli/status/1174913146273714177
Saturday, June 5, 2021
ತಾನ.. ಧಿರತಾನ.. | Meethasa Ishq lage | Kailash-Kher / Virag Mishra
ಕೈಲಾಶ ಖೇರರ ಗಾಢವಾದ ಗಾಯಕಿಯಲ್ಲಿ
ಕಾಡುವಂತೆ ಧ್ವನಿಸಲ್ಪಟ್ಟಿರುವ
ರಮ್ಯ (ಸೂಫಿ-ಆಧ್ಯಾತ್ಮಿಕ?) ಪ್ರತಿಮೆಗಳ
ಒಂದು ಚಿಕ್ಕ ಚೊಕ್ಕ ಗೀತ
------
Original Song (Hindi):
Meetha sa Ishq Lage
Lyricist: VIRAG MISHRA
Artists: - KAILASH KHER
· SUZANNE D'MELLO
· BAPPA LAHIRI
Movie: A-Flat (2010)
--------
ಸಿಹಿಯಾಗಿ ಒಲವನ್ನಿಸೋದು
ಅಗಲಿಕೆ ಕಹಿಬೇವು
ಸ್ನೇಹವೆನದದುವೆ ದಿಟವೊ
ಹುಸಿಯೊಂಟಿತನವು
ಬೆಳದಿಂಗಳನ್ನ ಮೇಲೆ
ಚಾದರ ಹೊದ್ದಿಸಿತೊ
ಹೊದ್ದೆಯೇನು ನೀನು ಎನ್ನ
ಉಸಿರು ಮರಳಿ ಬಂದಿತೊ
ಮದರಂಗಿ ಬಣ್ಣ ಹಾಗೇ ಗಾಢವಾಯಿತೊ
ಒಂದು ಕ್ಷಣದಿ ಹಾ ಏನಾಯಿತೊ
ಗೆಜ್ಜೆಗಳಾ ಸದ್ದು ಹೇಗೆ ನಿತ್ತುಬಿಟ್ಟಿತೊ
ಒಂದು ಕ್ಷಣದಿ ಹಾ ಏನಾಯಿತೊ
ಮನ ಒಪ್ಪದೊ
ಏನೂ ತಿಳಿಯದೋ
ಹುಚ್ಚು ಪತಂಗ ಹಾರ್ವುದೋ
ತಾನ ಧಿರತಾನ ತಿರತಾನ ಧಿರನ ತೊಂ
ಮಾತಿಲ್ಲದೇನೆಲ್ಲಾ ಹೇಳಿಬಿಟ್ಟನೊ
ರಾತ್ರಿ ಪೂರ ಮಥಿಸುತಿದ್ದೆನೊ
ದೇವದೂತನೋರ್ವನೆನ್ನ ತಡವಿ ನಡೆದನೊ
ಯಾರದು ನಾ ಅರಸುತಿದ್ದೆನೊ
ಮನ ಒಪ್ಪದೊ
ಏನೂ ತಿಳಿಯದೋ
ಹುಚ್ಚು ಪತಂಗ ಹಾರ್ವುದೋ
ತಾನ ಧೀಂ ತಾನ ಧಿರತಾನ ಧಿರನ ತೂಂ
*****
Thursday, May 6, 2021
ಮರೆವೂ ಇರುವೂ ಮತ್ತಿತರ ಮಿನಿಮಿಣುಗು
ಮರೆವೂ ಮರೆವೂ ಅಂದಂದು
ಮರೆತೇ ಹೋದಂತರಿವಿಂದ
ಬಿಚ್ಚುಮರೆವಿನಿರುವಿಂದು
--------------------------------------
ನೆರೆವ ನೆರೆ ಯೊಡನೊಡನೆ
ಕರೆ ಕರಕರೆ
ಬೆರೆ ಬೆರೆ ಬೆರೆ
ಬರ ಬರ್ಬರ ಬರೆ ಬೇರೆ
--------------------------------------
Monday, May 3, 2021
ಬಳಿಬಂದರಾರೋ ಬೆಳ್ಳಂಬೆಳಗ್ಗೆ | Jagjith Singh / Saeed Rahi | koi paas aaya sawEre sawEre
---------------------------------------------------------
ಗೀತ ರಚನಾಕಾರ: ಸಯೀದ್ ರಾಹಿ
ಮೂಲ ಸಂಯೋಜಕ /ಗಾಯಕ: ಜಗಜಿತ್ ಸಿಂಗ್
(Come Alive LP / ೧೯೭೯)
ರಾಗ: ಲಲಿತ / ಲಲತ್ / ಲಲಾಟ
ತಾಳ : ೫ ಮಾತ್ರೆಗಳ ಜಾಝ್ ತಾಳ / ಸೂಲಫಾಕ ತಾಳ
/ ೫x೨=೧೦ ಮಾತ್ರೆಗಳ ಮಾರ್ಪು-ಝಾಪ್ ತಾಳ
(ನೋಡಿ: A 'wild' improvisation:
https://www.youtube.com/watch?v=ariXkdS7heY
ಪಂ . ಝಾಕಿರ್ ಹುಸೇನ್ - ಹರಿಪ್ರಸಾದ್ ಚೌರಾಸಿಯಾ ಅವರೊಂದಿಗಿನ ಕಚೇರಿ :
https://www.youtube.com/watch?v=TxF8qAFUrTQ )
-------------------------------------------------------
ಬಳಿ ಬಂದರಾರೋ
ಬೆಳ್ಳಂಬೆಳಗ್ಗೆ
ಯನ್ನ ಮೈದಡವಿದರು
ಬೆಳ್ಳಂಬೆಳಗ್ಗೆ
ಎನ್ನದೇ ಕಥೆಯ
ತುಸುವೇ ತಿರುಗಿಸಿ
ಯನಗೇ ಅರುಹಿದರು
ಬೆಳಗ್ಗೆ ಬೆಳಗ್ಗೆ
ನಿನ್ನೆಯಿರುಳಲಂತಿದ್ದಿದು
ಸಂಭಾಳಿಸು ಸಂಭಾಳಿಸು
ಅಲ್ಲೇ ತಡಂಬಡಿಸಿದ್ದು
ಬೆಳಗ್ಗೆ ಬೆಳಗ್ಗೆ
ಕಳೆದಿತೆನ್ನ ರಾತ್ರಿ
ಪೂರ ಪಾನಗೃಹದಿ
ದೈವ ನೆನಪಾಯಿತು
ಬೆಳಗ್ಗೆ ಬೆಳಗ್ಗೆ
ಇರುಳಿಡೀ ಬೆಳಗಿತ್ತು
ಯಾವೊಂದು ಬತ್ತಿ
ಅದನೇ ಸುಟ್ಟೆವು
ಬೆಳಗ್ಗೆ ಬೆಳಗ್ಗೆ.
koī paas aayā savere savere
mujhe āzmāyā savere savere
merī dāstāñ ko zarā sā badal kar
mujhe hī sunāyā savere savere
jo kahtā thā kal shab sambhalnā sambhalnā
vahī laḌkhaḌāyā savere savere
kaTī raat saarī merī mai-kade meñ
ḳhudā yaad aayā savere savere
jaleethī shamā raaT bhar jis ke khāTir
ushee ko jalāya savere savere
ಇರುಳಿಡೀ ಬೆಳಗಿತ್ತು ಯಾವೊಂದು ಜ್ಯೋತಿ
ಬೂದಿಯಾಯಿತದುವೆ ಬೆಳ್ಳಂಬೆಳಗೆ
Wednesday, July 22, 2020
Saturday, June 20, 2020
ದೂರದಲ್ಲೆಲ್ಲೋ ದಿನ ಮುಳುಗಿದಂತೆ / kahin door jab din dhal jaayen / योगेश गौर
ಇತ್ತೀಚೆಗೆ ನಿಧನರಾದ ಹಿಂದಿ ಚಲನಚಿತ್ರಗೀತಸಾಹಿತಿ, ಶ್ರೀಯುತ ಯೋಗೇಶ್ ಗೌರ್ , ಅವರ ಬಗ್ಗೆ ನಮಗೆ ತಿಳಿದದ್ದು ಕಡಿಮೆಯೇ...
ಹಾಡಾಗಿಸಿ ಅಮರರಾದವರೆಲ್ಲರಿಗೂ ಕಿರುಕಾಣಿಕೆಯಾರ್ಪಣೆಯಾಗಿ ಈ ಹಾಡನುವಾದ.
************************************
ಎಲ್ಲೋ ದೂರದಿ
ಎನ್ನ ಕಲ್ಪನೆಗಳಾಂಗಳದಲಿ
ಅದೊಮ್ಮೆ ಉಸಿರದು ಭಾರವಾದಂತೆ
ಆಗ್ಗೆಯೇ ಮಿಡಿದು
**
ಒಮ್ಮೊಮ್ಮೆಯೆಲ್ಲಿ ಹೃನ್ಮನ ಸೇರವೊ ಅಂತೇ
ಘನ ಸಂಕಟವು
**
ಅರಿವುದು ಎದೆಯದು ಗುಟ್ಟೆಲ್ಲದನು
ಎನ್ನೀ ಕನಸುಗಳು
*****************************************************
ಅಂದರೆ, ನಮ್ಮ ಈ ಪ್ರಸ್ತುತ ಚಿತ್ರಗೀತ ಸಾಹಿತಿ ದಿವಂಗತ ಶ್ರೀ ಯೋಗೇಶ್ ಗೌರ್ ಅವರು, ಆನಂದ ಸಿನೆಮಾದ ಸಂದರ್ಭದೊಟ್ಟೊಟ್ಟಿಗೆ ಈ ಮೊದಲೇ ಸಂಯೋಜಿತವಾದ ಸಂಗೀತಕ್ಕೆ ತಕ್ಕಂತೆ ಬರೆಯುವ ಪಣವನ್ನು ಸಹಾ ಏಕಕಾಲದಲ್ಲಿ ಸುಲಲಿತವಾಗಿ ನಿಭಾಯಿಸಿದ್ದಾರೆ ಎನ್ನಬಹುದು. ಅವರಿಗೆ ನಮ್ಮ ನಮನಗಳು.
Sunday, April 26, 2020
ಕಥಾಶಿರಸ್ಸು
ಈ ಐಎಮ್ಮು ಈ ಕಥಾರಸಿಸ್ಸು
ಈ ಏವಠಾರ ಸ್ಟೇಟ್ಸು
ಹೊಂದಿ ಹೊಂದಿ ಚಟಕ್ಲೀಷೆಯಾಗಿ
ರಸ್ತೆಮಗ್ಗುಲಗುಂಟ ನಡೆದದ್ದು
ವಾಸ್ತವ್ಯಕ್ಕೆ ಪರ್ಪೆಂಡಿಕ್ಯುಲರಾಗಿ
ಶಿರಸ್ಸು
.
----------------------------------
*ತಿರುಮಲೇಶತ್ರಿಬ್ಯೂಟು
*Avatar-tLAb ರೆಫರೆನ್ಸು
Wednesday, January 8, 2020
ಕುಂಕುಮ | ಶಹರ ಮಕ್ಕೊಂಡಾಗ್ಗೆ | ರಕ್ತರಾತ್ರಿ
Date: Fri, Sep 8, 2017 at 6:59 AM
Subject: ಅನುವಾದ: ಯಾವ ರಾತ್ರಿ ಮುಗಿಲಿಂದ ರುಧಿರವೇ ಸುರಿಯಿತೊ
To:
Dears,
translation in progress
impatience too much
times running out
help through your
comments and suggestions pls ..
twbr,
durahankari duRANdhararu
------------------------------------------------------------------------------------------------------
occasion : presentimes
moovie: Gulal
musicist lyricist singer: Piyush Mishra
links:
https://youtu.be/yQ0t8LcL498
https://creationsgalorehere.wordpress.com/2014/08/06/jab-sheher-humara-sota-hai-gulaal-lyrics-hindi/
http://bwlyric.blogspot.it/2013/12/sheher-gulaal.html
===================================================
ಒಂದುಕಾಲದ ಮಾತು ಹೇಳೋಣು
ಆದೊಂದು ಕಾಲದಲೆ
ಯಾವಾಗ್ಗೆ -
ಶಹರ ನಮ್ಮದು ಮಲಗಿಬಿಟಿತ್ತೊ
ಆ ರಾತ್ರಿ ಮಾಯಕದಲೆ
ನಾಕೂಕಡೆಯು ಮಿಕ್ಕೆಲ್ಲ ದಿಕ್ಕಿಂದಲೂ
ಕೆಂಪೇ ಹೊಚ್ಚಿತಲೆ
ಮಿಂಚುಳ್ಳೆ ಕುಣಿದುದು ಸೆರಗನು ಹೊದ್ದು
ರುಧಿರವೆ ಮಿಂದಿತಲೇ
ನಾಕುಕಡೆಯಲು ಕುಂಕುಮವೆ ಛಾಪಿಸಿತಲೆ
ನಾಕೂಕಡೆಯಲೂ
ವಿಪತ್ತಿಯಾವರಿಸಿತಲೇ..
ಯಾವ ರಾತ್ರಿ ಮುಗಿಲಿಂದಲೆ
ರಕುತದ ಮಳಿಯೇ ಬಂದಿತ್ತಲೇ..
ಮಿಂದೆಹೋಯಿತು ಊರೆಲ್ಲವೂ
ಮಿಂದೆಹೋಯಿತು ಮಣ್ಣೆಲ್ಲವೂ
ಮಿಂದೆದ್ದಿತೇ ಸಕಲ ಜನಸ್ತೋಮವು
ಇಡೀ ಜಗತ್ತು ಕೇಳಿತು ಆಗಲೇ
ಇಷ್ಟೆಲ್ಲಾ ಆಗ್ತಿತ್ತ ಹಂಗಾದರ
ಅವಾಗಲೇನಣ ಕಣ್ಣಾಮುಚ್ಚೆ
ಮಕ್ಕೋಂಬಿಡೋದು ನೀನಾದರ
ಶಹರ ಹಿಂಗಂತಲೇ
ಹ್ಯಾಂಗ ಹೇಳೋಣು ಎಂಥಾ
ನಿದಿರಿ ಬಂತಂದರ..
ಯಾವ ರಾತ್ರಿ ಮುಗಿಲಿಂದಲೆ
ರಕುತದ ಮಳಿಯೇ ಬಂದಿತ್ತಲೇ..
