Original Poetry:
Where Have All the Flowers Gone
Original Poet:
Pete Seeger
Visual Rendering in Bugonia (2025):
https://youtu.be/7379qf9exqk
-----------------------------:Disclaimer:---------------------------------------
All rights inhere belong to the original authors and
rights holders at the source material. This presentation
is intended solely as an exercise in creative expression.
It does not intend to hereby infringe upon any of the
rights pertaining to the original work. Yours Truly
do not see any AI-eye ayeings in this either.
ಎಲ್ಲ ಹಕ್ಕುಗಳೂ ಮೂಲದಲ್ಲಿನ ಕೃತಿಕಾರರು-ಹಕ್ಕುದಾರರುಗಳಿಗೇ ಸೇರಿದ್ದು.
ಈ ಪ್ರಸ್ತುತಿಯಿರುವುದು ಸೃಜನೀಯ ಅಭಿವ್ಯಕ್ತಿಯ ಅಭ್ಯಾಸದ ಭಾಗವಾಗವಷ್ಟೇ
ಹೊರತೂ ಮೂಲಕೃತಿಯ ಯಾವುದೇ ಹಕ್ಕುಗಳನ್ನು ಈ ಮೂಲಕ ಅತಿಕ್ರಮಿಸಲಲ್ಲ.
ಇದರಲ್ಲಿ ಏಐ-ಕೈ ಶ್ರೀಶ್ರೀಶ್ರೀ ಮೂರ್ಶ್ರೀ ನಾವಪ್ಪಗೋಳಿಗಂತೂ ಕಂಡಿಲ್ಲ.
=================================================
ಎಲ್ಲಿ ಹೋದವು ಹೂಗಳೆಲ್ಲ
ಬಹು ಸಮಯ ಸರಿದುದು
ಎಲ್ಲಿ ಹೋದವು ಹೂಗಳೆಲ್ಲ
ಬಹು ಕಾಲ ಕಳೆದುದು?
ಎಲ್ಲಿ ಹೋದವು ಹೂಗಳೆಲ್ಲ
ಹುಡುಗೀರ ತೆಕ್ಕೆಗೆ ಬಿದ್ದದು
ಇಲ್ಲಿ ಕೇಳಿರೆಲ್ಲ
ನೀವೆಂದು ತಿಳಿಯೋದು
ಹೋ..
ಎಂದು ತಿಳಿಯೋದು ನೀವೆಲ್ಲ
ಎಲ್ಲಿ ಹೋದರು ಹುಡುಗೀರೆಲ್ಲ
ಬಹು ಸಮಯ ಸರಿದುದು
ಎಲ್ಲಿ ಹೋದರು ಹುಡುಗೀರೆಲ್ಲ
ಬಹು ಕಾಲ ಕಳೆದುದು?
ಎಲ್ಲಿ ಹೋದರು ಹುಡುಗೀರೆಲ್ಲ
ಹುಡುಗರ ತೆಕ್ಕೆಗೆ ಬಿದ್ದದು
ಇಲ್ಲಿ ಕೇಳಿರೆಲ್ಲ
ನೀವೆಂದು ತಿಳಿಯೋದು
ಹೋ..
ಎಂದು ತಿಳಿಯೋದು ನೀವೆಲ್ಲ
ಎಲ್ಲಿ ಹೋದರು ಹುಡುಗರೆಲ್ಲ
ಬಹು ಸಮಯ ಸರಿದುದು
ಎಲ್ಲಿ ಹೋದರು ಹುಡುಗರೆಲ್ಲ
ಬಹು ಕಾಲ ಕಳೆದುದು?
ಎಲ್ಲಿ ಹೋದರು ಹುಡುಗರೆಲ್ಲ
ಸೈನ್ಯದ ತೆಕ್ಕೆಗೆ ಬಿದ್ದದು
ಇಲ್ಲಿ ಕೇಳಿರೆಲ್ಲ
ನೀವೆಂದು ತಿಳಿಯೋದು
ಹೋ..
ಎಂದು ತಿಳಿಯೋದು ನೀವೆಲ್ಲ
ಎಲ್ಲಿ ಹೋದವು ಸೈನ್ಯಗಳೆಲ್ಲ
ಬಹು ಸಮಯ ಸರಿದುದು
ಎಲ್ಲಿ ಹೋದವು ಸೈನ್ಯಗಳೆಲ್ಲ
ಬಹು ಕಾಲ ಕಳೆದುದು?
ಎಲ್ಲಿ ಹೋದವು ಸೈನ್ಯಗಳೆಲ್ಲ
ಮಸಣದ ತೆಕ್ಕೆಗೆ ಬಿದ್ದದು
ಇಲ್ಲಿ ಕೇಳಿರೆಲ್ಲ
ನೀವೆಂದು ತಿಳಿಯೋದು
ಹೋ..
ಎಂದು ತಿಳಿಯೋದು ನೀವೆಲ್ಲ
ಎಲ್ಲಿ ಹೋದವು ಮಸಣಗಳೆಲ್ಲ
ಬಹು ಸಮಯ ಸರಿದುದು
ಎಲ್ಲಿ ಹೋದವು ಮಸಣಗಳೆಲ್ಲ
ಬಹು ಕಾಲ ಕಳೆದುದು?
ಎಲ್ಲಿ ಹೋದವು ಮಸಣಗಳೆಲ್ಲ
ಹೂ ಬಿಟ್ಟಿಹುದು
ಇಲ್ಲಿ ಕೇಳಿರೆಲ್ಲ
ನೀವೆಂದು ತಿಳಿಯೋದು
ಹೋ..
ಎಂದು ತಿಳಿಯೋದು ನೀವೆಲ್ಲ
ಎಲ್ಲಿ ಹೋದವು ಹೂಗಳೆಲ್ಲ
ಬಹು ಸಮಯ ಸರಿದುದು
ಎಂದು ತಿಳಿಯೋದು ನೀವೆಲ್ಲ
ಬಹು ಕಾಲ ಕಳೆದಿಹುದು..