ಸ್ಮಶಾನ ಮೌನವೋ ಮೂಕವೋ
ತಿಳಿಯದಂತೆ
ಜೀವನವನೆ ಕಸಿಯುತ್ತೆ
ಮಗ್ಗಲು ಬದಲಿಸಿದಂತೆ
ಬಿರುಗಾಳಿಯಂತೆ
ಮುತ್ತಿಕ್ಕುತವೆ ನೆರಳುಗಳು ಕಪ್ಪಿಡುವಂತೆ
ಒರಟು ಕೂದಲೆಲ ಕೆದರಿದಂತೆ
ನುಗ್ಗುತ್ತವೆ ಮಬ್ಬು ಪಿಶಾಚರಂತೆ
ಕಂಪಿಸುತ್ತೆ ಜೀವ ಅವು ಕುಣಿದಂತೆ
ಅಲ್ಲೆಲ್ಲೋ ಆ ಬೂಟುಗಳ ಟಕಟಕೆಯು
ಅಲ್ಲೆಲ್ಲೋ ಆ ಕೆಂಡಗಳ ಚಟಪಟೆಯು
ಅಲ್ಲೆಲ್ಲೋ ಆ ಜೀರುಂಡೆಗಳ ಕೀರಲು
ಅಲ್ಲೆಲ್ಲೋ ಆ ನಲ್ಲಿಯ ಟಿಪಟಿಪೆಯು
ಅಲ್ಲೆಲ್ಲೋ ಆ ಕಪ್ಪು ಕಿಡಕೀಯು
ಅಲ್ಲೆಲ್ಲೋ ಆ ಮಬ್ಬು ಚಿಮಣೀಯು
ಅಲ್ಲೆಲ್ಲೋ ಆ-ಕಳಿಸೋ ಗಾಳಿಮರಗೋಳು
ಅಲ್ಲೆಲ್ಲೋ ಅಡ್ಡಗೋಡೆ ಮೇಲಿಟ್ಟಂತೇನೇನೋ...
ಏಳೇಳೇಳೇಲೆಲೆಲೇಲೇಲೇ.. ಹೋ!
ಸ್ಮಶಾನಗಲ್ಲಿಯಲ್ಯಾವ ಮೂಲೆಯಲದೆಂದು ನಾಯಿ ಯಾವ್ದೋ
ಚೀರಿ ಚೀರುತ್ತ ರೋಧಿಸಿತ್ತಲೆ
ಅದ್ಯಾವಾಗ್ಗೆ ಬೀದಿಗಂಬದ ಗಬ್ಬು ಮಬ್ಬಲ್ಲಿ
ಏನ್ ಏನೋ ನಡೀತಿತ್ತಲೆ
ನೆರಳು ಯಾವುದೋ ತುಸುತುಸುವೇ ಯಾವತ್ತನು
ನಾಪತ್ತೆನೆರಳುಗೋಳಲಿ ಕಳೀತಿತ್ತಲೆ
ಸೇತುವೆಗಂಬಗತ್ತಲೆಗೋಳಿಗೆ ಬೆಚ್ಚಗ್ಯಾವಾಗ್ಗೆ
ನಿಧಾನ ಮೋಟಾರು ಬೆಳಗುತಿತ್ತಲೆ
ಆಗ್ಗೆ,
ಶಹರ ನಮದು ಮಕ್ಕೊಂತಲೆ ||(೩ಸಲ)||
ಶಹರ ನಮ್ಮದು ಮಕ್ಕೋಂಡಾಗಲೆ
ಗೊತ್ತಾ ನಿನಗ ಏನ್ ಏನೆಲ್ಲ ನಡೀತೈತೆss
ಇತ್ತ ಹೆಣಗಳೆದ್ದು ಕುಣಿಯುತ್ತಲೆ
ಅತ್ತ ಬದುಕಿದವ ಶವ ಸಾಯುತ್ತ್ತಲೆ
ಇತ್ತ ಚೀರುವಳು ಫ್ರೀಯಾಸ್ಪತ್ರೆಯಲಾಕೆ ಕಂಪಿಸುತ್ತಲೆ
ಅವಳೆದುರ ಬರತೈತ ಮತ್ತ ನವಮಾಂಸದ ಒಂದು ಮುದ್ದೆ
ಇತ್ತಲೇಳ್ತವೆ ತಕರಾರುಗೋಳೆತ್ತರೆತ್ತರ ಮೈಮೈಗೋಳ ಜಟಾಪಟಿ ಲೇವಾದೇವೀಲೇ
ಅತ್ತ ಸಂಭಧಗಳುಬ್ಬಿಸುತ ಘಾಯ, ಕಂಡರೂವೆ ದೂರದಲಲೆವ ಕಂಗಳದುವ ಸತ್ತಂತಲೆ
ಅದರೂ ಅದನೆ ಎತ್ತಿ ಬಣ್ಣಬಣ್ಣಗಳ ಹರಕೆಜಾತ್ರೆಗೋಳೇ ಆಗತೈತಲೆ
ಮದ್ಯಮಧ್ಯೇ ಮಿಂದ ನೈವೇದ್ಯೆಯಿಂದಲೆದ್ದುದಿಸಿದೇ ಕುಚೋದ್ಯೆ
ಅರೆನಗ್ನದೇಹಗಳ ನೋಡು ಹೇಗೆ ತೊಡೆದು ಶೃಂಗಾರ ಮಾಡೈತೆಲೆ
ಕೆಂಪುಬಳ್ಕಂಮುಸುಡಿಗಳಿಗೇನೇನೋ ಪುಂಡಾಟಿಕೆ ನಡೆಸೋಕಲೆಲ್ಲೋ ತುರಿಸೈತೆ
ಅವರೆಲ್ಲ ಕೇಳ್ತಾರೆ ಹೈರಾಣಾಗೇ, ಹೀಗೆಲ್ಲಾ ಅಗೋದ್ ಯಾವಾಗ್ಗೆ
ಅದ ತಿಳಿಸಿಬಿಡು ಅವರಿಗೆ, ಹೀಂಗ ಹಿಂಗಾಗೋದು ಯಾವ್ ಯಾವಾಗ್ಗೆ
ಅಂದರ,
ಶಹರ ನಮದು ಮಕ್ಕೊಂಡಾಗ್ಗೆ
ಶಹರ ನಮ್ಮದು ಮಕ್ಕೊಂಡಾಗ್ಗೆ
ಶಹರ ನಮ್ಮದು ಮಕ್ಕೊಂಡ್ಹಾಗೇ
ಹೋ..!
Tuesday, March 19, 2019
ಮಿಸ್ತ್ರಾಲ ಮಿಸ್ಕ್ಯಾರಿಯೇಜು | ಸಂಕ್ಷಿಪ್ತಾವೃತ್ತಿ
(ಸಂಕ್ಷಿಪ್ತ ಆವೃತ್ತಿ)
(ಹಿಪ್/ಹಾಪ್/ರ್ಯಾಪ್ ಅನುಸರಣದೊಂದೆಸೆತ ಬೇರೆಡೆಯಿದೆ )
=========================
ತಂಗಾಳಿ ಬಿರುಗಾಳಿಯಂತೆ ಬೀಸುತ್ತ ಹವೆ
ಬಲು ಮೂಡಿ; ಜನಮನ
ಸಿಗದೇ ಹೋಪ ಹಿರಿದ್ವೀಪ
ಕಿರಿಪಾದ
ಮಾನಸರಾತೋ ಹೊರಗೆ ಸುತ್ತಲೋ
ಮೋಡಗಳು ಕವಿಯುತ್ತವೆ ದೂರದಲ್ಲಿ ಮತ್ತೆ
ಒಳಗೆ ಸುತ್ತಲು
ಕತ್ತಲಲ್ಲಿ ಕಣ್ಣಿಟ್ಟವರಿಗೆ ಹಠಾತ್ತನೆ ಮೂಡಬಲ್ಲ
ನೂರು ತಾರೆಯೂ ಮುಚ್ಚುವಂತ ಮಾಡಿನಾ
ಪಯೋದಗರ್ಭದೊಳದೇನೋ ಮಾಟ
ಅಂತರಪಿಶಾಚಿ ಗುಡುಗಾಟ ಮಿಂಚಿನಕಾಟ
ವಾದರೂ ಇಲ್ಲಿ ಸುರಿಯುವುದಿಲ್ಲ;
ಮಬ್ಬು ಮಬ್ಬಾದ ಸಂಕಲ್ಪನೆಗಳೂ
ಕಪ್ಪಿಟ್ಟರೂ ಬಿಲ್ಲ ಮೂಡಿಸಿದರೂ
ಸ್ಪುರಿಸುವುದಿಲ್ಲ.
ಇಲ್ಲಿ ಒಗ್ಗೂಡಿಸಲ್ಪಟ್ಟ ತೇವ
ಇಲ್ಲೇ ಮಳೆಯಾಗಬೇಕು;
ಗಾಳಿ ಹಾವಳಿ ಬಿಡುವುದಿಲ್ಲ.
ಇಲ್ಲಿ ತಳೆದ ಬಸಿರು
ಯಾವ ಬಿರುಸಿರಿಗೋ
ಇನ್ನೆಲ್ಲೋ ಸಂ ಹೌ
ಹಾರಿದಂತಿದೆಯಲ್ಲ.
ಇಲ್ಲೇ ಮಳೆಯಾಗಿದ್ದಿರಬಹುದಾದರೂ
ನಮ್ಮ ಟೈಮಿಗಿಲ್ಲ.
Monday, March 18, 2019
ಮಿಸ್ತ್ರಾಲ ಮಿಸ್ಕ್ಯಾರಿಯೇಜು | ರ್ಯಾಪಾವೃತ್ತಿ
Thursday, March 7, 2019
ತರ್ಕಕೂಪೀ ತಾರ್ತೂಫಿ
ಹಾಂಗಲ್ಲ ಅಂದ್ರೂ ತರ್ಕ
ಇನ್ನು ಹ್ಯಾಂಗಂದ್ರೆ ಹಂಗೇನೂ
ಹೇಳೊಕ್ಕಾಗೊಲ್ಲಾಂದ್ರೋಂದ್ರೂನೂವೇಯ
ಪ್ರತರ್ಕ
ಇದೆಲ್ಲದರ ಮೇಲೇನೂಂತ ನೋಡಲೇ-
ನೋ ಎಂಬಂತೆ ಮೇಲ್ಮುಖ
ಜಿಗಿದುಗಿದದಾಮೇಲೆ ಪುನರಪಿ ಕೂಪ
-ದೊಳಳಾಳ ಬಿದ್ದೇಳೂ ಮಾಂ
-ಡೂಕ್ಯಗಳು ಪ್ರಕೂಪದಲ್ಲರಳೂ
ತಾರ್ತೂಫೀ ಮಶ್-
ರೂಮಿ ನಾವ್ ಗೆಂಡೆ ಮೊಟ್ಟೇ
-ಚಿಪ್ಪಿನೊಳ ಭಾಗ-
ಶಃ ಮುಟ್ಮುಟ್ಟಿ
ನೋಡ್ಕ್ಯಳ್ಳ ಶ್ರೀ-
ಮಾನ್ key
Monday, June 18, 2018
ಭಾವ ಇಲ್ಲಿ ಅಭಾವ
ಲತೆಯದುರಿತು,
ಹೂ ಉದುರಿತು.
ಹವೆಯದಲ್ಲ, ಹೂವಿನದಲ್ಲ,
ತಪ್ಪು ಯಾರದ್ದು?
ಪರಿಮಳ ಹವೆಯಲಿ ಕಳದೇ ಹೋಯ್ತು,
ಏನು ಉಳಿಯುತು!?
a light breeze passes by,
shivers a branch, fell
a flower.
of the breeze, none;
nor flower's;
whose fallacy it is!?
fragrance lost -
in the thin air,
nothing lasts!?
Thursday, May 10, 2018
ಇತ್ತು
'ಇರುವು' / 'ಇತ್ತು' / 'ಗಾಳಿಗೋಪುರ' / 'ಮರಳ್ಮರಳು'
/ "ಬೀಸಿತು 'ಅರಳದೇ ಮರಳಿದೇ' ಎನುವ ಲೋಪಸಂಧಿವಾತಂ"
.
ತಿಳಿ
ಬೆಳಕಲ್ಲಿ
ಮಿರಮಿರನೆ ಮೆರೆದಂತೆ
ತಂಬೆಳಕಿಗೋ ಅದುವು
ನೊರೆನೊರೆಯೊರೆದಂತೆ
ಯಾವತ್ತಿಮಿರ ಮರೆವಂತೇ
ನೋ ಮರ್ಮರವನೆ
ಮೊರೆಮೊರೆಮೊರೆಯುತಾ
ಬೆಳ್ಳಬೆಳ್ಳಾದ ಮಳ್ಮಳ್ಳ
ಆ
ತೀರದುದ್ದ
ಇಲಿಬಿಲತರಿತಂತೆ
ಗುಹೆ ಗುಹೆಯ
ಬಗೆ ಬಗೆವ
ಕರಣ
ಹುಗಿ ಹುಗಿವ
ಪಾದ
ತೆಗೆತೆಗೆವಾಟ
ದಾ
ದ್ಯಂತ
ಬೆಳೆಬೆಳೆದಂ
ತಾ
ದಂತ
ದಂತಃಪುರದಲಿ
ಹಾಗೆ ಹೊರಳಲು
ಮರಳು!
ಹೊಮ್ಮರಳು!!
ಹುಸಿಮರಳು
ತಳದಿ
.....
....
...
..
.
.......
೦೫/೧೮
Thursday, May 3, 2018
ತತ್ವ ಮಸಿ
ಸೃಷೇಲಯೋಸ್ತಿಃ
.......................................
ಇದಕ್ಕೆ ಕಾದದ್ದು ಸಾಕೆನಿಸಿ, ಹಾಗ್ಗೆ, ಸಧ್ಯಕ್ಕಿದು
'ತಾಕಲಿಲ್ಲದ ಟೊಣಪೆ' )
Tuesday, May 1, 2018
ತಾಕಲಿಲ್ಲದ ಟೊಣಪೆಯ...
ಒಂದು ಬೀಗ, ಮತ್ತೊಂದು ಕೀಲಿಗೈ.
ಹೇಳದೇ ಮಾಡಿಸಿದಂತೆ ಜೋಡಿಯದೆಂದೆಂದು
ತೂರಲಾರದಾ ಬೀಗದೊಳಗಾಕೈ; ಅಥವಾ
ತೆರೆದುಕೊಳ್ಳುವುದಿಲ್ಲವಾ ಕೀಲಿಯಲಾ ಬೀಗ,
-- ಹೇಗೆಂದರೂ ಅದು ಹಾಗಷ್ಟೇ ಸೈ?
ಇರುವುದವೆರಡು, ಅರಿವುದಾದರೂ ಆವೆರಡು,
ಬೀಗಕ್ಕೂ ಜೈ; ಕೀಲಿಗೂ ಜೈ.
Sunday, February 25, 2018
ವರ್ತನೆಯೊಳಾವರ್ತವರ್ತವರ್ತನಿಸಿ..
ನಗರಗಳೊಳಗೆ, ನಾಗರೀಕರೊಂದಿಗೆ ಬೆರೆಕೆ
ಯಾಗಿಹೋಗುತ್ತ ಬದುಕು, ಕಾಗೆ ಗೂಗೆ
ನಾಯಿ ಬೆಕ್ಕು ಮೈನ ಗುಬ್ಬಿಗಳಂತೆ
ಲತೆಯು ಪಾಂಗಿನಲ್ಲಿ ಗಂಟಿಯನ್ನಪ್ಪುತ್ತ ಸುತ್ತುತ್ತ ಬೆಳೆಯುತ್ತೆ
ಡ್ರಿಪ್ಪಿನ ತೊಟ್ಟಿಕ್ಕುವ ಲಯಕ್ಕೆ
ಮನ್ಸೂರೆ ಹಾಡತೊಡಗಿರುತ್ತಾರೆ ಪ್ರಜ್ನೆಯ
ಯಾವುದೋ ಪಾತಳಿಯಲ್ಲಿ, ಕೆಲವೇ ಚದುರದಂಗುಲಗಳಷ್ಟು ಮಣ್ಣಿಗೆ
ಅನುವಾಗುವಲ್ಲಿ, ಜೀವದಜಾಡು ಆ ಸಿಮೆಂಟುಸಾರಿಸಿದಂಗಳದಲ್ಲಿ
ಇನ್ನ್ನೂ ಮರವಾಗುವ ಹಾದಿಗುಂಟ ಒಂದು ನೇರಳೇ
ಗಿಡ, ಇರುವೆ ಜೇನುಹುಳ ಇಣಚಿಯಂತ ಒಂದು ಪರಿಸರ
-ವ್ಯವಸ್ಥೆಯಾಗಿರುತ್ತೆ, ಅಲ್ಲಿ, ಆ ಕಾಂಕ್ರೀಟುವನದಲ್ಲಿ
ಪಾರಿವಾಳವೊ ಗೂಡುಕಟ್ಟಿರುತ್ತೆ ಕಬ್ಬಿಣದ ಕಂಬಿಗಳಲ್ಲಿ
ಪಿಷ್ಟಿಗೊಬ್ಬರದುಂಬಿಸೋವಲ್ಲಿ ಹೊರಕಿರಿದ ಅಶ್ವತ್ಥವೊಂದರ
ಬ್ರಹ್ಮರೂಪಾಯ ಬೇರುಗಳ ವಿಲೋಮಚಲನೆ
ಅಥವಾ ಕಟ್ಟೋಣಗಳ ನಿರಂತರ ನಿರಚನೆ
ಪುನಾರಚನೆ
ಈ ಗೊಂದಲಪುರದಲ್ಲಿ ಪುರ-
ಸಂಚಲನವೊಂದಕ್ಕೀಡಾದಂತೆ ಟ್ರಾಫಿಕ್ಕು
ಹಾಗ್ಗೆ ತಗುಲ್ಹಾಕ್ಕೊಳ್ಳೊದೇ
ಸಿಕ್ಕು, ಕಾದುಕುದಿವಂತೆಯರ್ಥ
-ಹೀನತೆ, ಡಿಫ್ಯೂಸಾಗುತ್ತೆ ನಿಧಾನ
ಉಕ್ಕಿ ಚೆಲ್ಲುತ್ತೆ.
ಆ ನಿಲುಗಡೆಯಿಲ್ಲದ ನಿಲ್ದಾಣದಲಿ ನಮ್ಮ ನಿಲ್ಲದೋಡುವ ರೈಲಿಗೆ
ಋಜುವಾದ ಹಸಿರುನಿಶಾನೆ ಬೀಸುವ ಸ್ಟೇಷನ್ಮಾಸ್ತರ
ಹೀಗೆ ನಮಗೆ ಕೋಳಿ ಕೂಗಿಯೇ ಬೆಳಗು ನಿಜದಲಿ
ಎಂದುಬಿಟ್ಟ ರೈಲಿಗೆ ಇಲಿಗಳ ಹಾದಿಹಿಡಿದೊಂದು ಇಣಚಿಯೂ ಬಂದು
ನಿಂದಲ್ಲಿ ಬಾಗಿಲವರೆಗೆ ಹೋದರೂ, ಬೋಗಿದಾಟದು.
ಏನಿದಾಟವು?
ಸೀಮೆಗಳು ಆಕ್ಸಿಡೆಂಟಲೇ ಆದರೂ ಯಾವತ್ತು, ಕಷ್ಟವೇ,
ಕಾಸ್ಟವೇ ಎನುವ ಸೀಮೋಲ್ಲಂಘನಯಾನವು.
ಅಲ್ಲಿ ತುದಿ ದಿಗಂತದಿ ಹರಳುಗಟ್ಟಿದ ಘನಸಮುದ್ರದಲೊಂದೆಡೆ
ಸೆಲೆಯೊಡೆವ ಕಾಚಿದರುಣಮಧ್ಯಗವಿದಂತಃಸ್ಥಿತಿ
-ಗತಿ
ದಕ್ಕಿಸಿಕೊಳ್ಳುವಾಟಕ್ಕೆ ಓಂ ಸ್ವಸ್ತಿ.
ಅಥವಾ,
ಪ್ರಕೃತಿ-ಪುರುಷನಂತ ಸಿಮೆಟ್ರಿ
ಬ್ರೇಕಿಂಗ್ನಲ್ಲಿ ವೈಲೇಟಾದ ಚಾರ್ಜ-ಪಾರಿಟಿ
ಯನ್ನ ಕಾಲವೇ
ತಿರುಗಿ ಸರಿಪಡಿಸುತ್ತಂತೆ.
------------------------------------------------
ಈಗ್ಗೆ ನಾಲ್ಕೈದು ವರ್ಷಗಳಿಂದ ಬರೆಯುತ್ತ ಬಂದಿದ್ದು ..,
ಇನ್ನೂ ಮುಂದುವರಿಯಲಿಕ್ಕಿರುವಂಥದ್ದು.
ದೂರ ಮೀರು; ದಾಹ ತೀರು
ಋಣವು ತೀರಿ ಹೋಯಿತೇ
ಒಲುಮೆ ತೆರೆಯು ಇಳಿಯಿತೇ
ದಿನದಿ ನೆನಪು ರಾತ್ರಿ ಕನಸು
ನಿನದೆ ಸುತ್ತ ಹರಿದಿದೆ
ಮನದ ಪರದೆ ಹರಿದಿದೆ
ಪಾರತೊರೆವ ತೊರೆಯ ತೀರ
ತೆರೆತೆರೆಯೂ ಚೀರಿದೆ
ದಾಹ ತೀರದಾಗಿದೆ
ತೆವಳು-ಬುದ್ಧಿ ತೆವಲು-ತೀವ್ರ
ಇಹಪರಗಳ ಮೀರಿದೆ
ಹೃದಯ ಕಿವಿಗೆ ಬಡಿಯದೇ
ಫಳಫಳ ನಿನ್ನೆದೆಹೊಳೆಯಲಿ ನಾ
ನೊಳಸುಳಿಯಲೀ ಸಿಲುಕಿಹೆ
ಸೆಳಕೊಳ್ಳಬಾರದೇ
ಎನ್ನ ನೀ
ನೆಳಕೊಳ್ಳಬಾರದೇ
~~ಪೃಥ್ವಿರಂ
==========================
ದಶಕವೊಂದರಷ್ಟು ಹಿಂದೆ
ಗೆಳೆಯರೊಬ್ಬರ ಹನಿಗವಿತೆಯೊಂದರ ಮೇಲೆ
ತೆರೆದ ಸಾಲುಗಳು ಏನೋ ತದ್ವಿರುದ್ದವಾಗಿ ಬಿದ್ದ ಹೆದ್ದರೆಯನ್ನು ಮತ್ತೆಬ್ಬಿಸುವಂತೆ ಕಾಣುತ್ತಿದೆ
-ಯೆಂದರೆ, ಅದೂ ಸರಿಯೇ ಅಲ್ಲವೇ..! ಇದೆಲ್ಲ ಡಿಸ್ಸೊನೆನ್ಸು ಇಂಕೋಹರೆನ್ಸುಗಳನ್ನು ಇ
-ಸ್ತ್ರೀ ಹೊಡೆಯಲೆತ್ನಿಸುವವರಿದ್ದರವರಿಗೆಂದಿನಂತೆ ಈ ಬ್ಲಾಗಿಲಿನಗಸಿಯ
ಸರ್ಜನೀಯ-ಸಾಮಾನ್ಯ
-ಸ್ವಾಗತವು ಅಂಡರ್ಸ್ಟುಡ್ಗತವು!
Saturday, February 24, 2018
ಸಿನಿಮೀಯ - ೧
Saturday, February 10, 2018
ಸಂತೆಯೊಳಗಣ ಏಕಾಂತ; ದುರಂತೋ!
ದುರಂತೋ.
Thursday, November 23, 2017
ದೂರ ಸರಿದರು / Ab ke hum bichdein
ಇಂದು ನಾವಗಲಿದಂತೆಯೆ ಆದರೂ ಸಿಗುವ ಮತ್ತೆಂದೋ ಕನಸುಗಳಲಿ
ಹೇಗೆಲ್ಲ ಒಣಗಿದಾ ಹೂಗಳು ಸಿಗುವಂತೆ ಮತ್ತೆ ಹೊತ್ತಗೆಗಳಲಿ
ಹುಡುಕುವುದು ಖಾಲಿ ಒಡೆದೆದೆಗಳಾಳ ನಂಬಿಕೆ ಮುತ್ತೆ
ನೀ ದೈವವೂ ಅಲ್ಲ ಎನ್ನ ಮೋಹ ದೇವರಂತಲೂ
ಇಬ್ಬರೂ ಮನುಷ್ಯರೆಂದರೂ ಸಿಲುಕುವುದೇನಕೋ ಇಷ್ಟು ಮುಸುಕಲಿ
ಜಗದುಃಖವನೂ ಬೆರೆಸು ಎದೆದುಃಖದ ಸೆರಗಲಿ
ನಶೆಯುಬ್ಬರಿಪುದು ಸೆರೆಗೆ ಸೆರೆ ಸೇರುವಲ್ಲಿ
ಇಂದೇನು ಮಾತುಗಳಿಗೆ ನಾವು ಗಲ್ಲಿಗಾದೆವೊ
ಏನಚ್ಚರಿ ಸಿಗುವುದು ನಾಳೆ ಪೀಳಿಗೆಗಳಿಗೆ ಪಠ್ಯಗಳಲಿ
ಅಂದಿನ ಆ ನಾನಿಲ್ಲ ವಾ ನೀನೂ ಇಲ್ಲ ಮಾಜಿ ಯಾ ಫರಾಜ
ಸಮ್ಮಿಳಿದಂತೆ ಕಾಮನೆಯ ಎರಡು ಛಾಯೆಗಳು ಮರೀಚಿಕೆಯಲಿ
----------------------------------------------
For glimpses of the original Urdu Ghazal
penned by Sir Ahmed Faraz :
0. As rendered by his maestro Mehdi Hassan
in raga Mangalbhairav/Bhupeshwari/Bhupkali/... :
-----------------------------------------------------------------------------
For more of meanings and English translations:
1. https://creative.sulekha.com/if-we-part-now-an-urdu-ghazal-of-faraaz-in-english-translation_30876_blog
2. https://ekfankaar.wordpress.com/2009/07/23/ab-ke-ham-bichde/
0. https://rekhta.org/ghazals/ab-ke-ham-bichhde-to-shaayad-kabhii-khvaabon-men-milen-ahmad-faraz-ghazals
(clicking on the words in this website gets you the meaning there itself)
Wednesday, March 15, 2017
..to the gallery
of what we never know
All our thoughts speeches
and silences
cum-laudead
.
Epistemics sans ontics
Logics les pretentious
Theorems ad'hominems
*
Unloading it
all et.al., with
a fart albeit
of which yet
hope Eye do
**
That we play to
is the gallery of language
the eggshell of Mr Key
.*.*.*.*.
. dots dotten
*spells mixstaken
**Ayes done
Friday, December 2, 2016
Dówn upon Rice - Bath khas hind hai!
rice-bhath-haters ke liye
rice me bathnEwale ek
yah bath
bante hai:
rice early,
its super-bhath!
else,
by the time it dawns upon you,
it would be supper-bhath!!
*************
dawn or dusk,
southindies
all rice!
*************
ಹಿಂದೆಂದಿನ ವಿದ್ಯಮಾನವಾದ
ಹಿಂಬಾಗಿಲಲ್ಲಿ ಹಿಂದಿ
hairike ya airike
ya ಹಕೀಕತ್ತೇನೂ ಅಂಥಾ
Kkhaaass bhathE!
ಹಿಂದಿ
ಅರ್ಥವಾಗುವವರೂ
ಆಗದವರೂ
ಏನೇ ಮೂಲಾಜು ನೋಡಿದರೂ
ಹಿಂದಿಂದಾದರೂ hEluttiruvudaadaró
ಹಿಂದೆಂದೋ ಹಂಗೇ ನುಂಗಿಕೊಂಡಿದ್ದ bathE ಅಲ್ವೇ!
Saturday, December 5, 2015
Phir se udd chala -- ಮತ್ತೆ ಹಾರಿ ಹೊರಟೆನು
ನನ್ನನ್ನು ಯಾವತ್ತೂ ಬೆರಗುಗೊಳಿಸುತ್ತಲೂ ಕಾಡುವ,
ಇಮ್ತಿಯಾಜ ಅಲಿಯ 'ದಿದ್ಗ್ದರ್ಶನ'ದ ರಾಕ್`ಸ್ಟಾರ್ ಸಿನೆಮಾದಿಂದ,
ಇರ್ಶಾದ ಕಮೀಲನ ರಮ್ಯ ಸೂಫಿ/ಆಧ್ಯಾತ್ಮಿಕ ಅನ್ಯೋಕ್ತಿಗಳಿರುವ,
ರಹಮಾನನ ಸಿಂಫೋನಿಕ ಸಂಯೋಜನೆಯ,
ಮೋಹಿತ್ ಚೌಹಾನನ ವಿಶಿಷ್ಟ ಕಂಠದಲ್ಲಿ ಮೂಡಿಬಂದ,
ನನಗೆ ತುಂಬಾ ಆಪ್ತವಾದ ಒಂದು ಗೀತ..
ಫಿರ್ ಸೇ ಉಡ್ ಚಲಾ
Hindi/Roman Lyrics as per the original lyricist Irshad Kamil's website:
http://www.irshadkamil.com/romandetails/458
An interesting trans-creation in English provided by the lyricist himself:
http://www.irshadkamil.com/translationsdetails/458
The following is a juggle-bandhi between translation and trans-creation...
ಮತ್ತೆ ಹಾರಿ ಹೊರಟೆ
ಹಾರಿ ತೊರೆದದ್ದಾಯ್ತು ಇಹವನು
ಕೆಳಗೆ ನಾ
ನೀಗ ನಿನ್ನ ವಶ
ವೋ ಹವೆಯೇ
ದೂರ ದೂರವೀಗ ಜನಪದರ
ಮೈಲಿಗಟ್ಟಲೆ ದೂರವೀ ಕಣಿವೆಗಳು
ಮತ್ತೆ,
ಧೂಪ ಧೂಪವೀ ಶರೀರ
ಚುಂಬಿಸೆ ಬರುವವು ಘನ ಘನವು
ಆದರೂ,
ಘನವೊಂದ್ಯಾವುದೋ ಎಲ್ಲೋ ಸೋಂಕಿ
ಒದ್ದೆಯಾಗೋದು ತನುವು
- ಅದಾಗದು!
ಯಾವ ನೆಲೆಯಲೂ ನಿಂದಿಲ್ಲ
ನಾ
ನೆಲ್ಲೂ ನನ್ನನೂ ಕಂಡಿಲ್ಲ
ಇದು
ಒಳಗುದಿಯಂತೂ ಹೌದು
ನಾ
ಕುದ್ದವನಲ್ಲ
ಶಹರ ಒಂದೇ ಹಳ್ಳಿ ಒಂದೇ
ಜನ ಒಂದೇ ಹೆಸರು ಒಂದೇ
ಹೋ..
ಮತ್ತೆ ಹಾರಿ ಹೊರಟೆನು.. ನಾ..
ಮಣ್ಣಿನ್ಹಾಂಗ ಕನಸೂ ಇವು ಎಷ್ಟೂನೂ
ರೆಪ್ಪೆ ಬಡಿದು
ಝಾಡಿಸು
ತಿರುಗಾ
ಬರುತಾವೆಯೋ!*
ಎಷ್ಟೊಂದೆಲ್ಲ ಕನಸೂ
ಯಾವ ಥರಾ ನಾನು
ತೊರೆದದ್ದಿದೆ ಮುರಿದಂತೆ
ಯಾಕೋ..
ಮತ್ತೆ ಗೂಡಿ ಹೊರಟವೇ
ಯನ್ನನೆತ್ತಿ ನೆಗೆದವೇ
ಇವು ಯಾಕೋ..
ಒಮ್ಮೊಮ್ಮೆ ಕವಲು ಕವಲಾಗಿ
ಒಮ್ಮೊಮ್ಮೆ ಚಿಗುರು ಚಿಗುರಾಗಿ
ಎನ್ನ ಜೊತೆಜೊತೆಗಾಗಿ ಇವು ತಿರುತಿರುಗಿ
ಬೆಂಗಾಡಲೊಮ್ಮೆ ಮಳೆನಾಡಲೊಮ್ಮೆ
ದೆಸೆ ರಾವಣವಾಗೊಮ್ಮೆ ಸತ್ತು ಬದುಕಿ
ಒಮ್ಮೊಮ್ಮೆ ಕವಲು ಕವಲಾಗಿ
ಒಮ್ಮೊಮ್ಮೆ ಚಿಗುರು ಚಿಗುರಾಗಿ
ದಿನ ರಾತ್ರಿಯಂತಾಗೊಮ್ಮೆ ತಿರುಗಿ ದಿನವಾಗಿ
ಏನು ಸತ್ಯವೋ ಏನು ಮಾಯೆಯೋ
ಓ ದೇವ!
ಅತ್ತಲೂ ಇತ್ತಲೂ ಒಳಗೂ ಹೊರಗೂ
ಸುಳಿದಾಡುವಾ ಹವೆ
ಏನು ಗೊತ್ತು, ಕೊಂಡೊಯ್ಯಲೂಬಹುದು
ನಿನ್ನೆಡೆಗೆ
ಸೆಳೆವುದೂ ನಿನ್ನಾ ನೆನಪು
ನಿನ್ನೆಡೆಗೆ
ಬಣ್ಣಬಣ್ಣದಾ ಖಯಾಲಿಗಳಲಿ
ನಾ
ಹಾರುತ ತಿರುಗುವೆನು...
----------------------------------------------------
*ಶಾಂತಸ್ವರದ ವೀಣೆ ಮಿಡಿದಂತಾಯಿತೇ?
Saturday, September 26, 2015
ನಿಗಮನ
ಒಂದು ಅತೀ ಸಣ್ಣ ಪ್ರಭಂಧ/ಕಥೆ/ಭಯಾಗ್ರಪಿ/ಏನೋಒಂದು
"
"ಬ್ರಹ್ಮಸತ್ಯವು ಅನಿರ್ವಾಚ್ಯವಾಗಿ ಬೆಂಗಳೂರಿನ ರಸ್ತೆಗಳ ಈ ದುರವಸ್ಥೆಯಾಗಿದ್ದು"
ಅಂತನ್ನುವುದನ್ನ ಸಿನಿಕತನವೆಂದೇ ಹೇಳಬೇಕಾಗುತ್ತದೆ
"
ಅಂತ ನಕ್ಕುನುಡಿಹಾರಿಸಲೆಸೆವಾಗ್ಗಿನಂದಿನ ಮಬ್ಬಲ್ಲೂ
ಡಯಲೆಕ್ಟಿಕ ಸಂಶಯದೆಳೆಯದಿಲ್ಲದಿರಲಿಲ್ಲ.
Thursday, July 16, 2015
ತಾರ್ಕಿಕಾಂತ
ತಾರ್ಕಿಕ
ಅಂತ್ಯಕ್ಕೆ
ಹಲಬುವ
ದಿಸ್ ವೇ ಅಥವಾ ದಟ್
ವೇ ಆಗಬೇಕು
ಅಂತ
ಕೂತು
ಬಿಡುವವ
ಹತ್ತು ಸಂಭಾವ್ಯತೆಗಳ
ಪಟ್ಟಿ ಮಾಡೋಕ್
ಅಂತ
ಅನೆಕ್ಸ್'ಪೆಕ್ಟೆಡಂತ
ಯಾವ್ದೂ ಆಗಬಾರದಂತ
ಪ್ರಿಪೇರ್ ಫಾರ್ ದ ಬೆಸ್ಟ್ ಅಂತ
ಯಾಕಂತ?
ಬೆಸ್ಟು ಮಿಸ್ಸು
ಮ್ಯಾನೇಜಾಗಿ ವರಸ್ಟಾಗದಿರಲಂತ
ಮತ್ತ ಬೀ ಗ್ರೇಸಿಯ-
ಸಂತ
ದಿಸ್ಸಾಗದ ದಟ್ವರಸ್ಟಿಗೆ
ಪ್ರಿಪರೇಶನ್ನು ಅಷ್ಟೇ
ಆಗೋದಾಂತ
...
ಹಾಗೆ ಹ್ಯಾಗೂ ಬಂದವರಸ್ಟ
ಸಂಭಾಳಿಕೆ ಕಷ್ಟಸಾಧ್ಯವಾಗಿಬಿಟ್ಟ-
ದಾಂತ
ನೀ-
ರಸದಿ
ರೆಸ್ಟಿಲ್ಲವಾದ ರೋಮರ್ಹೋಮರನೇ
ಪ್ರಿಯ ತಾರ್ಕಿ
ಕಾಂತನೇ
ಸ್ಕೀಮರನೇ
ಮಾತಲ್ಲಿ ನಂಬಿಕೆ ಯಾವತ್ತೋ ಕಳ್ದು
ಹೋಗಿ ಕೊಳ್ಳೋಕ್ಕೆ ಈಹೊತ್ತು ಹಾ ಹಾ
ತೊರೆವವನೇ,
ಸರಿಯಾದ್ಮಾತೇ
ಹೇಳ್ಬೇಕಂತ ಎಣಿಸೋದು
ಸಾಧುವೇ?
'ಹಾಸ್ಯಾಸ್ ಪದ' ಅಲ್ವೆ??
ಹತ್ತೆಣ್ಸಿಕೂತಲ್ಲಿ ಹನ್ನೊಂದು
ಆಗೋದೇ
ಮರೀತಿರುವೆ
ವಾಸ್ತವ
ಚಿತ್ರಿಸಿದ್ದರಿಂದ ವಿಚಿತ್ರಾಂ
ತ
.
Friday, May 15, 2015
ಅರ್ಥವನ್ನೋದು...
Wednesday, January 21, 2015
ನಿರ್ವಿಕಲ್ಪ ಚಿತ್ತದ ಚಿರಂತನ ಬೆಳಗು
ನರಜಾಲಗಳ ಗೊಂಡಾರಣ್ಯಗಳ ಗೂಢ ಗಹ್ವರಗಳಲಿ
ಅಮೂರ್ತ ಸಂಕೇತ ಅನಿರ್ವಾಚ್ಯ ವ್ಯಕ್ತಿವಿಶಿಷ್ಟಾನುಭವಗಳಲಿ
ಅರ್ಥರಾಹಿತ ಪೂರ್ಣತಾಭಾವ ಶೂನ್ಯಘಳಿಗೆಗಳಲ್ಲಿ
ಸನ್ನಿವೇಶವಿಲ್ಲದ ಹಿನ್ನೀರ್-ನಿರರ್ಥದಲಿ
ಹುದುಗಿಸಲಿ ನಿನ್ನನೆಲ್ಲಿ
ನನ್ನಲಿ
ನೀನಿರದುದೆಲ್ಲಿ
ನೆನಪುಗಳು ಮುತ್ತಿಕ್ಕಿ ಬರದುದೆಲ್ಲಿ
ಕೆದಕಲೇ ಸ್ಮೃತಿ
ಕೋಶಕೋಶಗಳಾಳಗಳಲಿ
ಹುದುಗಿ ಬಂದವುಗಳಲಿ
ಚರಿತ್ರೆಗಳ ಕಮಟು ಪುಟಗಳಲಿ
ಶಿರ ಹುದುಗುವ ಅವಮಾನಗಳದ್ಯಾವುದೋ ಒಣ ಉಸುಕಿನೂರೊಂದರಲಿ
ಹೃದಯವೇ
ಹುದುಗುವುದೇ ಉಷ್ಟ್ರಪಕ್ಷಿಯೋಪಾದಿಯಲಿ?
ಅಳಿಸಿದುದಕ್ಕಾಗಿ ನಿನ್ನಿಂದ ನೀ ನನ್ನ
ನಳಿಸ ಹೊರಟಿದುದು ನನ್ನೊಳಗಿನಾನಿನ್ನನಿದ
ರೊಳಳಿಸಿ
ಹೋಗುವುದು ನಾ ನನ್ನೊಳಗಿಂದ
ಲಿಂದಿದಾಗದೆಂದು ಧ್ವನಿಯೊಂದು ಹೊರಟಿದು
ದದುವೆ ನಾನ್ನೆನ್ನುವುದು ನೀನನ್ನುವುದಲ್ಲಿ ಚುಂಗೊಂದನಿಡುವುದು
ಹಿಡಿದದನು ಅಭಿಸರಿಪುದು ಅಭಿಸಾರಿಕೆಯತ್ತ
ಮರಳೋಣ ಮತ್ತೆಯರಳೋಣ
ಅರಳುಮರಳಂತಿರುವಲ್ಲಿಂದ ಮತ್ತೆ....
---------------------------------------------------------------------------------------------------------------
ಇದು ಮುಂದುವರಿದ ಪ್ರತಿಸ್ಪಂದನದ ಯಾದೃಚ್ಛಿಕ ಭಾಗ,
"Eternal Sunshine of the Spotless Mind"
ಎಂಬ 'ಅನೇರ ನಿರೂಪಣೆ 'ಯ ಸಿನೆಮಾಗೆ ...
ಈ ಮುಂಚೆ ಇದರ 'ಶೀರ್ಶಿಖೆ'ಯನ್ನು 'ಅನಂಗಚಿತ್ತದ ಅವಿರತ ಹೊಳಹು' ಅಂತಿಟ್ಟುಕೊಂಡಿದ್ದು ಹೌದಾದರೂ...
'spotless' ಎಂಬುದರ ಅರ್ಥ 'ಕಲೆರಹಿತ' ಅಂತಾಗುತ್ತದೆಯೇ ಹೊರತಾಗಿ
'ಜಾಗ್ಗೆ-ಯಿಲ್ಲದ' (spot-less) ಅಂತಲೇನೂ ಬಳಕೆಯಲ್ಲಿಲ್ಲವಂತ ಜ್ಞಾನೋದಯವಾಯಿತಾದರೂ...
ಅರ್ಥೈಸಿದಂತೆ ಕಾವ್ಯವಲ್ಲವೇ? ಅವರವರಿಗಾದದ್ದೂ ಅರ್ಥವಲ್ಲವೇ?
ಚಿತ್ತವು ಮಸ್ತಿಷ್ಕವೇ ಅಥವಾ ಇನ್ಯಾವುದೋ ಒಂದು ಜಾಗ್ಗೆಯಲ್ಲಿ ಇದೆ/ಇಲ್ಲ ಎನ್ನುವುದು ಎಂದಿಗೂ ಅನಿರ್ಧಾರಿತವಷ್ಟೇ?
ಎಂಬಿತ್ಯಾದಿ ಜಿಜ್ಞಾಸೆಗಳು ಉಳಿಯಿತಾಗಿಯಾದರೂ ...
ಪೋಪರ ಕವನವನ್ನೂ, ಕೌಫ್ಮನ್ನರ ಚಿತ್ರಪಟವನ್ನೂ ತುಲನಾತ್ಮಕವಾಗಿ ಗಮನದಲ್ಲಿರಿಸಿ...
"ನಿರ್ವಿಕಲ್ಪ ಚಿತ್ತದ ಚಿರಂತನ ಬೆಳಗು" ಅಂತಮುಂತಾಗಿ ಮುಂದಾದದ್ದು...
---------------------------------------------------------------------------------------------------------------
ಹೊತ್ತೂ ಹೋಗುವುದೂ
ಕೊಂಡು
ಹೋಗುವಾಂದರ
ಕೂತss ಇರಾದು;
ಇಲ್ಲದಿದ್ದರ
ಹೋಗಿರ್ಬೋದು.
----------------------------------------------------------
"ಹೊತ್ತುಕೊಂಡುಹೋಗುವುದು" ಎಂಬ ಶ್ಲೇಷೆಯಲ್ಲಿ
ಒಂದು ಸಾಧಿಸುವಲ್ಲಿ ಇನ್ನೊಂದಾಗದು.
Sunday, December 7, 2014
ಈ ತಿರುವಿನಿಂದ ಹೊರಡುವವು / Is Mod Se Jaate Hain
ತುಸು ಭಾರನಡೆ ರಸ್ತೆಗಳು
ತುಸು ತೀವ್ರನಡೆ ಹಾದಿಗಳು
ಕಲ್ಲಿನ ಹವೇಲಿಗಳಿಗೆ
ಗಾಜಿನ ಮನೆಗಳಲಿ
ತುಣುಕುಗಳ ಗೂಡಿನವರೆಗೆ
ಈ ತಿರುವಿನಿಂದ ಹೊರಡುವುದು
ಬಿರುಗಾಳಿಯಂತೆದ್ದು ಹಾದಿಯೊಂದು ಹಾಯುವುದು
ನಸುನಾಚಿದಂತ್ಯಾವುದೋ ಪದಗಳಿಂದ ಹೊಮ್ಮುವುದು
ಈ ರೇಶಿಮೆಹಾದಿಗಳಲಿ
ಹಾದಿಯೊಂದು ಅದೂ ಇದ್ದೀತು
ನಿನ್ನ ವರೆಗೆ ತಲುಪುವಂತದ್ದು
ಈ ತಿರುವಿನಿಂದ ಹೊರಡುವುದು
ದೂರದಿಂದೊಂದು ಸಾರುವುದು
ಬಳಿಸಾರಿಯು ಹೊರಳುವುದು
ಒಬ್ಬಂಟಿಯೊಂದು ಹಾದಿಯು
ನಿಲಲಾರದು ಚಲಿಸಲೂ ಆರದು
ಇದ ಯೋಚಿಸಿ ಕುಳಿತಿರುವೆ
ಹಾದಿಯೊಂದು ಅದೂ ಇದ್ದೀತು
ನಿನ್ನ ವರೆಗೆ ತಲುಪುವಂತದ್ದು
ಈ ತಿರುವಿನಿಂದ ಹೊರಡುವುದು
---------------------
Thursday, November 27, 2014
ಆಹಕ್ಕೆ ಬೇಕು / Ah! does require / आह को चाहिए || ಘಾಲಿಬ್ / Ghalib / ग़ालिब
ಯಾರು ಬದುಕಿಯಾರು ನಿನ್ನ ಮುಂಗುರುಳಿನ ಚಿತ್ತವಾಗುವವರೆಗೆ
ಜಾಲ ಪ್ರತಿಯಲೆಯಲೂ ಇವೆ ಜಾಲಾಡುತ್ತ ಶತದಂತ ಮಕರಗಳು
ನೋಡೋಣವೇ, ಏನೆಲ್ಲವಾಯ್ತು ಹನಿಗಳಿಗೆ ಮುತ್ತಾಗುವವರೆಗೆ
ಅನುರಕ್ತಿ ತಾಳ್ಮೆ-ಬೇಡೋಣವು; ಅಭೀಪ್ಸೆಯೋ ಚಡಪಡಿಸೋಣವು
ಹೃದಯದ್ದೇನು ಬಣ್ಣವನ್ನೋಣವೋ -- ರಕ್ತ-ಹರಿಯೋಣದವರೆಗೆ
ಒಪ್ಪೋಣ, ನೀ ಅಸಡ್ಡೆ ಮಾಡುವುದಿಲ್ಲವಂತ, ಆದರೂ
ಬೂದಿಯಾಗುವೆವು ನಾವಂತೂ, ನಿಮಗೆ ತಿಳಿಯುವವರೆಗೆ
ನಸುಕಿನ ಕಿರಣಗಳಿಂದಲಿದೆ ಮಂಜಿನ ಹನಿಗಳಿಗೆ ಲೀನವಾಗುವಿಕೆಯ ತಾಲೀಮು
ನಾನೂ ಇರುವೆ, ಒಂದು ದಯದೃಷ್ಟಿಯಾಗುವವರೆಗೆ
ಒಂದು ದೃಷ್ಟಿ ಸಾಲದು ಇಡೀ ಜೀವನಕೆ, ಖಬರಿಲ್ಲದವಳೇ
ಒಟ್ಟಂದದಾ ಶಾಖವಿದೆ ಕುಣಿಯುವ ಕಿಡಿಯೊಂದಿರುವವರೆಗೆ
ಅಸ್ತಿತ್ವದಾ ದುಃಖದ್ದು, ಅಸಾದ, ಇನ್ಯಾವುದರಿಂದಾದೀತು ಮರಣವಲ್ಲದೇ ಇಲಾಜು
ದೀಪ ಉರಿಯುವುದು ಯಾವತ್ತು ಬಣ್ಣಗಳಲಿ ಬೆಳಕಾಗುವವರೆಗೆ...
Wednesday, November 26, 2014
ಅಥಃ ಕವಿ ಕಿರಣ ಪ್ರಕರಣಂ
ದುರ್ಜನರ ನಿಂದೆಗೆ ಹೆದರಿ ಕವಿಯಾದವನು ಕಾವ್ಯ ರಚಿಸದೇ ಇರುವನೇ?"
-----------------------------------------------------------------------------------
ಪ್ರಿಯ ರನ್ನನೇ,
ವಿಷಯಗಳ ಮೇಲೆ ಬೆಳಕು ಚೆಲ್ಲುವ
ರವಿ, ವ್ಯಾಖ್ಯಾನ ಪ್ರಿಯ ಕವಿ
ಸಮಯ ಕುಪ್ಪಳಿದಾಯ್ತು
ಅಂತಾಗಿ
ಸ್ವಯಂಪ್ರಭೆಯಿಲ್ಲದವು ಕೂಡಾ, ಅಲ್ಲ,
ಸ್ವಪ್ರಭಾವಳಿ ಇಲ್ಲದವು ಮಾತ್ರ
ಝಗಮಗಿಸೋದು ಈಗ
ಲಂತೂ ಅಂಥಾ ಕಾವ್ಯ - ಕವಿಗಳು ಚಂದ್ರ
ನ ತೋರುಮುಖದಂತೆ ಬಿಳೀ
ಸೂರ್ಯನೆಡೆಗೆ ಮುಖ ಮಾಡೋದೂ ಇಲ್ಲ
ಸೂರ್ಯಕಾಂತಿ ಹೂ ಹಿಂಭಾಗವಿದ್ದಂತೆ
ಸದಾ ನೆರಳಿಗೀಡಾಗಿ ಗುಹ್ಯವೋಗುಹ್ಯ
ವಂತ ಕೂತುಬಿಡೋದು ಮರೆಯಲ್ಲಿ
ಮಂಜಿನ ತೆರೆಯಲ್ಲಿ
ಹೊತ್ತು ಹೋಗದವರು, ಮತ್ತೂ ಹೋಗ
ಬೇಕಾದವರು ತಂತಮ್ಮ ಕಂನಡಕಂಗಳ ಕೊಳಾಯ್ಸಿಕೊಂಡು
ಯಾವುದೋ ಟಾರ್ಚುದೀಪದ ಬೆಳಕಲ್ಲಿ
ಶೋಧಿಸ ಹೊರಟುಬರುತ್ತಾರೆ ನಮ್ಮೆಡೆಗೆ...
===================================
ಮೇಲಿನದ್ದು ಮೊದಲು ಮೂಡಿದ ಸರಳ ಆಕೃತಿ
ಅದನ್ನು ಈ ಕೆಳಗಿನಂತೆ ತಿದ್ದಿ ಇನ್ನೂ ಗೋಜಲು ಮಾಡುವುದರ ಮೂಲಕ
ಅರ್ಥಾತರ್ಥಾರ್ಥ ಸಾಧ್ಯತೆಗಳನ್ನ ವಿಸ್ತರಿಸಬಹುದು...
===================================
ಪ್ರಿಯ ರನ್ನನೇ,
ವಿಷಯಂಗಳ ಮೇಲೆ ಬೆಳಕಂ ಚೆಲ್ಲುವ
ರವಿ, ವ್ಯಾಖ್ಯಾನಾಂಪ್ರಿಯ
ಕವಿ ಸಮಯಂ
ಮು ಕುಪ್ಪಳಿದಾಯ್ತುಂ
ಮಂತಲಾಗಿ ಸ್ವಪ್ರಭಾವಳಿ
ಹೀನವು ಮಾತ್ರವು
ಝಗಮಗಿಸೋದು ಈಗ
ಲಂತೂ ಅಂಥಾ ಕಾವ್ಯ - ಕವಿಗಳು ಚಂದ್ರ
ನ ತೋರುಮುಖದಂತೆ ಬಿಳೀ
ಸೂರ್ಯನೆಡೆಗೆ ಮುಖ
ಮಾಡೋದೂ
ಇಲ್ಲ - ಸದಾ ಸೂರ್ಯಕಾಂತಿ
ಹೂ ಹಿಂಭಾಗವಿದ್ದಂತೆ
ನೆರಳಿಗೀಡಾಗಿ ಗುಹ್ಯವೋ
ಗುಹ್ಯವಂತ
ಕೂತುಬಿಡೋದು ಮರೆಯಲ್ಲಿ
ಮಂಜಿನ ತೆರೆಯಲ್ಲಿ ಮಬ್ಬ
ಹೊತ್ತು
ಹೋಗದವರು, ಮತ್ತೂ
ಹೋಗಬೇಕಾದವರು ತಂತಮ್ಮ ಕಂ
ನಡ
ಕಂಗಳ ಕೊಳಾಯ್ಸಿ
ಕೊಂಡು ಯಾವುದೋ ಟಾರ್ಚುದೀಪ
ದ ಬೆಳಕಲ್ಲಿ ಶೋಧಿಸ
ಹೊರಟುಬರುವರು
ನಮ್ಮೆಡೆಗೀಗ
------------------------------------------------------------------------------------------------------------
ಬಹುಶಃ ಓದುಗನೊಬ್ಬನಿಗೆ ಈ ಮೇಲಿನೆರೆಡು ಪ್ರಯತ್ನಗಳ ಮಿಶ್ರಣದಲ್ಲಿ ಆಗಬಹುದಾದ ಇನ್ಯಾವುದೋ ಒಂದು ರಚನೆ ಹೆಚ್ಚು ಅಪ್ಯಾಯಮಾನವಾಗಿ ಕಾಣಬಹುದು...
ಆ ದಿಶೆಯಲ್ಲಿ ಈ ತಾಣದ 'ಸರ್ಜನೀಯ ಸಾಮಾನ್ಯ' ಲೈಸೆನ್ಸ್ ಅನ್ನು ತಂತಮ್ಮ ಪೊಯೆತಿಕ್ಕ್ಲು ಲಯಿಸೆನ್ಸಿ ನ ಜೊತೆಜೊತೆಗೆ ಬಳಸಿಕೊಂಡು ಪ್ರಯತ್ನಿಸುವವರಿಗೆ ಸ್ವಾಗತವು ಈ ಮೂಲಕ ಅಂಡರ್ಸ್ಟುದ್ಗತವು!
Monday, March 24, 2014
ಲೂಸಿಡ್ಡಾಗಿ...
ನನ್ನೊಳಗಣ ಕನಸುಗಳ--ಆಶಯಗಳ ಪರಂಪರೆ
ಪರಂಪರೆಯಿಂದ ಮುಂದೋಡುವ ಥೀಸಸ್ಸನ ಶಿಪ್ಪು
ಬೆಳಿಗ್ಗೆ ಎದ್ದ ರೀತಿ - ಘಳಿಗೆ ಅಷ್ಟು ಮುಖ್ಯವಾಗಿದ್ದೇನಲ್ಲ. ಮಧ್ಯಾಹ್ನ ಸ್ವಲ್ಪ ಅನ್ಕಂಟ್ರೋಲ್ಡ್ ಹಾರಾಟ, ಕೊನೆಗೆ ಸ್ವನಿರಾಕರಣೆಗಳು. ಫಿಸಿಕಲಿ ಫಿಸಿಕ್ಸಿನಿಂದ ಹಿಡಿದು ಕಳರಿಪಯಟ್ಟಿಗೆ ಜಿಗಿದರೂ, ತರ್ಕಗಳ ವರ್ತುಲದೇಣಿಗಳನ್ನೇರುತ್ತಲೇ ಹೊರಟಿದ್ದ ಮನಸ್ಸು. ನಂಗೆ ನಾನಿರೋ ರೀತೀನೇ ಬೇಡವಾಗಿ ದೂರ ಓಡೊ ಯತ್ನದಲ್ಲಿ ಹಾಗೆ ಜಿಮ್ನಾಸ್ಟಿಕ್ ಜಿಗಿತಗಳನ್ನು ಪ್ರಯೋಗಿಸಿಕೊಂಡುಹೊರಟಿದ್ದು...
ಎಷ್ಟೇ ದ್ವೇಶಿಸಿದರೂ ನನ್ನ ನಾನು, ನನ್ನಿಂದ ನನಗೆ - ಆ ಘಳಿಗೆಯ ನನ್ನಿಂದ ನನಗೆ - ನಿರ್ಗಮನ - ಆ ಕ್ಷಣದ ನಿರ್ಗಮನ ನಿರ್ವಾಹಗಳಿಲ್ಲ. ಎಲ್ಲಿ ಒಡಿದರೂ ನಾನು, ನನ್ನನ್ನ ನೆರಳಿನಂತೆ ನಾನು ಹಿಂಬಾಲಿಸಿಕೊಂಡು ಬರೋದು. ಅಥವಾ ಆ ವರ್ತುಲದೇಣಿಗೆ ಆ ಮಟ್ಟಿಗೆ ರೇಜಿಗೆಯಾಗಿ ಅದರಿಂದ ಬೇರೆ ವರ್ತುಲದೇಣಿಗೆ ಹಾರಿ ಬೀಳಕ್ಕೆ ಹೀಗೆ ಓಡುತ್ತ - ಅಥವಾ ಓಡಲೆತ್ನಿಸುತ್ತ - ಇರೋದು. ನೆತ್ತಿಮೇಲಣದಾಗಸದಲ್ಲಿ ಬೇರೆ ದಿಕ್ಕಿಂದ ಸೂರ್ಯನೋ, ಚಂದ್ರನೋ, ಅಥವಾ ಬೀದಿದೀಪವೋ ಮೂಡಿದರೆ ಆ ನನ್ನ ಛಾಯೆಯೇ ಬದಲಾಗಬಹುದಲ್ವ ಅಂತ ಕ್ಷೀಣ ಆಸೆ--ಆಕಾಂಕ್ಷೆಯ ಎಳೆಗಳು. ಹ್ಯಾಗೆ ಈ ಹೊತ್ತಿನ ನನ್ನನ್ನ, ನಾನು - ಈವತ್ತಿನ ಮಟ್ಟಿಗಾದರೂ - ಬದಲಾಯಿಸುವುದು..? ಊಹೂಂ.., keep hitting the attractor basin, keep ducking the ball...
ಹೀಗೆ ಅರೆಬರೆ ಮನಸ್ಸಿಂದ - ಅನ್ಯರೀತ್ಯಾ ತೀವ್ರ ಮನಸ್ಸಿಂದ - ಫಿಸಿಕಲಿ - ವರ್ಚುಯಲಿ ತುಯ್ದು ಅಲೆದಾಡುತ್ತ.. ..ಆಯಾಚಿತವಾಗಿ ಕಮೆಂಟುಯೋಗ್ಯ ಕವನ-ಕವಿ ಜೋಡಿ ಸಿಗುತ್ತೆ. 'ದುರಹಂಕಾರಿ' ಅಂತೂ ಜಾಗೃತ. 'ಅನಂಗ ಚಿತ್ತದ ಅವಿರತ ಹೊಳಹು' ಅಪ್ಲೋಡಾಗೋ ಹೊತ್ತಿಗೆ ರಾತ್ರಿ ಹತ್ತು ದಾಟಿ, ಅವಸರದಲ್ಲೆಲ್ಲೋ ಹೊಟ್ಟೆಪಾಡು ಮುಗಿಸ್ಕಂಡು, ಅಮ್ಮ-ಅಣ್ಣನ್ನ ಮಾತಾಡಿಸ್ಕಂಡು, ರಾತ್ರಿ ನಿದ್ದೆಯೇ ಹಾಳಾಗ್ಬೋದು ಅನ್ನೋ ವಾರ್ನಿಂಗ್ ಇಟ್ಕೊಂಡು, ಏನೋ ಒಕ್ಕಣೆಯಿಟ್ಟು 'ನಾಲ್ಕು ಸಮಸ್ತ'ರಿಗೆ '..ಹೊಳಹು' ಕಾಣುವಂತೆ ಕೊಂಡಿಯಡಕವಿಟ್ಟು ವಿ-ಭಿನ್ನವತ್ತಳೆ ಕಳಿಸುವಹೊತ್ತಿಗೆ ಹನ್ನೆರಡು ದಾಟಿ ಅಲ್ಲೇ ಕಣ್ಣೆಳೆಯುತ್ತಿದ್ದುದು. ಹಾಗೆ ನನ್ನ ನಾನು ಹುಸಿ-ಬಲವಂತ ದೂಡಿಕೊಂಡು ರೂಮಿಗೆ ಬಂದು ಬಿದ್ದುಕೊಂಡಿದ್ದು ತಾತ್ಕಾಲಿಕವಂತಂದುಕೊಂಡು, ಉಟ್ಟ ಬಟ್ಟೆಯಲ್ಲಿಯೇ. ಮತ್ಯಾವಾಗಲೋ ಎಚ್ಚರಾದಾಗ ಲೈಟು ಹಾಗೇ ಉರೀತಿದ್ದುದು, ಪ್ಯಾಂಟು ಅಲ್ಲೇ ಸ್ವಲ್ಪ ಸಡಿಲ ಜಾರಿಕೊಂಡಿದ್ದುದು, ಯಾವ ಮಾಯಕದಲ್ಲೋ ಬೆಡ್ಷೀಟು ಎಳಕೊಂಡಿದುದು...
ನಾನು ಬರೆಯಲಿಕ್ಕೆ ಎದ್ದು ಕೂತದ್ದು ಈ ಪುರಾಣವನ್ನೇನಲ್ಲ. ಕೇಂದ್ರ ವಿಷಯ ಸ್ವಲ್ಪ ಬೇರೆಯೇ. ಆದರೆ ಕಥಿಸುವುದರ ಕುರಿತಾಗಿಯೇ ಇರುವ ನಮ್ಮದೊಂದು ಥಿಯರಿಯಿದೆ : ಯಾವುದೇ ಒಂದು ಸ್ಪುರಣೆಯು ಅದರ ಅಮೂರ್ತತೆಯಿಂದಾಚೆಗೆ ಕೆಳಪಟ್ಟು ರಕ್ತಮಾಂಸಗಳ ಜೀವಾಕೃತಿಯಾಗಿ - ಅನುಭಾವವಾಗಿ - ಬಂದಿಳಿಯುವುದರ ಹಿನ್ನೆಲೆಯಲ್ಲಿ ಅದನ್ನ ಹಾಗೆ ವಿಶಿಷ್ಟಗೊಳಿಸುವ - transcend ಮಾಡುವ ಒಂದು ಪರ್ಯಾವರಣ - context -ಇರುತ್ತೆ. ಆ ಒಂದು ಅನುಭಾವಕ್ಕೆ ಪಾತ್ರನಾದವನಿಗೆ ಮಾತ್ರವೇ ಆಪ್ತವಾದ ಒಂದು ಲೋಕದಲ್ಲಿ ಆ ಒಂದು ಸೃಜನಕ್ರಿಯೆಯು ಘಟಿಸಿರುತ್ತೆ. ಎಷ್ಟೋ ಬಾರಿ ಆ ಹಿನ್ನೆಲೆಗಳನ್ನ ಕಲೆಯಲ್ಲಿ ದಾಟಿಸುವ ಯತ್ನವಿರದೇ, ಅಥವಾ, ದಾಟಿಸುವ ಯತ್ನವಿದ್ದೂ ಅದು ಸೋತು, ಇಡೀ ಸೃಜಿತಹೃದಯವೇ 'ದಾಟದೇ' ಉಳಿದುಬಿಟ್ಟ ಆರೋಪಗಳಾಗುತ್ತವೆ. ಹೆತ್ತಿದ್ದು ಎಷ್ಟೇ abstract ಆಗಿದ್ದರೂ ಹೆತ್ತವರಿಗೆ ಅದು ರಕ್ತಮಾಂಸಗಳಿಂದ ಮೈವೆತ್ತ ಮುದ್ದ್ದುಕೂಸಾಗಿಯೇ ಕಾಣುತ್ತಿರುತ್ತೆ. ಆದರೆ ಅದರ ಕುರಿತು ಸರಿಯಾಗಿ ಅನುಭವ-ಪ್ರವೇಶಗಳಿಲ್ಲದಿದ್ದವರಿಗೆ - ಇದ್ದವರಿಗೂ ಕೂಡಾ ಕೆಲವೊಮ್ಮೆ - ಅದು ಬರೀ ನೀರಸ-ನಿರ್ಜೀವ ಬಡಬಡಿಕೆಗಳಾಗಿ ಕಂಡುಬರುವ ವಿದ್ಯಮಾನದೊಂದಿಗೆ ಕೃತಿ ಯಾ ಕೃತಿಕಾರ ಸೋತ ಆರೋಪಗಳು ಆಗಿ ಬರುತ್ತವೆ.
ಓದುಗನಿಗೆ ಇದನ್ನ ನೀಗಿಕೊಳ್ಳಲು "ಅರ್ಥವಾದ ಸಾಲುಗಳ ಬೆಳಕಲ್ಲಿ ಅರ್ಥವಾಗದ ಸಾಲುಗಳನ್ನ ಓದಿ" ಎನ್ನುವ ಎಕ್ಸಪರ್ಟ್ ವಿಮರ್ಶಕರ ಸಲಹೆ ಇದೆ. ಆದರೆ ಕೃತಿಕಾರ ಹ್ಯಾಗೆ 'ಇಂಪ್ರೋವೈಸ್' (ಹೆರುವವರ ನಿಘಂಟಿನಲ್ಲಿ ಹಾಗೊಂದು ಪದದ ಇರುವಿಕೆಯೇ ಬಹುಮಟ್ಟಿಗೆ ಸಂಶಯ!) ಮಾಡಿಕೊಳ್ಳಬಹುದು..? ಇಲ್ಲಿ ಹಿಂದೂಸ್ತಾನಿ ಕಛೇರಿ ಪದ್ದತಿ ಒದಗಿಬರಬಹುದು : ಮೊದಲು ಮಂದ್ರಾಲಾಪಗಳ ಆಸ್ಥಾಯಿ ಹಿಡಿದು ತನ್ಮೂಲಕ ಕೃತಿ ಆಗಿ ಬರಬೇಕಾದ context/ಪರ್ಯಾವರಣ/ಲೋಕವನ್ನು 'ಕಟ್ಟಿಕೊಡುವುದು'; ತದನಂತರ ಸ್ವಮನೋಧರ್ಮದ ವ್ಯಭಿಚಾರೀಭಾವಗಳ ಚಲನೆಗಳ ಹೊಳೆಯಿಸುವುದು.
--ಮಲಗುವ ಮುಂಚಿನ ತುಯ್ದಾಟಗಳ ಹೊತ್ತಲ್ಲಿ ಕಪೋಲದಲ್ಲಿ ಹಾಗೊಂದು ಥಿಯರಿಯ ಅಲೆಗಳು ಕೂಡಾ ಅಲೆದಾಡಿಕೊಂಡಿದ್ದವು.
ಎಚ್ಚರಾಗೋದಕ್ಕೆ ಸ್ವಲ್ಪಮುಂಚೆ.. ಮನೆಯಲ್ಲಿ ತಟ್ಟೆಯಲ್ಲಿ ಅಮ್ಮ.. ಬಾಳೆಹಣ್ಣು ಪಾಯಸ ಬಡಿಸುತಿದ್ದಳು. ಏನೇನೋ ನೆನಪುಗಳು ಕಲಕಿ ಬಾಳೆಯ ತುದಿಯಲ್ಲಿ ದಕ್ಷಿಣೆಕಾಸುಗಳು ಪ್ರತ್ಯಕ್ಷವಾದವು. ಅಥವಾ ನಾನೇ ಅವುಗಳನ್ನ ಪ್ಯಾಂಟಿನ ಹಿಂದಿನ ಜೇಬಿನಿಂದ ತೆಗೆದಿಕ್ಕಿದೆ. "ಯಾವುದೋ ಪೂರ್ವಜನ್ಮದ ಧನ್ಯತೆಯ ಕ್ಷಣಗಳ ಋಣಭಾರದ ಸ್ಮರಣಿಕೆಗಳು ಇವು, ಅಮ್ಮ!" ಅಂತ ಏನೋ ಒಂದು ಅದ್ಭುತ ನಾಟಕೀಯ ಡೈಲಾಗು ಉದುರಿಸಿದೆ.
ಅಲ್ಲಿನ ಸ್ಮರಣೆಯ ಪ್ರಕಾರ ಆ ದಕ್ಷಿಣೆ-ಕಾಸುಗಳ ಮೂಲದಲ್ಲಿ ಮನದುಂಬುವಂತೆ ಊಟವಿಕ್ಕಿದವರು ಪೂರ್ಣಿ-ಹರಿಣಿಯರು! ಎಷ್ಟು ಹಳೆಯ ಸ್ಮರಣೆ! ಇದು ಕನಸೊಂದರ ಚರಿತ್ರೆಯಾ? ಅಥವಾ ಜಾಗೃತಾವಸ್ತೆಯ ನನ್ನ ಚರಿತ್ರೆಯಲ್ಲಿನ ವಿದ್ಯಮಾನಗಳ ಸ್ವಪ್ನ ರೂಪಕವಾ?? "ಏನೋ ಒಂದು ತೊಟ್ಟು ಪ್ರೀತಿ ವಿಶ್ವಾಸಕ್ಕೆ ಹಂಬಲಿಸುವ ಹೈರಾಣು ಮನಕ್ಕೆ ಹಾಗೆ ನಿಜಕ್ಕೂ ಪ್ರೀತಿ-ವಿಶ್ವಾಸಗಳು ಸಿಕ್ಕಿದ ದಾಖಲೆ ನಿಜಚರಿತ್ರೆಯಲ್ಲಿದ್ದರೆ ಅದು ಅವರಲ್ಲಿ ಮಾತ್ರವಿರಬೇಕು" ಅಂಥ ಇದನ್ನು ವ್ಯಾಖ್ಯಾನಿಸಲಾ? ಈಗ ಜಾಗೃತನಾದವನು ನಿಜಚರಿತ್ರೆಯನ್ನ ತಡಕಾಡಿನೋಡಿದರೆ ಸರಿಯಾಗಿ ಅಂಥಾ ಯಾವ ಘಟನೆಯೂ ನೆನಪಿಗೆ ಸಿಲುಕುತ್ತಿಲ್ಲವಲ್ಲಾ? ಈ ದಕ್ಷಿಣೆಕಾಸುಗಳ ಮೂಲವೆಲ್ಲಿ ಹಾಗಾದರೆ? ಮತ್ತೆ ಇಲ್ಲಿ ಇನ್ನೊಂದು ಗಮ್ಮತ್ತೆಂದರೆ, ಪ್ರೀತಿ ವಿಶ್ವಾಸಗಳ ಕ್ಷೇತ್ರದ ಇತರ ಅಭ್ಯರ್ಥಿಗಳಾರೂ ಸ್ವಪ್ನಲೋಕದಲ್ಲಿ - ನೇರವಾಗಿ ಬರುವುದು ಬೇಡ - ಸಂಕೇತ/ಸೂಚ್ಯವಾಗಿಯೋ, ವಿಸ್ಮೃತಿಗೀಡಾಗುತ್ತಿರುವ ಸ್ಮರಣೆಯಾಗಿಯೋ, ಇಲ್ಲಾ ಕನಸಾಗಿಯಾದರೂ ಹೊಕ್ಕು ಬಳಸಾಡಿದ ಯಾವುದೇ "ದಾಖಲೆ" ಇಲ್ಲವಲ್ಲ!
ಇದರ ಹಿಂದೆ ಇನ್ನೂ ಕೆಲವು ಅಂಕಗಳಿದ್ದವು. ಎಚ್ಚರಾಗುವ ವೇಳೆ ಒಟ್ಟಾರೆ ಅದ್ಭುತ ನಾಟಕವೊಂದಾದ ಸಂತೃಪ್ತಿಯಿತ್ತು. ಈಗ ನೆನಪಿಗೆ ಅಲ್ಪಸ್ವಲ್ಪ ಸಿಲುಕಿದ ಕೊನೆಯ ಅಂಕದಿಂದ ಕೆಲವು ಅಂಶಗಳು ಹೊಳೆದು ಕಾಣುತ್ತಿವೆ:
- ಈ ಸ್ವಪ್ನರಂಗಪ್ರಯೋಗಗಳು ಕೆಲವೊಮ್ಮೆ ಏಕಪಾತ್ರಾಭಿನಯದ ಥರ. ಪ್ರತಿಯೊಂದು ಪಾತ್ರಗಳಲ್ಲಿ ನಾನೇ ಪರಕಾಯ ಪ್ರವೇಶಿಸಿದಂತಿರುವುದರ - ಪ್ರತೀ ಜೋಡಿ ಕಣ್ಣುಗಳ ಮುಖಾಂತರ ನಾನೇ ನೋಡುತ್ತಿರುವಂತಿರುವುದರ - ಜೊತೆಜೊತೆಗೆ ಎಲ್ಲರನ್ನೂ ಒಟ್ಟಂದದ ಮಟ್ಟದಲ್ಲಿ ನೋಡುವ ಅಸ್ಪಷ್ಟ ಇರುವಿಕೆಯ ಪ್ರೇಕ್ಷಕ ಸಾಕ್ಷಿಯೂ ನಾನೇ! ('ಇನ್ಸೆಪ್ಷನ್' ಪ್ರೇರಣೆ?)
- ನನ್ನತನ ತುಸು ಹೆಚ್ಚಾಗೇ ಇರುವ ಪಾತ್ರಗಳಿಗೆ (ಅಂದರೆ ಯಾರಲ್ಲಿ ಬಹುವಾಗಿ ನನ್ನನ್ನು ನಾನೇ ಕಾಣುತ್ತೇನೋ ಆ ಪಾತ್ರಗಳು) ಅವುಗಳದ್ದೇ ಆದ ಸ್ವಪ್ನಚರಿತ್ರೆಗಳಿರುವುದು ('ಲೂಸಿಡ್ ಡ್ರೀಮಿಂಗ್'ನ ನೆರಳು?).., ಅಷ್ಟೇ ಏಕೆ, ಕನಸಿನೊಳಗೆ ಕನಸುಗಥೆ-ಕನಸುನಾಟಕಗಳು ಕೂಡಾ! ('ಲೂಸಿಯಾ' ಪ್ರಭಾವ?)
- ಯಾವುದೂ ಸ್ವಯಂಭುವಲ್ಲ - ನಿರ್ವಾತದಲ್ಲಿ ಸೃಷ್ಟಿಕ್ರಿಯೆ ಜರುಗುವುದು ಸಾಧ್ಯವಿಲ್ಲ. ಪರ್ಯಾವರಣದ ಅಣು-ರೇಣು-ತೃಣ-ಕಾಷ್ಟಗಳೇ ರೂಪಾಂತರಗೊಳ್ಳುತ್ತ ಒಟ್ಟಂದವೆಂಬುದು ಹುಟ್ಟುಗಟ್ಟುವುದು. --ಇದು ಸುಪ್ತಮನದ ಸ್ವಪ್ನರಂಗಭೂಮಿಕೆಗೂ ಅನ್ವಯ. ಅಲ್ಲಿನ ಮೂಲಧಾತುಗಳು ಅಂತ ಭಾಸವಾಗುವವು ಕೂಡ ನಿಜಜೀವನದ ಸಧ್ಯದಿಂದ ಜಾತವಾಗಿರುವವು (ಹಾಗಿದ್ದಾಗಿಯೂ ಸಹ ಅಲ್ಲಿ ವಿಲಕ್ಷಣ ಸ್ಪಾಂಟೇನಿಟಿಗಳೇ ರಾರಾಜಿಸುವವು!). ನನ್ನಲ್ಲಿ ಬಂದು ಒಂದು ವಾರವಿದ್ದು ಹೋದ ಅಮ್ಮ, ಅರೆಹೊಟ್ಟೆಯಲ್ಲಿ ಮಲಗುವಾಗ ಕೊನೆಯಲ್ಲಿ ತಿಂದ ಬಾಳೆಹಣ್ಣು, ಪ್ಯಾಂಟಿನ ಹಿಂದಿನ ಜೇಬಿನಲ್ಲಿ ಹಾಗೇ ಉಳಿದು ಅಣೆಯುತ್ತಿದ್ದ ಚಿಲ್ಲರೆಕಾಸು ಮತ್ತು ವಯೋಸಹಜ ಹಂಬಲಗಳು! --ಇವೇ ತಾನೇ ಆ ಕೊನೇ ಅಂಕದ ಘಟಕಾಂಶಗಳು?!
*****
ಅಮ್ಮ ಆ ದಕ್ಷಿಣೆ ಕಾಸನ್ನ ತೆಗೆದು ಅಪ್ಪನ ಕ್ಯಾಷ್-ಡ್ರಾ ಗೋ ತನ್ನ ಡಬ್ಬಿಗೋ ಸೇರಿಸುತ್ತೀನಂದಳು. ಈ 'ವಿನಿಯೋಗ'ಕ್ಕೆ 'ಹೂಂ' ಅಂದೆ.--_--
Monday, March 3, 2014
ओ माझी रे.. / ಅಂಬಿಗನೇ.. / O majhi re..
ನದಿಯ ಈ ಧಾರೆಯು
ದಡದಗುಂಟ ಹರಿಯುವವರೇ
ಎಲ್ಲೋ ಕೇಳಿದ್ದುಂಟಲ್ಲವೋ?
ಎಲ್ಲೂ ತೀರವಿರೋದಿಲ್ಲವು...
ಅಂಬಿಗನೇ,
ಯಾವೊಂದು ತೀರ
ವದು ತೀರ
ಕ್ಕೆ ಸೇರಿಬರುವುದೋ
ಅದು, ಎನ್ನಯ ತೀರವು..
ನೀರಿನೊಳಗೆ ಹರಿಯುತಿಹವು ಹಲವು ದಂಡೆ
ಒಡೆದಂಥವು;
ಬೀದಿಗಳಲಿ ಸಿಗುತಲಿಹವು ಸಕಲ ಆಸರೆ
ತಪ್ಪಿದಂಥವು
ಅಂಬಿಗನೇ,
ಆಸರೆಯೊಂದು ನಡುನೀರಲ್ಲಿ
ಸಿಗುವುದಾದರೆ ಅದು,
ಎನ್ನಯ ಆಸರೆಯು
ಮೂಲ :
ಗುಲ್ಜಾರ್ ವಿರಚಿತ,
ಖೂಬ್'ಸೂರತ್ (೧೯೭೫) ಚಲನಚಿತ್ರದಲ್ಲಿನ
"ಓ ಮಾಝಿ ರೇ.." ಗೀತೆ :
O Maanjhi Re
Apna Kinara
Nadiya Ki Dhara Hai
Saahilon Pe Behenewale
Kabhi Suna To Hoga Kahi
Kagazon Ki Kashtiyon Ka
Kahi Kinara Hota Nahi
O Maanjhi Re
Koi Kinara
Jo Kinare Se Mile Woh
Apna Kinara Hai
Paniyon Mein Bah Rahe hain
Kayee Kinare
Toote Huye
Raaston Mein Mil Gaye Hain
Sabhi Saharein
Choote Huye
O Maanjhi Re
Koi Sahara
Majdhare Mein Mile toh
Apna Sahara Hai...
------------------------------------------------------------------------------------------------------------
ಇನ್ನೊಂದು ಪ್ರಯತ್ನ:
ನದಿಯ ಈ ಹರಿವು
ಎಲ್ಲೋ ಕೇಳಿದ್ದುಂಟಲ್ಲವೋ?
ಎಲ್ಲೂ ಪಾರವಿರೋದಿಲ್ಲವು...
ಓ ಅಂಬಿಗನೇ,
ಯಾವೊಂದು ಪಾರ
ವದು ಪಾರದೀ
ಸೇರಿಬರುವುದೋ
ಅದು, ಎನ್ನಯಾ ಪಾರವು..
ಜಲಗಳಲ್ಲಿ ಗಮಿಸುತಿಹವು ದಂಡೆ ಹಲವು
ಛಿದ್ರಗೊಂಡು ;
ಬೀದಿಗಳಲಿ ಕಲೆತುಹೋಗಿವೆ ಆಸರೆ ಸಕಲವೂ
ಕಳಚಿಕೊಂಡು ;
ಓ ಅಂಬಿಗನೇ,
ಯಾವುದೊ ಒಂದಾಸರೆ ಮಧ್ಯಧಾರೆ
ಯಲಿ ಸಿಕ್ಕರೆ
ಅದು, ಎನ್ನಯಾ ಆಸರೆಯು
Thursday, February 13, 2014
ಅನಂಗಚಿತ್ತದ ಅವಿರತ ಹೊಳಹು
ಅಳಿಸಿಸಿಕೊಂಡು ನಡೆ
ನಡೆದೂ ಉಳಿದುದರಿಂದ ಜೀವ
ನ ಮತ್ತೆ ಶುರುವೇ ಆಯಿತು
ಯಾವುದೋ ವಿವರದ ಉಳಿದರ್ಧ
ದಿಂದ ಶುರುವಾಗುವ ಈ ಟಿಪಿ
ಕಲ್ಲು ಕವನದ ಮುಕ್ತಾ
ಂತ ಸಾಲುಗಳು ಮುಂದುವರಿದಂತೆ ಹೊಸತು
ಸಂದರ್ಭಗಳಿಗೊಳಪಟ್ಟು ಒಟ್ಟಂದ
ದರ್ಥ ಗೂಡುತ್ತ ಗೂಢ ನಡೆಯಲಿ
ನಡೆವ ಬಗೆಯಲಿ
ಯಾರನ್ನೋ ಇಳಿಸಿ ಬಿಟ್ಹೋಗಲು
ಎಂಬುದಾಗಿ
ಅಲ್ಲ, ಮತ್ತೆ ಹತ್ತಿಸಿ ಕೊಂಡ್ಹೋಗಲು ನಿಂದ ಕಾರು
ಹಿಂದಿಂದೇನೂ ತಿಳಿಯದಂತೋರ್ವನು ಬಂದು
ಏನಾದರೂ ಸಹಾಯವಾಗಬಹುದೇ ಎಂದು ಇಹ
ದೊಳಗೆ ಕಳೆದ್ಹೋದುದರ ಪರ ಸುಳಿವನೀವಂತೆ
ಇಂದಿನೀಪುಟದೊಳು ನಿನ್ನೆಗೊಂಡಿಯನೊತ್ತಿದಾಗೆಂಬಂತೆ
ಯೂ ಅಲ್ಲವದು, ಭೂತದ ಹೊಳಹನಿಟ್ಟ ವರ್ತಮಾನ
****
ಮನಸ್ಸು ದೊಡ್ಡದು
ಮಾಡಿ ಕಡೆಗೂ ವ್ಯಾಲೆಂಟೈನು
ದಿನಾ ಅವಳಿಗಿಷ್ಟವೇ ಆಗುವ
ಪೆಂಡೆಂಟು ಉಡುಗೊರೆಯೆತ್ತಿ ಅವಳಂ
ಗಡಿಯಲಿ ಎದುರು ನಿಂದ
ರೂ ಗುರುತೇ ಇರದಂತೆ ಇದ್ದು ಬಿಟ್ಟಳು ರಂಡಿ
ಮಾರಾಯ ಅವಳು, ಮತ್ತೆ ಮತ್ತೇss
ರಿದಂತೆ ಮುತ್ತನಿನ್ಯಾರಿಗೋ ಈದೇ ಬಿಟ್ಟಳವಳಿಗದೇನಾಯ್ತಂ
ತದ್ದು ಸಹಿಸಲು ಸಾಧ್ಯವಿಲ್ಲದ್ದು
ಇದು ಇನ್ನು
ಡೈವೋರ್ಸು!
****
ನಿನ್ನಿಂದ ತೆಗೆಯದೇ
ನಿನ್ನ ನೀ
ಫೂಲು ಮಾಡಲಿಕ್ಕಾದೀತೆ?,
ತೆಗೆದು ಹಾಕುವ ಜಾಗವಿದ್ದು
ಹೋಗಿ ಅಳಿಸಿಸಿಕೊಂಡು ಬಂದಿದ್ದಾಳೆ
ಇದನೀಗನೀತನರಿಯುವುದೇ ಸರಿ
ಇಲ್ಲದೇ ಹೀಗೆ ಮುಂದೆ
ಹೋಗಲಾಗಲಿಕ್ಕಿಲ್ಲವಂತ...
(ಮುಂದುವರಿಯಬೇಕಿದೆ...)
------------------------------------------------------------------
ಇದು ಪ್ರತಿಸ್ಪಂದನ,
"Eternal Sunshine of the Spotless Mind"
ಎಂಬ 'ಅನೇರ ನಿರೂಪಣೆ 'ಯ ಸಿನೆಮಾಗೆ ...
Friday, January 31, 2014
ಇಜಾಝತ್ತು
ದಿಗಿಲಿಕ್ಕಿಕೊಳ್ಳುತ್ತೆ
ದಶದಿಕ್ಕುಗಳಿಂದ ಕಾರ್
ಮುಗಿಲು ಢೀ ಹೊಡೆದು
ಮುತ್ತಿಕ್ಕುವಂತೆ ಎದೆ
ಬಿಚ್ಚಿ ಬಿರಿದು
ಕಿಲಕಿಲನೆ ಬಡಿಯುವಾ ಹೃದಯ
ಧಮನಿಗಳಲಿ ಧುಮ್ಮಿಕ್ಕುವ ನವ
ನವೋನ್ಮಾದದುಮ್ಮೇದಿಯ ನೆನೆ
ನೆನೆದಂತೆ ಹೀಗೆ
ನಡೆದು ಬಿಡುವುದೇ ಇದು
ನಡೆಯಬಾರದಿದ್ದಕ್ಕೆ ತಡೆಯಿಲ್ಲವೇ..
***
ಮಾಯೆ!
ಎಂದೊಡನೆ ಕುಪ್ಪಳಿಸಿ
ಕಿರಿಚುತ್ತಾಳೆ ಉನ್ಮತ್ತ
ಕುಣಿಯುತ್ತಾಳೆ ಸ್ವಚ್ಛಂದ
ಬಿಗಿಯಲೆತ್ನಿಸುತ್ತೇನೆ ಹಿಡಿದು
ಸಡಿಲ ಜಾರುವ ಸ್ನಾಯುಗಳ
ದ್ವಂದ್ವಗಳಲಿ ಕಳವಳಿಸಿ
ಹೀಗೆ ಇದರೊಡನೆ ಏಗಿ
ಏಗಿ ನಡೆದಂತೆ ಕಾಲ
ತೇಗಿಯೂ ಬಿಡುವುದಾ ಹೇಗೆ?
***
ಈ ವಿಷಯೆ ನಶೆಯೇರಿದ ನಿಶೆ
ತಹತಹಿಸಿ ತಡಕಾಡುತ್ತೇನೆ
ಒಂದು ತೊಟ್ಟು
ಸುಧೆಗೆ,
ಸಿಕ್ಕೀತನ್ನುವದರಲ್ಲಿ ಶೀಶೆ
ಕೈಜಾರಿ ಉರುಳಿಬಿಡುತ್ತೆ
ಹಾ! ಮತ್ತೆ
ಸಿಕ್ಕಿ ಬಂದರೂ ಆಕಸ್ಮಿಕ
ಒಗ್ಗಿ ಬಂದರೂ ಸಹಜ
ಬಗ್ಗಿಸಿಕೊಂಡರೂ ಬೊಗಸೆಗೆ ತುಸು
ತುಸುವಾಗಿ ಸುಧೆ
ಸೋರಿ ಹೋಗುತ್ತೆ, ವಿವಶ,
ಇಜಾಝತ್ತ ಕಸಿಯುತ್ತ...
***
ಕಾಲದೊಡನೆ ದಾಪುಗಾ-
ಲೋಟದಿ ಸೋತು ಹೃದಯ
ನಿಂತೂ ಬಿಡುತ್ತೆ,
-ಹಾಗೊಮ್ಮೆ,
ತುಟಿಯಂಚಿನಲ್ಲಿ...
...__...
ರಾತ್ರಿಯೊಂದೂ ಮುಕ್ಕಾಲಿನ ಮಳೆ...
ಜಡಿಯಲಿ ಮಳೆ
ಜಿಗುಟು
ಮಗುವಿನಳುನಗುಗಳಂದದಿ
ಮಾತು ಮೂಡದಂತ
ಭಾವಂಗಳ ಸೂಚಿಸುತ
ವಿಲಂಬಿತ ಧೃಪದ
ಬಂದಿಶೊಂದಾದಂತೆ
ರಾತ್ರಿಯೊಂದು
ಮುಕ್ಕಾಲು
ನನ್ನೊಳಿಳಿದಂತೆ
ಮಬ್ಬು
ನಿಷಾಧ ಹೊಡೆದಂತೆ
ಕಾವ್ಯ ಕಟ್ಟೋಣ
ಮಲ್ಹಾರ ವಿಸ್ತರಿಸಿ
ಹಾಡೋಣ...
(..ಮುಂದುವರಿಯಬೇಕಿದೆ...)
Thursday, January 30, 2014
ಮಹಾಪ್ರಸ್ಥಾನ...
ಕಾಲು
ಎಳೆದುಕೊಂಡು ಹೊರಟ
ಉಸುಕಿನೂರಲ್ಲಂತೂ ಆ ಹೊಸ
ನಸು ನಸುಕಲ್ಲೂ ಒಣ ಕನಸುಗಳ ಇತಿ ದಿಗ್
ದಿಗಂತವೇ ದಿಗಂತ ...
ಹಾ! ಮಳೆಯಿಲ್ಲ ಮೋಡಗಳ
ನೆರಳೇ ಇಲ್ಲ ಇದಕೆ
ಎಲ್ಲಿಯಂತವಂತ ಹುಡುಕಿ
ಕೊಳ್ಳೋಣವಂತ, ಕೊಲ್ಲೋಣವಂತ...
****
ನಿತ್ಯ ಹರಿದ್ವರ್ಣ ನೋಡಿ ನೋಡಿ
ನೋಡುವಲ್ಲಿ ದೃಷ್ಟಿ
ಪಾಳುಬಿದ್ದು ಚಾಳೀಸಾಗಿ
ಯಾ ಬೋರಾಗಿ ತಲೆಚಿಟ್ಹಿಡಿದ್ಹೋಗಿ
ಮರಳಿದ್ದಲ್ಲಿ ಬಿರುಬಿಸಿಲಲ್ಲಿ ಬರಿ ಹುರುಳು
ಹುರಿದರಳಿಸುವುದೆಂದು
ಬಂದೆವು, ನಾವು ಬಂದೇವು...
****
ಯಾವೂರುಕೇರಿಯ ಯಾವಾರೆಯೋಣಿಯಲಿ
ಎಲ್ಲಿ ಶ್ವಾನವೊ, ನಮ್ಮದಿದೆಂತ ಮಹಾ
ಪ್ರಸ್ಥಾನವೊ...
Thursday, April 18, 2013
ಆಧುನಿಕ ಕವಿಕಾವ್ಯಕ್ಲೀಷೆಗಳು
ತಳೆಯದ ಖಾಚಿತ್ಯ ವರ್ತನೆ
ಯೊಳಾವರ್ತವರ್ತವರ್ತನಿಸಿ
ಬಂದು ಅನಾಮತ್ತು ಡಬ್ಬಲೊಂದು
ಡಬ್ಬಲು ಜೀರೋನೆತ್ತಿ ತಾನೇ
ತಾನಾಗಿ ಕ್ಲಾಸಿಕ್ಕು
ಹಾವಾಡಿಸುತ್ತ ಸುತ್ತ ಸುತ್ತಲೂ ಸಿಕ್ಕು
ಸಿಕ್ಕಾಗಿ ಕೂತಂತೆ ಕೆಲಸವಿಲ್ಲ ಕಾರ್ಯವಿಲ್ಲೆಂಬಂತೆ ಸಿಕ್ಕು
ಬಿಡಿಸೋ ವಿದ್ಯೆ ಜನ್ಮಜಾತದಂತಾಗಿ ಮೆದುಳಿಗೆ
ಸ್ಕ್ರೀನುಸೇವರಿನಂತೆ ಮೇಲ್ನೋಟಕ್ಕೆ
ಸಿಗದಂತೆ ಬ್ಯಾಗ್ರೌಂಡಲ್ಲಿ ಹರಿಯುತ್ತೆ ಅಖಂಡ
ಲಹರಿಯೊಂದು ಮತ್ತೆ ಮುಂದು
ವರಿಯುತ್ತೆ (ಹೀಗೆಯಾದರೆ ನಾ
ಫಿಜಿಕ್ಸು ಮಾಡೋದೆಂದಿಗೆ ಮತ್ತೆಯಂತ ಚಿಂತೆ ಬೇರೆ
ಯೆಳೆಯಲ್ಲಿ ಸಮಾಂತರ ಹರಿ ಹರಿಯುತ್ತ ಕ್ಷೀಣ
ಆದ್ಯತೆಗಳಲ್ಲಿ) ಹಾಳಾಗಲಿ ಈ ಒಂದು
ಲಯ ವಿನ್ಯಾಸ ಛಂದಗಳನ್ನೋದದೇಕೆ ಹಾಗೆ
ತಲೆ ಸೆಳೆಯುತ್ತದಂತ
ಸಿಂಟ್ಯಾಕ್ಟಿಕಲಿ ಭಂಗಿಸಿದರೂ ಶನಿಪಿಶಾಚಿ
ಯಂತೆ ಯಂತದ್ದೋ ಪ್ಯಾಟ್ಟರ್ನು ಪುನರಾವರ್ತ
ಸಿಮ್ಯಾಂಟೆಕ್ಕಿನ ಮಟ್ಟದಲಿ ಹಂಗಿಸುತ್ತೆ ಮತ್ತದೇ
ಧಾಟಿಯ ಸಾವಿರ ಕಾವ್ಯವೆಂದು ಬರೆಸುತ್ತೆ ಅಟೊಮೆಟಿಕಲಿ
ಕರಣ ಹಾವಾಡಿಸಲು ಪ್ರವೃತ್ತಿಸುತ್ತೆ ಹಾಗೆ
ಬರೆದಿದ್ದರ ವಿನ್ಯಾಸ ಮುಚ್ಚಿಹಾಕಲು ಅದೇ
ಹಳೇಯ ಬೌದ್ಧಿಕ ಕಸರತ್ತಿನ ಮಾರ್ಪಾಡುಗಳು ಮತ್ತೆ
ಇಷ್ಟಕ್ಕೂ, ಹೇ, ಆಧುನಿಕ
ಕಾವ್ಯವೆಂದರೇನು? ಗದ್ಯವೊಂದು ಕೂಡ ಕಾವ್ಯ
ವಂತನಿಸೋವಲ್ಲಿಗೆ, ಬರೆದ ಕವನಗಳು ವಾಚ್ಯ
ಗದ್ಯವೆನಿಸೋ ಹೊತ್ತಿಗೆ? ಬರೀತ ಮೂಲ
ಧಾತುಗಳ ಕರ್ಮಗಳ ಮೆರೆದು
ವಿಭಕ್ತಿ ಕರ್ತೃ ಎಲ್ಲ
ಮರೆದು ಸಮಾಸ ನಿಷ್ಪತ್ತಿ ಸಂಧಿ
ವಿಗ್ರಹಗಳ ಅಡ್ಡ
ಗೋಡೆ ಮೇಲಿಟ್ಟ ಉದ್ದೇಶಪೂರಿತ ಮಬ್ಬುತನಕ್ಕೆ
ಅಮೂರ್ತ ಬಹುಅರ್ಥಪೀಡಿತವಂತ ಸಂ
ಭ್ರಮಿಸಿ ತನಗೇ ಗೊತ್ತಿಲ್ಲದ ಪ್ರಶ್ನೆ
ಮೂಡಿದಂತಾಗುವಲ್ಲಿ ಬಾಲರ ಪ್ರತಿಭೆಯಲ್ಲಿ ಉತ್ತರ
ತರಿಸೋ ಭೂಪ, ಕಂತ್ರಿ, ಪ್ರಾಧ್ಯಾಪಕ-
ಬುದ್ಧಿ! ಶಡ್ಡೌನಾಗಬಾರದೇ ಸಡನ್ನಾಗಿ
ಕರೆಂಟು ಕಟ್ಟಾಗಿ...
....._____.....
Monday, April 8, 2013
ಎದುರುಬದರು
ಒಬ್ಬೊಬ್ಬರ ತಲೇಲೂ ಒಂದೊಂದು ಥಿಯರಿ ಇರುತ್ತೆ;
ಈ ಜಗತ್ತಲ್ಲಿ ಅದಕ್ಕೆ ಪುರಾವೆ ಹುಡುಕ್ತಿರ್ತೀವಿ...
(ಚಿದಂಬರ ರಹಸ್ಯ)
----------------------------------------------------------------------------
ಗುರುಗಳೇ,
ಒಂದು ಅರೆಪಾರದರ್ಶಕ ನಿಲುವು-
ಗನ್ನಡಿಯ ಇಬ್ಬದಿಗಳಲ್ಲಿ
ಕೂತಿದ್ದೇವೆ ಇಬ್ಬರೂ
-ಎದುರುಬದರಾಗಿ ಒಬ್ಬರನಿನ್ನೊಬ್ಬರು
ಒಂದು ಬಿಂಬ, ಮತ್ತಿನ್ನೊಂದರ ಪ್ರತಿಬಿಂಬ
ಒಂದರಮೇಲಿನ್ನೊಂದು ಮಜವಾಗಿ ಬಿದ್ದು
ದ್ವಂದ್ವವೆಂಬವುಗಳ ಮಧ್ಯೆ ಹೀಗೆ
ಗೆರೆ ಮಾಸಲು, ತೆರೆ ಪೋರಸ್ಸು
ತೆಳ್ಳಗೆ ತುಸುವೇ ಪಾದರಸ ಬಳಿದ
ಗಾಜಾಗಿ ಅರ್ಧಂಬರ್ಧಗನ್ನಡಿ
ಅಸಾಧ್ಯ ಕುಚೋದ್ಯಗಾರನಾಗಿದೆ ಬಿಡಿ.
ಇತ್ತಲಾಗಿ
ಹದಿ ಈಗಷ್ಟೇ ಹರಿದಿದೆ
ಉಕ್ಕಿ ಬೀಳುತ್ತ ಬೆದೆ
ನಿದ್ದೆಯಲ್ಲೂ ಎವೆ ಬಿಟ್ಟಿವೆ
ಕನ್ನಡಿಯೆದುರು ತಂದು, ತೀಡಿ
ತಿದ್ದಿಕೊಳ್ಳುವ ತವಕ
ನನ್ನ ನೋಡಿಕೊಂಡಷ್ಟೇ ನಿಮ್ಮ ಕಡೆಯೂ;
ಬೆಡಗಿಗಷ್ಟೇ ಅಲ್ಲದೇ ಲಕ್ಷ್ಯ ಪೂರ್ಣತೆಯೆಡೆಯು.
ಅತ್ತಲಾಗಿ
ನೋಡುವಲ್ಲಿ ನನ್ನ ಪ್ರಸ್ತುತ
ವಾಗುತ್ತಿದೆಯಲ್ಲಿ ನಿಮ್ಮದೇ ಗತ
ನಿಂಭೂತೋ ನಂಭವಿಷ್ಯತ್ತಾ?
ಅಡ್ದಗೋಡೆಯ ಮೇಲೆ ದೀಪವಿಟ್ಟವರು
ಗಾಜ ಕಿಟಕಿಯಿಟ್ಟು ಕೆಳಗೆ ಬಿಂಬಕಾಣುವವರು
ಬಣ್ಣಬಣ್ಣದಿ ಪ್ರತಿ ಬಿಂಬಿಸ ಹೊರಟವರು
ಟೀಕೆಟಿಪ್ಪಣಿಸಿ ಅಡ್ವಯಿಸು ಬೀರಬೇಕಾದವರು
ವಿವರದರ್ಧದಲಿ ಭೂತ ಭಾಧೆಯಾದಂತೆ
ತಡವುತ್ತೀರಿ ತಲೆ ಕೊಡವುತ್ತೀರಿ.
ಕಣ್ತುಂಬ ತುಂಬಿಕೊಂಡು ಬಾಯ್ತುಂಬ ಬೈವವರು
ಒಂದು ನಿರೀಕ್ಷಣಾಜಾಮೀನಿಗೆಂಬಂತೆ ಹೀಗೆ ತಾವನುಸರಿಸುವ
ಸ್ವನಿರಾಕರಣೆಯಲ್ಲಿ ಮಾತ್ರ ನೋಡಿ ನನಗೆ
ಕಂಡು ಬಿಟ್ಟಂತಾಯ್ತು ಥೇಟು ನನ್ನದೇ ಪ್ರತಿಬಿಂಬ!
Saturday, March 30, 2013
ಶೇಕ್ಸಪಿಯರೀಯ ಹುಳಿನರಿಯು
ಈಸ್ಟೂ ಬೂಸ್ಟೂ
ಅಥವಾ
ಶೇಕ್ಸಪಿಯರೀಯ ಹುಳಿನರಿಯು
ಒಂದು ರಾತ್ರಿಯೆನ್ನ ರೂಮೊಳಗೆಯೇ
ಕೆಲಸದ ಚಾಪೆಯ ಮೇಲೆ ಹಾರಿಯೂ ಸಿಗದ
ದ್ರಾಕ್ಷಿ ಹುಳಿಯೆಂದು ಹೊರಟ ನರಿ ಸಿಕ್ಕಿತು
ಅಚಾನಕ್ಕನೆಯಾಗಿಯೆಂಬಂತೆ
ಅಲ್ಲಾ, ಈಗ ಹುಳಿಯೆಂದದ್ದು ಯಾರಿಗೆ ಕೇಳಿಸಲಂತ ?
-ಅಂತ ಕೇಳಿಕೊಂಡಂತೆ ನರಿ ಸಿಲುಕಿಕೊಂಡಂತಾಯಿತು.
ಸ್ವಗತವೇ ಇರಲಿಕ್ಕೆ ಬೇಕು :
ಶೇಕ್ಸಪಿಯರನ ಎಳೆ ತಂದೊಮ್ಮೆ ಕೇಳಬೇಕು...
ನರಿ ಅಂತಂದರೇನು ಸುಮ್ಮನೆಯೇ ನರಿಯಾಯಿತೇ?
ನಡೆನುಡಿಯೆಲ್ಲ ಹುಳಿಹುಳಿಯಷ್ಟೇ ಅಲ್ಲ,
ತನುಮನವೆಲ್ಲವೂ ಸಹಾ ಹುಣಸೇ ಹಣ್ಣುಹಣ್ಣಾಗಿ ನರೆತು
ಒಳಹೊರಗುಗಳು ಹೀಗೆ ಬೆರೆತು ಬಂದಿರಬೇಕು.
ಈಗ, ನಿತ್ಯದಂತೆ ಹೊರಟಾಗ ದ್ರಾಕ್ಷಿ ಕಂಡಿರಬೇಕು,
ನೇರ ನಿಲುಕಿಗೆ ಸಿಗದಂತೆ ತುಸು ಎತ್ತರದಲ್ಲಿ ,
ಗೊಂಚಲು ಗೊಂಚಲಾಗಿ...
ಹಾರಿ ಅಡ್ಜಸ್ಟು ಮಾಡಬಹುದೇನೊ..,
"ಏಕೆ ಮಾಡಬೇಕು??"
-ಅನ್ನೋದನ್ನ ಮೊದಲು ಕೇಳಬೇಕು.
"ಹಾರಿ ಕಿತ್ತು ಚಪ್ಪರಿಸೋದು ರಮ್ಯ"
ಕವಿಯಾಗಿ ನೋಡಿದರೆ, ಮೇಲಾಗಿ,
ಫ್ರಕ್ಟೋಸು ಪೋಷಕಾಂಶಗಳಿರುವಲ್ಲಿಗೆ ಒಂದು
ಹೊತ್ತಿಗಾಗುತ್ತೆಯಾಗಿ ಈ "ದ್ರಾಕ್ಷ
ರಸಕ್ಕೆ ಜಿಗಿದು ಜಂಪಿಸಿ
ಟ್ರೈ ಮಾಡೋದು ಬಡನರಿಯಾಜನ್ಮಸಿದ್ಧ ಹಕ್ಕು!"
- ನೆಹರೂ-ಸಮಾಜವಾದದರಸುತ್ತಿಗೆ ಹಾಗಂದಿರೋದು.
ಹಾಗೆ ಸಂಕಲ್ಪಮಹಾತ್ಮ್ಯವ ವಿವರಿಸಿ
ಹಾರುವುದು,
ಹಾರಿ ಹಾರಿ ಬಿದ್ದು ಬಿದ್ದೂ ಸಿಗದಿದ್ದರೆ
ದೂರುವುದು:
"ಹಾರಿ ಬಿದ್ದೂ ದೊರಕದ್ದು
ಹುಳಿಯಿದ್ದಿರಲಿಕ್ಕೇ ಬೇಕು;
ನಮ್ಮೊಳ್ಳೆಯದಕ್ಕಾಗಿಯೇ ಹಾಗೊಂದು
ಮ್ಯಾಚು ಮುಂಚೆಯೇ ಫಿಕ್ಸಾಗಿರಬೇಕು."
-ದೂರಲೇ ಬೇಕು ಕೃತಿ ಸೋತಂತೆ
ಕಾಣುವೆಡೆಯೆಲ್ಲಾ ಇನ್ಯಾವುದೋ ಅಪರ
ವನ್ನಾರೋಪಿಸಬೇಕು ಮಹಾನ್ ಸನಾತನಿಯಂತೆ
ಪ್ರಲಾಪಿಸಬೇಕು ಸಕಲಾನಿಷ್ಟಕಾರಕ ಶನಿಯೆಂದೆಂಬ
ಪ್ರಕಲ್ಪವ, ಯಾರು ಕೇಳದಿದ್ದರೂ
ತನಗೆ ಕೇಳಿಸುವಂತೆ.
ನರಿಯೆಂಬುದು ಹಾಗೆ ಈಸ್ಟು
ಬೆರೆತುಬಂದು ಹುದುಗಿದ
ಹುಳಿಹುಳಿಯಾದ ಹಿಟ್ಟನ್ನು
ಬೂಸ್ಟು ಬೆಳೆಯೋದಕ್ಕೆ ಮುನ್ನವೇ ತೆಗೆದು
ಪದರು ಪದರಾಗಿ ಬೇಕಿಸಿದ
ಲೇಯರ್ಡು ಕೇಕು.